ಬ್ರೇಕಿಂಗ್ ನ್ಯೂಸ್

ದಿಲ್ಲಿ: ಸಿಎಎ ಪರ-ವಿರೋಧಿಗಳ ನಡುವೆ ಘರ್ಷಣೆ; ಕಲ್ಲು ತೂರಾಟ

ಹೊಸದಿಲ್ಲಿ, ಫೆ.24: ಪೌರತ್ವ ತಿದ್ದುಪಡಿ ಕಾಯ್ದೆ ಪರ ದಿಲ್ಲಿಯ ಮೌಜ್‌ಪುರ್ ಪ್ರದೇಶದಲ್ಲಿ ನಡೆಯುತ್ತಿದ್ದ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ಇದರಿಂದಾಗಿ ಸ್ಥಳದಲ್ಲಿ ಘರ್ಷಣೆ ಉಂಟಾಗಿದೆ. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಜನರನ್ನು, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ದಿಲ್ಲಿಯ ಝಫರಾಬಾದ್ ಬಳಿ ಸಿಎಎ ವಿರೋಧಿಸಿ ಧರಣಿ ನಡೆಸಲಾಗುತ್ತಿತ್ತು. ಈ ಪ್ರದೇಶ ಹಾಗೂ ಸಿಎಎ ಪರವಾಗಿ ನಡೆಯುತ್ತಿದ್ದ ಮೆರವಣಿಗೆಯ ಪ್ರದೇಶ ಹತ್ತಿರ ಹತ್ತಿರವೇ ಇದ್ದುದರಿಂದ ಘರ್ಷಣೆ ನಡೆದಿದೆ ಎನ್ನಲಾಗಿದೆ. ಎರಡು ಗುಂಪುಗಳು ಹತ್ತಿರವೇ ಇದ್ದುದರಿಂದ ಘರ್ಷಣೆ ನಡೆದಿದೆ. […]

ದಿಲ್ಲಿ: ಸಿಎಎ ಪರ-ವಿರೋಧಿಗಳ ನಡುವೆ ಘರ್ಷಣೆ; ಕಲ್ಲು ತೂರಾಟ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಟರ್ಕಿಯಲ್ಲಿ ಭೂಕಂಪ: 9 ಮಂದಿ ಮೃತ್ಯು

ಅಂಕಾರಾ, ಫೆ.24: ಪಶ್ಚಿಮ ಇರಾನ್‌ನಲ್ಲಿ ರವಿವಾರ ಬೆಳಗ್ಗೆ ಸಂಭವಿಸಿದ ಭೂಕಂಪದಲ್ಲಿ 9 ಮಂದಿ ಸಾವಿಗೀಡಾಗಿರುವ ಬಗ್ಗೆ ವರದಿಯಾಗಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.7ರಷ್ಟಿತ್ತು. ಇರಾನ್‌ನ ಖೋಯ್ ಮತ್ತು ಟರ್ಕಿಯ ವ್ಯಾನ್ ಪ್ರಾಂತ್ಯದಲ್ಲಿ ಈ ಸಾವುನೋವು ಸಂಭವಿಸಿದೆ ಎಂದು ತಿಳಿದು ಬಂದಿದೆ. ಮೃತರಲ್ಲಿ ಮೂವರು ಮಕ್ಕಳೂ ಸೇರಿದ್ದು, ಇವರು ಟರ್ಕಿಯ ಬಸ್ಕಾಲೆ ಜಿಲ್ಲೆಯವರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಟರ್ಕಿಯಲ್ಲಿ ಭೂಕಂಪ: 9 ಮಂದಿ ಮೃತ್ಯು Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ವಿಟ್ಲ: ಬಾರ್‌ನಲ್ಲಿ ದಾಂಧಲೆ; 9 ಮಂದಿ ಪೊಲೀಸ್ ವಶಕ್ಕೆ

