ಕ್ರೈಮ್ ನ್ಯೂಸ್

ಏರ್ ಪೋರ್ಟ್ ಗೆ ತೆರಳುತ್ತಿದ್ದ ಕಾರು ಅಪಘಾತ ➤ ನಾಲ್ವರು ಹಜ್ ಯಾತ್ರಿಕರು ದುರ್ಮರಣ

(ನ್ಯೂಸ್ ಕಡಬ) newskadaba.com ಮುಂಬೈ, ಜೂ. 13. ಹಜ್ ಯಾತ್ರೆಗೆಂದು ತೆರಳುತ್ತಿದ್ದ ಕಾರು ಅಪಘಾತ ಸಂಭವಿಸಿ ನಾಲ್ವರು ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ಮುಂಬೈ-ನಾಗ್ಪುರ ಸಮೃದ್ಧಿ ಎಕ್ಸ್‌ಪ್ರೆಸ್‌ ವೇ ಯ ನಾಸಿಕ್ ಸ್ಟ್ರೆಚ್‌ ಎಂಬಲ್ಲಿ ನಡೆದಿದೆ. ಈ ಕುರಿತು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ ಪ್ರಕಾರ, ಮುಂಬೈನಿಂದ ಶಿರಡಿಗ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಟೊಯೊಟಾ ಕಾರಿನ ಟೈರ್ ಬ್ಲಾಸ್ಟ್ ಆಗಿ, ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು, ಈ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ […]

ಏರ್ ಪೋರ್ಟ್ ಗೆ ತೆರಳುತ್ತಿದ್ದ ಕಾರು ಅಪಘಾತ ➤ ನಾಲ್ವರು ಹಜ್ ಯಾತ್ರಿಕರು ದುರ್ಮರಣ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು: ಪೊಲೀಸ್ ಸಿಬ್ಬಂದಿಗೆ ಹಲ್ಲೆ – ಕರ್ತವ್ಯಕ್ಕೆ ಅಡ್ಡಿ ಆರೋಪ ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 13. ಸಂಚಾರಿ ಪೊಲೀಸ್ ಸಿಬ್ಬಂದಿಗೆ ಹಲ್ಲೆಗೈದು, ಅವಾಚ್ಯವಾಗಿ ನಿಂದನೆಗೈದ ಆರೋಪಕ್ಕೆ ಸಂಬಂಧಿಸಿ, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಚಾರಿ ಪೊಲೀಸ್ ಸಿಬ್ಬಂದಿ ರಮೇಶ್ ಎನ್ನುವವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಹಲ್ಲೆ ನಡೆಸಲಾಗಿದೆ ಎಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಗರದ ಸಿಟಿ ಸೆಂಟರ್ ರಿಕ್ಷಾ ಪಾರ್ಕಿಂಗ್ ಎದುರುಗಡೆ ರಸ್ತೆಯಲ್ಲಿ ಸಂಚಾರಿ ಪೊಲೀಸ್ ಸಿಬ್ಬಂದಿ ರಮೇಶ್ ರವರು ಟ್ರಾಫಿಕ್ ತೆರವು ಮಾಡುತ್ತಿದ್ದ ವೇಳೆ, ಅವರು ಕರ್ತವ್ಯ ನಿರ್ವಹಿಸುತ್ತಿದ್ದಾಗ

ಮಂಗಳೂರು: ಪೊಲೀಸ್ ಸಿಬ್ಬಂದಿಗೆ ಹಲ್ಲೆ – ಕರ್ತವ್ಯಕ್ಕೆ ಅಡ್ಡಿ ಆರೋಪ ➤ ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ವಿಳಾಸ ಕೇಳುವ ನೆಪದಲಿ ಮಹಿಳೆಯ ಸರ ಎಗರಿಸಿದ ಕಳ್ಳರು

