ಕ್ರೈಮ್ ನ್ಯೂಸ್

ಮಂಗಳೂರು: ಜುಗಾರಿ ಅಡ್ಡೆಗೆ ದಾಳಿ ➤ ಲಾಡ್ಜ್ ಸಿಬ್ಬಂದಿ ಸಹಿತ 7 ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಸುರತ್ಕಲ್, ಜೂ. 12. ಲಾಡ್ಜ್ ನ ರೂಂ ಒಂದರಲ್ಲಿ ಅಂದರ್ ಬಾಹರ್ ಇಸ್ಪೀಟ್ ಆಡುತ್ತಿದ್ದ 7 ಮಂದಿ ಹಾಗೂ ಆಡಲು ಅವಕಾಶ ಮಾಡಿಕೊಟ್ಟ ಇಬ್ಬರು ಲಾಡ್ಜ್ ಸಿಬ್ಬಂದಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ ಘಟನೆ ಮುಕ್ಕ ಚೆಕ್ ಪೋಸ್ಟ್ ಬಳಿ ನಡೆದಿದೆ‌. ಬಂಧಿತ ಆರೋಪಿಗಳನ್ನು ಲಾಲ್ ಸಾಬ್ (31), ಅಮೀರ್ ಘಣಿಸಾಬ್ (31), ದಸ್ತಗಿರ್ ಸಾಬ್ (32), ಸಿದ್ದಣ್ಣ (47 ) ಮುಹಮ್ಮದ್ ರಫೀಕ್ (34), ಪರಶುರಾಮ (29), ಜಿತೇಂದ್ರ ಹೀರಾಸಿಂಗ್ (34) ಹಾಗೂ […]

ಮಂಗಳೂರು: ಜುಗಾರಿ ಅಡ್ಡೆಗೆ ದಾಳಿ ➤ ಲಾಡ್ಜ್ ಸಿಬ್ಬಂದಿ ಸಹಿತ 7 ಮಂದಿಯ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಮನೆಮೇಲೆ ಬೃಹತ್ ಮರಬಿದ್ದು ಮನೆಗೆ ಸಂಪೂರ್ಣ ಹಾನಿ ➤ ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 10. ಇಲ್ಲಿನ ಬಿ.ಜಿ.ಎಸ್ ಶಾಲಾ ಹಿಂಭಾಗದ ಮನೆಯೊಂದರ ಮೇಲೆ ಇಂದು ಬೆಳ್ಳಂಬೆಳಗ್ಗೆ ಬೃಹತ್‌ ಗಾತ್ರದ ಮರವೊಂದು ಉರುಳಿ ಬಿದ್ದ ಪರಿಣಾಮ ಮೂವರಿಗೆ ಗಾಯಗಳಾದ ಘಟನೆ ಕಾವೂರಿನಿಂದ ವರದಿಯಾಗಿದೆ. ಭಾರೀ ಮಳೆಯಿಂದಾಗಿ ಬೃಹತ್‌ ಗಾತ್ರದ ಮರವೊಂದು ಮನೆಯ ಮೇಲೆ ಉರುಳಿ ಬಿದ್ದಿದ್ದು, ಪರಿಣಾಮ ಮನೆಯ ಮೇಲ್ಛಾವಣಿ ಸಂಪೂರ್ಣ ನಾಶವಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಮನೆಯ ಒಳಗೆ ಒಟ್ಟು 5 ಮಂದಿ ಮಲಗಿದ್ದು, ಅವರ ಪೈಕಿ ಮೂವರು ಹಂಚು ಮತ್ತು ಮರದ

