ಬ್ರೇಕಿಂಗ್ ನ್ಯೂಸ್

ಎಡಮಂಗಲ: ನಾಯಿ ಅಡ್ಡಬಂದ ಪರಿಣಾಮ ಮಗುಚಿಬಿದ್ದ ಸ್ಕೂಟರ್ ➤ ಸಹಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ನ. 17. ನಾಯಿಯೊಂದು ದ್ವಿಚಕ್ರ ವಾಹನಕ್ಕೆ ಅಡ್ಡಬಂದ ಪರಿಣಾಮ ಅಪಘಾತ ಸಂಭವಿಸಿ ಸಹಸವಾರ ಮೃತಪಟ್ಟ ಘಟನೆ ಎಡಮಂಗಲದಲ್ಲಿ ನಡೆದಿದೆ. ಮೃತಪಟ್ಟವರನ್ನು ಸುರೇಶ್ (53) ಎಂದು ಗುರುತಿಸಲಾಗಿದೆ. ಇವರು ಎಡಮಂಗಲದಿಂದ ಕೊಳಂಬೆ ಎಂಬಲ್ಲಿಗೆ ಟ್ಯಾಪಿಂಗ್ ಗೆ ಮಾಡಲು ತಮ್ಮ ಸಂತೋಷ್ ಎಂಬವರೊಂದಿಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ನಾಯಿ ಅಡ್ಡ ಬಂದ ಪರಿಣಾಮ ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿಬಿದ್ದಿದೆ. ಪರಿಣಾಮ ಸುರೇಶ್ ಎಂಬವರು ಗಂಭೀರ ಗಾಯಗೊಂಡಿದ್ದು, ತಕ್ಷಣವೇ ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಿ […]

ಎಡಮಂಗಲ: ನಾಯಿ ಅಡ್ಡಬಂದ ಪರಿಣಾಮ ಮಗುಚಿಬಿದ್ದ ಸ್ಕೂಟರ್ ➤ ಸಹಸವಾರ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ರಾಜ್ಯ ವಕ್ಫ್ ಮಂಡಳಿ ನೂತನ ಅಧ್ಯಕ್ಷರಾಗಿ ಮೌಲಾನಾ ಶಾಫಿ ಸ-ಅದಿ ಆಯ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 17. ಹಿರಿಯ ವಿದ್ವಾಂಸ, ಮೌಲಾನಾ ಶಾಫಿ ಸಅದಿ ಅವರು ನೂತನ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಡಾ.ಮುಹಮ್ಮದ್ ಯೂಸುಫ್ ರವರ ನಿಧನದಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬೆಂಗಳೂರು ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ವಕ್ಫ್ ಬೋರ್ಡ್ ಕಛೇರಿಯಲ್ಲಿ ಚುನಾವಣೆ ನಡೆದಿತ್ತು. ಇದರಲ್ಲಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಶಾಫಿ ಸಅದಿ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎರಡು ಬಾರಿ ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಇವರು, ಕರ್ನಾಟಕ ರಾಜ್ಯ

ರಾಜ್ಯ ವಕ್ಫ್ ಮಂಡಳಿ ನೂತನ ಅಧ್ಯಕ್ಷರಾಗಿ ಮೌಲಾನಾ ಶಾಫಿ ಸ-ಅದಿ ಆಯ್ಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೈಕ್ ಸವಾರರಿಗೆ ಸಿಹಿಸುದ್ದಿ ➤ ಹೊಸದಾಗಿ ಬಂತು ಎ.ಸಿ ಹೆಲ್ಮೆಟ್..!!

(ನ್ಯೂಸ್ ಕಡಬ) newskadaba.com ಹೈದ್ರಾಬಾದ್, ನ. 17. ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ಎಸಿ ಇರುವ ಹೆಲ್ಮೆಟ್ ಅನ್ನು ಹೈದರಾಬಾದ್ ನ ಉದ್ಯಮಿಗಳು ತಯಾರು ಮಾಡಿದ್ದು, ಈ ಎಸಿ ಹೆಲ್ಮೆಟ್ ನ್ನು ಇತ್ತೀಚೆಗೆ ದುಬೈ ನಲ್ಲಿ ನಡೆದ ಎಕ್ಸ್ ಪೋ 2020ರಲ್ಲಿ ಪ್ರದರ್ಶನ ಮಾಡಲಾಗಿದೆ. ಕೌಸ್ತುಭ್ ಕೌಂಡಿನ್ಯ, ಶ್ರೀಕಾಂತ್ ಕೊಮ್ಮುಲಾ ಹಾಗೂ ಆನಂದ್ ಕುಮಾರ್ ಎನ್ನುವ ಹೈದರಾಬಾದ್‌ನ ಮೂವರು ಮೆಕ್ಯಾನಿಕಲ್ ಇಂಜಿನಿಯರ್ ಗಳು ಈ ಏರ್ ಕಂಡೀಷನರ್ ಹೆಲ್ಮೆಟ್ ಅನ್ನು ತಯಾರಿಸಿದ್ದಾರೆ. ಈ ಹೆಲ್ಮೆಟ್ ಗಂಟೆಗೆ 24

