ಬ್ರೇಕಿಂಗ್ ನ್ಯೂಸ್

ಮಲಯಾಳಂ ಖ್ಯಾತ ನಟಿಯ ನಕಲಿ ಸೆಕ್ಸ್ ವೀಡಿಯೋ ವೈರಲ್ ➤ ವೀಡಿಯೋ ಬಗ್ಗೆ ಠಾಣೆಯ ಮೆಟ್ಟಿಲೇರಿದ ನಟಿ ರಮ್ಯಾ ಸುರೇಶ್

(ನ್ಯೂಸ್ ಕಡಬ) newskadaba.com ತಿರುವನಂತಪುರಂ, ಜೂ.03. ಮಲಯಾಳಂನ ಖ್ಯಾತ ನಟಿ ರಮ್ಯಾ ಸುರೇಶ್ ಅವರ ನಕಲಿ ಸೆಕ್ಸ್ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಅವರು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. ಅಶ್ಲೀಲ ವೀಡಿಯೋವೊಂದಕ್ಕೆ ರಮ್ಯಾ ಸುರೇಶ್ ಮುಖವನ್ನು ಎಡಿಟ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದ್ದು, ವಿಡಿಯೋ ವೈರಲ್​ ಆಗಿರುವುದು ಗಮನಕ್ಕೆ ಬರುತ್ತಿದ್ದಂತೆ ಸಂತ್ರಸ್ತ ನಟಿಯು ಆಲಪ್ಪುಝ ಪೊಲೀಸ್​ ವರಿಷ್ಠಾಧಿಕಾರಿಗೆ ಹಾಗೂ ಸೈಬರ್​ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಮ್ಯಾ […]

ಮಲಯಾಳಂ ಖ್ಯಾತ ನಟಿಯ ನಕಲಿ ಸೆಕ್ಸ್ ವೀಡಿಯೋ ವೈರಲ್ ➤ ವೀಡಿಯೋ ಬಗ್ಗೆ ಠಾಣೆಯ ಮೆಟ್ಟಿಲೇರಿದ ನಟಿ ರಮ್ಯಾ ಸುರೇಶ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

BREAKING: ರಾಜ್ಯದಲ್ಲಿ ಮತ್ತೆ ಏಳು ದಿನಗಳ ಕಾಲ ಲಾಕ್‍ಡೌನ್ ಮುಂದುವರಿಕೆ ➤ ಜೂ.14 ರ ವರೆಗೆ ಲಾಕ್‍ಡೌನ್ ಘೋಷಿಸಿದ ಸಿಎಂ ಯಡಿಯೂರಪ್ಪ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.03. ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಮತ್ತೆ ಒಂದು ವಾರಗಳ ಕಾಲ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ. ಗುರುವಾರದಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಜೂ.7ರವರೆಗೆ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು. ಕೊರೋನ ಪ್ರಕರಣ ಇಳಿಮುಖವಾದರೂ ವೈರಾಣು ಹರಡುವ ಸರಪಳಿ ಮುಂದುವರಿದಿದ್ದು, ಮತ್ತೆ ಒಂದು ವಾರಗಳ ಕಾಲ ಲಾಕ್‍ಡೌನ್ ಮುಂದುವರಿಸಲಾಗಿದೆ. ಹೀಗಾಗಿ ಜೂ.14ರ ಬೆಳಗ್ಗೆ 6 ಗಂಟೆ ವರೆಗೆ ರಾಜ್ಯಾದ್ಯಂತ ಕಠಿಣ ಲಾಕ್‌ಡೌನ್ ಇರಲಿದೆ ಎಂದವರು

