ಬ್ರೇಕಿಂಗ್ ನ್ಯೂಸ್

ಕಾಸರಗೋಡು: ಡಿವೈಎಫ್.ಐ ಕಾರ್ಯಕರ್ತನ ಹತ್ಯೆ ಪ್ರಕರಣ ➤ ಘಟನಾ ಸ್ಥಳಕ್ಕೆ ಆರೋಪಿಯನ್ನು ಕರೆ ತಂದು ಮಾಹಿತಿ ಕಲೆ ಹಾಕಿದ ತನಿಖಾ ತಂಡ

(ನ್ಯೂಸ್ ಕಡಬ) newskadaba.com ಕಾಸರಗೋಡು, ಜ. 02. ಡಿವೈಎಫ್‌.ಐ ಕಾರ್ಯಕರ್ತ ಕಲ್ಲೂರಾವಿ ಅಬ್ದುಲ್‌‌ ರಹಮಾನ್‌ (30)‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಕ್ರೈಂ ಬ್ರಾಂಚ್‌ ಕಸ್ಟಡಿಯಲ್ಲಿದ್ದ ಪ್ರಮುಖ ಆರೋಪಿ ಇರ್ಷಾದ್‌‌‌ನನ್ನು ಕೃತ್ಯ ನಡೆಸಿದ ಸ್ಥಳಕ್ಕೆ ಕರೆದು ಮಾಹಿತಿ ಕಲೆ ಹಾಕಿದ್ದು, ಕೃತ್ಯಕ್ಕೆ ಬಳಸಿದ್ದ ಮಾರಕಾಯುಧಗಳನ್ನು ವಶಕ್ಕೆ ಪಡೆಯಲಾಗಿದೆ. ಡಿ.23ರಂದು ಈ ಹತ್ಯೆ ನಡೆದಿದ್ದು, ಕಾಞಾಂಗಾಡ್ ಕಲ್ಲೂರಾವಿಯಲ್ಲಿ ತಂಡವೊಂದು ಅಬ್ದುಲ್‌‌‌ ರಹಮಾನ್‌‌ ಅವರನ್ನು ಇರಿದು ಹತ್ಯೆಗೈದಿತ್ತು. ಘಟನೆಗೆ ಸಂಬಂಧಿಸಿದಂತೆ ಇರ್ಷಾದ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

ಕಾಸರಗೋಡು: ಡಿವೈಎಫ್.ಐ ಕಾರ್ಯಕರ್ತನ ಹತ್ಯೆ ಪ್ರಕರಣ ➤ ಘಟನಾ ಸ್ಥಳಕ್ಕೆ ಆರೋಪಿಯನ್ನು ಕರೆ ತಂದು ಮಾಹಿತಿ ಕಲೆ ಹಾಕಿದ ತನಿಖಾ ತಂಡ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೃಷಿ ಕಾಯ್ದೆ ವಿರೋಧಿಸಿ ಬಿಜೆಪಿ ಮುಖಂಡನ ಮನೆ ಮುಂದೆ ಸೆಗಣಿ ಸುರಿದು ಪ್ರತಿಭಟನೆ ಮಾಡಿದ ರೈತರು

(ನ್ಯೂಸ್ ಕಡಬ) newskadaba.com ಚಂಡೀಗಢ, ಜ. 02. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಗುಂಪೊಂದು ಪಂಜಾಬ್‌ ನ ಹೊಶಿಯಾರ್‌ ಪುರದಲ್ಲಿರುವ ಬಿಜೆಪಿ ಮುಖಂಡನ ಮನೆ ಮುಂದೆ ಸೆಗಣಿ ತಂದು ಸುರಿದಿದ್ದಾರೆ ಎಂದು ಆಪಾದಿಸಲಾಗಿದೆ.   ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅಮರೀಂದರ್ ಸಿಂಗ್, “ಪ್ರತಿಭಟನಾ ಹೆಸರಿನಲ್ಲಿ ಜನರಿಗೆ ಕಿರುಕುಳ ನೀಡಲು ಅವಕಾಶವಿಲ್ಲ” ಎಂದು ಹೇಳಿದ್ದಾರೆ.

