ಬ್ರೇಕಿಂಗ್ ನ್ಯೂಸ್

ಪುತ್ತೂರು: ಕ್ಲಬ್ ಗೆ ದಾಳಿ

 (ನ್ಯೂಸ್ ಕಡಬ) newskadaba.com ಪುತ್ತೂರು, ಅ. 26. ಕೊರೋನಾ ನಿಯಮ ಉಲ್ಲಂಘಿಸಿ ಜೂಜಾಟ ಆಡುತ್ತಿದ್ದ ಆರೋಪದ ಮೇರೆಗೆ ಕ್ಲಬ್ ಗೆ ಪೊಲೀಸರು ದಾಳಿ ನಡೆಸಿ ಹದನೈದು ಮಂದಿಯನ್ನು ಬಂಧಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಯೂನಿಯನ್ ಕ್ಲಬ್ ನೋಂದಾಯಿತ ಕ್ಲಬ್ ಆಗಿದ್ದರೂ ಅಲ್ಲಿ ಹಣವನ್ನು ಪಣವಿಟ್ಟುಕೊಂಡು ಕಾನೂನಿಗೆ ವಿರುದ್ದವಾಗಿ ಹದಿನೈದು ಮಂದಿ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದ ಮಾಹಿತಿಯನ್ನು ಪಡೆದ ಪೊಲೀಸರು ದಾಳಿ ನಡೆಸಿ, ಜೂಜಾಟದಲ್ಲಿ ತೊಡಗಿಸಿದ್ದ ಸುಮಾರು 1.5 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಪುತ್ತೂರು: ಕ್ಲಬ್ ಗೆ ದಾಳಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಗಂಟಲಲ್ಲಿ ಗೋಲಿಬಜೆ ಸಿಲುಕಿ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 25. ಗಂಟಲಲ್ಲಿ ಗೋಲಿಬಜೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳಚಿಕಂಬಳ ಎಂಬಲ್ಲಿ ಸಂಭವಿಸಿದೆ. ಮೃತರನ್ನು ಹರೀಶ ರಾಮಪ್ಪ ಅಮೀನ್ (55) ಎಂದು ಗುರುತಿಸಲಾಗಿದೆ. ಪಡುಬಿದ್ರಿಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಇವರ ಪತ್ನಿ, ಮಗ ಮುಂಬೈಯಲ್ಲಿ ನೆಲೆಸಿದ್ದು, ಆಗಾಗ ಬಂದುಹೋಗುತ್ತಿದ್ದರು ಎನ್ನಲಾಗಿದೆ. ಸದ್ಯ ಇವರು ಮುಲ್ಕಿ ಕೊಳಚಿಕಂಬಳ ಎಂಬಲ್ಲಿ ಸಹೋದರಿಯ ಜೊತೆ ವಾಸವಾಗಿದ್ದರು. ಕೆಲ ದಿನಗಳ ಹಿಂದೆ ಅವರ ಪತ್ನಿ ಹಾಗೂ ಮಗ ಮುಂಬೈನಿಂದ ಬಂದಿದ್ದು,

ಗಂಟಲಲ್ಲಿ ಗೋಲಿಬಜೆ ಸಿಲುಕಿ ವ್ಯಕ್ತಿ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ತಿರುಪತಿ ದೇವಾಲಯದ ಬಾಯ್ಲರ್ ನಿಂದ ಬಿಸಿನೀರು ಸೋರಿಕೆ ➤ ಐವರಿಗೆ ಗಾಯ, ಇಬ್ಬರಿಗೆ ಗಂಭೀರ

(ನ್ಯೂಸ್ ಕಡಬ) newskadaba.com ಆಂಧ್ರಪ್ರದೇಶ, ಅ. 25. ಬಾಯ್ಲರ್ ನಿಂದ ಬಿಸಿನೀರು ಸೋರಿಕೆಗೊಂಡು ಕಾರ್ಮಿಕರಿಗೆ ಸಿಡಿದಿದ್ದು, ಐವರು ಕಾರ್ಮಿಕರು ಗಾಯಗೊಂಡು, ಇಬ್ಬರು ಕಾರ್ಮಿಕರು ಗಂಭೀರ ಗಾಯಗೊಂಡ ಘಟನೆ ತಿರುಪತಿ ದೇವಸ್ಥಾನದಲ್ಲಿ ನಡೆದಿದೆ.   ಅಡುಗೆ ಮನೆಯಲ್ಲಿ ಬಾಯ್ಲರ್ ನಿಂದ ನೀರು ಸೋರಿಕೆಯಾಗಿ, ಕಾರ್ಮಿಕರ ಮೇಲೆ ಬಿದ್ದಿರುವ ಪರಿಣಾಮ, ಐವರು ಕೆಲಸಗಾರರು ಗಾಯಗೊಂಡು ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ, ಈ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡುತ್ತಿರುವುದಾಗಿ ಟಿಟಿಡಿ ತಿಳಿಸಿದೆ.

