ಬ್ರೇಕಿಂಗ್ ನ್ಯೂಸ್

ಶಿರ್ವ: ಫಾ. ಮಹೇಶ್ ಡಿಸೋಜ ಆತ್ಮಹತ್ಯೆ ಪ್ರಕರಣ; ಓರ್ವನ ಬಂಧನ

ಶಿರ್ವ, ಫೆ.28: ನಾಲ್ಕು ತಿಂಗಳ ಹಿಂದೆ ನಡೆದ ಶಿರ್ವ ಚರ್ಚ್‌ನಧರ್ಮಗುರು, ಡಾನ್ ಬೋಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಫಾ..ಮಹೇಶ್ ಡಿಸೋಜರ ಸಾವಿನ ಪ್ರಕರಣಕ್ಕೆ ಸಂಬಂಸಿ ಮುದರಂಗಡಿ ಗ್ರಾಪಂ ಅಧ್ಯಕ್ಷ, ಪಿಲಾರು ಗ್ರಾಮದ ಡೇವಿಡ್ ಡಿಸೋಜನನ್ನು ಪೊಲೀಸರು ಬಂಧಿಸಿದ್ದಾರೆ. ಮಹೇಶ್ ಡಿಸೋಜರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ೆರೆನ್ಸಿಕ್ ಡಿಪಾರ್ಟ್‌ಮೆಂಟ್ ನೀಡಿರುವ ಮಹತ್ವದ ಸುಳಿವನ್ನು ಆಧರಿಸಿ ಡೇವಿಡ್ ಡಿಸೋಜರ ವಿರುದ್ಧ ಪ್ರಕರಣದ ತನಿಖಾಕಾರಿಯಾಗಿದ್ದ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಬುಧವಾರ ಮೊಕದ್ದಮೆ ದಾಖಲಿಸಿದ್ದರು. ಬಳಿಕ ಆರೋಪಿಯನ್ನು ವಶಕ್ಕೆ […]

ಶಿರ್ವ: ಫಾ. ಮಹೇಶ್ ಡಿಸೋಜ ಆತ್ಮಹತ್ಯೆ ಪ್ರಕರಣ; ಓರ್ವನ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸಂಗೀತ ನಿದೇರ್ಶಕ ಅರ್ಜುನ್ ಜನ್ಯಗೆ ಹೃದಯಾಘಾತ: ಅಸ್ಪತ್ರೆಗೆ ದಾಖಲು

ಮೈಸೂರು, ಫೆ.27: ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹೃದಯಾಘಾತ ಸಂಭವಿಸಿ ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಅರ್ಜುನ್ ಜನ್ಯರ ಮೈಸೂರಿನ ತಮ್ಮ ನಿವಾಸದಲ್ಲಿರುವಾಗ ಹೃದಯಾಘಾತಕ್ಕೊಳಗಾಗಿದ್ದಾರೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಸಮೀಪದ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅರ್ಜುನ್ಯರಿಗೆ ಲಘು ಹೃದಯಾಘಾತವಾಗಿರುವ ಬಗ್ಗೆ ಆಸ್ಪತ್ರೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ತಡರಾತ್ರಿಯಿಂದಲೇ ಅರ್ಜುನ್ ಜನ್ಯ ಅವರಿಗೆ ಚಿಕಿತ್ಸೆ ಆರಂಭಿಸಿದ್ದು, ರಾತ್ರಿಯೇ ಆ್ಯಂಜಿಯೋಪ್ಲ್ಯಾಸ್ಟಿ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅರ್ಜುನ್ ಜನ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಸದ್ಯ

ಸಂಗೀತ ನಿದೇರ್ಶಕ ಅರ್ಜುನ್ ಜನ್ಯಗೆ ಹೃದಯಾಘಾತ: ಅಸ್ಪತ್ರೆಗೆ ದಾಖಲು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕುಮಾರಧಾರ ನದಿಯಲ್ಲಿ ಸ್ನಾನಕ್ಕಿಳಿದ ಯುವಕ ಕಣ್ಮರೆ ➤ ಶೋಧ ಕಾರ್ಯ ಆರಂಭ

