ಕ್ರೈಮ್ ನ್ಯೂಸ್

ಕುಂದಾಪುರ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ 20 ಲಕ್ಷ ರೂ. ಚಿನ್ನಾಭರಣ ಕಳವು

(ನ್ಯೂಸ್ ಕಡಬ)newskadab.com  ಕುಂದಾಪುರ, ಜ.18. ಗೋವಾದ ಪಣಜಿಯಿಂದ ಸಾಸ್ತಾನದ ಐರೋಡಿಗೆ ಬಸ್ಸಿನಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳೆದುಕೊಂಡಿದ್ದು, ವಸ್ತುಗಳನ್ನು ಹಿಂದಿ ಮಾತನಾಡುವ ತಂಡ ಕದ್ದೊಯ್ದಿರುವ ಶಂಕೆ ವ್ಯಕ್ತವಾಗಿದೆ. ಐರೋಡಿ ನಿವಾಸಿ ಸಂಗೀತಾ ಭಟ್ ಚಿನ್ನಾಭರಣ ಕಳೆದುಕೊಂಡ ಮಹಿಳೆಯಾಗಿದ್ದು, ಆಕೆಯು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪಣಜಿಯಿಂದ ಪುತ್ತೂರಿಗೆ ತೆರಳುತ್ತಿದ್ದರು. ಸಂಗೀತಾ ತನ್ನ ಬಟ್ಟೆ ಮತ್ತು ಚಿನ್ನಾಭರಣಗಳಿರುವ ಚಿಕ್ಕ ಕಾಟನ್ ಬ್ಯಾಗ್ ಅನ್ನು ಟ್ರಾಲಿ ಬ್ಯಾಗ್‌ನಲ್ಲಿ ಇಟ್ಟುಕೊಂಡು ಅದನ್ನು ಲಾಕ್ ಮಾಡಿ ತಾನು ಕುಳಿತಿದ್ದ ಸೀಟಿನ […]

ಕುಂದಾಪುರ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ 20 ಲಕ್ಷ ರೂ. ಚಿನ್ನಾಭರಣ ಕಳವು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಉಪ್ಪಿನಂಗಡಿ: ಏರ್‌ ಕಂಪ್ರೈಸರ್‌ ಸ್ಫೋಟಗೊಂಡು ಕಾರ್ಮಿಕ ಮೃತ್ಯು

(ನ್ಯೂಸ್ ಕಡಬ)newskadab.com  ಉಪ್ಪಿನಂಗಡಿ, ಜ.18. ಟಯರ್‌ ರಿಸೋಲ್‌ ಸಂಸ್ಥೆಯೊಂದರಲ್ಲಿ ಏರ್‌ ಕಂಪ್ರೈಸರ್‌ ಸ್ಫೋಟಗೊಂಡು ಕಾರ್ಮಿಕ ಮೃತಪಟ್ಟ ಘಟನೆ ಉಪ್ಪಿನಂಗಡಿಯ ಗಾಂಧಿಪಾರ್ಕ್‌ ಬಳಿಯಲ್ಲಿ  ನಡೆದಿದೆ. ಉಪ್ಪಿನಂಗಡಿ ಗಾಂಧಿ ಪಾರ್ಕ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಡಿಯನ್ ಟಯರ್ ಅಂಗಡಿಯಲ್ಲಿ ಏರ್ ಕಂಪ್ರೆಸರ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಆಲಂಕಾರು ಮೂಲದ ರಾಜೇಶ್ ಪೂಜಾರಿ (43) ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಏರ್ ಕಂಪ್ರೆಸರ್ ಸ್ಫೋಟಗೊಂಡು ಗಂಭೀರ ಗಾಯಗೊಂಡಿದ್ದ ರಾಜೇಶ್ ರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆತರಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಉಪ್ಪಿನಂಗಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.  

ಉಪ್ಪಿನಂಗಡಿ: ಏರ್‌ ಕಂಪ್ರೈಸರ್‌ ಸ್ಫೋಟಗೊಂಡು ಕಾರ್ಮಿಕ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

➤ಗಾಳಿಪಟ ಹಾರಿಸುವಾಗ ಹೈಟೆನ್ಷನ್ ವೈರ್ ತಗುಲಿ 11 ವರ್ಷದ ಬಾಲಕ ಮೃತ್ಯು..!