ತಿರುಪತಿ ದೇವಾಲಯದ ಬಾಯ್ಲರ್ ನಿಂದ ಬಿಸಿನೀರು ಸೋರಿಕೆ ➤ ಐವರಿಗೆ ಗಾಯ, ಇಬ್ಬರಿಗೆ ಗಂಭೀರ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ➤ ನಿರೀಕ್ಷಣಾ ಜಾಮೀನು ಪಡೆದ ಕಾಂಗ್ರೆಸ್ ಮುಖಂಡ

(ನ್ಯೂಸ್ ಕಡಬ) newskadaba.com ಹುಬ್ಬಳ್ಳಿ, ಅ. 25. ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ನಟಿ ರಾಗಿಣಿ, ಸಂಜನಾ ಸೇರಿದಂತೆ ಅನೇಕರು ಜೈಲು ಸೇರಿದ್ದಾರೆ. ಇದಿಗ ನಟಿ ರಾಗಿಣಿ ಜೊತೆಗೆ ನಂಟು ಹೊಂದಿದ ಕಾರಣದಿಂದ ಬಂಧನದ ಭೀತಿಯಲ್ಲಿರುವ ಕಾಂಗ್ರೆಸ್ ಮುಖಂಡ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.   ಹುಬ್ಬಳ್ಳಿಯ ಕಾಂಗ್ರೆಸ್ ಮುಖಂಡರು ಹಾಗೂ ಮಾಜಿ ಸಚಿವರ ಆಪ್ತರಾಗಿದ್ದ ಗಿರೀಶ್ ಗದಿಗೆಪ್ಪ ಗೌಡ ಹೀಗೆ ನಿರೀಕ್ಷಣಾ ಜಾಮೀನು ಪಡೆವರಾಗಿದ್ದಾರೆ. ರಾಗಿಣಿ ಜೊತೆಗೆ ನಂಟು ಹೊಂದಿದ್ದರಿಂದ, ಬಂಧನದ ಭೀತಿಯಲ್ಲಿದ್ದರು. ಈ ಹಿನ್ನಲೆಯಲ್ಲಿ

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ➤ ನಿರೀಕ್ಷಣಾ ಜಾಮೀನು ಪಡೆದ ಕಾಂಗ್ರೆಸ್ ಮುಖಂಡ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ತರಕಾರಿ ವಾಹನದಲ್ಲಿ ಅಕ್ರಮ ಗೋಸಾಗಾಟ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 25. ಬಂಟ್ವಾಳದಿಂದ ಉಳ್ಳಾಲದಲ್ಲಿರುವ ಕಸಾಯಿಖಾನೆಗೆ 12 ಗೋವುಗಳನ್ನು ತರಕಾರಿ ವಾಹನದಲ್ಲಿ ಸಾಗಿಸುತ್ತಿದ್ದ ಘಟನೆ ಇಂದು ಬೆಳಗ್ಗೆ ನಡೆದಿದೆ.   ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದುದ್ದನ್ನು ಪಂಪವೆಲ್ ಬಳಿ ಬಜರಂಗದಳದ ಕಾರ್ಯಕರ್ತರು ತಡೆದು ಕಂಕನಾಡಿ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ತರಕಾರಿ ವಾಹನದಲ್ಲಿ ಅಕ್ರಮ ಗೋಸಾಗಾಟ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹೈಟೆಕ್ ವೇಶ್ಯಾವಾಟಿಕೆ ಅಡ್ಡೆಗೆ ದಾಳಿ ➤ ಓರ್ವ ನಟಿ ಬಂಧನ, 3 ಧಾರವಾಹಿ ನಟಿಯರ ರಕ್ಷಣೆ

