ಕ್ರೈಮ್ ನ್ಯೂಸ್

ಉಪ್ಪಿನಂಗಡಿ: ಆಶ್ರಮದ ಹೆಸರೇಳಿಕೊಂಡು ಬಟ್ಟೆ ಬರೆ ಸಂಗ್ರಹಿಸಿ ವಂಚನೆ !

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಫೆ.22. ಆಶ್ರಮಕ್ಕೆ ಹಣ, ಹಳೆ ಬಟ್ಟೆ ಸಂಗ್ರಹಿಸುತ್ತಿದ್ದೇವೆಂದು ನಕಲಿ ಐಡಿ ಕಾರ್ಡ್ ತೋರಿಸಿ ತಂಡವೊಂದು ಭಿಕ್ಷಾಟನೆ ನಡೆಸುತ್ತಿರುವ ಘಟನೆ ಉಪ್ಪಿನಂಗಡಿಯಲ್ಲಿ ಸಕ್ರಿಯವಾಗಿದೆ. ಈ ತಂಡ ಮನೆಯೊಂದಕ್ಕೆ ತೆರಳಿದ ವೇಳೆ ಅವರ ವಂಚನೆ ಬಯಲಾಗಿದೆ. ಸಾಮಾಜಿಕ ಕಾರ್ಯಕರ್ತ ಪ್ರದೀಪ್ ಅವರ ಮನೆಗೆ ಇಬ್ಬರು ಹೆಂಗಸರು ಸೋಮವಾರ ಬಂದಿದ್ದು, ಮೈಸೂರಿನ ಇಲವಾಲದ ಬಳಿಯ ಅಂಗವಿಕಲ ಮತ್ತು ವೃದ್ದಾಶ್ರಮಕ್ಕೆ ಬಟ್ಟೆ, ಬರೆ, ಹಣಕಾಸಿನ ನೆರವು ನೀಡುತ್ತಿದ್ದೇವೆ. ಅದಕ್ಕಾಗಿ ನಮಗೆ ನಿಮ್ಮ ಸಹಕಾರ ಅಗತ್ಯ ಎಂದಿದ್ದರು ಎನ್ನಲಾಗಿದೆ.

ಉಪ್ಪಿನಂಗಡಿ: ಆಶ್ರಮದ ಹೆಸರೇಳಿಕೊಂಡು ಬಟ್ಟೆ ಬರೆ ಸಂಗ್ರಹಿಸಿ ವಂಚನೆ ! Read More »

ಕರಾವಳಿ, ಕ್ರೈಮ್ ನ್ಯೂಸ್

ಮಹಿಳಾ ಪೊಲೀಸ್ ಪೇದೆ ನೇಣಿಗೆ ಶರಣು !

(ನ್ಯೂಸ್ ಕಡಬ)newskadaba.com ಮೈಸೂರು, ಫೆ.22. ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಕೆಎಸ್ಆರ್ಪಿ ವಸತಿಗೃಹದ ಮನೆಯಲ್ಲಿ ನಡೆದಿದೆ. ಗೀತಾ (32) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಗೀತಾ ಅನಾರೋಗ್ಯದ ಕಾರಣ ನೀಡಿ ಕೆಲಸದಿಂದ ಮನೆಗೆ ಬಂದಿದ್ದರು. ಈ ವೇಳೆ ಪತಿ, ಪತ್ನಿ ಗೀತಾಗೆ ಕರೆ ಮಾಡಿದಾಗ ಗೀತಾ ಉತ್ತರಿಸಿಲ್ಲ. ನಂತರ ಮನೆಗೆ ವಾಪಸ್ಸು ಬಂದು ನೋಡಿದಾಗ ಗೀತಾ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳಾ ಪೊಲೀಸ್ ಪೇದೆ ನೇಣಿಗೆ ಶರಣು ! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ರಿಕ್ಷಾ ಚಾಲಕನ ನಿರ್ಲಕ್ಷ್ಯ- ಹೆಲ್ಮೆಟ್ ಇಲ್ಲದ ಪ್ರಯಾಣ !     ➤  ಅಪಘಾತದಲ್ಲಿ ಬೈಕ್ ಸವಾರ ಮೃತ್ಯು

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.22. ಬೈಕ್ ಸವಾರ ಹೆಲ್ಮೆಟ್ ಇಲ್ಲದೆ ಪ್ರಯಾಣಿಸಿದ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ನಗರದ ಬಿಜೈನಲ್ಲಿ ನಡೆದಿದೆ ಎನ್ನಲಾಗಿದೆ. ಆಟೋ ಚಾಲಕನ ನಿರ್ಲಕ್ಷ್ಯದ ತಿರುವು ಮತ್ತು ಹೆಲ್ಮೆಟ್ ರಹಿತ ಪ್ರಯಾಣದ ಕಾರಣ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.  

