ಬ್ರೇಕಿಂಗ್ ನ್ಯೂಸ್

ವಾಟ್ಸಾಪ್ ಬಳಕೆದಾರರೇ ಎಚ್ಚರ…! ➤ ಇನ್ಮುಂದೆ ವಾಟ್ಸಾಪ್ ಬಳಕೆಗೆ ನೀಡಬೇಕು ಶುಲ್ಕ..?

(ನ್ಯೂಸ್ ಕಡಬ) newskadaba.com ನವದೆಹಲಿ, ಅ.24: ಭಾರತದಲ್ಲಿ ಸುಮಾರು 77 ಪ್ರತಿಶತ ವಯಸ್ಕರು ಸ್ನೇಹಿತರೊಂದಿಗೆ/ಕುಟುಂಬದೊಂದಿಗೆ ಸಂವಹನ ನಡೆಸುವ ರೀತಿಯಲ್ಲಿಯೇ ವ್ಯವಹಾರಗಳೊಂದಿಗೆ ಸಂವಹನ ನಡೆಸಲು ಬಯಸುವುದಾಗಿ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವ್ಯವಹಾರಕ್ಕಾಗಿ ವಾಟ್ಸಾಪ್ ಬಳಸುವ ಕಂಪನಿಗಳಿಗೆ ಚಾರ್ಜ್ ಮಾಡಲು ಸಂಸ್ಥೆ ನಿರ್ಧಾರ ಮಾಡಿದೆ.     ಸುಮಾರು 50 ಮಿಲಿಯನ್ ವ್ಯವಹಾರಗಳು ಮತ್ತು 175 ಮಿಲಿಯನ್ ಜನರು ಪ್ರತಿದಿನ ವಾಟ್ಸಾಪ್ ಬಿಸಿನೆಸ್ ಖಾತೆಗೆ ಸಂದೇಶ ಕಳುಹಿಸುತ್ತಾರೆ ಮತ್ತು ಈ ಕ್ರಮವು ವಾಟ್ಸಾಪ್ ತನ್ನದೇ ಆದ ವ್ಯವಹಾರವನ್ನು ಮುಂದುವರೆಸಲು ಸಹಾಯ […]

ವಾಟ್ಸಾಪ್ ಬಳಕೆದಾರರೇ ಎಚ್ಚರ…! ➤ ಇನ್ಮುಂದೆ ವಾಟ್ಸಾಪ್ ಬಳಕೆಗೆ ನೀಡಬೇಕು ಶುಲ್ಕ..? Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಅವಘಢ ➤ ಐವರು ಮೃತ್ಯು

(ನ್ಯೂಸ್ ಕಡಬ) ಮದುರೈ, ಅ. 24. ಇಲ್ಲಿನ ಪಟಾಕಿ ತಯಾರಿಕಾ ಕಾರ್ಖಾನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಭಾರೀ ಸ್ಫೋಟ ಸಂಭವಿಸಿ, ಐವರು ಮೃತಪಟ್ಟು ಮೂವರಿಗೆ ಗಂಭೀರ ಗಾಯಗೊಂಡ ಘಟನೆ ಮಧುರೈ ಯಲ್ಲಿ ನಡೆದಿದೆ.   ಕಲ್ಲುಪಟ್ಟಿ ಪ್ರದೇಶದ ಪಟಾಕಿ ತಯಾರಿಕಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಭಾರೀ ಸ್ಫೋಟ ಸಂಭವಿಸಿತ್ತು, ಈ ದುರ್ಘಟನೆಯಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟರೆ, ತೀವ್ರ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ

ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಅವಘಢ ➤ ಐವರು ಮೃತ್ಯು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವನ್ಯಪ್ರಾಣಿ ಮಾಂಸದ ಅಡುಗೆ ತಯಾರಿಸುತ್ತಿದ್ದ ವೇಳೆ ಅರಣ್ಯಾಧಿಕಾರಿಗಳ ದಾಳಿ ➤ ಆರೋಪಿ ಪರಾರಿ