(ನ್ಯೂಸ್ ಕಡಬ) newskadaba.com, ಬೆಂಗಳೂರು,ಜ. 18. ಗಾಳಿಪಟ ಬಿಡಲು ಹೋಗಿದ್ದ 11 ವರ್ಷದ ಬಾಲಕ  ಅಬೂಬಕ್ಕರ್  ಮೃತಪಟ್ಟ ಘಟನೆ ಆರ್ ಟಿ ನಗರದ ಚಾಮುಂಡಿ ನಗರ ಫ್ಯಾಕ್ಟರಿಯೊಂದರ ಬಳಿ ನಡೆದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅಬೂಬಕ್ಕರ್ ಎಂಬ ಬಾಲಕನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಅಬೂಬಕ್ಕರ್ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

➤ಗಾಳಿಪಟ ಹಾರಿಸುವಾಗ ಹೈಟೆನ್ಷನ್ ವೈರ್ ತಗುಲಿ 11 ವರ್ಷದ ಬಾಲಕ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಆಟೋ ಮತ್ತು ಬೈಕ್ ನಡುವೆ ಅಪಘಾತ ➤  ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ)newskadab.com ಗದಗ, ಜ.18. ಗದಗ ಜಿಲ್ಲೆಯ ರೋಣ ಪಟ್ಟಣದ ಬಾದಾಮಿ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಗದಗ ಜಿಲ್ಲೆಯ ರೋಣ ಪಟ್ಟಣದ ಬಾದಾಮಿ ರಸ್ತೆಯಲ್ಲಿ ಆಟೋಗೆ ಬೈಕ್ ಡಿಕ್ಕಿಯಾದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ಅಮರೇಗೌಡ ಬಸವನಗೌಡ (30) ಹಾಗೂ ಮುತ್ತಪ್ಪ ಜಾಲಿಹಾಳ (27) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮತ್ತೋರ್ವ ಪ್ರಯಾಣಿಕ ಗಾಯಗೊಂಡಿದ್ದು, ಗಾಯಗೊಂಡ ಪ್ರಯಾಣಿಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ

ಆಟೋ ಮತ್ತು ಬೈಕ್ ನಡುವೆ ಅಪಘಾತ ➤  ಸವಾರ ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಯುವತಿಗೆ ಚೂರಿಯಿಂದ ಇರಿತ ಪ್ರಕರಣ !!   ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadab.com  ಪುತ್ತೂರು, ಜ.18. ಮುಂಡೂರು ಕಂಪದಲ್ಲಿ ಯುವತಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಯಶ್ರಿ(23)ನ್ನು ಕನಕಮಜಲು ನಿವಾಸಿ ಉಮೇಶ್ ನಿನ್ನೆ ಮನೆಗೆ ನುಗ್ಗಿ ಚೂರಿಯಿಂದ ಇರಿದು ಕೊಲೆ ಮಾಡಿದ್ದ. ಉಮೇಶ್, ಜಯಶ್ರಿಯ ಸಂಬಂಧಿಕನಾಗಿದ್ದು ಆಗಾಗ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ. ಆತನ ನಡವಳಿಕೆಯಿಂದ ಬೇಸತ್ತು ಜಯಶ್ರೀ ಇತ್ತೀಚೆಗೆ ಆತನಿಂದ ದೂರ ಸರಿದಿದ್ದಳು, ಇದೇ ಸಿಟ್ಟಿನಲ್ಲಿ ಆರೋಪಿ ಕೃತ್ಯ ಎಸಗಿದ್ದಾನೆ ಎನ್ನುವುದು ತಿಳಿದು ಬಂದಿದೆ.

ಪುತ್ತೂರು: ಯುವತಿಗೆ ಚೂರಿಯಿಂದ ಇರಿತ ಪ್ರಕರಣ !!   ➤ ಆರೋಪಿ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ನಿವೃತ್ತ ರೈಲ್ವೆ ಅಧಿಕಾರಿಗೆ ಸೇರಿದ 17 ಕೆ.ಜಿ ಚಿನ್ನ ವಶ !

