ಕ್ರೈಮ್ ನ್ಯೂಸ್

ವಿಟ್ಲ: ಜಾತ್ರೆಯಲ್ಲಿ ವ್ಯಾಪಾರಿ ಮೇಲೆ ಹಲ್ಲೆ ಪ್ರಕರಣ ➤ ಆರೋಪಿಗಳು ಅರೆಸ್ಟ್

(ನ್ಯೂಸ್ ಕಡಬ)newskadaba.com ವಿಟ್ಲ, ಜ.20. ಪ್ರಸಿದ್ಧ ವಿಟ್ಲ ಜಾತ್ರೆ ಸಂತೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿದ ಆರು ಮಂದಿ ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಗಣೇಶ್‌ ಕಡಂಬು, ಮಂಜುನಾಥ ಸೇರಿ ಇತರ ನಾಲ್ವರನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ. ವಿಟ್ಲ ಶ್ರೀ ಪಂಚಲಿಗೇಶ್ವರ ದೇವಸ್ಥಾನದ ಜಾತ್ರೆಯ ಸಂದರ್ಭ ದೇವಸ್ಥಾನದ ಅನುಮತಿಯಂತೆ ಫ್ಯಾನ್ಸಿ ಮಳಿಗೆ ಇಟ್ಟು ವ್ಯಾಪಾರ ಮಾಡಿಕೊಂಡಿದ್ದ ಸುರೇಶ್‌ ದಾಸ್‌ ಎಂಬವರಿಗೆ ತಡರಾತ್ರಿ ಅಂಗಡಿ ಬಂದ್ ಮಾಡುವುದೇಕೆ ಎಂದು ಪ್ರಶ್ನಿಸಿ ಆರು ಮಂದಿ ಆರೋಪಿಗಳು […]

ವಿಟ್ಲ: ಜಾತ್ರೆಯಲ್ಲಿ ವ್ಯಾಪಾರಿ ಮೇಲೆ ಹಲ್ಲೆ ಪ್ರಕರಣ ➤ ಆರೋಪಿಗಳು ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

➤ನೇಣಿಗೆ ಶರಣಾದ ಮೂವರು ಸಹೋದರಿಯರು

(ನ್ಯೂಸ್ ಕಡಬ) newskadaba.com, ತುಮಕೂರು, ಜ. 20. ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬರಕನಹಾಲ್ ತಾಂಡ್ಯ ಬಳಿಯ ಒಂದು ಮನೆಯಲ್ಲಿ ಮೂವರು  ಹೆಣ್ಣು ಮಕ್ಕಳು ವಾಸವಿದ್ದರು. ಆದರೆ ಈಗ ಆ ಮನೆಯಲ್ಲಿ ದುರಂತವೊಂದು ಸಂಭವಿಸಿದೆ. ಈ ಘಟನೆಯಿಂದ ತಾಂಡ್ಯದ ಜನರೇ ಬೆಚ್ಚಿಬಿದ್ದಿದ್ದಾರೆ. ಮೂವರು ಅನಾಥ ಸಹೋದರಿಯರು ನೇಣಿಗೆ ಶರಣಾದ ದಾರುಣ ಘಟನೆ ಸಂಭವಿಸಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಒಂಬತ್ತು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ರಂಜಿತಾ (24), ಬಿಂದು (21), ಚಂದನ (18)

➤ನೇಣಿಗೆ ಶರಣಾದ ಮೂವರು ಸಹೋದರಿಯರು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ಕೂಲಿ ಕೆಲಸಕ್ಕೆ ತೆರಳಿದ್ದ ವ್ಯಕ್ತಿಯ ಮೃತದೇಹ ಬಾವಿಯಲ್ಲಿ ಪತ್ತೆ

(ನ್ಯೂಸ್ ಕಡಬ)newskadaba.com ಸುಳ್ಯ, ಜ.20. ಕೆಲ ದಿನಗಳ ಹಿಂದೆ ಮನೆಯಿಂದ ಕೂಲಿ ಕೆಲಸಕ್ಕೆಂದು ಹೋಗಿದ್ದ ವ್ಯಕ್ತಿಯ ಶವ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಪಂಜ ಸಮೀಪದಲ್ಲಿ ಬೆಳಕಿಗೆ ಬಂದಿದೆ.  ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ಪೆರ್ಮಾಜೆ ನಾರಾಯಣ ನಾಯ್ಕ(70) ಶವವಾಗಿ ಪತ್ತೆಯಾದ ವ್ಯಕ್ತಿ. ಎಂದಿನಂತೆ ಕೂಲಿ ಕೆಲಸಕ್ಕೆಂದು ಮನೆಯಿಂದ ತೆರಳಿದ್ದರು. ಬಳಿಕ ಅವರು ಮನೆಗೆ ಬಾರದೇ ಇದ್ದುದರಿಂದ ಮನೆಯವರು ಹುಟುಕಾಟ ವಿವಿಧೆಡೆ ಹುಡುಕಾಟ ನಡೆಸಿದ್ದರು. ಬಾವಿಯಲ್ಲಿ ಅವರ ಶವ ಪತ್ತೆಯಾಗಿದೆ. ಮನೆಯವರು ಸ್ಥಳಕ್ಕೆ ಆಗಮಿಸಿ ಮೃತ ದೇಹ ಖಚಿತ