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜೂ. 13. ವಿಳಾಸ ಕೇಳುವ ನೆಪದಲ್ಲಿ ಹಾಡಹಗಲೇ ವೃದ್ಧೆಯೋರ್ವರ ಸರ ಎಗರಿಸಿ ಪರಾರಿಯಾದ ಘಟನೆ ನಗರದ ಕೋಟೆ ಬಡಾವಣೆಯ ಸುಗ್ಗಿಕಲ್ ರಸ್ತೆಯಲ್ಲಿ ನಡೆದಿದೆ. ನಗರದ ಕೋಟೆ ಬಡಾವಣೆಯ ನಿವಾಸಿ ಲೀಲಾವತಿ ಎಂಬವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ, ಬೈಕಿನಲ್ಲಿ ಬಂದ ಕಳ್ಳರು ಸರ ಎಗರಿಸಿ ಪರಾರಿಯಾಗಿದ್ದಾರೆ. ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆಯ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಳಾಸ ಕೇಳುವ ನೆಪದಲಿ ಮಹಿಳೆಯ ಸರ ಎಗರಿಸಿದ ಕಳ್ಳರು Read More »

ಕರಾವಳಿ, ಕ್ರೈಮ್ ನ್ಯೂಸ್

ತಾಯಿಯನ್ನು ಕೊಂದು ಮೃತದೇಹವನ್ನು ಸೂಟ್ಕೇಸ್ ನಲ್ಲಿಟ್ಟು ಠಾಣೆಗೆ ತಂದ ಪುತ್ರಿ ➤ ರಾಜ್ಯವನ್ನೇ ಬೆಚ್ಚಿಬೀಳಿಸಿದ ಘಟನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 13. ಪುತ್ರಿಯೋರ್ವಳು ಹೆತ್ತ ತಾಯಿಯನ್ನು ಕೊಂದು ಮೃತದೇಹವನ್ನು ಸೂಟ್ ಕೇಸ್ ನಲ್ಲಿಟ್ಟು ಠಾಣೆಗೆ ತಂದ ಭೀಕರ ಘಟನೆಯ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಹತ್ಯೆಗೊಳಗಾದವರನ್ನು ಬೀವಾ ಪಾಲ್ (70) ಎಂದು ಗುರುತಿಸಲಾಗಿದೆ. ಇವರು ಮೈಕೋ ಲೇಔಟ್ ಪೊಲೀಸ್ ಠಾಣೆಯ ಬಿಳೇಕಹಳ್ಳಿಯ ಎಂಎಸ್ ಆರ್ ಅಪಾರ್ಟ್ ಮೆಂಟ್ ನಲ್ಲಿ ಮಗಳು ಸೆನಾಲಿ ಸೇನ್‌, ಹಾಗೂ ಸೆನಾಲಿ ಅತ್ತೆ ವಾಸವಾಗಿದ್ದರು. ದಿನನಿತ್ಯವೂ ಬೀವಾ ಪಾಲ್ ಮತ್ತು ಸೆನಾಲಿ ಅತ್ತೆ ನಡುವೆ ಜಗಳವಾಗುತ್ತಿತ್ತು.

ತಾಯಿಯನ್ನು ಕೊಂದು ಮೃತದೇಹವನ್ನು ಸೂಟ್ಕೇಸ್ ನಲ್ಲಿಟ್ಟು ಠಾಣೆಗೆ ತಂದ ಪುತ್ರಿ ➤ ರಾಜ್ಯವನ್ನೇ ಬೆಚ್ಚಿಬೀಳಿಸಿದ ಘಟನೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಸ್ ಢಿಕ್ಕಿ- ರಸ್ತೆ ದಾಟಲು ನಿಂತಿದ್ದ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕುಂದಾಪುರ, ಜೂ 12. ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ವೇಗವಾಗಿ ಬಂದ ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ತ್ರಾಸಿ ರಾ.ಹೆ. 66ರಲ್ಲಿ ಭಾನುವಾರದಂದು ರಾತ್ರಿ ನಡೆದಿದೆ. ಮೃತರನ್ನು ಸಾಸ್ತಾನ ಮೂಲದ ರಾಜು ಪೋಜಾರಿ ಎಂದು ಗುರುತಿಸಲಾಗಿದೆ. ಇವರು ತ್ರಾಸಿಯ ಪೆಟ್ರೋಲ್ ಬಂಕ್ ಸಮೀಪ ರಾ.ಹೆ.66ರ ರಸ್ತೆಯ ಡಿವೈಡರ್ ಬಳಿ ರಸ್ತೆಯ ಅಂಚಿನಲ್ಲಿ ರಸ್ತೆ ದಾಟಲು ನಿಂತಿದ್ದ ವೇಳೆ ಕುಂದಾಪುರ ಕಡೆಯಿಂದ ಬಂದ ಬಸ್ ಢಿಕ್ಕಿ

