ಉಡುಪಿ: ಅಕ್ರಮ ಮರಳು ಸಾಗಾಟ ➤ ಎರಡು ಮಿನಿ ಟಿಪ್ಪರ್ ಸೇರಿದಂತೆ ಐದು ಟಿಪ್ಪರ್ ವಶಕ್ಕೆ

(ನ್ಯೂಸ್ ಕಡಬ) newskadaba.com ಉಡುಪಿ, ಜ. 01. ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಮಿನಿ ಟಿಪ್ಪರ್ ಸೇರಿದಂತೆ ಐದು ಟಿಪ್ಪರ್ ಗಳನ್ನು ವಶಪಡಿಸಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.

ಅಕ್ರಮ ಮರಳು ಸಾಗಾಟದ ಕುರಿತು ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಗಣಿ ಅಧಿಕಾರಿಗಳು ಮಣಿಪಾಲ ಠಾಣಾ ವ್ಯಾಪ್ತಿಯ ಪೆರಂಪಳ್ಳಿ ಗ್ರಾಮದ ಜಂಕ್ಷನ್ ನಲ್ಲಿ ಅಕ್ರಮ ಮರಳು ಸಾಗಿಸುತ್ತಿದ್ದ ಎರಡು ಮಿನಿ ಟಿಪ್ಪರ್ ಹಾಗೂ ತಲಾ ಆರು ಟನ್ ಮರಳನ್ನು ವಶಪಡಿಸಿದ್ದಾರೆ. ಮತ್ತೊಂದೆಡೆ ಪುತ್ತೂರು ರಾ.ಹೆದ್ದಾರಿಯ ಬಳಿ ಮೂರು ಟ್ರಕ್ ಹಾಗೂ ತಲಾ ಹತ್ತು ಟನ್ ಮರಳನ್ನ ವಶಪಡಿಸಲಾಗಿದೆ.

Scroll to Top