ಕ್ರೈಮ್ ನ್ಯೂಸ್

ಇಬ್ಬರು ಪುತ್ರಿಯರ ಜತೆ ನದಿಗೆ ಹಾರಿದ ತಾಯಿ ➤ಮೂವರ ಮೃತದೇಹ ನದಿಯಲ್ಲಿ ಪತ್ತೆ..!

(ನ್ಯೂಸ್ ಕಡಬ)newskadab.com ಬಾಗಲಕೋಟೆ, ಜ.18. ವಯಸ್ಸಿಗೆ ಬಂದ ಹೆಣ್ಣುಮಕ್ಕಳಿಬ್ಬರ ಸಹಿತ ತಾಯಿಯೊಬ್ಬರು ನದಿಗೆ ಹಾರಿದ ಪ್ರಕರಣವೊಂದು ನಡೆದಿದೆ. ಬಾಗಲಕೋಟೆ ಜಿಲ್ಲೆಯ ಮಲಪ್ರಭಾ ಸೇತುವೆ ಬಳಿ ಈ ಪ್ರಕರಣ ನಡೆದಿದ್ದು, ಡೆತ್​ನೋಟ್ ಕೂಡ ಪತ್ತೆಯಾಗಿದೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಉಮಾ ಸುರೇಶ ಮಾಸರೆಡ್ಡಿ (42) ಎಂಬಾಕೆ ತನ್ನ ಮಕ್ಕಳಾದ ಐಶ್ವರ್ಯ (23) ಹಾಗೂ ಸೌಂದರ್ಯ (19) ಅವರೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಮತಗಿ ಪಟ್ಟಣದ ಮಲಪ್ರಭಾ ಸೇತುವೆ ಬಳಿ ಇವರ ಶವ ಪತ್ತೆಯಾಗಿದೆ. ಪುತ್ರಿಯರಲ್ಲಿ ಐಶ್ವರ್ಯ ಬೆಂಗಳೂರಿನಲ್ಲಿ […]

ಇಬ್ಬರು ಪುತ್ರಿಯರ ಜತೆ ನದಿಗೆ ಹಾರಿದ ತಾಯಿ ➤ಮೂವರ ಮೃತದೇಹ ನದಿಯಲ್ಲಿ ಪತ್ತೆ..! Read More »

ಕರ್ನಾಟಕ, ಕ್ರೈಮ್ ನ್ಯೂಸ್
Theft, crime, Robbery

ಆಟೋ ಚಾಲಕನಿಗೆ ಮಚ್ಚು ತೋರಿಸಿ 10 ಸಾವಿರ ರೂ. ದೋಚಿದ ದರೋಡೆಕೋರರು..!

(ನ್ಯೂಸ್ ಕಡಬ)newskadab.com ಬೆಂಗಳೂರು, ಜ.18. ಬೆಂಗಳೂರಿನಲ್ಲಿ ದರೋಡೆಕೋರರ ಅಟ್ಟಹಾಸ ಮುಂದುವರೆದಿದ್ದು, ಆಟೋ ಪ್ರಯಾಣಿಕ ಬಳಿ 10 ಸಾವಿರ ರೂ. ದರೋಡೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ನಡೆದಿದೆ. ಬೆಂಗಳೂರಿನ ಮೆಜೆಸ್ಟಿಕ್ ನಿಂದ ಹೆಣ್ಣೂರುಬಂಡೆಗೆ ಆಟೋದಲ್ಲಿ ತೆರಳುತ್ತಿದ್ದ ಪ್ರಯಾಣಿಕನನ್ನು ಹಿಂಬಾಲಿಸಿದ ದುಷ್ಕರ್ಮಿಗಳು ಮಚ್ಚು ತೋರಿಸಿ 10 ಸಾವಿರ ರೂ. ದೋಚಿದ್ದಾರೆ. ಡಿಯೋದಲ್ಲಿ ಆಟೋ ಹಿಂಬಾಲಿಸಿ ದುಷ್ಕರ್ಮಿಗಳು ಬಂದಿದ್ದು, ಮಚ್ಚು ತೋರಿಸಿ 10 ಸಾವಿರ ರೂ. ದರೋಡೆ ಮಾಡಿದ್ದಾರೆ ಎನ್ನಲಾಗಿದೆ. ಅದೇ ರಸ್ತೆಯಲ್ಲಿ ಕಾರು ಬಂದಿದ್ದರಿಂದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ದರೋಡೆ