(ನ್ಯೂಸ್ ಕಡಬ) newskadaba.com ಹಾಸನ, ಅ.24: ನಾಗರಹೊಳೆ ಉದ್ಯಾನವನದಂಚಿನ ಪಿರಿಯಾಪಟ್ಟಣ ತಾಲೂಕಿನ ಲಕ್ಷ್ಮಿಪುರ ಗ್ರಾಮವೊಂದರ ಮನೆಯಲ್ಲಿ ವನ್ಯಪ್ರಾಣಿ ಮಾಂಸದ ಅಡುಗೆ ತಯಾರಿಸುತ್ತಿದ್ದ ವೇಳೆ ದಾಳಿ ನಡೆಸಿರುವ ಅರಣ್ಯ ಸಿಬ್ಬಂದಿಗಳು ಒಂದು ಜಿಂಕೆ ಕೊಂಬು ಮತ್ತು ಮಾಂಸವನ್ನು ವಶಕ್ಕೆ ಪಡೆದಿದ್ದು, ಆರೋಪಿ ಪರಾರಿಯಾಗಿದ್ದಾನೆ. ನಾಗರಹೊಳೆ ಉದ್ಯಾನವನದಂಚಿನ ಪಿರಿಯಾಪಟ್ಟಣ ತಾಲೂಕಿನ ಲಕ್ಷ್ಮಿಪುರ ಗ್ರಾಮದ ಅಶೋಕ್ ಕುಮಾರ್ ತಲೆ ಮರೆಸಿಕೊಂಡಿದ್ದು, ಪತ್ತೆಗೆ ತಂಡ ರಚಿಸಲಾಗಿದೆ.     ಖಚಿತ ಮಾಹಿತಿ ಮೇರೆಗೆ ನಾಗರಹೊಳೆ ಉದ್ಯಾನದ ಹುಲಿ ಯೋಜನೆ ನಿರ್ದೇಶಕ ಡಿ. ಮಹೇಶ್

ವನ್ಯಪ್ರಾಣಿ ಮಾಂಸದ ಅಡುಗೆ ತಯಾರಿಸುತ್ತಿದ್ದ ವೇಳೆ ಅರಣ್ಯಾಧಿಕಾರಿಗಳ ದಾಳಿ ➤ ಆರೋಪಿ ಪರಾರಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮೆಡಿಕಲ್ ಶಾಪ್ ನಲ್ಲಿ ಅಮಲು ಮಾತ್ರೆಗಳು ಪತ್ತೆ ➤ ಇಬ್ಬರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಡಿಕೇರಿ, ಅ. 24. ಅಮಲೇರುವ ಮಾತ್ರೆಗಳನ್ನು ಮೆಡಿಕಲ್ ಶಾಪ್ ಮಾಲೀಕರ ಸಹಕಾರದೊಂದಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಡಿಸಿಐಬಿ ಘಟಕದ ಅಧಿಕಾರಿಗಳು ಹಾಗೂ ಸಿಬ್ದಂದಿಗಳು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಗೋಣಿಕೊಪ್ಪದ ಹೆಚ್.ಆರ್.ಸುಮನ್ ಹಾಗೂ ಜೀವನ್ ಹೆಚ್.ಎಸ್ ಎಂದು ಗುರುತಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಗಾಂಜಾ ಹಾಗೂ ಡ್ರಗ್ಸ್ ಮತ್ತಿತರ ಮಾದಕ ವಸ್ತುಗಳ ಮಾರಾಟ ಹಾಗೂ ಬಳಕೆಯು ನಿಯಂತ್ರಣಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ಮಾದಕ ವ್ಯಸನಿಗಳಾಗಿದ್ದ ಯುವಕರು ಅಮಲು ಮಾತ್ರೆಗಳನ್ನು ಮೆಡಿಕಲ್

ಮೆಡಿಕಲ್ ಶಾಪ್ ನಲ್ಲಿ ಅಮಲು ಮಾತ್ರೆಗಳು ಪತ್ತೆ ➤ ಇಬ್ಬರು ಆರೋಪಿಗಳ ಬಂಧನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹಾಸನ: ಚಾಲಕನ ನಿಯಂತ್ರಣ ತಪ್ಪಿ ಡೀಸೆಲ್ ಟ್ಯಾಂಕರ್ ಪಲ್ಟಿ

(ನ್ಯೂಸ್ ಕಡಬ) newskadaba.com ಹಾಸನ, ಅ.24: ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಟ್ಯಾಂಕರ್ ಪಲ್ಟಿಯಾಗಿ 16 ಸಾವಿರ ಲೀಟರ್​ ಡೀಸೆಲ್ ಮಣ್ಣುಪಾಲಾಗಿರುವ ಘಟನೆ ನಡೆದಿದೆ.     ಚಾಲಕನ ನಿಯಂತ್ರಣ ತಪ್ಪಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಡೀಸೆಲ್​ ಟ್ಯಾಂಕರ್ ಹದಗೆಟ್ಟ ರಸ್ತೆಯಲ್ಲಿ ಮಗುಚಿ ಬಿದ್ದಿದೆ ಇನ್ನು ಅವಘಡದಿಂದ ಲಾರಿ ಟ್ಯಾಂಕರ್​ನ ಕ್ಯಾಪ್ ಓಪನ್ ಆಗಿ ಡೀಸೆಲ್ ರಸ್ತೆಗೆ ಸುರಿದಿದೆ. ಹಾಗಾಗಿ, ವಾಹನದತ್ತ ಜನರು ಹತ್ತಿರ ಹೋಗದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ವಹಿಸಿದ್ದಾರೆ.