ಸುಳ್ಯ: ಕೂಲಿ ಕೆಲಸಕ್ಕೆ ತೆರಳಿದ್ದ ವ್ಯಕ್ತಿಯ ಮೃತದೇಹ ಬಾವಿಯಲ್ಲಿ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಫುಟ್​ಪಾತ್​ ಮೇಲೆ ಮಗುವಿಗೆ ಜನ್ಮ ನೀಡಿ ರಸ್ತೆಯಲ್ಲೇ ಎಸೆದು ಹೋದ ಪಾಪಿ ತಾಯಿ..!! 

(ನ್ಯೂಸ್ ಕಡಬ)newskadaba.com ಚಿಕ್ಕಬಳ್ಳಾಪುರ, ಜ.20. ಮಗ ಕೆಟ್ಟವನಾದರೂ ತಾಯಿ ಕೆಟ್ಟವಳಾಗುವುದಿಲ್ಲ ಎನ್ನುವ ಮಾತಿದೆ. ಆದರೆ ಇಲ್ಲಿ ಮಾತ್ರ ತಾಯಿ, ತನ್ನ ಮಗುವಿಗೆ ಜನ್ಮ ನೀಡಿ ಮಗು ಬೇಡ ಎಂದು ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಅದರ ಪರಿಣಾಮವಾಗಿ ಈಗ ಮಗು ಮೃತಪಟ್ಟಿದೆ. ನಡುರಸ್ತೆಯಲ್ಲೇ ಪುಟ್ಬಾತ್ ಮೇಲೆ ಮಗುವಿಗೆ ಹೆಣ್ಣು ಜನ್ಮ ನೀಡಿದ ತಾಯಿ ನಂತರ ಆಕೆ ನಾಪತ್ತೆಯಾಗಿದ್ದಾಳೆ. ಈ ರೀತಿಯ ಪ್ರಕರಣಗಳು ದೇಶಾದ್ಯಂತ ಹೆಚ್ಚಾಗುತ್ತಿವೆ. ಹುಟ್ಟಿಸಿದ ಮಗು ತನಗೆ ಬೇಡ ಎಂದು ಅನೇಕ ತಾಯಂದಿರು ಮಗುವನ್ನು ತ್ಯಜಿಸುವುದು ಈಗ ಸಾಮಾನ್ಯವಾಗಿದೆ.

ಫುಟ್​ಪಾತ್​ ಮೇಲೆ ಮಗುವಿಗೆ ಜನ್ಮ ನೀಡಿ ರಸ್ತೆಯಲ್ಲೇ ಎಸೆದು ಹೋದ ಪಾಪಿ ತಾಯಿ..!!  Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಪ್ರವೀಣ್ ‌ನೆಟ್ಟಾರು ಹತ್ಯೆ ಪ್ರಕರಣ ➤ ಮತ್ತಿಬ್ಬರ ಪತ್ತೆಗೆ NIA ಬಹುಮಾನ ಘೋಷಣೆ..!

(ನ್ಯೂಸ್ ಕಡಬ)newskadaba.com ಮಂಗಳೂರು, ಜ.20. ಬಿಜೆಪಿ ಯುವ ಮುಖಂಡ ಪ್ರವೀಣ್ ‌ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿರುವ ಮತ್ತಿಬ್ಬರು‌ ಆರೋಪಿಗಳ ಪತ್ತೆಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮುಂದಾಗಿದ್ದು ಆರೋಪಿಗಳ ಕುರಿತು ಸುಳಿವು ನೀಡಿದವರಿಗೆ ಐದು ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದೆ. ನಿಷೇಧಿತ ಪಿಎಫ್ಐ ಸಂಘಟನೆ ಕಾರ್ಯಕಾರಿ ಸಮಿತಿ ಸದಸ್ಯ ಬಂಟ್ವಾಳ ತಾಲೂಕಿನ ಕೊಡಾಜೆಯ ಮಹಮ್ಮದ್ ಶರೀಪ್ (48) ಹಾಗೂ ನೆಕ್ಕಿಲಾಡಿಯ ಮಸೂದ್ ಪತ್ತೆಗೆ ಎನ್ಐಎ 5ಲಕ್ಷ ರೂ ಬಹುಮಾನ ಘೋಷಣೆ ಮಾಡಿದೆ. ಸುಳಿವು ನೀಡಿದವರ