ಆಟೋ ಚಾಲಕನಿಗೆ ಮಚ್ಚು ತೋರಿಸಿ 10 ಸಾವಿರ ರೂ. ದೋಚಿದ ದರೋಡೆಕೋರರು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಂಧನದ ಭೀತಿ ಆಸ್ಪತ್ರೆಗೆ ದಾಖಲಾದ ಇನ್ಸ್​​ಪೆಕ್ಟರ್ ಪ್ರವೀಣ್..! 

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 17. ನಕಲಿ ಕೇಸ್ ಪ್ರಕರಣದಲ್ಲಿ ಅರೆಸ್ಟ್ ಆಗುವ ಭೀತಿಯಿಂದ ಕಾಟನ್ ಪೇಟೆ ಇನ್ಸ್‌ಪೆಕ್ಟರ್ ಆಗಿದ್ದ ಪ್ರವೀಣ್ ಅವರು ಆಸ್ಪತ್ರೆಗೆ ದಾಖಲಾಗಿರುವ ಕುರಿತು ವರದಿಯಾಗಿದೆ. ಇನ್ಸ್​ಪೆಕ್ಟರ್ ಪ್ರವೀಣ್, ಸ್ಯಾಂಟ್ರೋ ರವಿ ಮಾತು ಕೇಳಿ ಕೇಸ್ ಹಾಕಿದ್ದರು, ಮೇಲ್ನೋಟಕ್ಕೆ ಇದು ಕರ್ತವ್ಯಲೋಪ ಎಂದು DCP ವರದಿ ಕೊಟ್ಟಿದ್ದಾರೆ. ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ ಈ ಬಗ್ಗೆ ವರದಿ ನೀಡಿದ್ದು, ಡಿಸಿಪಿ ವರದಿ ಆಧರಿಸಿ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿದೆ. ಸಿಸಿಬಿ ತನಿಖೆ ಆರಂಭವಾಗುತ್ತಿದ್ದಂತೆ

ಬಂಧನದ ಭೀತಿ ಆಸ್ಪತ್ರೆಗೆ ದಾಖಲಾದ ಇನ್ಸ್​​ಪೆಕ್ಟರ್ ಪ್ರವೀಣ್..!  Read More »

ಕರ್ನಾಟಕ, ಕ್ರೈಮ್ ನ್ಯೂಸ್

ಅರಂತೋಡು: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

(ನ್ಯೂಸ್ ಕಡಬ) newskadaba.com ಅರಂತೋಡು, ಜ. 18. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಲ್ಟಿಯಾದ ಘಟನೆ ಮಾಣಿ- ಮೈಸೂರು ಹೆದ್ದಾರಿಯ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಬಳಿ ನಡೆದಿದೆ. ಮಡಿಕೇರಿಯಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಅರಂತೋಡು: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ Read More »

ಕರಾವಳಿ, ಕ್ರೈಮ್ ನ್ಯೂಸ್

ಉಡುಪಿ: ಬೈಕ್ ಮತ್ತು ಲಾರಿ ನಡುವೆ ಮುಖಾಮುಖಿ ಢಿಕ್ಕಿ ➤ ವಿದ್ಯಾರ್ಥಿಗಳಿಬ್ಬರು ಸ್ಥಳದಲ್ಲೇ ಮೃತ್ಯು..!                                                