(ನ್ಯೂಸ್ ಕಡಬ)newskadab.com ನವದೆಹಲಿ, ಜ.18. ಭುವನೇಶ್ವರದಲ್ಲಿ ರೈಲ್ವೆಯ ನಿವೃತ್ತ ಪ್ರಧಾನ ಮುಖ್ಯ ವ್ಯವಸ್ಥಾಪಕರೊಬ್ಬರಿಗೆ (ವಾಣಿಜ್ಯ) ಸಂಬಂಧಿಸಿದ ಸ್ಥಳಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿದ್ದು, 17 ಕೆ.ಜಿ ಚಿನ್ನ ಮತ್ತು ₹1.57 ಕೋಟಿ ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ನಿವೃತ್ತರಾಗಿದ್ದ 1987ರ ಬ್ಯಾಚಿನ ಭಾರತೀಯ ರೈಲ್ವೆ ಸಂಚಾರ ಸೇವಾ ಅಧಿಕಾರಿ ಪ್ರಮೋದ್ ಕುಮಾರ್ ಜೇನಾ ಅವರ ವಿರುದ್ಧ ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಜ.3ರಂದು ಪ್ರಕರಣ ದಾಖಲಿಸಿತ್ತು.

ನಿವೃತ್ತ ರೈಲ್ವೆ ಅಧಿಕಾರಿಗೆ ಸೇರಿದ 17 ಕೆ.ಜಿ ಚಿನ್ನ ವಶ ! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಕೆಲಸಕ್ಕೆಂದು ಹೋದ ಯುವತಿ ನಾಪತ್ತೆ

(ನ್ಯೂಸ್ ಕಡಬ)newskadab.com  ಮಂಗಳೂರು, ಜ.18. ನಗರದ ಮಣಪ್ಪುರಂ ಫೈನಾನ್ಸ್‌ನ ಉದ್ಯೋಗಿಯಾಗಿದ್ದ ಯುವತಿಯೊಬ್ಬಳು ನಾಪತ್ತೆಯಾದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಮಲಾಕ್ಷ ಎಂಬವರ ಪುತ್ರಿ ಶಿವಾನಿ (20) ಕಾಣೆಯಾದ ಯುವತಿ. ಈಕೆ ಜ.16ರಂದು ಬೆಳಗ್ಗೆ 7ಕ್ಕೆ ಕೆಲಸಕ್ಕೆ ತೆರಳಿದ್ದು, ಸಂಜೆ 6 ಗಂಟೆಯಾದರೂ ಮರಳಿ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. 5.6 ಅಡಿ ಎತ್ತರದ, ಬಿಳಿ ಮೈಬಣ್ಣದ, ದಪ್ಪಮುಖದ, ಸಾಧಾರಣ ಮೈಕಟ್ಟಿನ ಈಕೆ ತುಳು ಮತ್ತು ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೊರಟು ಹೋದಾಗ ಹಸಿರು ಬಣ್ಣದ

ಮಂಗಳೂರು: ಕೆಲಸಕ್ಕೆಂದು ಹೋದ ಯುವತಿ ನಾಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕುಣಿಗಲ್ ಪೊಲೀಸರ ಜತೆ ಅನುಚಿತ ವರ್ತನೆ ➤ಇಬ್ಬರು ಆರೋಪಿಗಳ ಬಂಧನ!

ನ್ಯೂಸ್ ಕಡಬ) newskadaba.com, ಬೆಂಗಳೂರು,ಜ. 18 ಕುಣಿಗಲ್ ರಾತ್ರಿ ಗಸ್ತಿನಲ್ಲಿದ್ದ ಇಬ್ಬರು ಪೊಲೀಸರ ಜತೆ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿರುವ ಘಟನೆ ಕುಣಿಗಲ್ ನಲ್ಲಿ ನಡೆದಿದೆ. ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯ ಕಂದಾಯ ಇಲಾಖೆ ಸಿಬ್ಬಂದಿ ವೆಂಕಟೇಶ್ ಮತ್ತು ರಾಮಚಂದ್ರ ಪೊಲೀಸರ ಮೇಲೆ ಹಲ್ಲೆ ನಡೆಸಿದ ಬಂಧಿತ ಆರೋಪಿಗಳು. ರಾತ್ರಿ ವೇಳೆ ಕಾನ್ ಸ್ಟೆಬಲ್ ಗಳಾದ ಮಿಥುನ್ ಮತ್ತು ಸುಮನ್ ಹೌಸಿಂಗ ಬೋರ್ಡ್ ಕಾಲೋನಿಯಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಆರೋಪಿಗಳು ಅವರೊಟ್ಟಿಗೆ ಜಗಳ ಮಾಡಿ ಹಲ್ಲೆ ನಡೆಸಿದ್ದಾರೆ.