ಬೈಕ್ ಸವಾರರಿಗೆ ಸಿಹಿಸುದ್ದಿ ➤ ಹೊಸದಾಗಿ ಬಂತು ಎ.ಸಿ ಹೆಲ್ಮೆಟ್..!! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನದಿಗೆ ಉರುಳಿಬಿದ್ದ ಪೊಲೀಸ್ ವಾಹನ ➤ ಇಬ್ಬರು ಮೃತ್ಯು, ನಾಲ್ವರು ಗಂಭೀರ

(ನ್ಯೂಸ್ ಕಡಬ) newskadaba.com ಪೂಂಚ್, ನ. 17. ಪೊಲೀಸ್ ಬೆಂಗಾವಲು ವಾಹನವೊಂದು ಸ್ಕಿಡ್ ಆಗಿ ನದಿಗೆ ಉರುಳಿಬಿದ್ದ ಪರಿಣಾಮ ಇಬ್ಬರು ಪೊಲೀಸ್ ಸಿನ್ಬಂದಿಗಳು ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ಜಮ್ಮು-ಕಾಶ್ಮೀರದ ಪೂಂಚ್​ ಜಿಲ್ಲೆಯಲ್ಲಿ ನಡೆದಿದೆ. ಬುಫ್ಲಿಯಾಜ್ ಪ್ರದೇಶದ ಡ್ರೋಗ್ಜಿಯಾನ್ ಗ್ರಾಮದಲ್ಲಿ ಪೂಂಚ್‌ನ ಹಿರಿಯ ಪೊಲೀಸ್ ಅಧೀಕ್ಷಕರ ಬೆಂಗಾವಲು ವಾಹನ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಈ ದುರ್ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬಳಿಕ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿದ್ದ ಆರು ಪೊಲೀಸರನ್ನು ರಕ್ಷಿಸಿ ಆಸ್ಪತ್ರೆಗೆ

ನದಿಗೆ ಉರುಳಿಬಿದ್ದ ಪೊಲೀಸ್ ವಾಹನ ➤ ಇಬ್ಬರು ಮೃತ್ಯು, ನಾಲ್ವರು ಗಂಭೀರ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಾಯುಮಾಲಿನ್ಯದಿಂದ‌ ಕಂಗೆಟ್ಟ ರಾಷ್ಟ್ರ ರಾಜಧಾನಿ..! ➤ ಆನ್ ಲೈನ್ ಕ್ಲಾಸ್ ಮೊರೆ‌ಹೋದ ವಿದ್ಯಾರ್ಥಿಗಳು

(ನ್ಯೂಸ್ ಕಡಬ) newskadaba.com ನವದೆಹಲಿ, ನ. 17. ರಾಷ್ಟ್ರ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ ಪ್ರಮಾಣ ಏರಿಕೆಯಾಗುತ್ತಿದೆ. ಇದರಿಂದ ದೆಹಲಿ ಎನ್ ಸಿಆರ್ ನಲ್ಲಿ ದಟ್ಟ ಹೊಗೆ ಆವರಿಸಿದ್ದು, ಇದೇ ಸಂದರ್ಭ ಶಾಲಾ ಕಾಲೇಜುಗಳ ಸಹಿತ ಇತರ ಶೈಕ್ಷಣಿಕ ಸಂಸ್ಥೆಗಳನ್ನು ಬಂದ್ ಮಾಡಲು ವಾಯು ಮಾಲಿನ್ಯ ಗುಣಮಟ್ಟ ನಿರ್ವಹಣಾ ಸಮಿತಿ ನಿರ್ದೇಶಿಸಿದೆ. ವಾಯುಮಾಲಿನ್ಯ ಹಿನ್ನೆಲೆ ದೆಹಲಿಯಲ್ಲಿ ಮತ್ತೆ ಆನ್ ಲೈನ್ ಕ್ಲಾಸ್ ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಲ್ಲದೇ ಮಾಲಿನ್ಯ ನಿಯಂತ್ರಣಕ್ಕಾಗಿ ನ. 21ರವರೆಗೆ ಯಾವುದೇ ಕಟ್ಟಡ

ವಾಯುಮಾಲಿನ್ಯದಿಂದ‌ ಕಂಗೆಟ್ಟ ರಾಷ್ಟ್ರ ರಾಜಧಾನಿ..! ➤ ಆನ್ ಲೈನ್ ಕ್ಲಾಸ್ ಮೊರೆ‌ಹೋದ ವಿದ್ಯಾರ್ಥಿಗಳು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪೇಜಾವರ ಶ್ರೀಗಳ ವಿರುದ್ದ ಅವಹೇಳಕಾರಿ ಹೇಳಿಕೆ ➤ ಹಂಸಲೇಖ ವಿರುದ್ದ ದೂರು ದಾಖಲು..!