ಕೃಷಿ ಕಾಯ್ದೆ ವಿರೋಧಿಸಿ ಬಿಜೆಪಿ ಮುಖಂಡನ ಮನೆ ಮುಂದೆ ಸೆಗಣಿ ಸುರಿದು ಪ್ರತಿಭಟನೆ ಮಾಡಿದ ರೈತರು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಉಡುಪಿ: ಸ್ಕೂಟರ್- ಲಾರಿ ನಡುವೆ ಡಿಕ್ಕಿ ➤ ಸ್ಕೂಟರ್ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಉಡುಪಿ, ಜ. 02. ಸ್ಕೂಟರ್‌‌ ಹಾಗೂ ಮೀನಿನ ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸ್ಕೂಟರ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಲ್ಪೆಯ ತೊಟ್ಟಂ ಎಂಬಲ್ಲಿ ನಡೆದಿದೆ.   ಮೃತಪಟ್ಟವರನ್ನು ಹೂಡೆ ನಿವಾಸಿ ಐಸಾಕ್‌‌ ಎಂದು ಗುರುತಿಸಲಾಗಿದೆ. ಹೂಡೆ ಕಡೆಯಿಂದ ಮಲ್ಪೆ ಕಡೆಗೆ ಬರುತ್ತಿದ್ದ ಸ್ಕೂಟರಿಗೆ ಎದುರಿನಿಂದ ಬಂದ ಮೀನಿನ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಪರಿಣಾಮ ಗಂಭೀರವಾಗಿ ಗಾಯಗೊಂಡ ಸ್ಕೂಟರ್‌ ಸವಾರ ಐಸಾಕ್‌ ಎಂಬವರನ್ನು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮಾರ್ಗದ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಉಡುಪಿ: ಸ್ಕೂಟರ್- ಲಾರಿ ನಡುವೆ ಡಿಕ್ಕಿ ➤ ಸ್ಕೂಟರ್ ಸವಾರ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಶಾಲೆಗೆಂದು ತೆರಳಿದ ಬಾಲಕಿ ದಾರುಣ ಅಂತ್ಯ➤ ಶಾಲಾರಂಭದ ದಿನವೇ ನಡೆಯಿತು ಮನಕಲಕುವ ಘಟನೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜ.01. ಶಾಲೆಗೆಂದು ಮನೆಯಿಂದ ತೆರಳಿದ ಬಾಲಕಿಯೋರ್ವಳು ಮನೆ ಸಮೀಪದ ಗೇರು ತೋಪಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಶಾಲೆ ಆರಂಭದ ಮೊದಲ ದಿನವೇ ಪುತ್ತೂರಿನಲ್ಲಿ ನಡೆದಿದೆ. ಆತ್ಮಹತ್ಯೆಗೈದ ಬಾಲಕಿಯನ್ನು ಪುತ್ತೂರಿನ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ 9ನೇ ತರಗತಿಯ ವಿದ್ಯಾರ್ಥಿನಿ, ಮಾಡಾವು ನಿವಾಸಿ ರಾಮ ಎಂಬವರ ಪುತ್ರಿ ದಿವ್ಯಾ ಎಂದು ಗುರುತಿಸಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಶಾಲೆಯು ಶುಕ್ರವಾರದಂದು ರಾಜ್ಯಾದ್ಯಂತ ಆರಂಭಗೊಂಡಿದ್ದು, ದಿವ್ಯಾ ಶಾಲೆಗೆ

ಶಾಲೆಗೆಂದು ತೆರಳಿದ ಬಾಲಕಿ ದಾರುಣ ಅಂತ್ಯ➤ ಶಾಲಾರಂಭದ ದಿನವೇ ನಡೆಯಿತು ಮನಕಲಕುವ ಘಟನೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುಳ್ಯ: ಟೆರೇಸ್ ಮೇಲಿಂದ ಬಿದ್ದು ವ್ಯಕ್ತಿ ಗಂಭೀರ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 01. ಮನೆಯ ಟೆರೇಸ್ ಮೇಲಿಂದ ಬಿದ್ದು ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡ ಘಟನೆ ಸುಳ್ಯದಲ್ಲಿ ನಡೆದಿದೆ. ಗಾಯಗೊಂಡವರನ್ನು ಸುಳ್ಯದ ಉದ್ಯಮಿ ಸಂತೋಷ್ ಮಡ್ತಿಲ ಎಂದು ಗುರುತಿಸಲಾಗಿದೆ. ದೇವಚಳ್ಳ ಗ್ರಾಮದ ದೇವ ಎಂಬಲ್ಲಿ ಮನೆ ವೀಕ್ಷಣೆಗೆಂದು ತೆರಳಿದ್ದ ವೇಳೆ ಟೆರೇಸ್ ಮೇಲಿಂದ ಬಿದ್ದಿದ್ದು, ಕೂಡಲೇ ಅವರನ್ನು್ು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆ ಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