(ನ್ಯೂಸ್ ಕಡಬ) newskadaba.com ಕಡಬ, ಫೆ.27. ಸ್ನಾನಕ್ಕೆಂದು ತೆರಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿರುವ ಘಟನೆ ಕುಮಾರಧಾರ ನದಿಯಲ್ಲಿ ಗುರುವಾರದಂದು ನಡೆದಿದೆ. ನಾಪತ್ತೆಯಾಗಿರುವ ಯುವಕನನ್ನು ಕೊಯಿಲ ಜನತಾ ಕಾಲೋನಿ ನಿವಾಸಿ ಯೂಸುಫ್ ಎಂಬವರ ಪುತ್ರ ಅರ್ಫಾದ್ (22) ಎಂದು ಗುರುತಿಸಲಾಗಿದೆ. ಅರ್ಫಾದ್ ಗುರುವಾರದಂದು ತನ್ನ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಕೊಯಿಲ ಗ್ರಾಮದ ಸುದೆಂಗಳ ಸಮೀಪ ಕುಮಾರಧಾರ ನದಿಗಿಳಿದಿದ್ದು, ಕಣ್ಮರೆಯಾಗಿದ್ದಾನೆ ಎನ್ನಲಾಗಿದೆ. ಕುಮಾರಧಾರ‌ ನದಿಯಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಕುಮಾರಧಾರ ನದಿಯಲ್ಲಿ ಸ್ನಾನಕ್ಕಿಳಿದ ಯುವಕ ಕಣ್ಮರೆ ➤ ಶೋಧ ಕಾರ್ಯ ಆರಂಭ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬೆಳ್ಳಾರೆ: ಮದರಂಗಿ ಶಾಸ್ತ್ರ ಮುಗಿಸಿದ ಮದುಮಗಳು ನಾಪತ್ತೆ ➤ ಬೆಳ್ಳಂಬೆಳಗ್ಗೆ ಮದುವೆ ಮನೆಯವರಿಗೆ ಬಿಗ್ ಶಾಕ್

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.26. ಹಸೆಮನೆ ಏರಬೇಕಾಗಿದ್ದ ಮದುಮಗಳು ಬೆಳ್ಳಂಬೆಳಗ್ಗೆ ನಾಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಬುಧವಾರದಂದು ನಡೆದಿದೆ. ಕೊಳ್ತಿಗೆ ಗ್ರಾಮದ ಯುವತಿಯ ಮದುವೆಯು ಬುಧವಾರದಂದು ಪುತ್ತೂರಿನ ಪರ್ಪುಂಜದ ಹಾಲ್ ವೊಂದರಲ್ಲಿ ನಡೆಯಲಿತ್ತು. ಮಂಗಳವಾರ ರಾತ್ರಿ ಮದುರಂಗಿ ಶಾಸ್ತ್ರ ಮುಗಿಸಿಕೊಂಡು ಮದುವೆಗೆ ತಯಾರಾಗಿದ್ದ ಮದುಮಗಳು ಬೆಳ್ಳಂಬೆಳಗ್ಗೆ ಮದುವೆ ಮನೆಯಿಂದ ತಪ್ಪಿಸಿಕೊಂಡಿದ್ದಾಳೆ ಎನ್ನಲಾಗಿದೆ. ಬೆಳಿಗ್ಗೆ ಎದ್ದು ನೋಡುವಾಗ ಮದುಮಗಳು ಮನೆಯಲ್ಲಿ ಇಲ್ಲದಿರುವುದನ್ನು ತಿಳಿದ ಮನೆಯವರು ಬೆಳ್ಳಾರೆ ಪೊಲೀಸ್ ಠಾಣೆಗೆ