ಮಂಗಳೂರು: ಮನೆಮೇಲೆ ಬೃಹತ್ ಮರಬಿದ್ದು ಮನೆಗೆ ಸಂಪೂರ್ಣ ಹಾನಿ ➤ ಮೂವರಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಬಂಟ್ವಾಳ: ಅನುಮಾನಾಸ್ಪದವಾಗಿ ಸಾವಿಗೀಡಾದ ಸವಾದ್ ಮನೆಗೆ ಯು.ಟಿ.ಖಾದರ್ ಭೇಟಿ ➤ ಸೂಕ್ತ ತನಿಖೆಗೆ ಸೂಚನೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ. 10. ಅನುಮಾನಾಸ್ಪದವಾಗಿ ಮೃತಪಟ್ಟ ಇರಾ ಗ್ರಾಮದ ಕುಕ್ಕಾಜೆ ನಿವಾಸಿ ಸವಾದ್ ರವರ ಮನೆಗೆ ಸ್ಪೀಕರ್ ಯು.ಟಿ.ಖಾದರ್ ಅವರು ಭೇಟಿ ನೀಡಿದರು. ಘಟನೆಯ ಬಗ್ಗೆ ಮಾಹಿತಿ ಪಡೆದ ಯು.ಟಿ.ಖಾದರ್ ಅವರು, ಪ್ರಕರಣದ ಕುರಿತು ಸೂಕ್ತವಾಗಿ ತನಿಖೆ ನಡೆಸಿ, ಆರೋಪಿಗಳ ವಿರಿದ್ದ ಕಠಿಣ ಕ್ರಮ ಜರುಗಿಸಬೇಕೆಂದು ಪೊಲೀಸರಿಗೆ ಸೂಚಿಸುವುದಾಗಿ ಹೇಳಿದರು. ಅಲ್ಲದೇ ಸವಾದ ಸಾವಿನ ಹಿಂದೆ ಗಾಂಜಾ ವ್ಯವಹಾರದ ಶಂಕೆಯಿರುವುದರಿಂದ ಮಾದಕ ದ್ರವ್ಯ ಜಾಲದ ಬಗ್ಗೆ ನಿಗಾ ಇಡಲು ವಿಶೇಷ ತನಿಖಾ ತಂಡವನ್ನು

ಬಂಟ್ವಾಳ: ಅನುಮಾನಾಸ್ಪದವಾಗಿ ಸಾವಿಗೀಡಾದ ಸವಾದ್ ಮನೆಗೆ ಯು.ಟಿ.ಖಾದರ್ ಭೇಟಿ ➤ ಸೂಕ್ತ ತನಿಖೆಗೆ ಸೂಚನೆ Read More »

ಕರಾವಳಿ, ಕ್ರೈಮ್ ನ್ಯೂಸ್

ಉಳ್ಳಾಲ: ಯುವತಿಯ ಮಾನಭಂಗಕ್ಕೆ ಯತ್ನ ➤ ಉ.ಪ್ರದೇಶದ ಕಾರ್ಮಿಕನ ಬಂಧನ

(ನ್ಯೂಸ್ ಕಡಬ) newskadaba.com ಉಳ್ಳಾಲ, ಜೂ. 10. ಕೆಲಸದಿಂದ ಹಿಂತಿರುಗುತ್ತಿದ್ದ ಯುವತಿ ಮೇಲೆ ಹೊರರಾಜ್ಯದ ಕಾರ್ಮಿಕನೋರ್ವ ಮಾನಭಂಗಕ್ಕೆ ಯತ್ನಿಸಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮೇಲಿನ ತಲಪಾಡಿಯಲ್ಲಿ ಸಂಭವಿಸಿದೆ. ಆರೋಪಿಯನ್ನು ಉತ್ತರಪ್ರದೇಶ ಮೂಲದ ರಾಮು ಕೆ. ಎಂದು ಗುರುತಿಸಲಾಗಿದೆ. ಯುವತಿಯೋರ್ವಳು ಮಂಗಳೂರಿಗೆ ಕೆಲಸಕ್ಕೆ ತೆರಳಿ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭ ದಾರಿಮಧ್ಯೆ ಆರೋಪಿಯು ಯುವತಿ ಮೇಲೆ ಲೈಂಗಿಕ ಕಿರುಕುಳ ನೀಡಿ ಮಾನಭಂಗಕ್ಕೆ ಯತ್ನಿಸಿದ್ದಾನೆ. ಘಟನೆಯಿಂದ ಹೆದರಿದ ಯುವತಿ ಬೊಬ್ಬಿಟ್ಟಾಗ ಸ್ಥಳೀಯರು ಓಡಿಬಂದು ಆರೋಪಿಯನ್ನು ಹಿಡಿದು ಥಳಿಸಿದ್ದಾರೆ. ಬಳಿಕ