ಸುಳ್ಯ: ಟೆರೇಸ್ ಮೇಲಿಂದ ಬಿದ್ದು ವ್ಯಕ್ತಿ ಗಂಭೀರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಫೇಸ್ ಕ್ರೀಂ ಸೇವಿಸಿ ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಮೈಸೂರು, ಜ. 01. ಮುಖಕ್ಕೆ ಹಚ್ಚುವ ಫೇಸ್ ಕ್ರೀಂ ತಿಂದು ಮಗುವೊಂದು ಮೃತಪಟ್ಟ ಘಟನೆ ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಬೆಳಗನಹಳ್ಳಿಯಲ್ಲಿ ನಡೆದಿದೆ. ಮಹೇಶ್ ಹಾಗೂ ಕನ್ಯಾ ದಂಪತಿಯ ಪುತ್ರ ಮನ್ವಿಷ್ ಮೃತಪಟ್ಟ ಮಗು. ಈತ ಸಂಜೆ ವೇಳೆ ಮನೆಯಲ್ಲಿ ಆಟವಾಡುತ್ತಿದ್ದಾಗ ಮುಖಕ್ಕೆ ಹಚ್ಚುವ ಕ್ರೀಂ ತಿಂದಿದ್ದು, ಪೋಷಕರು ಇದನ್ನು ಗಮನಿಸಿರಲಿಲ್ಲ. ರಾತ್ರಿ ಹತ್ತು ಗಂಟೆಯ ಸಮಯ ವಾಂತಿ ಮಾಡಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮಗು ಮೃತಪಟ್ಟಿದೆ.

ಫೇಸ್ ಕ್ರೀಂ ಸೇವಿಸಿ ಮಗು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಡೆತ್ ನೋಟ್ ಬರೆದಿಟ್ಟು ಉಪನ್ಯಾಸಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಹೆಬ್ರಿ, ಜ. 01. ಇಲ್ಲಿನ ಬಡಗುಡ್ಡೆ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಖಾಸಗಿ ಕಾಲೇಜಿನ ಉಪನ್ಯಾಸಕರೋರ್ವರು ಡೆತ್ ನೋಟ್ ಬರೆದಿಟ್ಟು ಮನೆಯ ಕೊಠಡಿಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಹೆಬ್ರಿಯಲ್ಲಿ ನಡೆದಿದೆ.   ಐದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಇವರು ಪತ್ನಿಯೊಂದಿಗೆ ಹೆಬ್ರಿಯ ಬಾಡಿಗೆ ಮನೆಯೊಂದರಲ್ಲಿ ಅನ್ಯೋನ್ಯ ವಾಗಿ ವಾಸಿಸುತ್ತಿದ್ದರು. ಇವರ ಪತ್ನಿಯು ಹೆಬ್ರಿಯ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ದುಡಿಯುತ್ತಿದ್ದು, ಇವರು ಮೂಡಬಿದಿರೆಯಲ್ಲಿ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ

ಡೆತ್ ನೋಟ್ ಬರೆದಿಟ್ಟು ಉಪನ್ಯಾಸಕ ಆತ್ಮಹತ್ಯೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಇಂದಿನಿಂದ ಶಾಲಾ- ಕಾಲೇಜು ಪುನರಾರಂಭ ➤ ವಿದ್ಯಾರ್ಥಿಗಳಿಗೆ ಹಳೆಯ ಬಸ್ ಪಾಸ್ ಮೂಲಕ ಉಚಿತವಾಗಿ ಪ್ರಯಾಣಿಸಲು ಅವಕಾಶ…!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 01. ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆಯು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಇಂದಿನಿಂದ ಕಳೆದ ವರ್ಷದ 2019-20ರಲ್ಲಿ ವಿತರಿಸಲಾಗದ ಬಸ್ ಪಾಸ್ ಮೂಲಕ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ. ಹೀಗಾಗಿ ವಿದ್ಯಾರ್ಥಿಗಳು ಹಳೆಯ ಬಸ್ ಪಾಸ್, ಶಾಲೆಗೆ ದಾಖಲಾಗಿರುವ ಶುಲ್ಕ ಪಾವತಿ ರಸೀದಿ ಹಾಗೂ ಗುರುತಿನ ಚೀಟಿಯನ್ನು ತೋರಿಸಿ ಪ್ರಯಾಣ ಮಾಡಬಹುದಾಗಿದೆ. ಇಂದಿನಿಂದ ಸರಕಾರದ ಮುಂದಿನ ಆದೇಶದವರೆಗೆ ಹಳೆಯ ಪಾಸ್ ಮೂಲಕ ಸಂಚರಿಸಬಹುದು.