ಮಂಗಳೂರು: ರಿಕ್ಷಾ ಚಾಲಕನ ನಿರ್ಲಕ್ಷ್ಯ- ಹೆಲ್ಮೆಟ್ ಇಲ್ಲದ ಪ್ರಯಾಣ !     ➤  ಅಪಘಾತದಲ್ಲಿ ಬೈಕ್ ಸವಾರ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ವಿಟ್ಲ: ಮನೆಗೆ ನುಗ್ಗಿ, ಚಿನ್ನಾಭರಣ – ನಗದು ಕಳವು !

(ನ್ಯೂಸ್ ಕಡಬ)newskadaba.com ವಿಟ್ಲ, ಫೆ.22. ಮನೆಯ ಬಾಗಿಲು ಒಡೆದು ಸುಮಾರು 1,11,000 ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವುಗೈದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಝಬೈದಾ ಅವರ ಮನೆಗೆ ಕಳ್ಳರು ಮನೆಯ ಆರ್‌ಸಿ‍ಸಿ ಛಾವಣಿಯ ದ್ವಾರವನ್ನು ಒಡೆದು ಒಳಗೆ ಪ್ರವೇಶಿಸಿ ಮಲಗುವ ಕೋಣೆಯಲ್ಲಿದ್ದ ಗಾಡ್ರೇಜ್‌ ಮುರಿದು ಅದರಲ್ಲಿದ್ದ 8 ಗ್ರಾಂ ತೂಕದ ಮಗುವಿನ ಕೈ ಚೈನ್, ಸುಮಾರು 8 ಗ್ರಾಂ ತೂಕದ ಮಗುವಿನ ಕಾಲು ಚೈನ್, ಸುಮಾರು 12 ಗ್ರಾಂ ತೂಕದ ಕುತ್ತಿಗೆಯ ಸರ,

ವಿಟ್ಲ: ಮನೆಗೆ ನುಗ್ಗಿ, ಚಿನ್ನಾಭರಣ – ನಗದು ಕಳವು ! Read More »

ಕರಾವಳಿ, ಕ್ರೈಮ್ ನ್ಯೂಸ್

ಪುತ್ತೂರು: ನಿರ್ವಾಹಕಿ ಮೇಲೆ ಹಲ್ಲೆ..!  ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 22. ಮಂಗಳೂರು- ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕನೋರ್ವ ಕರ್ತವ್ಯ ನಿರತರಾಗಿದ್ದ ನಿರ್ವಾಹಕಿ ಮೇಲೆ ಹಲ್ಲೆಗೈದ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ನಿರ್ವಾಹಕಿ ವಿಜಯಾ ಅವರು ನೀಡಿದ ದೂರಿನಂತೆ ಪ್ರಯಾಣಿಕ ಹಸನ್‌ ಎಂಬಾತನನ್ನು ಪುತ್ತೂರು ಮಹಿಳಾ ಪೊಲೀಸರು ಬಂಧಿಸಿದ್ದಾರೆ.  

ಪುತ್ತೂರು: ನಿರ್ವಾಹಕಿ ಮೇಲೆ ಹಲ್ಲೆ..!  ➤ ಆರೋಪಿ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ನೆಲ್ಯಾಡಿ: ರಬ್ಬರ್ ಮ್ಯಾಟ್ ಕಳ್ಳತನಕ್ಕೆ ಯತ್ನ ➤ ಆಟೋ ಚಾಲಕ ಸಹಿತ ಇಬ್ಬರು ಅರೆಸ್ಟ್