BREAKING: ರಾಜ್ಯದಲ್ಲಿ ಮತ್ತೆ ಏಳು ದಿನಗಳ ಕಾಲ ಲಾಕ್‍ಡೌನ್ ಮುಂದುವರಿಕೆ ➤ ಜೂ.14 ರ ವರೆಗೆ ಲಾಕ್‍ಡೌನ್ ಘೋಷಿಸಿದ ಸಿಎಂ ಯಡಿಯೂರಪ್ಪ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬದಲ್ಲಿಂದು ಕೊರೋನಾ ಸ್ಫೋಟ ➤ 98 ಮಂದಿಗೆ ಕೋವಿಡ್ ದೃಢ

(ನ್ಯೂಸ್ ಕಡಬ) newskadaba.com ಕಡಬ, ಜೂ.03. ಕೊರೋನಾ ಎರಡನೇ ಅಲೆಯ ತೀವ್ರತೆಯು ಗ್ರಾಮೀಣ ಭಾಗದಲ್ಲಿ ಅತಿಯಾಗಿದ್ದು, ಕಡಬ ತಾಲೂಕಿನಲ್ಲಿ ಇಂದು ಕೊರೋನಾ ಸ್ಫೋಟಗೊಂಡಿದೆ. ಆರೋಗ್ಯ ಇಲಾಖೆಯ ವರದಿಯಂತೆ ಇಂದು ಕಡಬ ತಾಲೂಕು ವ್ಯಾಪ್ತಿಯಲ್ಲಿ 98 ಮಂದಿಗೆ ಕೊರೋನಾ ದೃಢಪಟ್ಟಿದೆ. ಸಾರ್ವಜನಿಕರ ನಿರ್ಲಕ್ಷ್ಯವೇ ಕೊರೋನಾ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗಿದೆ.      

ಕಡಬದಲ್ಲಿಂದು ಕೊರೋನಾ ಸ್ಫೋಟ ➤ 98 ಮಂದಿಗೆ ಕೋವಿಡ್ ದೃಢ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ನೆಲ್ಯಾಡಿ: ವಿದ್ಯುತ್ ಆಘಾತಕ್ಕೆ ತಾಯಿ – ಮಗು ಮೃತ್ಯು ➤ ಪಂಪ್ ಆನ್ ಮಾಡಲು ತೆರಳಿದ ವೇಳೆ ದುರ್ಘಟನೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮೇ.30. ವಿದ್ಯುತ್ ಅಘಾತಕ್ಕೆ ಒಳಗಾಗಿ ತಾಯಿ ಹಾಗೂ ಮಗು ದಾರುಣವಾಗಿ ಮೃತಪಟ್ಟ ಘಟನೆ ಭಾನುವಾರದಂದು ನೆಲ್ಯಾಡಿ ಸಮೀಪದ ಪಟ್ರಮೆ ಎಂಬಲ್ಲಿ ನಡೆದಿದೆ. ಮೃತರನ್ನು ಪಟ್ರಮೆಯ ಕೋಡಂದೂರು ನಿವಾಸಿ ಹರೀಶ್ ಎಂಬವರ ಪತ್ನಿ ಗೀತಾ(30) ಹಾಗೂ ನಾಲ್ಕೂವರೆ ವರ್ಷದ ಪುತ್ರ ಭವೀಷ್ ಎಂದು ಗುರುತಿಸಲಾಗಿದೆ. ಭಾನುವಾರದಂದು ಗೀತಾರವರು ತನ್ನ ಮಗುವನ್ನು ಹಿಡಿದುಕೊಂಡು ಪಂಪ್ ಸ್ವಿಚ್ ಹಾಕಲು ತೆರಳಿದ್ದ ವೇಳೆ ವಿದ್ಯುತ್ ಅಘಾತಕ್ಕೆ ಒಳಗಾಗಿ ತಾಯಿ ಹಾಗೂ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.      

