ಬ್ರೇಕಿಂಗ್ ನ್ಯೂಸ್

ಕಾಮಗಾರಿ ವೀಕ್ಷಿಸುತ್ತಿದ್ದ ಸಂದರ್ಭ ಆಕಸ್ಮಾತ್ ಗುಡ್ಡ ಕುಸಿತ ➤ ಕೂದಲೆಳೆಯ ಅಂತರದಿಂದ ಪಾರಾದ ಸಚಿವ ಜಗದೀಶ್ ಶೆಟ್ಟರ್…!

(ನ್ಯೂಸ್ ಕಡಬ) newskadaba.com ಜ. 02. ರೈಲ್ವೇ ಕಾಮಗಾರಿ ವೀಕ್ಷಣೆಯ ಸಂದರ್ಭ ದಿಢೀರ್ ಮಣ್ಣು ಕುಸಿದು ಸಚಿವ ಜಗದೀಶ್ ಶೆಟ್ಟರ್ ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ದೇಶಪಾಂಡೆ ನಗರದಲ್ಲಿ ನಡೆದಿದೆ. ಹುಬ್ಬಳ್ಳಿಯ ಭವಾನಿನಗರ ಹಾಗೂ ದೇಶಪಾಂಡೆ ನಗರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಕೆಳಸೇತುವೆ ನಿರ್ಮಾಣದ ಕಾಮಗಾರಿಯು ಅಭಿವೃದ್ಧಿ ಪರಿಶೀಲನೆಗೆಂದು ಜಗದೀಶ್ ಶೆಟ್ಟರ್ ಮತ್ತು ಮತ್ತು ಅಧಿಕಾರಿಗಳು ಅಲ್ಲಿಗೆ ತೆರಳಿದ್ದ ಸಮಯದಲ್ಲಿ ಕೆಳಸೇತುವೆ ಪಕ್ಕದಲ್ಲಿ ಭಾರಿ ಪ್ರಮಾಣದ ಮಣ್ಣಿನ ದಿಬ್ಬ ಕುಸಿದಿದ್ದು, ಕೂದಲೆಳೆ ಅಂತರದಲ್ಲಿ ಅಧಿಕಾರಿಗಳು […]

ಕಾಮಗಾರಿ ವೀಕ್ಷಿಸುತ್ತಿದ್ದ ಸಂದರ್ಭ ಆಕಸ್ಮಾತ್ ಗುಡ್ಡ ಕುಸಿತ ➤ ಕೂದಲೆಳೆಯ ಅಂತರದಿಂದ ಪಾರಾದ ಸಚಿವ ಜಗದೀಶ್ ಶೆಟ್ಟರ್…! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಿಟ್ಲ: ವಿಜಯೋತ್ಸವ ಮೆರವಣಿಗೆಯ ವೇಳೆ ರಿಕ್ಷಾ ಚಾಲಕನಿಗೆ ಹಲ್ಲೆ

(ನ್ಯೂಸ್ ಕಡಬ) newskadaba.com ವಿಟ್ಲ, ಜ. 02. ವಿಜಯೋತ್ಸವ ಮೆರವಣಿಗೆಯ ವೇಳೆ ರಿಕ್ಷಾವನ್ನು ಅಡ್ಡ ದಿಡ್ಡಿಯಾಗಿ ಚಲಾಯಿಸಿದ್ದಾರೆ ಎಂದು ಆರೋಪಿಸಿ ತಂಡವೊಂದು ಆಟೋ ಚಾಲಕನಿಗೆ ಹಲ್ಲೆ ನಡೆಸಿದ ಘಟನೆ ಕನ್ಯಾನ ಸಿಂಡಿಕೇಟ್ ಬ್ಯಾಂಕ್ ಮುಂಭಾಗದಲ್ಲಿ ನಡೆದಿದೆ. ಘಟನೆಯಲ್ಲಿ ಸಾದಿಕ್ ಎಂಬವರಿಗೆ ಹಲ್ಲೆಯಾಗಿದ್ದು, ತುಂಬೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿಗಳಾದ ರಿಕ್ಷಾ ಉಮ್ಮರ್‌, ಭಾತಿಷ್‌, ಹಾರಿಸ್‌ ಕುಕ್ಕಾಜೆ, ಮಜೀದ್‌, ಕೆ ಪಿ ಅಬ್ದುಲ್‌ ರಹಿಮಾನ್‌, ಸಾಬಿತ್‌, ಇಸ್ಮಾಯಿಲ್ ಕುಕ್ಕಾಜೆ, ಆಸೀಫ್‌, ವಾಜಿಪಾಯಿ ನಾಸೀರ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಟ್ಲ: ವಿಜಯೋತ್ಸವ ಮೆರವಣಿಗೆಯ ವೇಳೆ ರಿಕ್ಷಾ ಚಾಲಕನಿಗೆ ಹಲ್ಲೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಉಜಿರೆ: ಸ್ವಿಫ್ಟ್ ಕಾರು ಹಾಗೂ ಸ್ಕೂಟಿ ನಡುವೆ ಢಿಕ್ಕಿ