(ನ್ಯೂಸ್ ಕಡಬ) newskadaba.com ಬ್ರಹ್ಮಾವರ, ಜ.18. ಬೈಕ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66ರ ಪೆಟ್ರೋಲ್ ಬಂಕ್ ವೊಂದರ ಬಳಿ ನಡೆದಿದೆ. ಶಿವಮೊಗ್ಗ ನಿವಾಸಿ ಸಮಿತ್ ಕುಮಾರ್ (19) ಹಾಗೂ ಸಾಲಿಗ್ರಾಂ ಚಿತ್ರಪಾಡಿ ನಿವಾಸಿ ವಾಗೀಶ್(19) ಮೃತರು ಎಂದು ಗುರುತಿಸಲಾಗಿದೆ. ಇವರು ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು. ಇವರು ಕಾಲೇಜು ಮುಗಿಸಿ ರಾತ್ರಿ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಎದುರಿದ್ದ ಲಾರಿಯನ್ನು ಓವರ್ ಟೇಕ್ ಮಾಡುವಾಗ

ಉಡುಪಿ: ಬೈಕ್ ಮತ್ತು ಲಾರಿ ನಡುವೆ ಮುಖಾಮುಖಿ ಢಿಕ್ಕಿ ➤ ವಿದ್ಯಾರ್ಥಿಗಳಿಬ್ಬರು ಸ್ಥಳದಲ್ಲೇ ಮೃತ್ಯು..!                                                 Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕುಡಿದ ಮತ್ತಿನಲ್ಲಿ ಟವರ್ ಏರಿ ವ್ಯಕ್ತಿಯ ಹೈಡ್ರಾಮ ➤ ಸ್ಥಳಕ್ಕೆ ಜಡ್ಜ್ ಬರುವಂತೆ ಪಟ್ಟು..!

(ನ್ಯೂಸ್ ಕಡಬ) newskadaba.com ಧಾರವಾಡ, ಜ. 18. ಕುಡಿದ ಮತ್ತಿನಲ್ಲಿ ಮೊಬೈಲ್ ಟವರ್ ಏರಿ ವ್ಯಕ್ತಿಯೋರ್ವ ಹೈಡ್ರಾಮ ಸೃಷ್ಟಿಸಿರುವ ಘಟನೆ ಧಾರವಾಡದಲ್ಲಿ ವರದಿಯಾಗಿದೆ.     ಜಾವೇದ್ ದಲಾಯತ್ ಎಂಬಾತ ಮದ್ಯ ಸೇವಿಸಿ ಬಂದು, ಪೊಲೀಸರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೊಬೈಲ್ ಟವರ್‌ ಏರಿ ಕುಳಿತಿದ್ದಾನೆ ಎನ್ನಲಾಗಿದೆ. ಇದನ್ನು ಗಮನಿಸಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಈತನ ಮನವೊಲಿಸಲು ಪ್ರಯತ್ನಿಸಿದರಾದರೂ, ನ್ಯಾಯಾಧೀಶರು ಬಂದರೆ ಮಾತ್ರ ಕೆಳಗಿಳಿಯುತ್ತೇನೆ ಎಂದು ಈತ ಪಟ್ಟು ಹಿಡಿದಿದ್ದ.

ಕುಡಿದ ಮತ್ತಿನಲ್ಲಿ ಟವರ್ ಏರಿ ವ್ಯಕ್ತಿಯ ಹೈಡ್ರಾಮ ➤ ಸ್ಥಳಕ್ಕೆ ಜಡ್ಜ್ ಬರುವಂತೆ ಪಟ್ಟು..! Read More »

