ಕ್ರೈಮ್ ನ್ಯೂಸ್

ಬಸ್ ನಿಲ್ದಾಣದಲ್ಲಿ‌ ನಿಂತಿದ್ದ KSRTC ಬಸ್ಸನ್ನೇ ಕದ್ದ ಖತರ್ನಾಕ್ ಖದೀಮರು..!

(ನ್ಯೂಸ್ ಕಡಬ)newskadaba.com ಕಲಬುರಗಿ, ಫೆ.21. ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸನ್ನೇ ಈ ಖತರ್ನಾಕ್ ಕಳ್ಳರು ಎಗರಿಸಿದ್ದು, ಈ ವಿಚಿತ್ರ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಬಸ್ ನಿಲ್ದಾಣದಲ್ಲಿ ಮುಂಜಾನೆ 3:30ಕ್ಕೆ ನಡೆದಿದೆ. ತಡರಾತ್ರಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಎನ್ ಈಕೆಆರ್ ಟಿಸಿ ಬಸ್ ಒಂದನ್ನು ಕಳ್ಳರು ನಸುಕಿನ ಜಾವ 3-30ರ ಸುಮಾರಿಗೆ ಕಳ್ಳತನ ಮಾಡಿರುವ ಘಟನೆ ಚಿಂಚೋಳಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಬಸ್ ನಿಲ್ದಾಣದಲ್ಲಿ‌ ನಿಂತಿದ್ದ KSRTC ಬಸ್ಸನ್ನೇ ಕದ್ದ ಖತರ್ನಾಕ್ ಖದೀಮರು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಲಿವ್-ಇನ್ ಹತ್ಯೆ ➤ ಬೆಂಕಿ ಹಚ್ಚಿ ಕೊಲೆಗೈದ ಪ್ರಿಯಕರ!

(ನ್ಯೂಸ್ ಕಡಬ) newskadaba.com. ನವದೆಹಲಿ.  ಫೆ.21. ಶ್ರದ್ಧಾವಾಕರ್ ಹತ್ಯೆ ಪ್ರಕರಣ ಹಸಿರಾಗಿರುವಂತೆಯೇ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮತ್ತೊಂದು ‘ಲಿವ್-ಇನ್ ಹತ್ಯೆ’ ಪ್ರಕರಣ ಬೆಳಕಿಗೆ ಬಂದಿದ್ದು, ತನ್ನ ಪ್ರಿಯತಮೆಯನ್ನು ಪ್ರಿಯಕರ ಬೆಂಕಿ ಹಚ್ಚಿ ಕೊಲೆಗೈದಿದ್ದಾನೆ. ವಾಯವ್ಯ ದೆಹಲಿಯ ಅಮನ್ ವಿಹಾರ್‌ನಲ್ಲಿ ಈ ಘಟನೆ ನಡೆದಿದ್ದು, 28 ವರ್ಷದ ವಿವಾಹಿತ ಮಹಿಳೆಯನ್ನು ಆಕೆಯ ಪ್ರಿಯಕರ ಬೆಂಕಿ ಹಚ್ಚಿ ಕೊಂದು ಹಾಕಿದ್ದಾನೆ. ಫೆಬ್ರವರಿ 11 ರಂದು, ಸುಟ್ಟ ಗಾಯಗಳೊಂದಿಗೆ ಮಹಿಳೆಯನ್ನು ಎಸ್‌ಜಿಎಂ ಆಸ್ಪತ್ರೆಗೆ ದಾಖಲಿಸಿದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಪೊಲೀಸರು ಆಸ್ಪತ್ರೆಗೆ

ಲಿವ್-ಇನ್ ಹತ್ಯೆ ➤ ಬೆಂಕಿ ಹಚ್ಚಿ ಕೊಲೆಗೈದ ಪ್ರಿಯಕರ! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

➤ಶಾಲೆಗೆ ಹೋಗುತ್ತಿದ್ದ 4 ವಿದ್ಯಾರ್ಥಿಗಳಿಗೆ ಕಚ್ಚಿದ ಹುಚ್ಚುನಾಯಿ!

