ನಾಳೆಯಿಂದ ಪದವಿ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ಪ್ರಾರಂಭ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 31. ನಾಳೆಯಿಂದ (ಸೆ.1) ರಾಜ್ಯದ ಪದವಿ ಕಾಲೇಜುಗಳಲ್ಲಿ ಆನ್ ಲೈನ್ ತರಗತಿಗಳು ಪ್ರಾರಂಭಗೊಳ್ಳಲಿದ್ದು, ಕೊರೋನಾ ಕಾಲದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರವು ಪದವಿ ಶೈಕ್ಷಣಿಕ ಚಟುವಟಿಕೆಗೆ ಚಾಲನೆ ನೀಡುತ್ತಿದೆ.

ಸೆ. 1 ರಿಂದ ದ್ವಿತೀಯ, ತೃತೀಯ ಪದವಿ ತರಗತಿಗಳಿಗೆ ಆನ್ ಲೈನ್ ತರಗತಿಗಳನ್ನು ಆರಂಭಿಸಲಾಗುತ್ತದೆ. ಆ.1 ರಿಂದ ಎಲ್ಲಾ ವಿದ್ಯಾರ್ಥಿಗಳು ಕಾಲೇಜುಗಳಿಗೆ ಬರಬೇಕಿದೆ. ಸದ್ಯ ಆನ್ ಲೈನ್ ಪಾಠದ ಜೊತೆಗೆ ಆಡಳಿತಾತ್ಮಕ ಚಟುವಟಿಕೆಗೆ ಸೂಚನೆ ನೀಡಿದ ಸುಪ್ರೀಂಕೋರ್ಟ್  ಇನ್ನು ಯುಜಿಸಿ ಮಾರ್ಗಸೂಚಿಯಂತೆ ಸೆ. 30 ರೊಳಗೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವಂತೆ ಈಗಾಗಲೇ ಆದೇಶನೀಡಿದೆ.

Scroll to Top