ವಿಟ್ಲ, ಫೆ.24: ಬಾರ್ ಸಿಬ್ಬಂದಿ ಹಾಗೂ ಸಾರ್ವಜನಿಕರೊಂದಿಗೆ ಗಲಾಟೆಗೆ ಮುಂದಾದ ಗುಂಪೊಂದರ ಹಲವು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ವಿಟ್ಲದಲ್ಲಿ ನಡೆದಿದೆ. ಬೊಬ್ಬೆಕೇರಿಯ ಬಾರ್ ಬಳಿಯಲ್ಲಿ ಬಾರ್‌ನಲ್ಲಿ ಮದ್ಯ ಖರೀದಿಸಿ ಬಳಿಕ ಬಿಲ್ ಕೊಡದೆ ಸಿಬ್ಬಂದಿ ಹಾಗೂ ಸಾರ್ವಜನಿಕರ ಮೇಲೆ ಗುಂಪು ದಾಳಿಗೆ ಮುಂದಾಗಿದೆ. ಈ ಸಂದರ್ಭ ದಾಳಿಗೆ ಮುಂದಾದವರ ವಿರುದ್ಧ ಬಾರ್ ಮಾಲಕರು ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ದೂರು ದಾಖಲಿಸಿಕೊಂಡ ಎಸ್ಸೈ ವಿನೋದ್ ಎಸ್. ಅವರ ತಂಡ ತಕ್ಷಣ ಕಾರ್ಯ ಪ್ರವೃತ್ತರಾಗಿ ಎಲ್ಲಾ

ವಿಟ್ಲ: ಬಾರ್‌ನಲ್ಲಿ ದಾಂಧಲೆ; 9 ಮಂದಿ ಪೊಲೀಸ್ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಪುತ್ತೂರು: ಓಮ್ನಿ ಮತ್ತು ಲಾರಿ ನಡುವೆ ಢಿಕ್ಕಿ ➤ ಓಮ್ನಿ ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.23. ಕಾರು ಹಾಗೂ ಲಾರಿ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಕಾರು ಚಾಲಕ ಮೃತಪಟ್ಟ ಘಟನೆ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾವು ಎಂಬಲ್ಲಿ ಭಾನುವಾರದಂದು ಸಂಭವಿಸಿದೆ. ಮೃತರನ್ನು ಕೊಡಿಪ್ಪಾಡಿ ನಿವಾಸಿ ನಾರಾಯಣ ಜೋಯಿಷ ಎಂದು ಗುರುತಿಸಲಾಗಿದೆ. ನಾರಾಯಣ ಜೋಯಿಷರು ಪೆರ್ಲಂಪಾಡಿ ತರವಾಡು ಮನೆಯಲ್ಲಿ ಕಾರ್ಯಕ್ರಮ ನಿಮಿತ್ತ ತನ್ನ ಓಮ್ನಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ತಕ್ಷಣವೇ ಪುತ್ತೂರು ಆಸ್ಪತ್ರೆಗೆ ಕರೆ ತಂದು ಹೆಚ್ಚಿನ ಚಿಕಿತ್ಸೆಗೆ‌ ಮಂಗಳೂರಿಗೆ‌

ಪುತ್ತೂರು: ಓಮ್ನಿ ಮತ್ತು ಲಾರಿ ನಡುವೆ ಢಿಕ್ಕಿ ➤ ಓಮ್ನಿ ಚಾಲಕ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬಸ್ ಢಿಕ್ಕಿ ಹೊಡೆದು ವಿದ್ಯಾರ್ಥಿನಿ ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಫೆ.23. ಮದ್ರಸದಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ಬಸ್ಸು ಢಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿಯ ಕುಂಬಳೆಯಲ್ಲಿ ರವಿವಾರ ಬೆಳಗ್ಗೆ ನಡೆದಿದೆ. ಮೃತಪಟ್ಟವಳನ್ನು ಅಲ್ಹಾನ್(8) ಎಂದು ಗುರುತಿಸಲಾಗಿದೆ. ಸಮೀಪದ ಮದ್ರಸದ ಎರಡನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಅಲ್ಹಾನ್ ಇಂದು ಬೆಳಗ್ಗೆ ಮದ್ರಸ ತರಗತಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ರಸ್ತೆ ದಾಟುತ್ತಿದ್ದ ಸಂದರ್ಭ ಬಾಲಕಿಗೆ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದಿದ್ದರಿಂದ ಗಂಭೀರ ಗಾಯಗೊಂಡ ಅಲ್ಹಾನ್ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ಬಗ್ಗೆ ಕುಂಬಳೆ ಪೊಲೀಸರು ಪ್ರಕರಣ

ಬಸ್ ಢಿಕ್ಕಿ ಹೊಡೆದು ವಿದ್ಯಾರ್ಥಿನಿ ಮೃತ್ಯು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಪುತ್ತೂರು: ಕೊಲೆಗೆ ಸಂಚು; ಇಬ್ಬರ ಬಂಧನ