(ನ್ಯೂಸ್ ಕಡಬ) newskadaba.com. ವಿಜಯನಗರ.  ಫೆ.21. ಮಕ್ಕಳ ಮೇಲೆ ಏಕಾಏಕಿ ಹುಚ್ಚು ನಾಯಿಯೊಂದು ದಾಳಿ ಮಾಡಿರುವ ಘಟನೆ  ನಡೆದಿದೆ. ಶಾಲೆಗೆ ಹೋಗುವ ಮಕ್ಕಳಿಗೆ ಈ ರೀತಿ ಸಂಕಷ್ಟ ಎದುರಾದರೆ ಮಕ್ಕಳನ್ನು ಶಾಲೆಗೆ  ಕಳಿಸುವುದಾದರೂ ಹೇಗೆ ಎಂದು ಪಾಲಕರು ಪ್ರಶ್ನೆ ಮಾಡುತ್ತಿದ್ದಾರೆ. ಮಕ್ಕಳ ಮೇಲೆ ಹುಚ್ಚು ನಾಯಿ ಏಕಾಏಕಿ ದಾಳಿ ಮಾಡಿರುವುದರಿಂದ ವಿದ್ಯಾರ್ಥಿಗಳಿಗೆ ತೀವ್ರ ಗಾಯವಾಗಿದ್ದು,  ಶಾಲೆಗ ಬರಲು ಹೆದರುವಂತಾಗಿದೆ.  ಬೆಂಗಳೂರಿನಲ್ಲಿ ಬೀದಿ ನಾಯಿ  ಹಾವಳಿ ಮಾತ್ರ ನಿಲ್ಲುತ್ತಿಲ್ಲ. ನಿರ್ಜನ ಪ್ರದೇಶದಲ್ಲಿ ಒಬ್ಬೊಬ್ಬರೇ ತಿರುಗಾಡುವಾಗ ದಿಢೀರ್ ಎದುರಿಗೆ ಬರುವ

➤ಶಾಲೆಗೆ ಹೋಗುತ್ತಿದ್ದ 4 ವಿದ್ಯಾರ್ಥಿಗಳಿಗೆ ಕಚ್ಚಿದ ಹುಚ್ಚುನಾಯಿ! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಜಾಹೀರಾತಿನ ಮೂಲಕ ಉದ್ಯೋಗಕ್ಕಾಗಿ ಆನ್ ಲೈನ್ ನಲ್ಲಿ ಸಂಪರ್ಕ     ➤ 9.79 ಲಕ್ಷ ರೂ. ವಂಚನೆ…!

(ನ್ಯೂಸ್ ಕಡಬ)newskadaba.com ಬಂಟ್ವಾಳ, ಫೆ.21. ಜಾಹೀರಾತಿನ ಮೂಲಕ ಉದ್ಯೋಗಕ್ಕೆ ಸಂಪರ್ಕಿಸಿ ವೀರಕಂಭ ಗ್ರಾಮದ ನಿವಾಸಿಯೊಬ್ಬರು ಫೇಸ್‌ ಬುಕ್‌ನಲ್ಲಿ 9.79 ಲಕ್ಷ ರೂ. ಕಳೆದುಕೊಂಡ ಘಟನೆ ಬಂಟ್ವಾಳದಲ್ಲಿ ವರದಿಯಾಗಿದೆ. ವೀರಕಂಭ ಗ್ರಾಮದ ನಡಾಲು ರಾಜೇಶ್‌ ಆಳ್ವ ಎನ್‌. ವಂಚನೆಗೊಳಗಾದವರು ಎಂದು ಗುರುತಿಸಲಾಗಿದೆ. ಬೆಂಗಳೂರಿನ ಕಂಪೆನಿ ಯೊಂದರಲ್ಲಿ ಉದ್ಯೋಗದಲ್ಲಿದ್ದು, ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದರು. ಇಲ್ಲಿ ವೇತನ ಕಡಿಮೆಯಾದ ಹಿನ್ನೆಲೆಯಲ್ಲಿ ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತಿನಲ್ಲಿದ್ದ ವಾಟ್ಸ್‌ ಆ್ಯಪ್‌ ನಂಬರನ್ನು ಸಂಪರ್ಕಿಸಿ ಉದ್ಯೋಗ ವಿಚಾರಿಸಿದ್ದರು.  

ಜಾಹೀರಾತಿನ ಮೂಲಕ ಉದ್ಯೋಗಕ್ಕಾಗಿ ಆನ್ ಲೈನ್ ನಲ್ಲಿ ಸಂಪರ್ಕ     ➤ 9.79 ಲಕ್ಷ ರೂ. ವಂಚನೆ…! Read More »