(ನ್ಯೂಸ್ ಕಡಬ) newskadaba.com ಮುಂಬೈ, ಅ. 25. ಹೈ ಟೆಕ್ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು ಓರ್ವ ನಟಿಯನ್ನು ಬಂಧಿಸಿದ್ದು, ಮೂವರು ಧಾರಾವಾಹಿ ನಟಿಯರನ್ನು ರಕ್ಷಿಸಿದ ಘಟನೆ ಮುಂಬೈ ನಲ್ಲಿ ನಡೆದಿದೆ. ಮುಂಬೈನಲ್ಲಿ ನಟಿಯರನ್ನು ಮತ್ತು ಬೆಲ್ಲಿ ಡ್ಯಾನ್ಸರ್ ಗಳನ್ನು ಬಳಸಿಕೊಂಡು ಸೆಕ್ಸ್ ದಂಧೆ ನಡೆಸುತ್ತಿರುವ ಕುರಿತು ಖಚಿತ ಮಾಹಿತಿಯ ಮೇರೆಗೆ ಕ್ರೈಂ ಬ್ರ್ಯಾಂಚ್ ನ 11ನೇ ಯುನಿಟ್ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆಯಲ್ಲಿ ಸೆಕ್ಸ್ ದಂಧೆ ನಡೆಸುತ್ತಿದ್ದ ನಟಿಯನ್ನು

ಹೈಟೆಕ್ ವೇಶ್ಯಾವಾಟಿಕೆ ಅಡ್ಡೆಗೆ ದಾಳಿ ➤ ಓರ್ವ ನಟಿ ಬಂಧನ, 3 ಧಾರವಾಹಿ ನಟಿಯರ ರಕ್ಷಣೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಿದೇಶಿ ಯಾತ್ರಿಕರನ್ನು ಸ್ವಾಗತಿಸಲು ಸಿದ್ಧತೆ ನಡೆಸಿದ ಸೌದಿ ಅರೇಬಿಯಾ

(ನ್ಯೂಸ್ ಕಡಬ) newskadaba.com ಸೌದಿ ಅರೇಬಿಯ, ಅ. 25. ವಿದೇಶಿ ಉಮ್ರಾ ಯಾತ್ರಿಕರನ್ನು ಸ್ವಾಗತಿಸಲು ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವಾಲಯವು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ. ದೇಶದ ನಾಗರಿಕರು ಮತ್ತು ದೇಶದಲ್ಲೇ ವಾಸಿಸುತ್ತಿರುವ ವಲಸಿಗರಿಗಾಗಿ ಯಶಸ್ವಿ ಯಾತ್ರೆಯನ್ನು ಏರ್ಪಡಿಸಿದ ಬಳಿಕ, ವಿದೇಶಿಯರ ಆಗಮನಕ್ಕೆ ಅನುಮತಿ ನೀಡುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಂಡಿದೆ ತಿಳಿಸಿದೆ. ವಿದೇಶಿ ಯಾತ್ರಿಕರನ್ನು ಸ್ವಾಗತಿಸಲು 700ಕ್ಕೂ ಅಧಿಕ ಉಮ್ರಾ ಕಂಪೆನಿಗಳು ಸಿದ್ಧವಾಗಿವೆ ಎಂದು ಹಜ್ ಮತ್ತು ಉಮ್ರಾ ವ್ಯವಹಾರಗಳ ಸಹಾಯಕ

ವಿದೇಶಿ ಯಾತ್ರಿಕರನ್ನು ಸ್ವಾಗತಿಸಲು ಸಿದ್ಧತೆ ನಡೆಸಿದ ಸೌದಿ ಅರೇಬಿಯಾ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು: ಬಸ್ ಗೆ ಕಲ್ಲೆಸೆದ ಪ್ರಕರಣ ➤ ಓರ್ವ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 25. ಬಸ್ಸಿಗೆ‌ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದ ಆರೋಪಿಗಳನ್ನು ಘಟನೆ ನಡೆದ ಗಂಟೆಯೊಳಗೆ ಪತ್ತೆ ಹಚ್ಚಿರುವ ಪೊಲೀಸರು ಓರ್ವ ಆರೋಪಿ, ಬೈಕ್ ಹಾಗೂ ಪರಾರಿಯಾಗಲು ಯತ್ನಿಸಿದ ಆರೋಪಿಗೆ ಸಹಕರಿಸಿದ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ದೇರಕಳಕಟ್ಟೆ ಎಂಬಲ್ಲಿ ನಡೆದಿದೆ.   ಓರ್ವ ಆರೋಪಿ ಅಲ್ಫಾಝ್ ಕಲ್ಪಾದೆ ಎಂಬಾತನು ಪೊಲೀಸ್ ವಶದಲ್ಲಿದ್ದು, ಇನ್ನೊರ್ವ ಆರೋಪಿ ಪೊಂಗ ಅಶ್ರಫ್ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಮಂಗಳೂರಿನಿಂದ ವಿಟ್ಲ ಕಡೆಗೆ