ಬಸ್ ಢಿಕ್ಕಿ- ರಸ್ತೆ ದಾಟಲು ನಿಂತಿದ್ದ ವ್ಯಕ್ತಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಟ್ರಾನ್ಸ್ ಫಾರ್ಮರ್ ದುರಸ್ಥಿ ವೇಳೆ ವಿದ್ಯುತ್ ಶಾಕ್ ➤ ಇಬ್ಬರು ಲೈನ್ ಮ್ಯಾನ್ ಗಳಿಗೆ ಗಾಯ

(ನ್ಯೂಸ್ ಕಡಬ) newskadaba.com ಕುಂದಾಪುರ, ಜೂ. 12. ವಿದ್ಯುತ್ ಟ್ರಾನ್ಸ್ ಫಾರ್ಮರ್ ದುರಸ್ಥಿ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದ ಪರಿಣಾಮ ಇಬ್ಬರು ಪವರ್ ಮ್ಯಾನ್ ಗಳು ಗಾಯಗೊಂಡ ಘಟನೆ ಕೋಟದ ಉಪ್ಲಾಡಿ ಸಮೀಪ ತಸ್ಮಯಿ ರೆಸಿಡೆನ್ಸಿ ಅಪಾರ್ಟ್ಮೆಂಟ್ ಬಳಿ ನಡೆದಿದೆ. ಗಾಯಗೊಂಡವರನ್ನು ಕೋಟ ಮೆಸ್ಕಾಂ ಪವರ್ ಮ್ಯಾನ್ ಗಳಾದ ರಮೇಶ್ (27) ಹಾಗೂ ಸುದರ್ಶನ್ (26) ಎಂದು ಗುರುತಿಸಲಾಗಿದೆ. ಘಟನೆಯಿಂದ ಇಬ್ಬರ ಮುಖ ಹಾಗೂ ಕೈ ಭಾಗ ಸುಟ್ಟು ಹೋಗಿದ್ದು, ಸಹಾಯಕ ಪವರ್ ಮ್ಯಾನ್ ಆಗಿ

ಟ್ರಾನ್ಸ್ ಫಾರ್ಮರ್ ದುರಸ್ಥಿ ವೇಳೆ ವಿದ್ಯುತ್ ಶಾಕ್ ➤ ಇಬ್ಬರು ಲೈನ್ ಮ್ಯಾನ್ ಗಳಿಗೆ ಗಾಯ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಮೆಥಾಂಪೆಟಾಮೈನ್ ಮಾದಕ ದ್ರವ್ಯ ಮಾರಾಟ ➤ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 12. ಅಕ್ರಮವಾಗಿ ಮೆಥಾಂಪೆಟಾಮೈನ್ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಕುರಿತು ವರದಿಯಾಗಿದೆ. ಬಂಧಿತರನ್ನು ಕೆ.ಸಿ ರೋಡ್ ತಲಪಾಡಿ ನಿವಾಸಿಯಾಗಿರುವ ಅಬ್ಬುಲ್ ರಶೀದ್ ಮೊಯ್ದೀನ್ (41) ಹಾಗೂ ದೇರಳಕಟ್ಟೆಯ ಪಿ. ಆರೀಫ್ (40) ಎಂದು ಗುರುತಿಸಲಾಗಿದೆ. ಕೊಣಾಜೆ ಪೊಲೀಸ್ ಠಾಣಾ ಪಿ.ಎಸ್.ಐ ಅಶೋಕ್ ರವರಿಗೆ ನೆತ್ತಿಲಪದವು ಸೈಟ್ ಕಂಬಳ ನಡೆಸುವ ಜಾಗದ ಬಳಿ ಅಕ್ರಮವಾಗಿ ಮೆಥಾಂಪೆಟಾಮೈನ್ ಮಾದಕ ದ್ರವ್ಯವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಕೇಳಿಬಂದ ಖಚಿತ