ಪುತ್ತೂರು, ಫೆ.23: ಆಸ್ತಿ ಹಾಗೂ ವ್ಯವಹಾರದ ಮನಸ್ತಾಪದಿಂದಾಗಿ ಜಯರಾಮ ಎಂಬವರ ಹತ್ಯೆ ಮಾಡಲು ಸಂಚು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಹೇಶ್ ಹಾಗೂ ನಾಸೀರ್ ಇಡಬೆಟ್ಟು ಎಂದು ಗುರುತಿಸಲಾಗಿದೆ. ಜಯರಾಮ ಹಾಗೂ ಮಹೇಶ್ ಅಲಿಯಾಸ್ ಮಾಯಿಲಪ್ಪಅವರು ಸಹೋದರರಾಗಿದ್ದು, ಪಾಲುದಾರಿಕೆಯಲ್ಲಿ ಹೋಮ್ ಪ್ರೋಡಕ್ಟ್ ವ್ಯವಹಾರ ನಡೆಸುತ್ತಿದ್ದರು. ಇದರಲ್ಲಿ ಅವರೊಳಗೆ ಉಂಟಾಗಿದ್ದ ವೈಮನಸ್ಸು ಹಾಗೂ ಕುಟುಂಬದ ಆಸ್ತಿ ವಿಚಾರವಾಗಿ ಉಂಟಾದ ಮನಸ್ತಾಪದಿಂದಾಗಿ ಮಹೇಶ್ ನಾಸೀರ್ ಅಲಿಯಾಸ್ ಮುನ್ನಿ ಎಂಬವನೊಂದಿಗೆ ಸೇರಿ ಜಯರಾಮ ಅವರನ್ನು ಹತ್ಯೆ

ಪುತ್ತೂರು: ಕೊಲೆಗೆ ಸಂಚು; ಇಬ್ಬರ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ವೈದ್ಯಕೀಯ ಚಿಕಿತ್ಸೆ ಕೋರಿ ನಿರ್ಭಯಾ ಅಪರಾಧಿ ಸಲ್ಲಿಸಿದ ಅರ್ಜಿ ವಜಾ

ಹೊಸದಿಲ್ಲಿ, ಫೆ.22: ತಾನು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ತನಗೆ ಉತ್ತಮ ವೈದ್ಯಕೀಯ ಚಿಕಿತ್ಸೆಗೆ ಅನುಮತಿ ನೀಡಬೇಕೆಂದು ಕೋರಿ ನಿರ್ಭಯಾ ಪ್ರಕರಣ ಅಪರಾಧಿ ವಿನಯ್ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಪಟಿಯಾಲಾ ಹೌಸ್ ಕೋರ್ಟ್ ಶನಿವಾರ ವಜಾಗೊಳಿಸಿದೆ. ತಾನು ಮಾನಸಿಕ ಅಸ್ವಸ್ಥ, ತಲೆ ಹಾಗೂ ತೋಳಿಗೆ ಗಾಯವಾಗಿದೆ ಇದಕ್ಕೆ ಸರಿಯಾದ ಚಿಕಿತ್ಸೆ ಪಡೆಯಲು ಅನುಮತಿ ನೀಡಬೇಕೆಂದು ಕೋರಿ ಅಪರಾಧಿ ವಿನಯ್ ಶರ್ಮಾ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಆದರೆ, ದಿಲ್ಲಿಯ ಪಟಿಯಾಲಾ ಹೌಸ್ ಕೋರ್ಟ್ ವಿನಯ್ ಶರ್ಮಾನ ಅರ್ಜಿಯನ್ನು

ವೈದ್ಯಕೀಯ ಚಿಕಿತ್ಸೆ ಕೋರಿ ನಿರ್ಭಯಾ ಅಪರಾಧಿ ಸಲ್ಲಿಸಿದ ಅರ್ಜಿ ವಜಾ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಗಡಿಯಾರ: ಕಂಟೈನರ್ ಢಿಕ್ಕಿ ಆಟೊ ಚಾಲಕ ಸಹಿತ ಇಬ್ಬರು ಪಾರು

ವಿಟ್ಲ, ಫೆ.22: ಕಂಟೈನರ್ ಲಾರಿಯೊಂದು ಆಟೊ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ಚಾಲಕ ಸಹಿತ ಇಬ್ಬರು ಪವಾಡಸದೃಶ್ಯ ರೀತಿಯಲ್ಲಿ ಪಾರಾದ ಘಟನೆ ಮಂಗಳೂರು-ಬೆಂಗಳೂರು ರಾ.ಹೆ.ಯ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ಸಂಭವಿಸಿದೆ. ಆಟೊ ರಿಕ್ಷಾ ಗಡಿಯಾರದಿಂದ ಪೇರಮೊಗೇರು ಕಡೆಗೆ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ಕಂಟೈನರ್ ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಘಟನೆಯ ಬಳಿಕ ಚಾಲಕ ಕಂಟೈನರ್ ಸಹಿತವಾಗಿ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಸಾರ್ವಜನಿಕರು ಲಾರಿಯನ್ನು ಪತ್ತೆ ಹಚ್ಚಿದ್ದಾರೆ. ಘಟನೆಯಲ್ಲಿ ಇಬ್ಬರು ಆಟೊದೊಳಗಡೆ ಇದ್ದರು.