ಕರ್ನಾಟಕ, ಕ್ರೈಮ್ ನ್ಯೂಸ್
crime, arrest, suspected

ಕಳ್ಳತನ ಮಾಡಲು ಬಂದ ಕಳ್ಳರು ಮನೆಯಲ್ಲೇ ಲಾಕ್ !  ➤ ಖದೀಮರು ಅರೆಸ್ಟ್

(ನ್ಯೂಸ್ ಕಡಬ) newskadaba.com ತಮಿಳುನಾಡು, ಜ. 18. ಕಳ್ಳತನ ಮಾಡಲು ಬಂದ ಕಳ್ಳರು ಮನೆಯಲ್ಲೇ ಲಾಕ್​ ಆಗಿರುವ ಅಚ್ಚರಿಯ ಘಟನೆ ತಮಿಳುನಾಡಿನ ಗಡಿ ಹೊಸೂರಿನಲ್ಲಿ ನಡೆದಿದೆ.     ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಶಿವಕುಮಾರ್, ಕರ್ನಾಟಕ-ತಮಿಳುನಾಡಿನ ಗಡಿ ಹೊಸೂರಿನಲ್ಲಿ ವಾಸವಾಗಿದ್ದು, ಸಂಕ್ರಾಂತಿ ಹಬ್ಬದ ಹಿನ್ನೆಲೆ ಕುಟುಂಬದವರು ಮನೆಗೆ ಬೀಗ ಹಾಕಿ ಊರಿಗೆ ಹೋಗಿದ್ದ ಸಂದರದಭ ಕಳ್ಳರು ಮನೆಗೆ ನುಗ್ಗಿದ್ದಾರೆ. ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿದ ಸ್ಥಳೀಯರು ಮನೆ ಕಡೆ ಬಂದು ನೋಡಿದಾಗ ಕಳ್ಳರು ಮನೆಯೊಳಗೆ

ಕಳ್ಳತನ ಮಾಡಲು ಬಂದ ಕಳ್ಳರು ಮನೆಯಲ್ಲೇ ಲಾಕ್ !  ➤ ಖದೀಮರು ಅರೆಸ್ಟ್ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಗರ್ಭಿಣಿ ಪತ್ನಿಯನ್ನು ಕೊಂದು ಪರಾರಿಯಾದ ಪಾಪಿ ಗಂಡ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.17. ಶೀಲ ಶಂಕಿಸಿ ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು ಗಂಡ ಮನೆಯಿಂದಲೇ ಪರಾರಿಯಾಗಿರುವ ಘಟನೆ ಬೆಂಗಳೂರಿನ ಸುದ್ದುಗುಂಟೆಪಾಳ್ಯ ಠಾಣೆಯಲ್ಲಿ ದಾಖಲಾಗಿದೆ.  ತಾವರೆಕೆರೆಯ ಸುಭಾಷ್ ನಗರದ ನಿವಾಸಿ 22 ವರ್ಷದ ನಾಜ್ ಕೊಲೆಯಾದ ಮಹಿಳೆ. ನಾಜ್ 6 ತಿಂಗಳ ಹಿಂದಷ್ಟೇ ಖಾಸಗಿ ಕಂಪನಿ ಉದ್ಯೋಗಿ ನಾಸೀರ್ ಹುಸೇನ್ ಎಂಬುವವನನ್ನ ಪ್ರೀತಿಸಿ, ಪೋಷಕರ ಅನುಮತಿ ಪಡೆದು ಮದುವೆಯಾಗಿದ್ದಳು. ನಾಸೀರ್ ಹುಸೇನ್ ಗೆ ತಂದೆ ತಾಯಿ ಇರದ ಕಾರಣ ಮದುವೆಯ ಬಳಿಕ ತಾವರೆಕೆರೆಯ ಸುಭಾಷ್ ನಗರದ ಫ್ಲಾಟ್ ನಲ್ಲಿ

ಗರ್ಭಿಣಿ ಪತ್ನಿಯನ್ನು ಕೊಂದು ಪರಾರಿಯಾದ ಪಾಪಿ ಗಂಡ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪಂಚಾಯಿತಿಯ ಅಕ್ರಮ ಬಯಲಿಗೆಳೆದಿದ್ದ ಆರ್‌ಟಿಐ ಕಾರ್ಯಕರ್ತನ ಹತ್ಯೆ ➤ ಪೊಲೀಸರ ವೈಫಲ್ಯವೇ ಕಾರಣ ಎಂದ ಕುಟುಂಬ..!