ಮಂಗಳೂರು: ಮೆಥಾಂಪೆಟಾಮೈನ್ ಮಾದಕ ದ್ರವ್ಯ ಮಾರಾಟ ➤ ಇಬ್ಬರ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಸುಳ್ಯ: ಮಾವಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ಜೂ. 12. ಮಾವಿನ ಮರದಿಂದ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಪೆರಾಜೆ ಗ್ರಾಮದ ಕೊಳಂಗಾಯ ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ಕೇಶವ ಕೆ.ಕೆ. ಎಂದು ಗುರುತಿಸಲಾಗಿದೆ. ಇವರು ಮನೆ ಸಮೀಪದಲ್ಲಿರುವ ಮಾವಿನ ಮರದಿಂದ ಮಾವಿನಕಾಯಿ ಕೊಯ್ಯುತ್ತಿದ್ದ ಸಂದರ್ಭ ಆಯತಪ್ಪಿ ಕೆಳಗೆ ಬಿದ್ದಿದ್ದು, ಕೂಡಲೇ ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆತಂದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಸುಳ್ಯ: ಮಾವಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com  ಬಂಟ್ವಾಳ, ಜೂ 12. ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವಿವಾಹಿತ ಮಹಿಳೆಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಕಲಾಯಿಗುತ್ತು ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ಮಂಗಳೂರು ತಾಲೂಕು ಯಯ್ಯಾಡಿ ಗ್ರಾಮದ ಕೊಂಚಾಡಿ ಸುರೇಶ್ ಚೌಟ ರವರ ಪುತ್ರಿ ಪ್ರೀತಿ ಶೆಟ್ಟಿ(37) ಎಂದು ಗುರುತಿಸಲಾಗಿದೆ. ಪ್ರೀತಿ‌ ಶೆಟ್ಟಿಯವರು ವಿವಾಹಿತರಾಗಿದ್ದು, ತನ್ನ ಮಗುವನ್ನು ಕಳೆದುಕೊಂಡ ಹಿನ್ನೆಲೆ ಮಾನಸಿಕವಾಗಿ ನೊಂದಿದ್ದ ಇವರು ಜೂ. 09 ರಂದು ಕರೋಪಾಡಿ ಗ್ರಾಮದ ಕಲಾಯಿಗುತ್ತು ಎಂಬಲ್ಲಿರುವ ಮನೆಯಲ್ಲಿ

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಫ್ಯಾಷನ್ ಶೋ ರಾಂಪ್ ವಾಕ್ ವೇಳೆ ಬಿದ್ದ ಕಬ್ಬಿಣದ ಪಿಲ್ಲರ್ ➤ ಯುವ ಮಾಡೆಲ್ ಮೃತ್ಯು

(ನ್ಯೂಸ್ ಕಡಬ) newskadaba.com  ನೋಯ್ಡಾ, ಜೂ. 12. ನೋಯ್ಡಾದ ಖಾಸಗಿ ಸ್ಟುಡಿಯೋವೊಂದರಲ್ಲಿ ಆಯೋಜಿಸಲಾಗಿದ್ದ ಫ್ಯಾಷನ್ ಶೋ ವೇಳೆ ರಾಂಪ್ ವಾಕ್ ಮಾಡುವಾಗ ಕಬ್ಬಿಣದ ಪಿಲ್ಲರ್ ಬಿದ್ದು 24 ವರ್ಷದ ಯುವ ಮಾಡೆಲ್ ಮೃತಪಟ್ಟು, ಮತ್ತೋರ್ವ ಗಾಯಗೊಂಡ ಘಟನೆ ನಡೆದಿದೆ. ಮೃತರನ್ನು ಗ್ರೇಟರ್ ನೋಯ್ಡಾದ ಗೌರ್ ಸಿಟಿ-2 ಯ ನಿವಾಸಿ ವಂಶಿಕಾ ಚೋಪ್ರಾನಿ ಎಂದು ಗುರುತಿಸಲಾಗಿದೆ. ಗಾಯಗೊಂಡ ಯುವಕನನ್ನು ಬಾಬಿ ರಾಜ್ ಎಂದು ಗುರುತಿಸಲಾಗಿದ್ದು, ನೋಯ್ಡಾದ ಸೆಕ್ಟರ್ 16 ಎ ನಲ್ಲಿರುವ ಫಿಲ್ಮ್ ಸಿಟಿಯ ಲಕ್ಷ್ಮಿ ಸುಡಿಯೋದಲ್ಲಿ ಈ

ಫ್ಯಾಷನ್ ಶೋ ರಾಂಪ್ ವಾಕ್ ವೇಳೆ ಬಿದ್ದ ಕಬ್ಬಿಣದ ಪಿಲ್ಲರ್ ➤ ಯುವ ಮಾಡೆಲ್ ಮೃತ್ಯು Read More »

ಕ್ರೈಮ್ ನ್ಯೂಸ್
Scroll to Top