ಉಳ್ಳಾಲ: ಯುವತಿಯ ಮಾನಭಂಗಕ್ಕೆ ಯತ್ನ ➤ ಉ.ಪ್ರದೇಶದ ಕಾರ್ಮಿಕನ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ವಿದ್ಯಾರ್ಥಿನಿಯ ಜೊತೆ ಅಸಭ್ಯ ವರ್ತನೆ ಆರೋಪ ➤ ಸ್ಥಳೀಯರಿಂದ ಆರೋಪಿಗೆ ಧರ್ಮದೇಟು

(ನ್ಯೂಸ್ ಕಡಬ) newskadaba.com ಕುಂದಾಪುರ, ಜೂ. 10. ನಡೆದುಕೊಂಡು ಬರುತ್ತಿದ್ದ ವಿದ್ಯಾರ್ಥಿನಿಯ ಜೊತೆ ಅಸಭ್ಯವರ್ತನೆ ತೋರಿದ ಯುವಕನಿಗೆ ಸ್ಥಳೀಯರು ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ ಘಟನೆ ಕುಂದಾಪುರದಲ್ಲಿ ವರದಿಯಾಗಿದೆ. ಆರೋಪಿಯನ್ನು ಬಾರ್ಕೂರು ಮೂಲದ ನಜೀರ್(35) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿಯು ಬೀಜಾಡಿ ರಸ್ತೆ ಮೂಲಕ ಹಾಸ್ಟೆಲ್ ನಿಂದ ಕಾಲೇಜಿಗೆ ಹೋಗುತ್ತಿದ್ದ ಸಂದರ್ಭ ಆರೋಪಿ ನಝೀರ್ ಹಿಂದಿನಿಂದ ಬಂದು ಕಿರುಕುಳ ನೀಡಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿದ್ದಾಳೆ. ಇದರಿಂದ ಭಯಗೊಂಡ ವಿದ್ಯಾರ್ಥಿನಿ ಬೊಬ್ಬೆ ಹಾಕಿದ್ದು ಕೂಡಲೇ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಯುವಕನಿಗೆ

ವಿದ್ಯಾರ್ಥಿನಿಯ ಜೊತೆ ಅಸಭ್ಯ ವರ್ತನೆ ಆರೋಪ ➤ ಸ್ಥಳೀಯರಿಂದ ಆರೋಪಿಗೆ ಧರ್ಮದೇಟು Read More »

ಕರಾವಳಿ, ಕ್ರೈಮ್ ನ್ಯೂಸ್

➤ ಕಾಂಗ್ರೆಸ್ ಕಾರ್ಯಕರ್ತನ ಗುಂಡಿಕ್ಕಿ ಹತ್ಯೆ

(ನ್ಯೂಸ್ ಕಡಬ)newskadaba.com   ಕೋಲ್ಕತ್ತಾ, ಜೂ .10, ಕಾಂಗ್ರೆಸ್ ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಫೂಲ್‌ಚಂದ್ ಎಂದು ಗುರುತಿಸಲಾಗಿದೆ, ಅವರು ವಲಸೆ ಕಾರ್ಮಿಕರಾಗಿ ದುಡಿಯುತ್ತಿದ್ದು ಹಾಗೂ ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತರಾಗಿದ್ದು ಇವರು ಕೇರಳದಲ್ಲಿ ಕೆಲಸ ಮಾಡುತ್ತಿದ್ದರು. ಇವರು 10 ದಿನಗಳ ಹಿಂದೆ ತಮ್ಮ ಗ್ರಾಮಕ್ಕೆ ಬಂದಿದ್ದು,ತನ್ನ ಸ್ನೇಹಿತರೊಂದಿಗೆ ಇಸ್ಪೀಟು ಆಡುತ್ತಿದ್ದಾಗ ಗುಂಡಿನ ದಾಳಿ ನಡೆದಿದೆ.