(ನ್ಯೂಸ್ ಕಡಬ) newskadaba.com ಉಜಿರೆ, ಜ. 02. ಸ್ಕೂಟಿ ಹಾಗೂ ಸ್ವಿಫ್ಟ್ ಕಾರಿನ ನಡುವೆ ಅಪಘಾತ ಸಂಭವಿಸಿದ ಘಟನೆ ಉಜಿರೆಯ ಟಿ.ಬಿ.ಕ್ರಾಸ್ ಬಳಿ ನಡೆದಿದೆ. ಅಪಘತಾದಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಉಜಿರೆ: ಸ್ವಿಫ್ಟ್ ಕಾರು ಹಾಗೂ ಸ್ಕೂಟಿ ನಡುವೆ ಢಿಕ್ಕಿ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಹೃದಯಾಘಾತ..❗ ➤ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಕೋಲ್ಕತ್ತಾ, ಜ. 02. ಭಾರತೀಯ ಮಾಜಿ ಕ್ರಿಕೆಟಿಗ ಹಾಗೂ ಬಿಸಿಸಿಐ ಅಧ್ಯಕ್ಷರಾದ ಸೌರವ್ ಗಂಗೂಲಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರ ಕುರಿತು ಇನ್ನು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಹೃದಯಾಘಾತ..❗ ➤ ಆಸ್ಪತ್ರೆಗೆ ದಾಖಲು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಾವನನ್ನೇ ಕೊಂದ ಪಾಪಿ ಅಳಿಯ…! ➤ ಕಾರಣವೇನೆಂದು ಗೊತ್ತೇ…❓

(ನ್ಯೂಸ್ ಕಡಬ) newskadaba.com ಕಾರ್ಕಳ, ಜ. 02. ಅಳಿಯನೋರ್ವ ತನ್ನ ಮಾವನ ಎಡಕೆನ್ನೆ ಹಾಗೂ ಮರ್ಮಾಂಗಕ್ಕೆ ಕೊಟ್ಟ ಏಟಿಗೆ ಮಾವ ಮೃತಪಟ್ಟ ಘಟನೆ ಕಾರ್ಕಳ ಬಂಗ್ಲೆಗುಡ್ಡೆ ಪರಿಸರದಲ್ಲಿ ನಡೆದಿದೆ. ಮೃತರನ್ನು ಬಂಗ್ಲೆಗುಡ್ಡೆ ಹಂಚಿಕಟ್ಟೆ ನಿವಾಸಿ ಶೇಖ್‌ ಅಬೂಬಕ್ಕರ್‌ (57) ಎಂದು ಗುರುತಿಸಲಾಗಿದೆ. ಬಂಗ್ಲೆಗುಡ್ಡೆ ಹಂಚಿಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರ ಮಗಳ ಗಂಡ ತೌಸಿಫ್‌ ಡಿ. 31ರಂದು ಮಾವನೊಂದಿಗೆ ಜಗಳಕ್ಕಿಳಿದು ಎಡಕೆನ್ನೆಗೆ ಹೊಡೆದು, ಮರ್ಮಾಂಗಕ್ಕೆ ಬಲವಾಗಿ ತುಳಿದಿರುತ್ತಾನೆ. ಬಳಿಕ ಅವರನ್ನು ಚಿಕಿತ್ಸೆಗಾಗಿ ಕಾರ್ಕಳ ಖಾಸಗಿ ಆಸ್ಪತ್ರೆಗೆ ದಾಖಲಿಸಿ,