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 17. ಪೇಜಾವರ ಶ್ರೀಗಳ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಸಂಗೀತ ನಿರ್ದೇಶಕ ಹಂಸಲೇಖ ಅವರ ವಿರುದ್ಧ ಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾಮಾಜಿಕ ಸಾಮರಸ್ಯಕ್ಕಾಗಿ ಪೇಜಾವರ ಶ್ರೀಗಳು ಕೈಗೊಂಡ ಕಾರ್ಯದ ಬಗ್ಗೆ ಹಂಸಲೇಖ ಅವರು ಕೇವಲವಾಗಿ ಮಾತನಾಡಿ, ತಮ್ಮ ಆರಾಧ್ಯ ದೈವ ಬಿಳಿಗಿರಿ ರಂಗಸ್ವಾಮಿ ದೇವರ ಬಗೆಗಿನ ಜನಪದೀಯ ಕಥೆಯನ್ನೂ ಹಂಸಲೇಖ ತುಚ್ಛವಾಗಿಸಿದ್ದಾರೆ. ಇದರಿಂದ ಧಾರ್ಮಿಕ ನಂಬಿಕೆ ಹಾಗೂ ಆಸ್ತಿಕ ಸಮಾಜದ ಸಾಮರಸ್ಯಕ್ಕೆ ಧಕ್ಕೆಯುಂಟಾಗಿದ್ದು, ಹಂಸಲೇಖ ಅವರ

ಪೇಜಾವರ ಶ್ರೀಗಳ ವಿರುದ್ದ ಅವಹೇಳಕಾರಿ ಹೇಳಿಕೆ ➤ ಹಂಸಲೇಖ ವಿರುದ್ದ ದೂರು ದಾಖಲು..! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುನೀತ್ ಗೆ ‘ಕರ್ನಾಟಕ ರತ್ನ’ದ ಜೊತೆಗೆ ರಾಷ್ಟ್ರಮಟ್ಟದ ಉನ್ನತ ಗೌರವಕ್ಕೂ ಶಿಫಾರಸು..! ➤ ಸಿಎಂ ಬೊಮ್ಮಾಯಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 17. ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಚಿರಸ್ಥಾಯಿ ಆಗಿಸಬೇಕು ಎಂಬುವುದು ಕರ್ನಾಟಕ ಸರ್ಕಾರದ ಅಭಿಲಾಷೆಯಾಗಿದ್ದು, ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ನೀಡಲಾಗುವುದು. ಇದರ ಜೊತೆಗೆ ರಾಷ್ಟ್ರಮಟ್ಟದ ಉನ್ನತ ಗೌರವಕ್ಕೂ ಶಿಫಾರಸು ಮಾಡುವ ನಿಟ್ಟಿನಲ್ಲಿ ಸಚಿವ ಸಂಪುಟದಲ್ಲಿ ನಿರ್ಣಯ ಕೈಯಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ ಪುನೀತ್ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಪುನೀತ್ ರಾಜ್ ಕುಮಾರ್ ಅವರ

ಪುನೀತ್ ಗೆ ‘ಕರ್ನಾಟಕ ರತ್ನ’ದ ಜೊತೆಗೆ ರಾಷ್ಟ್ರಮಟ್ಟದ ಉನ್ನತ ಗೌರವಕ್ಕೂ ಶಿಫಾರಸು..! ➤ ಸಿಎಂ ಬೊಮ್ಮಾಯಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಟ್ವಾಳ: ಬೈಕ್ ಲಾರಿ ನಡುವೆ ಅಪಘಾತ ➤ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ. 17. ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಇಲ್ಲಿನ ಮೆಲ್ಕಾರ್ ಜಂಕ್ಷನ್ ಬಳಿ ಮಂಗಳವಾರ ತಡರಾತ್ರಿ ನಡೆದಿದೆ. ಮೃತ ಸವಾರನನ್ನು ಮಂಗಳೂರು ನಿವಾಸಿ ಗಣೇಶ್(36) ಎಂದು ಗುರುತಿಸಲಾಗಿದೆ. ಗಣೇಶ್ ಅವರು ಬೈಕ್ ನಲ್ಲಿ ಮೆಲ್ಕಾರ್ ನಿಂದ ಮುಡಿಪು ರಸ್ತೆಗೆ ಕ್ರಾಸ್ ಮಾಡುತ್ತಿದ್ದ ವೇಳೆ ಹೆದ್ದಾರಿಯಲ್ಲಿ ಸಾಗುತ್ತಿದ್ದ ಲಾರಿಯು ಢಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಗೆಸೆಯಲ್ಪಟ್ಟ ಗಣೇಶ್ ಅವರು ಗಂಭೀರವಾಗಿ ಗಾಯಗೊಂಡಿದ್ದರು.‌ ತಕ್ಷಣ ಅವರನ್ನು