(ನ್ಯೂಸ್ ಕಡಬ)newskadaba.com ನೆಲ್ಯಾಡಿ, ಫೆ.21. ಬಾರ್ ಒಂದರ ಹಿಂಭಾಗದಲ್ಲಿ ಇಟ್ಟಿದ್ದ ರಬ್ಬರ್ ಮ್ಯಾಟ್ ಕಳವುಗೈದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೈಕ್ ಪಿಟ್ಟರ್ ಸಿದ್ದೀಕ್ ಮತ್ತು ಆಟೋರಿಕ್ಷಾ ಚಾಲಕ ಸುನಿಲ್ ಕಳ್ಳತನ ಮಾಡಿ ಸಿಕ್ಕಿಬಿದ್ದ ಆರೋಪಿಗಳು ಎಂದು ತಿಳಿದುಬಂದಿದೆ. ಕ್ಲಾಸಿಕ್ ಬಾರ್ ನ ಹಿಂಬಾಗದ ಕಂಪೌಂಡು ಒಳಗಡೆ ಇಟ್ಟಿದ್ದ ಗ್ರೀನ್ ಬಣ್ಣದ 3 ರಬ್ಬರ್ ಮ್ಯಾಟ್ ಕಳ್ಳತನ ಮಾಡಿ ಮಾರುತಿ ಓಮ್ನಿ ಕಾರಿನಲ್ಲಿ ತುಂಬಿಸಿ ಇಟ್ಟಿದ್ದರು. ಈ ವೇಳೆ ಬಾರ್ ಸಿಬ್ಬಂದಿ ಗಮನಿಸಿ ಆಪಾದಿತರನ್ನು ಹಿಡಿಯಲು ಮುಂದಾದ

ನೆಲ್ಯಾಡಿ: ರಬ್ಬರ್ ಮ್ಯಾಟ್ ಕಳ್ಳತನಕ್ಕೆ ಯತ್ನ ➤ ಆಟೋ ಚಾಲಕ ಸಹಿತ ಇಬ್ಬರು ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಸುಳ್ಯ: ಸಾಲ ತೀರಿಸಲಾಗದ ಹಿನ್ನೆಲೆ ಬ್ಯಾಂಕ್ ಗೆ ನುಗ್ಗಿದ ವ್ಯಕ್ತಿ        ➤ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ

(ನ್ಯೂಸ್ ಕಡಬ)newskadaba.com ಸುಳ್ಯ, ಫೆ.21. ಸಾಲದ ಕಂತು ತೀರಿಸಲಾಗದೆ ಬ್ಯಾಂಕ್ ಗೆ ನುಗ್ಗಿದ ವ್ಯಕ್ತಿಯೊಬ್ಬ ಪೆಟ್ರೊಲ್ ಚೆಲ್ಲಿ ಬ್ಯಾಂಕ್ ಗೆ ಬೆಂಕಿಹಚ್ಚಲು ಯತ್ನಿಸಿದಲ್ಲದೆ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಸುಳ್ಯದಿಂದ ವರದಿಯಾಗಿದೆ. ಸುಳ್ಯದ ರಥಬೀದಿಯಲ್ಲಿರುವ ಸರಸ್ವತಿ ಬ್ಯಾಂಕ್ ಗೆ ನುಗ್ಗಿದ ಸ್ಥಳೀಯ ಪೂರಿ ಅಂಗಡಿ ನಡೆಸುತ್ತಿದ್ದ ಶಿವಣ್ಣಗೌಡ ಎಂಬವರು ಈ ರೀತಿ ಮಾಡಲು ಯತ್ನಿಸಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. news  

ಸುಳ್ಯ: ಸಾಲ ತೀರಿಸಲಾಗದ ಹಿನ್ನೆಲೆ ಬ್ಯಾಂಕ್ ಗೆ ನುಗ್ಗಿದ ವ್ಯಕ್ತಿ        ➤ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬದಲ್ಲಿ ‘ಆಫರೇಷನ್ ಎಲಿಫೆಂಟ್’; ಸಾಕಾನೆಗಳ ಸಹಕಾರದಲ್ಲಿ ಮುಂದುವರಿದ ಕಾರ್ಯಾಚರಣೆ !     

(ನ್ಯೂಸ್ ಕಡಬ)newskadaba.com ದಕ್ಷಿಣ ಕನ್ನಡ, ಫೆ.21. ಕಡಬ ತಾಲೂಕಿನ‌ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಅಟ್ಟಹಾಸ ಮೆರೆದಿದ್ದ ಕಾಡಾನೆ ಎರಡು ಜೀವಗಳನ್ನು ಬಲಿ ಪಡೆದಿತ್ತು. ಇದರ ಬೆನ್ನಲ್ಲೆ ಕಾಡಾನೆಗಳನ್ನು‌ ಸೆರೆ ಹಿಡಿಯಲು ಕಡಬ ಭಾಗದಲ್ಲಿ ‘ಆಫರೇಷನ್ ಎಲಿಫೆಂಟ್’ ಕಾರ್ಯಾಚರಣೆ ಆರಂಭವಾಗಿದೆ. ಸಕಲ ಸಿದ್ಧತೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಭಿಮನ್ಯು, ಪ್ರಶಾಂತ್, ಹರ್ಷ, ಕಂಜನ್ ಹಾಗೂ ಮಹೇಂದ್ರ ಕಾಡಾನೆ ಸೆರೆ ಹಿಡಿಯುವುದರಲ್ಲಿ ಕರಗತವಾಗಿವೆ. ಹೀಗಾಗಿ ಈ ಸಾಕಾನೆಗಳು ಕಾರ್ಯಾಚರಣೆಗೆ ಲಗ್ಗೆ ಇಟ್ಟಿವೆ. ಅರಣ್ಯ ಇಲಾಖೆಯ ಸಿಬ್ಬಂದಿಗಳ