ನೆಲ್ಯಾಡಿ: ವಿದ್ಯುತ್ ಆಘಾತಕ್ಕೆ ತಾಯಿ – ಮಗು ಮೃತ್ಯು ➤ ಪಂಪ್ ಆನ್ ಮಾಡಲು ತೆರಳಿದ ವೇಳೆ ದುರ್ಘಟನೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಲೋನ್ ಕಂತುಗಳನ್ನು ಕಟ್ಟುವಂತೆ ನಿಮ್ಮನ್ನು ಪೀಡಿಸುತ್ತಿದ್ದಾರಾ..? ➤ ನಿಮಗೆ ಕರೆಮಾಡಿ ಒತ್ತಡ ಹೇರಿದರೆ ಇವರಿಗೆ ದೂರು ನೀಡಿ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.27. ಕೊರೋನಾ ನಿಯಂತ್ರಿಸುವ ಸಲುವಾಗಿ ರಾಜ್ಯಾದ್ಯಂತ ಲಾಕ್‍ಡೌನ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಹಲವಾರು ಮಂದಿ ಉದ್ಯೋಗವಿಲ್ಲದೆ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಹೀಗಿರುವಾಗ ಫೈನಾನ್ಸ್, ಮೈಕ್ರೋ ಫೈನಾನ್ಸ್, ಹಣಕಾಸು ಸಂಸ್ಥೆಗಳು ಸಾಲ ಮರುಪಾವತಿಗೆ ಒತ್ತಡ ಹೇರುವಂತಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಆದೇಶ ನೀಡಿದ್ದಾರೆ.   ಲಾಕ್‍ಡೌನ್ ಕಾರಣದಿಂದಾಗಿ ಜನಸಾಮಾನ್ಯರು ಕೆಲಸ ಇಲ್ಲದೆ ಮನೆಯಲ್ಲೇ ಉಳಿಯುವಂತಾಗಿದೆ. ಇಂತಹ ಸಂದರ್ಭದಲ್ಲಿ ಪಡೆದಿರುವ ಸಾಲದ ಕಂತು ಮರು ಪಾವತಿಸಲು ಕಷ್ಟ ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಾಲ

ಲೋನ್ ಕಂತುಗಳನ್ನು ಕಟ್ಟುವಂತೆ ನಿಮ್ಮನ್ನು ಪೀಡಿಸುತ್ತಿದ್ದಾರಾ..? ➤ ನಿಮಗೆ ಕರೆಮಾಡಿ ಒತ್ತಡ ಹೇರಿದರೆ ಇವರಿಗೆ ದೂರು ನೀಡಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..! ➤ ವೀಡಿಯೋದಲ್ಲಿ ಇರುವುದು ನಾನೇ ಎಂದು ಒಪ್ಪಿಕೊಂಡ ಮಾಜಿ ಸಚಿವ..?

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.24. ರಾಜ್ಯ ರಾಜಕಾರಣವನ್ನೇ ಬೆಚ್ಚಿ ಬೀಳಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸೆಕ್ಸ್ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರೆತಿದ್ದು, ಸಿಡಿಯಲ್ಲಿರುವುದು ನಾನೇ ಎಂದು ರಮೇಶ್ ಜಾರಕಿಹೊಳಿ ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿರುವುದಾಗಿ ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ. ವೀಡಿಯೋದಲ್ಲಿರುವ ಯುವತಿಗೆ ಯಾವುದೋ ಪ್ರಾಜೆಕ್ಟ್ ಗೆ ಸಂಬಂಧಿಸಿ ನನ್ನ ಪರಿಚಯವಾಗಿತ್ತು. ನಾವು ಕೆಲವು ಸಲ ಭೇಟಿಯಾಗಿದ್ದೆವು. ಆದರೆ ನಾನು ಆಕೆಯನ್ನು ಅತ್ಯಾಚಾರ ಮಾಡಿಲ್ಲ. ಬದಲಾಗಿ ಆಕೆಯ ಸಹಮತದೊಂದಿಗೆ ಲೈಂಗಿಕ ಸಂಪರ್ಕ ಮಾಡಿರುವುದಾಗಿದೆ.

ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..! ➤ ವೀಡಿಯೋದಲ್ಲಿ ಇರುವುದು ನಾನೇ ಎಂದು ಒಪ್ಪಿಕೊಂಡ ಮಾಜಿ ಸಚಿವ..? Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ: ವಿದ್ಯುತ್ ಶಾಕ್ ➤ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಮೇ.14. ವಿದ್ಯುತ್ ಶಾಕ್ ತಗುಲಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರದಂದು ಕಡಬದಲ್ಲಿ ನಡೆದಿದೆ. ಮೃತ ಯುವಕನನ್ನು ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ಬಡಬೆಟ್ಟು ನಿವಾಸಿ ತಂಗಚ್ಚನ್ ಎಂಬವರ ಪುತ್ರ ಲಿಜು (35) ಎಂದು ಗುರುತಿಸಲಾಗಿದೆ. ಮೃತರು ಸೋಮವಾರ ಬೆಳಿಗ್ಗೆ ತನ್ನ ಮನೆಯ ಮುಂಭಾಗದಲ್ಲಿ ಕಬ್ಬಿಣದ ಸಲಾಕೆಯಿಂದ ತೆಂಗಿನಕಾಯಿ ತೆಗೆಯುತ್ತಿದ್ದ ವೇಳೆ ಸಲಾಕೆಯು ವಿದ್ಯುತ್ ತಂತಿಗೆ ಸ್ಪರ್ಶಿಸಿದೆ. ವಿದ್ಯುತ್ ಹರಿದು ಲಿಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ‌. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ

ಕಡಬ: ವಿದ್ಯುತ್ ಶಾಕ್ ➤ ಯುವಕ ಮೃತ್ಯು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಚಿಕ್ಕಮಗಳೂರು: ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ ➤ ಆರೋಪಿ ಗೋಣಿಬೀಡು ಪೊಲೀಸ್ ಠಾಣಾ ಎಸ್ಐ ಅಮಾನತು

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.23. ದಲಿತ ಯುವಕನೋರ್ವನನ್ನು ಕಾನೂನು ಬಾಹಿರವಾಗಿ ಬಂಧಿಸಿ ಮೂತ್ರ ಕುಡಿಸಿರುವ ಅಮಾನವೀಯ ಘಟನೆಯು ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗೋಣಿಬೀಡು ಠಾಣಾ ಎಸ್ಐ ಅರ್ಜುನ್ ಹೊರಕೇರಿಯವರನ್ನು ಅಮಾನತು ಮಾಡಲಾಗಿದೆ. ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕರು ಆರೋಪಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ಶಿಸ್ತು ಕ್ರಮ ಬಾಕಿಯಿರಿಸಿ ಸೇವೆಯಿಂದ ಅಮಾನತುಗೊಳಿಸಿದ್ದು, ಪ್ರಕರಣದ ಕುರಿತು ವಿವರವಾದ ಪ್ರಾಥಮಿಕ ವಿಚಾರಣಾ ವರದಿಯನ್ನು ಸಲ್ಲಿಸುವಂತೆ ಪುತ್ತೂರು ಉಪವಿಭಾಗದ ಡಿವೈಎಸ್ಪಿ ಗಾನಕುಮಾರಿಯವರಿಗೆ