➤ ಕಾಂಗ್ರೆಸ್ ಕಾರ್ಯಕರ್ತನ ಗುಂಡಿಕ್ಕಿ ಹತ್ಯೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
crime, arrest, suspected

ಬಂಟ್ವಾಳ: ಕಟ್ಟಡ ಕಾಮಗಾರಿಗೆಂದು ತಂದಿದ್ದ ಕಬ್ಬಿಣದ ರಾಡ್ ಕಳವು ಪ್ರಕರಣ ➤ ಆರೋಪಿಗಳು ಅಂದರ್

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ. 10. ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ವೊಂದರ ಕಟ್ಟಡ ಕಾಮಗಾರಿಗೆಂದು ದಾಸ್ತಾನಿರಿಸಲಾಗಿದ್ದ ಕಬ್ಬಿಣದ ರಾಡ್ ಕಳವು ಮಾಡಿ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಎಸ್.ಐ.ರಾಮಕೃಷ್ಣ ನೇತೃತ್ವದ ತಂಡ ಬಂಧಿಸಿದ ಕುರಿತು ವರದಿಯಾಗಿದೆ. ಬಂಧಿತರನ್ನು ಸರಪಾಡಿ ಪೆರ್ಲ ದರ್ಖಾಸು ನಿವಾಸಿ ವಾಹನ ಚಾಲಕ ವಿನೋದ್ ಕುಮಾರ್, ಬೆಳ್ತಂಗಡಿ ತಾಲೂಕಿನ ಪುತ್ರಿಲ ನಿವಾಸಿ ಪುನೀತ್ ಹಾಗೂ ಅಲ್ಲಿಪಾದೆ ಪುರುಷೋತ್ತಮ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ 70 ಸಾವಿರ ರೂ.

ಬಂಟ್ವಾಳ: ಕಟ್ಟಡ ಕಾಮಗಾರಿಗೆಂದು ತಂದಿದ್ದ ಕಬ್ಬಿಣದ ರಾಡ್ ಕಳವು ಪ್ರಕರಣ ➤ ಆರೋಪಿಗಳು ಅಂದರ್ Read More »

ಕರಾವಳಿ, ಕ್ರೈಮ್ ನ್ಯೂಸ್

ಪುತ್ತೂರು: ಮರದ ಕೊಂಬೆ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 09. ಮರದ ಗೆಲ್ಲು ಕಡಿಯುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಮರದ ಗೆಲ್ಲೊಂದು ಮೈಮೇಲೆ ಬಿದ್ದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಒಳಮೊಗ್ರು ಗ್ರಾಮದ ದರ್ಬೆತ್ತಡ್ಕ ಎಂಬಲ್ಲಿ ನಡೆದಿದೆ. ಮೃತರನ್ನು ದರ್ಬೆತ್ತಡ್ಕ ನಿವಾಸಿ ಗುರುಪ್ರಸಾದ್(49) ಎಂದು ಗುರುತಿಸಲಾಗಿದೆ. ಜೂ. 08ರಂದು ಸಂಜೆ ಗುರುಪ್ರಸಾದ್ ರವರು ತಮ್ಮ ಜಮೀನಿನಲ್ಲಿ ಮರದ ಗೆಲ್ಲನ್ನು ಕಡಿಸುತ್ತಿದ್ದ ವೇಳೆ ಇವರು ಹಗ್ಗದಿಂದ ಮರದ ಗೆಲ್ಲನ್ನು ಕೆಳಗೆ ನಿಂತು ಎಳೆಯುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಗೆಲ್ಲು ಇವರ ಮೈ ಮೇಲೆ