ಮಾವನನ್ನೇ ಕೊಂದ ಪಾಪಿ ಅಳಿಯ…! ➤ ಕಾರಣವೇನೆಂದು ಗೊತ್ತೇ…❓ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಎರ್ಮೆಟ್ಟಿ: ಬೆಂಕಿ ಬಿದ್ದು ಕೊಟ್ಟಿಗೆ ಸಂಪೂರ್ಣ ಭಸ್ಮ

(ನ್ಯೂಸ್ ಕಡಬ) newskadaba.com ಜ. 02. ಕೆಮ್ರಾಜೆ ಗ್ರಾಮದ ಎರ್ಮೆಟ್ಟಿ ಎಂಬಲ್ಲಿ ಮನೆಯೊಂದರ ಸಮೀಪದ ಕೊಟ್ಟಿಗೆಗೆ ಬೆಂಕಿ ಬಿದ್ದ ಪರಿಣಾಮ ಕೊಟ್ಟಿಗೆಯು ಸಂಪೂರ್ಣ ಹೊತ್ತಿ ಉರಿದ ಘಟನೆ ಭಗೀರಥಿ ಎಂಬವರ ಮನೆಯಲ್ಲಿ ನಡೆದಿದೆ. ನಿನ್ನೆ ರಾತ್ರಿ ಸುಮಾರು 2 ಗಂಟೆಯ ವೇಳೆಗೆ ಬೆಂಕಿ‌ ಹೊತ್ತಿಕೊಂಡಿದ್ದು ಮನೆಯವರ ಬೆಳಕಿಗೆ ಬಂದಿದೆ. ವಿಷಯ ತಿಳಿದ ಸ್ಥಳೀಯರು ನೆರವಿಗೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎರ್ಮೆಟ್ಟಿ: ಬೆಂಕಿ ಬಿದ್ದು ಕೊಟ್ಟಿಗೆ ಸಂಪೂರ್ಣ ಭಸ್ಮ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ನಕಲಿ ನೋಟಿನಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಬರಹ…! ➤ ದೇವಸ್ಥಾನದ ಹುಂಡಿಯಲ್ಲಿ ನೋಟಿನ ಜೊತೆಗೆ ಬಳಸಿದ ಕಾಂಡೋಮ್ ಹಾಕಿ ವಿಕೃತಿ ಮೆರೆದ ಪಾಪಿಗಳು

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 02. ಇಲ್ಲಿನ ಹಲವು ದೇವಸ್ಥಾನಗಳ ಹುಂಡಿಗಳಿಗೆ ಯಾರೊ ಕಿಡಿಗೇಡಿಗಳು ಬಳಸಿದ ಕಾಂಡೊಮ್ ಹಾಗೂ ನಕಲಿ ನೋಟುಗಳಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಬರಹಗಳನ್ನು ಬರೆದು ಹಾಕಿರುವ ಘಟನೆ ನಡೆದಿದೆ. ಕಾರಣಿಕ ದೈವಗಳ ದೇವಸ್ಥಾನಗಳಲ್ಲಿ ಈ ಕೃತ್ಯ ನಡೆದಿದ್ದು, ನಗರದ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಬುಗುಡ್ಡೆ ಬಬ್ಬುಸ್ವಾಮಿ ಕ್ಷೇತ್ರ, ಕೊಟ್ಟಾರ ಚೌಕಿಯ ಕಲ್ಲುರ್ಟಿ ದೈವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಈ ಕೃತ್ಯವೆಸಗಲಾಗಿದೆ. ಇದು ಧಾರ್ಮಿಕ ಆಚರಣೆ ಹಾಗೂ ನಂಬಿಕೆಗಳಿಗೆ ವಿರುದ್ದವಾಗಿದ್ದು