ಮಂಗಳೂರು: ಪ್ರವೀಣ್ ‌ನೆಟ್ಟಾರು ಹತ್ಯೆ ಪ್ರಕರಣ ➤ ಮತ್ತಿಬ್ಬರ ಪತ್ತೆಗೆ NIA ಬಹುಮಾನ ಘೋಷಣೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ಆರು ವರ್ಷದ ಪ್ರೀತಿಗೆ ಬ್ರೇಕ್ ➤ಪ್ರಿಯತಮ ಆತ್ಮಹತ್ಯೆಗೆ ಶರಣು

(ನ್ಯೂಸ್ ಕಡಬ) newskadaba.com. ಉಲ್ಲಾಳ, ಜ. 19. ಆರು ವರ್ಷದ ಪ್ರೀತಿಗೆ ಬ್ರೇಕ್ ಬಿದ್ದಿದ್ದಕ್ಕೆ ಪ್ರಿಯತಮ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಉಲ್ಲಾಳ ಉಪನಗರದಲ್ಲಿ ನಡೆದಿದೆ. ರೋಹಿತ್ 25 ಮೃತ ಯುವಕನಾಗಿದ್ದಾನೆ. ಈತ ಕೊರಿಯರ್ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಕಳೆದ  ಆರು ವರ್ಷಗಳಿಂದ  ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಕೊನೆ ಬಾರಿ ಭೇಟಿಯಾದಾಗ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ಇನ್ನು ಪ್ರೀತಿ ಬೇಡ ನಾವು ಬ್ರೇಕಪ್ ಮಾಡಿಕೊಳ್ಳುವ ಎಂದು ಗಲಾಟೆ ಮಾಡಿಕೊಂಡಿದ್ದಾರೆ. ಇದರಿಂದ ಮನನೊಂದು ಮನೆಯಲ್ಲಿ ನೇಣುಬಿಗಿದುಕೊಂಡು

ಆರು ವರ್ಷದ ಪ್ರೀತಿಗೆ ಬ್ರೇಕ್ ➤ಪ್ರಿಯತಮ ಆತ್ಮಹತ್ಯೆಗೆ ಶರಣು Read More »

ಕ್ರೈಮ್ ನ್ಯೂಸ್

ಎಟಿಎಂ ಕಳವು ಪ್ರಕರಣ ➤ಬಾರ್ ಸಪ್ಲೈಯರ್ ಅಂದರ್

ನ್ಯೂಸ್ ಕಡಬ) newskadaba.com, ಬೆಂಗಳೂರು,ಜ.19. ಎಟಿಎಂ ಕಳವು ಪ್ರಯತ್ನ ಪ್ರಕರಣದ ಖತರ್ನಾಕ್ ಖದೀಮನೊಬ್ಬನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಕಾಮಾಕ್ಷಿಪಾಳ್ಯದ ರಂಗನಾಥಪುರದ ಕರಿಚಿತ್ತಪ್ಪ(21) ಬಂಧಿತ ಆರೋಪಿಯಾಗಿದ್ದಾನೆ. ಈತ ಮಾಗಡಿ ಮುಖ್ಯರಸ್ತೆ ಕಾಮಾಕ್ಷಿಪಾಳ್ಯ ಜಯಲಕ್ಷ್ಮೀ ಕಾಂಪ್ಲೆಕ್ಸ್ ನಲ್ಲಿರುವ ಆಕ್ಸಿಸ್ ಬ್ಯಾಂಕ್ ಎಟಿಎಂನ್ನು ಹೊಡೆದು ಕಳವು ಮಾಡಲು ಪ್ರಯತ್ನಿಸಿದ ಬಗ್ಗೆ ಜಗ್ಗೇಶ್ ನೀಡಿದ ದೂರು ಆಧರಿಸಿ ಕಾಮಾಕ್ಷಿಪಾಳ್ಯ ಪೊಲೀಸ್ ಇನ್ಸ್‌ಪೆಕ್ಟರ್ ಲೋಹಿತ್ ಮತ್ತವರ ಸಿಬ್ಬಂದಿ ಪ್ರಕರಣದ ತನಿಖೆ ಕೈಗೊಂಡಿದ್ದರು. ಪ್ರಕರಣದ ಸಂಬಂಧ ಎಟಿಎಂನಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ ತುಮಕೂರಿನ ಮರಳೂರು ಸರ್ಕಲ್‌ನಲ್ಲಿ

ಎಟಿಎಂ ಕಳವು ಪ್ರಕರಣ ➤ಬಾರ್ ಸಪ್ಲೈಯರ್ ಅಂದರ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಆಸ್ತಿ ವಿವಾದ ➤ ತಂದೆಯಿಂದ ಮಗನ ಮೇಲೆ ಹಲ್ಲೆ..!