ಹಾಸನ: ಚಾಲಕನ ನಿಯಂತ್ರಣ ತಪ್ಪಿ ಡೀಸೆಲ್ ಟ್ಯಾಂಕರ್ ಪಲ್ಟಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: 27ಲಕ್ಷ ರೂ. ಮೌಲ್ಯ ಅಕ್ರಮ ಚಿನ್ನಸಾಗಾಟ ಪತ್ತೆ ➤ ಆರೋಪಿ ವಶಕ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 24. ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ಪತ್ತೆಯಾಗಿದ್ದು, ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಚಿನ್ನದ ಸಹಿತ ಆರೋಪಿಯನ್ನು ಬಂಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.     ಬಂಧಿತ ಆರೋಪಿಯನ್ನು ಮಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ. ಈತನಿಂದ ಸುಮಾರು 27ಲಕ್ಷ ರೂ. ಮೌಲ್ಯದ 24 ಕ್ಯಾರೆಟ್ ಪರಿಶುದ್ಧ 531.390 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಈತ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ದುಬೈಯಿಂದ ಮಂಗಳೂರಿಗೆ ಆಗಮಿಸಿದ್ದು, ಈ

ಮಂಗಳೂರು: 27ಲಕ್ಷ ರೂ. ಮೌಲ್ಯ ಅಕ್ರಮ ಚಿನ್ನಸಾಗಾಟ ಪತ್ತೆ ➤ ಆರೋಪಿ ವಶಕ್ಕೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕರಾವಳಿಯಲ್ಲಿ ಮತ್ತೆ ಮುಂದುವರಿದ ಸರಣಿ ಹತ್ಯೆ ➤ ಬಂಟ್ವಾಳದಲ್ಲಿ ಮತ್ತೋರ್ವ ರೌಡಿ ಶೀಟರ್ ನ ಬರ್ಬರ ಹತ್ಯೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ. 23. ಕರಾವಳಿಯಲ್ಲಿ ರೌಡಿ ಶೀಟರ್ ಗಳ ಹತ್ಯೆಯ ಸರಣಿ ಮುಂದುವರಿದಿದ್ದು, ಇಂದು ಕೂಡಾ ಮೆಲ್ಕಾರ್ ಬಳಿಯ ಗುಡ್ಡೆಯಂಗಡಿ ಎಂಬಲ್ಲಿ ಯುವಕನೊಬ್ಬನನ್ನು ಹತ್ಯೆಗೈಯಲಾಗಿದೆ. ಮೃತ ಯುವಕನನ್ನು ಕಲ್ಲಡ್ಕ ನಿವಾಸಿ ರೌಡಿ ಶೀಟರ್ ಚೆನ್ನಾ ಫಾರೂಕ್ ಅಲಿಯಾಸ್ ಉಮ್ಮರ್ ಫಾರೂಕ್ (35) ಎಂದು ಗುರುತಿಸಲಾಗಿದೆ. ಈತ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈತನ ಮೇಲೆ ಮಾರಕಾಯುಧಗಳಿಂದ ದಾಳಿ ಮಾಡಿರುವ ತಂಡವೊಂದು ಕಡಿದು ಕೊಲೆಗೈದು ಪರಾರಿಯಾಗಿದೆ. ಈತ ಬೈಕ್ ನಲ್ಲಿ ತೆರಳುತಿದ್ದ ವೇಳೆ ಕಾರಿನಲ್ಲಿ