ಕಡಬದಲ್ಲಿ ‘ಆಫರೇಷನ್ ಎಲಿಫೆಂಟ್’; ಸಾಕಾನೆಗಳ ಸಹಕಾರದಲ್ಲಿ ಮುಂದುವರಿದ ಕಾರ್ಯಾಚರಣೆ !      Read More »

ಕರಾವಳಿ, ಕ್ರೈಮ್ ನ್ಯೂಸ್

ವಿಟ್ಲ ಆಕಸ್ಮಿಕವಾಗಿ ಲಾರಿಗೆ ಬೆಂಕಿ ➤ ಅಪಾರ ನಷ್ಟ

(ನ್ಯೂಸ್ ಕಡಬ) newskadaba.com. ವಿಟ್ಲ.  ಫೆ.21. ಸಾಲೆತ್ತೂರು ಸಮೀಪದ  ಮೆದು ಎಂಬಲ್ಲಿನ ಪೆಟ್ರೋಲ್ ಬಂಕ್ ಎದುರುಗಡೆ ನಿಲ್ಲಿಸಿದ್ದ ಲಾರಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಾರಿಯ ಮುಂದಿನ ಭಾಗ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅಪಾರ ನಷ್ಟ ಸಂಭವಿಸಿದೆ. ಪೆಟ್ರೋಲ್ ಬಂಕ್ ಎದುರು ಈ ಘಟನೆ ನಡೆದಿದ್ದು, ಸ್ಥಳೀಯರು ಹರಸಾಹಸಪಟ್ಟು ಬೆಂಕಿ ನಂದಿಸಿ ಹೆಚ್ಚಿನ ಅನಾಹುತವೊಂದನ್ನು ತಪ್ಪಿಸಿದ್ದಾರೆ. ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿದ್ದಾರೆ.

ವಿಟ್ಲ ಆಕಸ್ಮಿಕವಾಗಿ ಲಾರಿಗೆ ಬೆಂಕಿ ➤ ಅಪಾರ ನಷ್ಟ Read More »

ಕರಾವಳಿ, ಕ್ರೈಮ್ ನ್ಯೂಸ್

ವರದಕ್ಷಿಣೆಯಾಗಿ ‘ಹಳೆಯ’ ಪೀಠೋಪಕರಣ ನೀಡಿದಕ್ಕೆ ಮದುವೆ ರದ್ದುಗೊಳಿಸಿದ ವರ..!

(ನ್ಯೂಸ್ ಕಡಬ)newskadaba.com ಹೈದರಾಬಾದ್, ಫೆ.21. ವಧುವಿನ ಮನೆಯವರು ವರದಕ್ಷಿಣೆಯಾಗಿ “ಹಳೆಯ” ಪೀಠೋಪಕರಣಗಳನ್ನು ನೀಡಿದ್ದಾರೆ ಎಂಬ ಕಾರಣಕ್ಕೆ ವರ ಮದುವೆಯನ್ನೇ ರದ್ದುಗೊಳಿಸಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಬಸ್ ಚಾಲಕನಾಗಿ ಕೆಲಸ ಮಾಡುತ್ತಿರುವ ವರ ಭಾನುವಾರ ನಡೆಯಬೇಕಿದ್ದ ಮದುವೆಗೆ ಬಾರದ ಹಿನ್ನೆಲೆಯಲ್ಲಿ ವಧುವಿನ ತಂದೆ ದೂರು ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವರದಕ್ಷಿಣೆಯಾಗಿ ‘ಹಳೆಯ’ ಪೀಠೋಪಕರಣ ನೀಡಿದಕ್ಕೆ ಮದುವೆ ರದ್ದುಗೊಳಿಸಿದ ವರ..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top