ಇಂದಿನಿಂದ ಶಾಲಾ- ಕಾಲೇಜು ಪುನರಾರಂಭ ➤ ವಿದ್ಯಾರ್ಥಿಗಳಿಗೆ ಹಳೆಯ ಬಸ್ ಪಾಸ್ ಮೂಲಕ ಉಚಿತವಾಗಿ ಪ್ರಯಾಣಿಸಲು ಅವಕಾಶ…! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ದುಬೈನಿಂದ ಅಕ್ರಮ ಚಿನ್ನ ಸಾಗಾಟ ➤ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 01. ಗುಪ್ತಾಂಗದಲ್ಲಿ ಅಡಗಿಸಿಟ್ಟು ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕಸ್ಟಮ್ಸ್ ಅಧಿಕಾರಿಗಳು 1.26 ಕೆಜಿ ಚಿನ್ನ ಸಹಿತ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಆರೋಪಿಗಳನ್ನು ಮಹಮ್ಮದ್ ಜಹೀರ್ ಹಾಗೂ ವಾಸಿಂ ಮರ್ಜನ್ ಎಂದು ಗುರುತಿಸಲಾಗಿದೆ. ಇವರು ಡಿ. 30ರಂದು ಮಂಗಳೂರಿಗೆ ಆಗಮಿಸಿದ್ದು, ಈ ವೇಳೆ ತಪಾಸಣೆ ನಡೆಸಿದಾಗ ಅಕ್ರಮ ಚಿನ್ನ ಸಾಗಾಟ ಪತ್ತೆಯಾಗಿದೆ.

ಮಂಗಳೂರು: ದುಬೈನಿಂದ ಅಕ್ರಮ ಚಿನ್ನ ಸಾಗಾಟ ➤ ಇಬ್ಬರ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಉಡುಪಿ: ಅಕ್ರಮ ಮರಳು ಸಾಗಾಟ ➤ ಎರಡು ಮಿನಿ ಟಿಪ್ಪರ್ ಸೇರಿದಂತೆ ಐದು ಟಿಪ್ಪರ್ ವಶಕ್ಕೆ

(ನ್ಯೂಸ್ ಕಡಬ) newskadaba.com ಉಡುಪಿ, ಜ. 01. ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಮಿನಿ ಟಿಪ್ಪರ್ ಸೇರಿದಂತೆ ಐದು ಟಿಪ್ಪರ್ ಗಳನ್ನು ವಶಪಡಿಸಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ. ಅಕ್ರಮ ಮರಳು ಸಾಗಾಟದ ಕುರಿತು ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಗಣಿ ಅಧಿಕಾರಿಗಳು ಮಣಿಪಾಲ ಠಾಣಾ ವ್ಯಾಪ್ತಿಯ ಪೆರಂಪಳ್ಳಿ ಗ್ರಾಮದ ಜಂಕ್ಷನ್ ನಲ್ಲಿ ಅಕ್ರಮ ಮರಳು ಸಾಗಿಸುತ್ತಿದ್ದ ಎರಡು ಮಿನಿ ಟಿಪ್ಪರ್ ಹಾಗೂ ತಲಾ ಆರು ಟನ್ ಮರಳನ್ನು ವಶಪಡಿಸಿದ್ದಾರೆ. ಮತ್ತೊಂದೆಡೆ ಪುತ್ತೂರು ರಾ.ಹೆದ್ದಾರಿಯ ಬಳಿ ಮೂರು

ಉಡುಪಿ: ಅಕ್ರಮ ಮರಳು ಸಾಗಾಟ ➤ ಎರಡು ಮಿನಿ ಟಿಪ್ಪರ್ ಸೇರಿದಂತೆ ಐದು ಟಿಪ್ಪರ್ ವಶಕ್ಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top