ಕರಾವಳಿ, ಕ್ರೈಮ್ ನ್ಯೂಸ್

ಅಪರಿಚಿತ ವಾಹನ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಚಿರತೆ ಮೃತ್ಯು

(ನ್ಯೂಸ್ ಕಡಬ)newskadaba.com  ಚಿತ್ರದುರ್ಗ, ಫೆ.21. ಕೋಟೆ ನಾಡು ಚಿತ್ರದುರ್ಗದ ದೊಡ್ಡಸಿದ್ದವ್ವನ ಹಳ್ಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ವಾಹನ ಢಿಕ್ಕಿ ಹೊಡೆದು ಚಿರತೆ ಮೃತಪಟ್ಟಿದೆ. ಚಿರತೆ ರಾಷ್ಟ್ರೀಯ ಹೆದ್ದಾರಿ ದಾಟುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು, ಢಿಕ್ಕಿಯಾದ ರಭಸಕ್ಕೆ ಚಿರತೆ ತೀವ್ರ ರಕ್ತದ ಮಡುವಿನಲ್ಲಿ ಬಿದ್ದಿತು. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವಾದ ವಾಹನ ಪತ್ತೆಯಾಗಿಲ್ಲ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುದ್ದಿ ತಿಳಿದ ಸುತ್ತಮುತ್ತಲ ಜನರು ಚಿರತೆ ನೋಡಲು

ಅಪರಿಚಿತ ವಾಹನ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಚಿರತೆ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಂಟ್ವಾಳ: ರೈಲು ಡಿಕ್ಕಿ ಹೊಡೆದು ಯುವಕ ಮೃತ್ಯು

(ನ್ಯೂಸ್ ಕಡಬ)newskadaba.com ಬಂಟ್ವಾಳ, ಫೆ.21. ರೈಲು ಡಿಕ್ಕಿಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಅಮ್ಟೂರು ಎಂಬಲ್ಲಿ ನಡೆದಿದೆ. ಬಿಜಾಪುರ ಮೂಲದ ಮಲ್ಲು ಆಧಿಮಣಿ ಮೃತಪಟ್ಟ ಅವಿವಾಹಿತ ಯುವಕ. ಬಿಜಾಪುರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಈತ ಇತ್ತೀಚಿಗೆ ಮಾನಸಿಕವಾಗಿ ಖಿನ್ನತೆಯಿಂದ ಇದ್ದ ಎಂದು ಹೇಳಲಾಗಿದ್ದು, ಮನೆಯಲ್ಲಿ ಯಾರಿಗೂ ಹೇಳದೆ ಮನೆ ಬಿಟ್ಟು ಹೋಗಿದ್ದ ಎಂದು ಮನೆಯವರು ತಿಳಿಸಿದ್ದಾರೆ ಎಂದು ಹೇಳಲಾಗಿದೆ.    

ಬಂಟ್ವಾಳ: ರೈಲು ಡಿಕ್ಕಿ ಹೊಡೆದು ಯುವಕ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

➤ಹೈದರಾಬಾದ್‌ ಬೀದಿ ನಾಯಿ ದಾಳಿಗೆ 4 ವರ್ಷದ ಬಾಲಕ ಮೃತ್ಯು..!

(ನ್ಯೂಸ್ ಕಡಬ) newskadaba.com. ಹೈದರಾಬಾದ್‌. ಫೆ.21.  ನಾಲ್ಕು ವರ್ಷದ ಬಾಲಕನನ್ನು ಬೀದಿ ನಾಯಿಗಳು ಕೊಂದ ಘಟನೆ ಹೈದರಾಬಾದ್‌ ನಲ್ಲಿ ನಡೆದಿದೆ.  ಮಗುವಿನ ತಂದೆ ಕಾವಲುಗಾರನಾಗಿ ಕೆಲಸ ಮಾಡುತ್ತಾರೆ. ನಾಯಿಗಳು ಕಚ್ಚಿದ ಏಟಿಗೆ ಬಾಲಕನ ಹೊಟ್ಟೆಗೆ ತೀವ್ರತರ ಗಾಯಗಳಾಗಿದ್ದು, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮಗು ಕೊನೆಯುಸಿರೆಳೆದಿದ್ದಾನೆ ಈ ಘಟನೆ ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ. ಹುಡುಗ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮೂರು ನಾಯಿಗಳು ಓಡಿ ಬಂದು ಅವನ ಮೇಲೆ ದಾಳಿ ಮಾಡಿ ಅವನನ್ನು ಕಚ್ಚಿ ಕೊಂದಿವೆ ಎಂದು ತಿಳಿದು ಬಂದಿದೆ.