ಕರಾವಳಿಯಲ್ಲಿ ಮತ್ತೆ ಮುಂದುವರಿದ ಸರಣಿ ಹತ್ಯೆ ➤ ಬಂಟ್ವಾಳದಲ್ಲಿ ಮತ್ತೋರ್ವ ರೌಡಿ ಶೀಟರ್ ನ ಬರ್ಬರ ಹತ್ಯೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಾಸರಗೋಡು: 2 ದಿನಗಳ ಹಿಂದೆ ಕಳವಾಗಿದ್ದ ಶ್ರೀಗಂಧದ ಕೊರಡುಗಳು ಮತ್ತೆ ಅದೇ ಸ್ಥಳದಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಅ. 22. ಮಸೀದಿ ಆವರಣದಲ್ಲಿದ್ದ ಶ್ರೀಗಂಧ ಮರದ ಕೊರಡುಗಳನ್ನು ಯಾರೋ ಕಳವುಗೈದಿದ್ದು, ಇದೀಗ ಎರಡು ದಿನಗಳ ಬಳಿಕ  ಅದೇ ಸ್ಥಳದಲ್ಲಿ ಪತ್ತೆಯಾದ ಘಟನೆ ಮುಳಿಯಾರಿನ ಬಾವಿಕ್ಕರೆ ಎಂಬಲ್ಲಿ ನಡೆದಿದೆ. ಶ್ರೀಗಂಧದ ಕೊರಡನ್ನು ಕಳವುಗೈದ ಬಗ್ಗೆ ಅರಣ್ಯಾಧಿಕಾರಿಗಳು ತನಿಖೆ ನಡೆಸುತ್ತಿದ್ದಂತೆಯೇ ಕಳ್ಳರು ಕೊರಡುಗಳನ್ನು ಮಸೀದಿ ಆವರಣದಲ್ಲಿ ತಂದಿಟ್ಟು ಪರಾರಿಯಾಗಿದ್ದಾರೆ. ಬಾವಿಕ್ಕರೆ ಜುಮಾ ಮಸೀದಿ ಆವರಣದಲ್ಲಿದ್ದ ಸುಮಾರು 16 ವರ್ಷ ಹಳೆಯ ಮರವನ್ನು ಎರಡು ದಿನಗಳ ಹಿಂದೆ ಕಳವು ಮಾಡಲಾಗಿತ್ತು. ಆದಿತ್ಯವಾರದಂದು ಮಸೀದಿಯ ಪರಿಸರವನ್ನು

ಕಾಸರಗೋಡು: 2 ದಿನಗಳ ಹಿಂದೆ ಕಳವಾಗಿದ್ದ ಶ್ರೀಗಂಧದ ಕೊರಡುಗಳು ಮತ್ತೆ ಅದೇ ಸ್ಥಳದಲ್ಲಿ ಪತ್ತೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸುಳ್ಯ: ಕಳ್ಳ ನೋಟು ಪತ್ತೆ

(ನ್ಯೂಸ್ ಕಡಬ) newskadaba.com ಸುಳ್ಯ, ಅ. 22. ಹೂವು ಮಾರುವ ವ್ಯಕ್ತಿಯೋರ್ವರಿಗೆ ಯಾರೊ ಒಬ್ಬರು ಕಳ್ಳ ನೋಟು ನೀಡಿರುವ ಬಗ್ಗೆ ಸುಳ್ಯದಲ್ಲಿ ನಡೆದಿದೆ. ಅರಕಲಗೂಡಿನ ಮೂರ್ತಿ ಎಂಬವರು ಸುಳ್ಯ ಪೇಟೆಯಲ್ಲಿ ಹೂವಿನ ವ್ಯಾಪಾರ ನಡೆಸುತ್ತಿದ್ದು, ಇವರಿಗೆ ಯಾರೋ ಅಪರಿಚಿತರು  ಹೂವನ್ನು ಖರೀದಿಸಿ, 200 ರೂ. ವನ್ನು ಕೊಟ್ಟು ಉಳಿದ 20 ರೂ.ವನ್ನು  ತೆಗೆದುಕೊಂಡು ಹೋಗಿದ್ದರು. ಇದು ಮುಂಜಾನೆಯ ವೇಳೆಗೆ ಆಗಿದ್ದರಿಂದ ಇನ್ನೂರರ ನೋಟನ್ನು ಸರಿಯಾಗಿ ಗಮನಿಸಲು ಸಾಧ್ಯವಾಗಲಿಲ್ಲ. ಸ್ವಲ್ಪ ಹೊತ್ತು ಕಳೆದ ನಂತರ ಹಣವನ್ನು ಪರಿಶೀಲಿಸಿದಾಗ ಅನುಮಾನ

ಸುಳ್ಯ: ಕಳ್ಳ ನೋಟು ಪತ್ತೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮರ್ಧಾಳ: ರಬ್ಬರ್ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಅ.22. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ರಬ್ಬರ್ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರದಂದು ಮರ್ಧಾಳದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಸುಲೈಮಾನ್ ಎಂಬವರ ಪುತ್ರ ಅಂದುಕುಂಞಿ(38) ಎಂದು ಗುರುತಿಸಲಾಗಿದೆ. ಕಳೆದ ಕೆಲ ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಇವರು ಬುಧವಾರ ತಡರಾತ್ರಿ ತನ್ನ ಮನೆಯ ಪಕ್ಕದ ರಬ್ಬರ್ ತೋಟದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮರ್ಧಾಳ: ರಬ್ಬರ್ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top