ಮಂಗಳೂರು: ಬಸ್ ಗೆ ಕಲ್ಲೆಸೆದ ಪ್ರಕರಣ ➤ ಓರ್ವ ಆರೋಪಿಯ ಬಂಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಶಾಲಾ ಆವರಣದ ಹೊಂಡದಲ್ಲಿ ಬಿದ್ದು 3 ಮಕ್ಕಳು ಮೃತ್ಯು

(ನ್ಯೂಸ್ ಕಡಬ) newskadaba.com ಹಾವೇರಿ, ಅ. 24. ಶಾಲಾ ಆವರಣದಲ್ಲಿ ಆಟದಲ್ಲಿನಿರತರಾಗಿದ್ದ ಮೂವರು ಮಕ್ಕಳು ಶಾಲಾ ಕಾಮಗಾರಿಗೆಂದು ತೋಡಲಾಗಿದ್ದ ಹೊಂಡದಲ್ಲಿ ಬಿದ್ದು ಧಾರುಣವಾಗಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ನಡೆದಿದೆ.   ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿನ ಶಾಲಾ ಆವರಣದಲ್ಲಿನ ಕಾಮಗಾರಿಯ ಸಲುವಾಗಿ ಹೊಂಡವೊಂದನ್ನು ತೋಡಲಾಗಿದ್ದು, ಈ ಶಾಲಾ ಆವರಣದಲ್ಲಿ 7- 8 ಮಕ್ಕಳು ಆಟವಾಡುತ್ತಿದ್ದವು. ಹೀಗೆ ಆಟವಾಡುತ್ತಾ ಹೊಂಡದಲ್ಲಿ ಬಿದ್ದು ಮೂವರು ಮಕ್ಕಳು ದಾರುಣವಾಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೂವರು ಮಕ್ಕಳ ಶವಗಳನ್ನು ಸ್ಥಳೀಯರು ಹೊರತೆಗೆದಿದ್ದು,

ಶಾಲಾ ಆವರಣದ ಹೊಂಡದಲ್ಲಿ ಬಿದ್ದು 3 ಮಕ್ಕಳು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸತತ 2ನೇ ದಿನವೂ ಇಳಿಕೆಯಾದ ಚಿನ್ನದ ದರ ➤ ಆಭರಣ ಪ್ರಿಯರಲ್ಲಿ ಮತ್ತೆ ಮಂದಹಾಸ

(ನ್ಯೂಸ್ ಕಡಬ) newskadaba.comಬೆಂಗಳೂರು, ಅ. 24.  ಲಾಕ್‌ ಡೌನ್‌ ಸಮಯದಲ್ಲಿ ಗಗನಕ್ಕೇರಿದ್ದ ಬಂಗಾರದ ಬೆಲೆ ಕೊಂಚ ಇಳಿಕೆಯಾಗಿದ್ದು, ಸದ್ಯ ಸತತ ಎರಡನೇ ದಿನವೂ ಚಿನ್ನದ ದರದಲ್ಲಿ ಭಾರೀ ಇಳಿಕೆ ಕಂಡಿದ್ದು,ಗ್ರಾಹಕರನ್ನ ಸಂತುಷ್ಠರನ್ನಾಗಿಸಿದೆ. ಬೆಂಗಳೂರಿನಲ್ಲಿ ಇಂದು 10 ಗ್ರಾಂ. ಗೆ 22 ಕ್ಯಾರೆಟ್ ಚಿನ್ನದ ದರದಲ್ಲಿ 210 ರೂಪಾಯಿ ಇಳಿಕೆಯಾಗಿದ್ದು, ಈ ಮೂಲಕ ಬೆಲೆ 47,000 ರೂಪಾಯಿಯಾಗಿದೆ. ಇನ್ನು, 24 ಕ್ಯಾರೆಟ್​ ನ 10 ಗ್ರಾಂ. ಚಿನ್ನದ ದರವೂ 130 ರೂಪಾಯಿ ಇಳಿಕೆ ಕಂಡು, 51,270 ರೂಪಾಯಿ ಆಗಿದೆ. ಇನ್ನು

ಸತತ 2ನೇ ದಿನವೂ ಇಳಿಕೆಯಾದ ಚಿನ್ನದ ದರ ➤ ಆಭರಣ ಪ್ರಿಯರಲ್ಲಿ ಮತ್ತೆ ಮಂದಹಾಸ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top