ಬೆಳ್ಳಾರೆ: ಮದರಂಗಿ ಶಾಸ್ತ್ರ ಮುಗಿಸಿದ ಮದುಮಗಳು ನಾಪತ್ತೆ ➤ ಬೆಳ್ಳಂಬೆಳಗ್ಗೆ ಮದುವೆ ಮನೆಯವರಿಗೆ ಬಿಗ್ ಶಾಕ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಪ್ಪಿನಂಗಡಿ: ಕಳ್ಳತನ ಮಾಡಲೆಂದು ಮನೆಗೆ ನುಗ್ಗಿ ನಿದ್ದೆಗೆ ಜಾರಿದ ಕಳ್ಳ ➤ ಮನೆ ಮಾಲೀಕನ ಬೆತ್ತದೇಟಿಗೆ ಎದ್ದು ಪೊಲೀಸರ ಅತಿಥಿಯಾದ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ.26. ಕಳ್ಳತನ ಮಾಡಲೆಂದು ಮನೆಯ ಒಳನುಗ್ಗಿದ ಕಳ್ಳನೋರ್ವ ನಿದ್ದೆಗೆ ಜಾರಿ ಬೆಳಿಗ್ಗೆ ಸುಲಭವಾಗಿ ಮನೆಯೊಡೆಯನ ಕೈಗೆ ಸಿಕ್ಕಿ ಪೊಲೀಸರ ಅತಿಥಿಯಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಉಪ್ಪಿನಂಗಡಿಯ ಪ್ರಸಿದ್ಧ ಉದ್ಯಮಿಯೋರ್ವರ ಹಳೆಯ ಕಾಲದ ಮನೆಯ ಸುಮಾರು 20 ಅಡಿ ಎತ್ತರದ ಗೋಡೆ ಏರಿ ಒಳ ನುಗ್ಗಿದ ಕಳ್ಳ ಕಪಾಟಿನಲ್ಲಿಟ್ಟಿದ್ದ ಬೀಗದ ಕೀಗಳನ್ನು ಜಾಲಾಡಿ ಮನೆಯ ನಡು ಕೋಣೆಯಲ್ಲಿದ್ದ ದಿವಾನದಲ್ಲಿ ನಿದ್ದೆಗೆ ಜಾರಿದ್ದಾನೆ. ಮುಂಜಾನೆ ಮನೆಯವರು ಎದ್ದು ನೋಡಿದಾಗ ಅಪರಿಚಿತ ವ್ಯಕ್ತಿ ಮಲಗಿರುವುದು ಕಂಡು

ಉಪ್ಪಿನಂಗಡಿ: ಕಳ್ಳತನ ಮಾಡಲೆಂದು ಮನೆಗೆ ನುಗ್ಗಿ ನಿದ್ದೆಗೆ ಜಾರಿದ ಕಳ್ಳ ➤ ಮನೆ ಮಾಲೀಕನ ಬೆತ್ತದೇಟಿಗೆ ಎದ್ದು ಪೊಲೀಸರ ಅತಿಥಿಯಾದ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ದಿಲ್ಲಿಯಲ್ಲಿ ತಾರಕ್ಕೇರಿದ ಹಿಂಸಾಚಾರ: ಸಾವಿನ ಸಂಖ್ಯೆ 10ಕ್ಕೇರಿಕೆ

ಸೆಕ್ಷನ್ 144 ಜಾರಿಗೊಳಿಸಿ ಆದೇಶ ಹೊಸದಿಲ್ಲಿ, ಫೆ.25: ಈಶಾನ್ಯ ದಿಲ್ಲಿಯಲ್ಲಿ ಹಿಂಸಾಚಾರ ತಾರಕ್ಕೇರಿದ್ದು, ಸಾವಿನ ಸಂಖ್ಯೆ 10ಕ್ಕೇರಿದೆ. ಕಳೆದ 24 ಗಂಟೆಗಳಲ್ಲಿ 150 ಜನ ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಗುರು ತೇಗ್ ಬಹದ್ದೂರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸುನೀಲ್ ಕುಮಾರ್ ತಿಳಿಸಿದ್ದಾರೆ. ಖಾಜುರಿ ಖಾಸ್ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ತುರ್ತು ಕಾರ್ಯಪಡೆ ಪಥಸಂಚಲನ ನಡೆಸಿದ್ದು, ಶಾಂತಿ ಕಾಪಾಡಲು ಪ್ರಯತ್ನ ನಡೆಸಿವೆ. ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಹೇರಲಾಗಿದೆ. ಈಶಾನ್ಯ ದಿಲ್ಲಿಯಲ್ಲಿ ಅರೆಸೇನಾ ಪಡೆಗಳ