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.17. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಹತ್ಯೆಗೀಡಾದ ದಿವಂಗತ ಆರ್‌ಟಿಐ ಕಾರ್ಯಕರ್ತ ಆರ್. ಮೂರ್ತಿ ಅವರ ಕುಟುಂಬ, ಮೂರ್ತಿ ಅವರ ಹತ್ಯೆಗೆ ರಾಜ್ಯದ ಪೊಲೀಸ್ ಇಲಾಖೆಯೇ ಹೊಣೆ ಎಂದು ಆರೋಪಿಸಿದೆ. ಇದೇ ವೇಳೆ ರಾಜ್ಯದಲ್ಲಿ ಆರ್‌ಟಿಐ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸುವುದಾಗಿ ಆರ್‌ಟಿಐ ಕಾರ್ಯಕರ್ತರ ವೇದಿಕೆ ಎಚ್ಚರಿಕೆ ನೀಡಿದೆ. ಬೆಂಗಳೂರಿಗೆ ಸಮೀಪದಲ್ಲಿರುವ ಕನಕಪುರ ಪಟ್ಟಣದ ಸಮೀಪದ ಕುರುಬಳ್ಳಿದೊಡ್ಡಿ ಗ್ರಾಮದ ನಿವಾಸಿ ಮೂರ್ತಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೂರ್ತಿ ಅವರು ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ

ಪಂಚಾಯಿತಿಯ ಅಕ್ರಮ ಬಯಲಿಗೆಳೆದಿದ್ದ ಆರ್‌ಟಿಐ ಕಾರ್ಯಕರ್ತನ ಹತ್ಯೆ ➤ ಪೊಲೀಸರ ವೈಫಲ್ಯವೇ ಕಾರಣ ಎಂದ ಕುಟುಂಬ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮೆಟ್ರೋ ಕಾಮಗಾರಿ ವೇಳೆ ಮತ್ತೊಂದು ಬಲಿ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.17. ಮೆಟ್ರೋ ಕಾಮಗಾರಿಯ ವೇಳೆ ಮತ್ತೊಂದು ಬಲಿ ಸಂಭವಿಸಿದ್ದು ಬಾಣಸವಾಡಿಯ ಹೊರವರ್ತುಲ ಮುಖ್ಯರಸ್ತೆಯ ಮದರ್ ವುಡ್ ಆಸ್ಪತ್ರೆಯ ಬಳಿ  ಮೆಟ್ರೋ ಬ್ಯಾರಿಕೇಡ್ ಸ್ವಚ್ಚತಾ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಕಾರ್ಮಿಕರೊಬ್ಬರು ಟಾಟಾ ಏಸ್ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬಿಹಾರದ ಕಾಟೇಯಾದ ಗುಡ್ಡು ಮಾಂಜಿ(28)ಮೃತಪಟ್ಟ ಕೂಲಿ ಕಾರ್ಮಿಕನಾಗಿದ್ದಾರೆ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ. ಮೆಟ್ರೋ ಬ್ಯಾರಿಕೇಡ್ ರಿಪೇರಿ ಹಾಗೂ ಸ್ವಚ್ಚ ಮಾಡಲು ಬ್ಯಾರಿಕೇಡ್ ಅಳವಡಿಸಿಕೊಂಡು ಗುಡ್ಡು ಮಾಂಜಿ ಕೆಲಸ

ಮೆಟ್ರೋ ಕಾಮಗಾರಿ ವೇಳೆ ಮತ್ತೊಂದು ಬಲಿ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top