ಬಿ.ಸಿ.ರೋಡ್: ವಿದ್ಯುತ್ ಶಾಕ್ ತಗುಲಿ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 09. ತೋಟದ ಕೆಲಸಕ್ಕೆಂದು ತೆರಳಿದ ಯುವಕನೋರ್ವ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ಘಟನೆ ಮೆಲ್ಕಾರ್ ಸಮೀಪದ ಆಲಂಪಾಡಿ ಎಂಬಲ್ಲಿ ಇಂದು ಸಂಭವಿಸಿದೆ.


ಮೃತ ಯುವಕನನ್ನು ಬೋಳಿಯಾರು ನಿವಾಸಿ ಇಬ್ರಾಹೀಮ್ ರವರ ಮಗ ಶಾಫಿ (29) ಎಂದು ಗುರುತಿಸಲಾಗಿದೆ. ಶಾಫಿ ಇಂದು ಬೆಳಿಗ್ಗೆ ಆಲಂಪಾಡಿಯಲ್ಲಿ ಅಡಿಕೆ ತೆಗೆಯಲೆಂದು ಹೋಗಿದ್ದು, ಈ ಸಂದರ್ಭ ಅವರ ಕೈಯಲ್ಲಿದ್ದ ಅಡಿಕೆ ತೆಗೆಯುವ ದೋಟಿ ಸರ್ವಿಸ್ ವಯರ್ ಗೆ ತಾಗಿ ಕರೆಂಟ್ ಶಾಕ್ ಹೊಡೆದು, ಶಾಫಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

Scroll to Top