➤ಹೈದರಾಬಾದ್‌ ಬೀದಿ ನಾಯಿ ದಾಳಿಗೆ 4 ವರ್ಷದ ಬಾಲಕ ಮೃತ್ಯು..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎಂದು ಘೋಷಿಸಲ್ಪಟ್ಟ ಮಗು ಸ್ಮಶಾನದಲ್ಲಿ ಜೀವಂತ

(ನ್ಯೂಸ್ ಕಡಬ)newskadaba.com  ನವದೆಹಲಿ, ಫೆ.21. ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ ಎಂದು ಘೋಷಿಸಲ್ಪಟ್ಟ ಅವಧಿಪೂರ್ವ ಜನಿಸಿದ ನವಜಾತ ಹೆಣ್ಣು ಶಿಶುವೊಂದು ಸ್ಮಶಾನಕ್ಕೆ ಕೊಂಡೊಯ್ದ ವೇಳೆ ಜೀವಂತವಿರುವುದು ಗೊತ್ತಾದ ಘಟನೆ ದೆಹಲಿಯಲ್ಲಿ ನಡೆದಿದೆ. 35 ವರ್ಷ ವಯಸ್ಸಿನ 23 ವಾರಗಳ ಗರ್ಭಿಣಿಗೆ ದೆಹಲಿಯ ಎಲ್‌ಎನ್‌ಜೆಪಿ ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿಪೂರ್ವವಾಗಿ ಹೆಣ್ಣು ಶಿಶು ಜನಿಸಿತ್ತು. ಶಿಶುವಿನ ತೂಕ ಕೇವಲ 490 ಗ್ರಾಂ ಇತ್ತು. ಮಗು ಹುಟ್ಟಿದ ಬಳಿಕ ಅದು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದರು. ಹೀಗಾಗಿ ಅದರ ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಕರೆದೊಯ್ಯಲಾಯಿತು. ಅಂತ್ಯಸಂಸ್ಕಾರಕ್ಕೆ

ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎಂದು ಘೋಷಿಸಲ್ಪಟ್ಟ ಮಗು ಸ್ಮಶಾನದಲ್ಲಿ ಜೀವಂತ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೆಳ್ತಂಗಡಿ: ಬೈಕ್  ಮತ್ತು ಪಿಕಪ್ ನಡುವೆ ಅಪಘಾತ ➤ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಫೆ.21. ಬೈಕ್ ಮತ್ತು ಪಿಕಪ್ ವಾಹನದ ಮಧ್ಯೆ ನಡೆದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲ್ಲೂಕಿನ ಕೊಕ್ರಾಡಿಯಲ್ಲಿ ನಡೆದಿದೆ. ಕೊಕ್ರಾಡಿಯ ನಿವಾಸಿ ಉಜ್ವಲ್ ಹೆಗ್ಡೆ (18) ಮೃತ ವಿದ್ಯಾರ್ಥಿ. ಇಂದು ಬೆಳಿಗ್ಗೆ ಉಜ್ವಲ್ ಬೈಕ್ ನಲ್ಲಿ ಮೂಡಬಿದ್ರೆಯ ಕಾಲೇಜಿಗೆ ಹೋಗುತ್ತಿದ್ದಾಗ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಉಜ್ವಲ್ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. .  

ಬೆಳ್ತಂಗಡಿ: ಬೈಕ್  ಮತ್ತು ಪಿಕಪ್ ನಡುವೆ ಅಪಘಾತ ➤ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ವಿಮಾನದಲ್ಲಿ ಬಾಂಬ್ ಇದೆ ಎಂದು ಬೆದರಿಕೆ ➤ ವ್ಯಕ್ತಿಯೋರ್ವ ಅರೆಸ್ಟ್

(ನ್ಯೂಸ್ ಕಡಬ)newskadaba.com ಹೈದರಾಬಾದ್, ಫೆ.21. ಹೈದರಾಬಾದ್‌ನಿಂದ ಚೆನ್ನೈಗೆ ತೆರಳುತ್ತಿದ್ದ ವಿಮಾನದಲ್ಲಿ ಬಾಂಬ್ ಇದೆ ಎಂದು ಸುಳ್ಳು ಕರೆ ಮಾಡಿದ್ದ ಆರೋಪದ ಮೇಲೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಹೈದರಾಬಾದ್‌ನಿಂದ ಚೆನ್ನೈಗೆ ವಿಮಾನ ಹೊರಟಿದ್ದು, ಈ ವೇಳೆ ವಿಮಾನದಲ್ಲಿ ಬಾಂಬ್‌ ಇರುವ ಬಗ್ಗೆ ಕರೆ ಬಂದ ಹಿನ್ನೆಲೆಯಲ್ಲಿ, ವಿಮಾನವನ್ನು ಲಕ್ನೋದ ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿತ್ತು.  

ವಿಮಾನದಲ್ಲಿ ಬಾಂಬ್ ಇದೆ ಎಂದು ಬೆದರಿಕೆ ➤ ವ್ಯಕ್ತಿಯೋರ್ವ ಅರೆಸ್ಟ್ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top