ಚಿಕ್ಕಮಗಳೂರು: ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ ➤ ಆರೋಪಿ ಗೋಣಿಬೀಡು ಪೊಲೀಸ್ ಠಾಣಾ ಎಸ್ಐ ಅಮಾನತು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ರಾಜ್ಯದಲ್ಲಿ ಮತ್ತೆ 14 ದಿನಗಳ ಕಾಲ ಲಾಕ್‍ಡೌನ್ ವಿಸ್ತರಣೆ..? ➤ ಜೂನ್ 07 ರ ವರೆಗೆ ಕರುನಾಡು ಸಂಪೂರ್ಣ ಲಾಕ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.01. ರಾಜ್ಯದಲ್ಲಿ ಜೂನ್ 07 ರ ವರೆಗೆ ಲಾಕ್‍ಡೌನ್ ವಿಸ್ತರಿಸಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ. ಇದುವರೆಗೆ ಮೇ 24 ರ ವರೆಗೆ ರಾಜ್ಯದಲ್ಲಿ ಲಾಕ್‍ಡೌನ್ ಘೋಷಣೆ ಮಾಡಲಾಗಿತ್ತು. ಇದೀಗ ಕೊರೋನಾ ಸೋಂಕು ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ತಜ್ಞರ ವರದಿಯನುಸಾರ ಮತ್ತೆ 14 ದಿನಗಳ ಕಾಲ ಲಾಕ್‍ಡೌನ್ ಮುಂದುವರಿಸಲಾಗಿದ್ದು, ಜೂನ್ 07 ರ ವರೆಗೆ ಕರುನಾಡು ಸಂಪೂರ್ಣ ಸ್ತಬ್ಧವಾಗಲಿದೆ ಎಂದು ಸಿಎಂ ಯಡಿಯೂರಪ್ಪ ಘೋಷಿಸಿರುವುದಾಗಿ ದೃಶ್ಯ ಮಾಧ್ಯಮವೊಂದು ವರದಿ ಮಾಡಿದೆ.  

ರಾಜ್ಯದಲ್ಲಿ ಮತ್ತೆ 14 ದಿನಗಳ ಕಾಲ ಲಾಕ್‍ಡೌನ್ ವಿಸ್ತರಣೆ..? ➤ ಜೂನ್ 07 ರ ವರೆಗೆ ಕರುನಾಡು ಸಂಪೂರ್ಣ ಲಾಕ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಭಾರತೀಯ ಯುದ್ಧ ವಿಮಾನ ಪತನ ➤ ಪೈಲಟ್ ಗಾಗಿ ಮುಂದುವರಿದ ಶೋಧ ಕಾರ್ಯ

(ನ್ಯೂಸ್ ಕಡಬ) newskadaba.com ನವದೆಹಲಿ, ಮೇ.21. ದಿನನಿತ್ಯದ ತರಬೇತಿ ಹಂತದಲ್ಲಿದ್ದ ಭಾರತೀಯ ವಾಯುಪಡೆಯ ಯುದ್ದ ವಿಮಾನವು ಪಂಜಾಬ್ ನ ಮೋಗ ಎಂಬಲ್ಲಿ ಗುರುವಾರ ತಡರಾತ್ರಿ ಪತನವಾಗಿದೆ. ಮಿಗ್ 21 ಯುದ್ಧ ವಿಮಾನವು ಪಂಜಾಬ್ ನ ಮೋಗಾ ಬಳಿಯ ಬಾಘಪುರಾನ ಸಮೀಪದ ಖರ್ದ್ ಗ್ರಾಮದಲ್ಲಿ ಪತನವಾಗಿದ್ದು, ವಿಮಾನದಲ್ಲಿದ್ದ ಪೈಲಟ್ ಬಗ್ಗೆ ಶೋಧ ಕಾರ್ಯ ಆರಂಭಿಸಲಾಗಿದೆ. ಪೈಲಟ್ ವಿಮಾನ ಪತನಕ್ಕೂ ಮೊದಲೇ ವಿಮಾನದಿಂದ ಹೊರಕ್ಕೆ ಹಾರಲ್ಪಟ್ಟ ಬಗ್ಗೆ ಶಂಕೆ ವ್ಯಕ್ತವಾಗಿದೆ.      

ಭಾರತೀಯ ಯುದ್ಧ ವಿಮಾನ ಪತನ ➤ ಪೈಲಟ್ ಗಾಗಿ ಮುಂದುವರಿದ ಶೋಧ ಕಾರ್ಯ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top