ದಿಲ್ಲಿಯಲ್ಲಿ ತಾರಕ್ಕೇರಿದ ಹಿಂಸಾಚಾರ: ಸಾವಿನ ಸಂಖ್ಯೆ 10ಕ್ಕೇರಿಕೆ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದಿಲ್ಲಿ ಹಿಂಸಾಚಾರ: ಪೊಲೀಸ್ ಪೇದೆ ಸಹಿತ ಐವರು ಮೃತ್ಯು

ಹೊತ್ತಿ ಉರಿಯುತ್ತಿರುವ ದಿಲ್ಲಿಯ ಬೀದಿಗಳು 60 ಕ್ಕೂ ಅಧಿಕ ಮಂದಿಗೆ ಗಾಯ ತಾರಕ್ಕೇರಿದ ಹಿಂಸಾಚಾರ ಹೊಸದಿಲ್ಲಿ, ಫೆ.25:  ದಿಲ್ಲಿಯಲ್ಲಿ ಸಿಎಎ ಪರ-ವಿರೋಧಿ ಪ್ರತಿಭಟನಕಾರರ ನಡುವೆ ನಡೆದ ಹಿಂಸಾಚಾರದ ಪರಿಣಾಮ ಪೊಲೀಸ್ ಪೇದೆ ಮತ್ತು ನಾಲ್ವರು ನಾಗರಿಕರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ರವಿವಾರ ನಡೆದ ಹಿಂಸಾಚಾರದಲ್ಲಿ ಕಲ್ಲುತೂರಾಟ ನಡೆದಿದ್ದು, ಅಂಗಡಿ, ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ದುಷ್ಕರ್ಮಿಯೊಬ್ಬ ಪೊಲೀಸರ ಎದುರಲ್ಲೇ ಗುಂಡು ಹಾರಿಸಿದ್ದ. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದರು. ಇನ್ನೂ ದಿಲ್ಲಿಯ ಬೀದಿಗಳು ಹೊತ್ತಿ ಉರಿಯುತ್ತಿದ್ದು, ಪರ-ವಿರೋಧಿಗಳ

ದಿಲ್ಲಿ ಹಿಂಸಾಚಾರ: ಪೊಲೀಸ್ ಪೇದೆ ಸಹಿತ ಐವರು ಮೃತ್ಯು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪಡುಬಿದ್ರೆಯಲ್ಲಿ ಆಡುಗಳ ಮೇಲೆ ಚಿರತೆ ದಾಳಿ: ಸ್ಥಳೀಯರಲ್ಲಿ ಆತಂಕ

ಪಡುಬಿದ್ರೆ, ಫೆ.25: ಮೇಯುತಿದ್ದ ಎರಡು ಆಡುಗಳನ್ನು ಚಿರತೆ ತಿಂದುಹೋದ ಘಟನೆ ಸೋಮವಾರ ಸಲಿಮಾರು ಗ್ರಾಪಂ ವ್ಯಾಪ್ತಿಯ ಅಡ್ವೆಯ ಕೋಚ ಬಾಳಿಕೆ ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಝೈನಾಬಿ ಎಂಬವರು ಸಾಕಿದ ಹೆಣ್ಣು ಮತ್ತು ಗಂಡು ಆಡುಗಳನ್ನು ಮನೆ ಸಮೀಪ ಮೇಯಲು ಬಿಟ್ಟಿದ್ದರು. ಸಂಜೆ ಆಡುಗಳನ್ನು ಹಟ್ಟಿಗೆ ಕೊಂಡೊಯ್ಯಲು ಬಂದಾಗ ಆಡುಗಳನ್ನು ತಿಂದಿರುವುದು ಬೆಳಕಿಗೆ ಬಂತು. ಇದರಿಂದ ಸ್ಥಳೀಯರು ಆತಂಕಿರಾಗಿದ್ದು, ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಎರಡು ಆಡುಗಳನ್ನು ಖರೀದಿಸಿ ಸಾಕುತಿದ್ದೆ. ಈಗ ಆಡಿಗೆ