ಕುಣಿಗಲ್ ಪೊಲೀಸರ ಜತೆ ಅನುಚಿತ ವರ್ತನೆ ➤ಇಬ್ಬರು ಆರೋಪಿಗಳ ಬಂಧನ! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಡಿಕೇರಿ: ವಿವಾಹಿತ ಮಹಿಳೆಯ ಅನುಮಾನಾಸ್ಪದವಾಗಿ ಮೃತ್ಯು

(ನ್ಯೂಸ್ ಕಡಬ)newskadab.com  ಮಡಿಕೇರಿ, ಜ.18. ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ವೀರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಐಮಂಗಲ ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ನಿವಾಸಿಗಳಾದ ಯೇಸುದಾಸ್‌ ಹಾಗೂ ತಾರಾ ದಂಪತಿಯ ಪುತ್ರ ರಕ್ಷಿತ್‌ ಅವರ ಪತ್ನಿ ಕಾವ್ಯಾ (23) ಮೃತಪಟ್ಟವರು ಎನ್ನಲಾಗಿದೆ. ರಕ್ಷಿತ್‌ ಕೆಲಸ ಮುಗಿಸಿ ಮನೆಗೆ ಬಂದಾಗ ಕಾವ್ಯಾ ಯಾವುದೇ ಪ್ರತಿಕ್ರಿಯೆ ಇಲ್ಲದೆ ಬಿದ್ದಿದ್ದರೆನ್ನಲಾಗಿದೆ. ತತ್‌ಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. 4 ವರ್ಷಗಳ ಹಿಂದೆ ರಕ್ಷಿತ್‌ ಹಾಗೂ ಕಾವ್ಯಾ

ಮಡಿಕೇರಿ: ವಿವಾಹಿತ ಮಹಿಳೆಯ ಅನುಮಾನಾಸ್ಪದವಾಗಿ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಓರ್ವ ವ್ಯಕ್ತಿಯನ್ನು 1 ಕಿ.ಮೀ ಎಳೆದೊಯ್ದ ಬೈಕ್ ಸವಾರ

(ನ್ಯೂಸ್ ಕಡಬ)newskadab.com  ಬೆಂಗಳೂರು, ಜ.18. ಬೆಂಗಳೂರಿನಲ್ಲಿ ಅಮಾನವೀಯ ಘಟನೆ ವರದಿಯಾಗಿದ್ದು, ರಸ್ತೆಯಲ್ಲಿ ವ್ಯಕ್ತಿಯನ್ನು ಬೈಕ್ ಸವಾರ 1 ಕಿ.ಮೀ ಧರಧರನೇ ಎಳೆದೊಯ್ದ ಭೀಕರ ಘಟನೆ ಪ್ರಕರಣಕ್ಕೆ ಸಂಬಂಧಿಸಿ, ಚಾಲಕ ಮುತ್ತಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ದುರುಹಂಕಾರಕ್ಕೆ ನಾನು ಅವನ ಹಿಂದೆ ಹೋಗಿದ್ದೆ ಎಂದು ಬೈಕಿನ ಹಿಂದೆ ನೇತುಬಿದ್ದ ಚಾಲಕ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಲತಃ ಬಿಜಾಪುರನಾಗಿದ್ದು, ಆದರೆ 54 ವರ್ಷದಿಂದ ಬೆಂಗಳೂರಿನಲ್ಲಿದ್ದೇನೆ. ಕುವೆಂಪು ಪ್ರಾಶಾಭಾರತಿಗೆ ಹೋಗುತ್ತಿದ್ದೆ. ಈ ವೇಳೆ ಈ ಘಟನೆ ನಡೆದಿದೆ. ಬೈಕ್ ಸವಾರ

ಓರ್ವ ವ್ಯಕ್ತಿಯನ್ನು 1 ಕಿ.ಮೀ ಎಳೆದೊಯ್ದ ಬೈಕ್ ಸವಾರ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top