ಬಂಟ್ವಾಳ: ಬೈಕ್ ಲಾರಿ ನಡುವೆ ಅಪಘಾತ ➤ ಸವಾರ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬಿಸಿನೀರು ಮೈಮೇಲೆ ಬಿದ್ದು ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಸವಣೂರು, ನ. 17. ಬಿಸಿ ನೀರು ಮೈ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸವಣೂರಿನಲ್ಲಿ ನಡೆದಿದೆ. ಮೃತರನ್ನು ಸವಣೂರು ಗ್ರಾಮದ ಮಾಂತೂರು ನಿವಾಸಿ ಕುಂಞಾಲಿಮ್ಮ (60 ವ.)ಎಂದು ಗುರುತಿಸಲಾಗಿದೆ. ಕಳೆದ ಒಂದೂವರೆ ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಇವರು, ನ.15 ರಂದು ಸಂಜೆ ಸ್ನಾನಕ್ಕೆಂದು ಕಾಯಿಸಿಟ್ಟಿದ್ದ ಬಿಸಿನೀರಿನ ಪಾತ್ರೆಯನ್ನು ಎತ್ತಿಕೊಂಡು ಬಚ್ಚಲು ಕೋಣೆಗೆ ಒಯ್ಯುತ್ತಿದ್ದಾಗ ಆಕಸ್ಮಿಕವಾಗಿ ಬಿಸಿನೀರು ತುಂಬಿದ್ದ ಪಾತ್ರೆ ಕೈ ಹಿಡಿತದಿಂದ ಜಾರಿ ಬಿಸಿ

ಬಿಸಿನೀರು ಮೈಮೇಲೆ ಬಿದ್ದು ಮಹಿಳೆ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ವಿದ್ಯಾರ್ಥಿಗೆ ಹುಚ್ಚು ನಾಯಿ ಕಡಿತ ➤ ನಾಯಿಯನ್ನು ಹೊಡೆದು ಕೊಂದ ಸಾರ್ವಜನಿಕರು

(ನ್ಯೂಸ್ ಕಡಬ) newskadaba.com ಕಡಬ, ನ.17. ಹುಚ್ಚುನಾಯಿಯೊಂದು ಕಡಿದ ಪರಿಣಾಮ ವಿದ್ಯಾರ್ಥಿಯೋರ್ವ ಗಾಯಗೊಂಡ ಘಟನೆ ಕಡಬ ಪೇಟೆಯಲ್ಲಿ ಬುಧವಾರದಂದು ನಡೆದಿದೆ. ಗಾಯಗೊಂಡ ಬಾಲಕನನ್ನು ಕಡಬ ನಿವಾಸಿ ಹಮೀದ್ ಎಂಬವರ ಪುತ್ರ ಅಫ್ನಾನ್ ಎಂದು ಗುರುತಿಸಲಾಗಿದೆ. ಎಂದಿನಂತೆ ಮದರಸ ಬಿಟ್ಟು ತೆರಳುತ್ತಿದ್ದ ಬಾಲಕನ ಮೇಲೆ ಹುಚ್ಚು ನಾಯಿ ಎರಗಿದ್ದು, ಕೈಗೆ ಕಚ್ಚಿದೆ‌ ಎಂದು ತಿಳಿದುಬಂದಿದೆ. ಬಾಲಕನಿಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹುಚ್ಚುನಾಯಿಯನ್ನು ಸಾರ್ವಜನಿಕರು ಹೊಡೆದು ಕೊಂದಿದ್ದು,

ವಿದ್ಯಾರ್ಥಿಗೆ ಹುಚ್ಚು ನಾಯಿ ಕಡಿತ ➤ ನಾಯಿಯನ್ನು ಹೊಡೆದು ಕೊಂದ ಸಾರ್ವಜನಿಕರು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Scroll to Top