ಪಡುಬಿದ್ರೆಯಲ್ಲಿ ಆಡುಗಳ ಮೇಲೆ ಚಿರತೆ ದಾಳಿ: ಸ್ಥಳೀಯರಲ್ಲಿ ಆತಂಕ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಪೊಲೀಸರಿಂದ ತಪ್ಪಿಸಲು ಹೋಗಿ ಬೈಕ್-ಲಾರಿ ಢಿಕ್ಕಿ: ಇಬ್ಬರು ಮೃತ್ಯು

ತರೀಕೆರೆ, ಫೆ.25: ದಂಡದ ಭಯದಿಂದ ಪೊಲೀಸರಿಂದ ತಪ್ಪಿಸಿಕೊಳ್ಳಲು ವೇಗವಾಗಿ ಚಾಲನೆ ಮಾಡಿದ ಪರಿಣಾಮ ಬೈಕೊಂದು ಟಿಪ್ಪರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಕುಮಾರ್ (30) ಮತ್ತು ಮೋಹನ್ (30) ಎಂದು ಗುರುತಿಸಲಾಗಿದೆ. ಇವರು ಬೈಕ್‌ನಲ್ಲಿ ಶಿವಮೊಗ್ಗದಿಂದ ಲಕ್ಕವಳ್ಳಿಗೆ ತೆರಳುತ್ತಿದ್ದರು ಎನ್ನಲಾಗಿದೆ. ಲಕ್ಕವಳ್ಳಿ ಡ್ಯಾಂ ಬಳಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಇಬ್ಬರು ಯುವಕರಿದ್ದ ಮೋಟಾರ್ ಬೈಕೊಂದು ವೇಗವಾಗಿ ಬಂದಿದೆ. ಈ ವೇಳೆ ಪೊಲೀಸರು ಅಡ್ಡಹಾಕಿದರೂ ತಪ್ಪಿಸಿಕೊಂಡ ಅವರು ವೇಗವಾಗಿ

ಪೊಲೀಸರಿಂದ ತಪ್ಪಿಸಲು ಹೋಗಿ ಬೈಕ್-ಲಾರಿ ಢಿಕ್ಕಿ: ಇಬ್ಬರು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಭೂಗತ ಪಾತಕಿ ರವಿ ಪೂಜಾರಿ ರಾಜ್ಯ ಪೊಲೀಸ್ ವಶಕ್ಕೆ

ಬೆಂಗಳೂರು, ಫೆ.24: ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ದಕ್ಷಿಣ ಆಫ್ರಿಕಾದ ಸೆನೆಗಲ್ ನಲ್ಲಿ ಬಂಧಿತನಾಗಿದ್ದ ಭೂಗತ ಪಾತಕಿ ರವಿ ಪೂಜಾರಿಯನ್ನು ಸೋಮವಾರ ನಸುಕಿನಲ್ಲಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ರವಿ ಪೂಜಾರಿಯನ್ನು ಎಡಿಜಿಪಿ ಅಮರ್ ಕುಮಾರ್ ಪಾಂಡೆ, ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ನೇತೃತ್ವದ ತಂಡ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಸಂದೀಪ್ ಪಾಟೀಲ, “ರವಿ ಪೂಜಾರಿ ಅಪರಾಧ ಚಟುವಟಿಕೆ, ನಗರಕ್ಕೆ ಕರೆದುಕೊಂಡ ಬಂದಿರುವ ಕುರಿತಾಗಿ ಹೆಚ್ಚಿನ‌ ಮಾಹಿತಿಯನ್ನು ಸೋಮವಾರ ಬೆಳಗ್ಗೆ

ಭೂಗತ ಪಾತಕಿ ರವಿ ಪೂಜಾರಿ ರಾಜ್ಯ ಪೊಲೀಸ್ ವಶಕ್ಕೆ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top