(ನ್ಯೂಸ್ ಕಡಬ) newskadaba.com, ಕೊರಟಗೆರೆ,ಜ.19. ಆಸ್ತಿ ವಿಚಾರವಾಗಿ ತಂದೆಯೇ ಮಗನ ತಲೆಗೆ ಬಲವಾಗಿ ಹೊಡೆದ ಪರಿಣಾಮ ಮಗ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ದೊಡ್ಡನರಸಯ್ಯನಪಾಳ್ಯದಲ್ಲಿ ನಡೆದಿದೆ. ಲಕ್ಷ್ಮೀಕಾಂತರಾಜು (45) ತಂದೆಯಿಂದ  ಹಲ್ಲೆಗೊಳಗಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕೃಷ್ಣಪ್ಪ(65)ಹಲ್ಲೆ ಮಾಡಿದ ತಂದೆ. ಆಸ್ತಿ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಅದೇ ಕಾರಣಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ತಂದೆ ಮಗನಿಗೆ ಗುದ್ದಲಿ ಕಾವಿನಿಂದ ತಲೆಗೆ ಹೊಡೆದಿದ್ದಾರೆ. ಬಲವಾಗಿ ತಲೆಗೆ ಪೆಟ್ಟು ಬಿದ್ದ ಪರಿಣಾಮ ಕುಸಿದು ಬಿದ್ದ

ಆಸ್ತಿ ವಿವಾದ ➤ ತಂದೆಯಿಂದ ಮಗನ ಮೇಲೆ ಹಲ್ಲೆ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಿಲ್‌ ಕಟ್ಟದೇ ಯುಎಇ ವ್ಯಕ್ತಿ ಪರಾರಿ !  ➤   23 ಲಕ್ಷ ರೂ. ವಂಚನೆ

(ನ್ಯೂಸ್ ಕಡಬ)newskadab.com  ಹೊಸದಿಲ್ಲಿ, ಜ.18. ಅಬುದಾಬಿ ರಾಜ ಮನೆತನದ ಸಿಬ್ಬಂದಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ದಿಲ್ಲಿಯ ಪ್ರತಿಷ್ಠಿತ ಲೀಲಾ ಪ್ಯಾಲೇಸ್‌ ಹೋಟೆಲ್‌ಗೆ 23 ಲಕ್ಷ ರೂ. ಬಿಲ್‌ ಪಾವತಿಸದೇ ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ ಯುಎಇ ಸುಲ್ತಾನ ಶೇಖ್‌ ಫಲ್ಹಾ ಬಿನ್‌ ಜಾಯೇದ್‌ ಅಲ್‌ ನಹ್ಯಾನ್‌ ಅವರ ಕಚೇರಿಯ ಅಧಿಕಾರಿ ಎಂದು ಹೇಳಿಕೊಂಡು ಮೊಹಮ್ಮದ್‌ ಷರೀಫ್‌ ಹೋಟೆಲ್‌ನ 427 ರೂಮ್‌ಗೆ ಚೆಕ್‌ ಇನ್‌ ಆಗಿದ್ದ. ಎಲ್ಲಾ ಐಷಾರಾಮಿ ಸವಲತ್ತುಗಳ ಮಜಾ ಉಡಾಯಿಸಿ ಬಿಲ್‌ ಕಟ್ಟದೇ ಮಂಗಮಾಯವಾಗಿದ್ದಾನೆ

ಬಿಲ್‌ ಕಟ್ಟದೇ ಯುಎಇ ವ್ಯಕ್ತಿ ಪರಾರಿ !  ➤   23 ಲಕ್ಷ ರೂ. ವಂಚನೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ➤   ಆರೋಪಿ ಅರೆಸ್ಟ್..!

(ನ್ಯೂಸ್ ಕಡಬ)newskadab.com  ಗುಜರಾತ್‌, ಜ.18. ವ್ಯಕ್ತಿಯೊಬ್ಬ ಒಂಬತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಭಗವಾನ್‌ಪಾರಾ ಪ್ರದೇಶದ ನಿರ್ಜನ ಸ್ಥಳದಲ್ಲಿ ಶವವನ್ನು ಎಸೆದಿರುವುದು ಕಂಡುಬಂದಿದೆ. ನಂತರ ಸ್ಥಳೀಯರು ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದರು ಮತ್ತು ತಪ್ಪಿತಸ್ಥರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ರಸ್ತೆಗಳನ್ನು ತಡೆದರು ಎಂದು ಅವರು ಹೇಳಿದರು. ಡೈಮಂಡ್ ಪಾಲಿಷರ್ ಆಗಿ ಕೆಲಸ ಮಾಡುತ್ತಿದ್ದ 39 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯ ಮೃತದೇಹವನ್ನು ಮರಣೋತ್ತರ

9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ➤   ಆರೋಪಿ ಅರೆಸ್ಟ್..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top