ಮಂಗಳೂರು: ನಕಲಿ ನೋಟಿನಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಬರಹ…! ➤ ದೇವಸ್ಥಾನದ ಹುಂಡಿಯಲ್ಲಿ ನೋಟಿನ ಜೊತೆಗೆ ಬಳಸಿದ ಕಾಂಡೋಮ್ ಹಾಕಿ ವಿಕೃತಿ ಮೆರೆದ ಪಾಪಿಗಳು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ: ಓಮ್ನಿ ಹಾಗೂ ರಿಕ್ಷಾ ನಡುವೆ ಢಿಕ್ಕಿ ➤ ಪ್ರಯಾಣಿಕರಿಗೆ ಗಾಯ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ. 02. ಓಮ್ನಿ ಕಾರು ಹಾಗೂ ಆಟೋ ರಿಕ್ಷಾ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ ಘಟನೆ ತಾಲೂಕಿನ ಅಳದಂಗಡಿ ಸಮೀಪದ ಕೆದ್ದು ತಿರುವು ರಸ್ತೆಯಲ್ಲಿ ನಡೆದಿದೆ. ಘಟನೆಯಲ್ಲಿ ಓಮ್ನಿ ಹಾಗೂ ಅಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.

ಬೆಳ್ತಂಗಡಿ: ಓಮ್ನಿ ಹಾಗೂ ರಿಕ್ಷಾ ನಡುವೆ ಢಿಕ್ಕಿ ➤ ಪ್ರಯಾಣಿಕರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬೈಕ್ ಶೋರೂಂ ನಲ್ಲಿ ಬೆಂಕಿ ಅವಘಡ…!

(ನ್ಯೂಸ್ ಕಡಬ) newskadaba.com ದೆಹಲಿ, ಜ. 01. ಹಾರ್ಲೆ ಡೇವಿಡ್ ಸನ್ ಬೈಕ್ ಶೋರೂಂ ಒಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಘಟನೆ ದೆಹಲಿಯ ಮೋತಿ ನಗರದಲ್ಲಿ ನಡೆದಿದೆ. ಮುಂಜಾನೆ ಹೊತ್ತಿಗೆ ಆಗ್ನಿ ಆವರಿಸಿದ್ದು, ಘಟನೆಯಲ್ಲಿ ಅಪಾರ ಹಾನಿಯುಂಟಾಗಿದೆ. 25 ಅಗ್ನಿ ಶಾಮಕ ವಾಹನಗಳ ಸತತ ಪರಿಶ್ರಮದಿಂದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ.

ಬೈಕ್ ಶೋರೂಂ ನಲ್ಲಿ ಬೆಂಕಿ ಅವಘಡ…! Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾಂಗ್ರೆಸ್ ನಾಯಕ ಬೂಟಾ ಸಿಂಗ್ ವಿಧಿವಶ

(ನ್ಯೂಸ್ ಕಡಬ) newskadaba.com ಪಂಜಾಬ್, ಜ. 02. ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಪಂಜಾಬ್ ಮೂಲದವರಾದ ಬೂಟಾ ಸಿಂಗ್ (86) ಇಂದು ನಿಧನರಾಗಿದ್ದಾರೆ. ಇವರು ಇಂದಿರಾ ಗಾಂಧಿಯವರ ಸಂಪುಟದಲ್ಲಿ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ್ದಲ್ಲದೇ, ಬಿಹಾರದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು. 2007ರಿಂದ 2010 ರವರೆಗೆ ಪರಿಶಿಷ್ಟ ವರ್ಗದ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾಗಿದ್ದರು.

ಕಾಂಗ್ರೆಸ್ ನಾಯಕ ಬೂಟಾ ಸಿಂಗ್ ವಿಧಿವಶ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top