ಪುತ್ತೂರು: ಮರದ ಕೊಂಬೆ ಬಿದ್ದು ವ್ಯಕ್ತಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಬಿ.ಸಿ.ರೋಡ್: ವಿದ್ಯುತ್ ಶಾಕ್ ತಗುಲಿ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 09. ತೋಟದ ಕೆಲಸಕ್ಕೆಂದು ತೆರಳಿದ ಯುವಕನೋರ್ವ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ಘಟನೆ ಮೆಲ್ಕಾರ್ ಸಮೀಪದ ಆಲಂಪಾಡಿ ಎಂಬಲ್ಲಿ ಇಂದು ಸಂಭವಿಸಿದೆ. ಮೃತ ಯುವಕನನ್ನು ಬೋಳಿಯಾರು ನಿವಾಸಿ ಇಬ್ರಾಹೀಮ್ ರವರ ಮಗ ಶಾಫಿ (29) ಎಂದು ಗುರುತಿಸಲಾಗಿದೆ. ಶಾಫಿ ಇಂದು ಬೆಳಿಗ್ಗೆ ಆಲಂಪಾಡಿಯಲ್ಲಿ ಅಡಿಕೆ ತೆಗೆಯಲೆಂದು ಹೋಗಿದ್ದು, ಈ ಸಂದರ್ಭ ಅವರ ಕೈಯಲ್ಲಿದ್ದ ಅಡಿಕೆ ತೆಗೆಯುವ ದೋಟಿ ಸರ್ವಿಸ್ ವಯರ್ ಗೆ ತಾಗಿ ಕರೆಂಟ್ ಶಾಕ್ ಹೊಡೆದು, ಶಾಫಿ ಸ್ಥಳದಲ್ಲೇ

ಬಿ.ಸಿ.ರೋಡ್: ವಿದ್ಯುತ್ ಶಾಕ್ ತಗುಲಿ ಯುವಕ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಹೃದಯಾಘಾತ- ಬಂಟ್ವಾಳ ಮೂಲದ ವ್ಯಕ್ತಿ ಸೌದಿ ಅರೇಬಿಯಾದಲ್ಲಿ ನಿಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ. 09. ಸೌದಿ ಅರೇಬಿಯಾದಲ್ಲಿ ವೃತ್ತಿಯಲ್ಲಿದ್ದ ಮಾಣಿ ಸಮೀಪದ ಸೂರಿಕುಮೇರು ನಿವಾಸಿ ದಿವಂಗತ ಅಬೂಬಕರ್ ರವರ ಪುತ್ರ ಅಬ್ದುಲ್ ರಝಾಕ್ ಎಂಬವರು ಹೃದಯಾಘಾತದಿಂದ ಮೃತಪಟ್ಟ ಘಟನೆ ವರದಿಯಾಗಿದೆ. ಕಳೆದ 15 ವರ್ಷಗಳಿಂದ ಸೌದಿ ಅರೇಬಿಯಾದ ಅಲ್ ಕೋಬರ್ ನಲ್ಲಿ ವೃತ್ತಿಯಲ್ಲಿದ್ದ ಅವರು ರಜೆಯಲ್ಲಿ ಮನೆಗೆ ಬಂದು 3 ತಿಂಗಳ ಹಿಂದೆಯಷ್ಟೇ ಮರಳಿ ವಿದೇಶಕ್ಕೆ ತರಳಿದ್ದರು ಎಂದು ಹೇಳಲಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರಿಯರ ಸಹಿತ ಅಪಾರ ಸಂಖ್ಯೆಯ ಬಂಧುಗಳನ್ನು ಅಗಲಿದ್ದಾರೆ.

ಹೃದಯಾಘಾತ- ಬಂಟ್ವಾಳ ಮೂಲದ ವ್ಯಕ್ತಿ ಸೌದಿ ಅರೇಬಿಯಾದಲ್ಲಿ ನಿಧನ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್
Scroll to Top