ಸುಳ್ಯ: ಮಾವಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ಜೂ. 12. ಮಾವಿನ ಮರದಿಂದ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಪೆರಾಜೆ ಗ್ರಾಮದ ಕೊಳಂಗಾಯ ಎಂಬಲ್ಲಿ ನಡೆದಿದೆ.

ಮೃತಪಟ್ಟವರನ್ನು ಕೇಶವ ಕೆ.ಕೆ. ಎಂದು ಗುರುತಿಸಲಾಗಿದೆ. ಇವರು ಮನೆ ಸಮೀಪದಲ್ಲಿರುವ ಮಾವಿನ ಮರದಿಂದ ಮಾವಿನಕಾಯಿ ಕೊಯ್ಯುತ್ತಿದ್ದ ಸಂದರ್ಭ ಆಯತಪ್ಪಿ ಕೆಳಗೆ ಬಿದ್ದಿದ್ದು, ಕೂಡಲೇ ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆತಂದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Scroll to Top