ಗಡಿಯಾರ: ಕಂಟೈನರ್ ಢಿಕ್ಕಿ ಆಟೊ ಚಾಲಕ ಸಹಿತ ಇಬ್ಬರು ಪಾರು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬಸ್ ಕಾಯುತ್ತಿದ್ದವರಿಗೆ ಬೈಕ್ ಢಿಕ್ಕಿ: ಮೂವರು ಮೃತ್ಯು

ಮೈಸೂರು, ಫೆ.22: ಬಸ್‌ಗಾಗಿ ಕಾದು ನಿಂತಿದ್ದವರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟು, ದ್ವಿಚಕ್ರ ವಾಹನ ಸವಾರ ಸೇರಿದಂತೆ ಮತ್ತೊಬ್ಬ ಪ್ರಯಾಣಿಕ ಗಾಯಗೊಂಡಿರುವ ಘಟನೆ ನರಸಿಂಹಪುರ ತಾಲೂಕಿನ ಮೂಗೂರು ಗ್ರಾಮದಲ್ಲಿ ನಡೆದಿದೆ. ಮೃತರನ್ನು ತಾಲೂಕಿನ ಕರೋಹಟ್ಟಿ ಗ್ರಾಮದ ಬಸವರಾಜು ಅಲಿಯಾಸ್ ಬಸವಣ್ಣ, ಮೂಗೂರು ಹೊಸಳ್ಳಿ ಗ್ರಾಮದ ಚಿಕ್ಕಮ್ಮ ಹಾಗೂ ಚಾಮರಾಜನಗರ ತಾಲೂಕು ಉಮ್ಮತ್ತೂರು ಗ್ರಾಮದ ಗೋವಿಂದಶೆಟ್ಟಿ ಎಂದು ತಿಳಿದು ಬಂದಿದೆ. ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹದೇವಶೆಟ್ಟಿ ಹಾಗೂ ಢಿಕ್ಕಿ ಹೊಡೆದ ಬೈಕ್ ಸವಾರ ಕೇರಳ

ಬಸ್ ಕಾಯುತ್ತಿದ್ದವರಿಗೆ ಬೈಕ್ ಢಿಕ್ಕಿ: ಮೂವರು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಶಿರಾಡಿ: ಮೀನು ಹಿಡಿಯಲೆಂದು ತೆರಳಿದ ಯುವಕ ಕಣ್ಮರೆ ➤ ಪೊಲೀಸರು ಹಾಗೂ ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ಆರಂಭ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಫೆ.22. ಮೀನು ಹಿಡಿಯಲೆಂದು ತೆರಳಿದ‌ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಘಟನೆ ಗುಂಡ್ಯ ಸಮೀಪದ ಬರ್ಚಿನಹಳ್ಳ ಎಂಬಲ್ಲಿ ಶನಿವಾರದಂದು ನಡೆದಿದೆ. ನಾಪತ್ತೆಯಾಗಿರುವವರನ್ನು ಶಿರಾಡಿ ಗ್ರಾಮದ ಬಾಕಿಲ ಗದ್ದೆ ನಿವಾಸಿ ಚೋಮ ಮುಗೇರ ಎಂಬವರ ಪುತ್ರ ಹರೀಶ್(26) ಎಂದು ಗುರುತಿಸಲಾಗಿದೆ. ಹರೀಶ್ ಮೀನು ಹಿಡಿಯಲೆಂದು ಗುಂಡ್ಯ ಹೊಳೆಗೆ ತೆರಳಿದ್ದು, ಆ ಬಳಿಕ ನಾಪತ್ತೆಯಾಗಿರುವುದಾಗಿದೆ. ಸ್ಥಳಕ್ಕೆ ಉಪ್ಪಿನಂಗಡಿ ಮತ್ತು ನೆಲ್ಯಾಡಿ ಹೊರಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿದ್ದು, ಹುಡುಕಾಟ ಆರಂಭಿಸಿದ್ದಾರೆ.

ಶಿರಾಡಿ: ಮೀನು ಹಿಡಿಯಲೆಂದು ತೆರಳಿದ ಯುವಕ ಕಣ್ಮರೆ ➤ ಪೊಲೀಸರು ಹಾಗೂ ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ಆರಂಭ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top