ಬ್ರೇಕಿಂಗ್ ನ್ಯೂಸ್

ಮೋದಿಯವರು ಕೃಷಿ ಕಾಯ್ದೆಯನ್ನು ಮತ್ತೆ ಜಾರಿಗೆ ತರಲಿದ್ದಾರೆ ➤ ಕಲ್ಲಡ್ಕ ಪ್ರಭಾಕರ ಭಟ್

(ನ್ಯೂಸ್ ಕಡಬ) newskadbaa.com ಉಡುಪಿ, ನ. 22. ಕೃಷಿ ಕಾಯ್ದೆಯನ್ನು ವಿಪಕ್ಷಗಳು ವಿರೋಧಿಸಿದ್ದರಿಂದ ಸಮಸ್ಯೆ ಆಯ್ತು. ಹಾಗಂತ, ಮೋದಿ ಇದನ್ನು ಹಾಗೆಯೇ ಬಿಡೋದಿಲ್ಲ, ಇನ್ನು ಮುಂದೆ ಅದನ್ನು ಕಾರ್ಯರೂಪಕ್ಕೆ ತರಲಿದ್ದಾರೆ ಎಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ. ‌ ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೃಷಿ ಕಾಯ್ದೆಯ ಒಳ್ಳೆಯ ಅಂಶಗಳನ್ನು ಜನರಿಗೆ ತಲುಪಿಸಲಾಗಲಿಲ್ಲ. ಹಾಗಾಗಿ ಹಿಂದಕ್ಕೆ ಪಡೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಇದು ಉತ್ತಮ ನಿರ್ಧಾರ. ಎರಡು ಮಾತಿಲ್ಲ ಎಂದು ಹೇಳಿದರು. ವಿರೋಧ ಪಕ್ಷಗಳು, ಪ್ರತಿಭಟನೆ […]

ಮೋದಿಯವರು ಕೃಷಿ ಕಾಯ್ದೆಯನ್ನು ಮತ್ತೆ ಜಾರಿಗೆ ತರಲಿದ್ದಾರೆ ➤ ಕಲ್ಲಡ್ಕ ಪ್ರಭಾಕರ ಭಟ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜಾಗದ ತಕರಾರು ➤ ಮಹಿಳೆಗೆ ನಾಡಕೋವಿಯಿಂದ ಗುಂಡು ಹಾರಿಸಿದ ಮೈದುನ..!

(ನ್ಯೂಸ್ ಕಡಬ) newskadaba.com ಪುತ್ತೂರು, ನ. 22. ಜಮೀನು ವಿಚಾರಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆದು ಮಹಿಳೆಯೋರ್ವರಿಗೆ ನಾಡಕೋವಿಯಿಂದ ಶೂಟ್ ಮಾಡಿದ ಪ್ರಕರಣ ತಾಲೂಕಿನ ನರಿಮೊಗರು ಗ್ರಾಮದ ವೀರಮಂಗಲ ಎಂಬಲ್ಲಿ ಭಾನುವಾರದಂದು ನಡೆದಿದೆ. ಆರೋಪಿ ದೇವಪ್ಪ ಎಂಬಾತ ತನ್ನ ಅತ್ತಿಗೆ ಧರ್ಣಮ್ಮ ಎಂಬವರಿಗೆ ನಾಡಕೋವಿಯಿಂದ ಶೂಟ್ ಮಾಡಿದ್ದು, ಗುಂಡು ಗುರಿ ತಪ್ಪಿದ ಕಾರಣ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ಡಿವೈಎಸ್ಪಿ ಗಾನ ಕುಮಾರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  

ಜಾಗದ ತಕರಾರು ➤ ಮಹಿಳೆಗೆ ನಾಡಕೋವಿಯಿಂದ ಗುಂಡು ಹಾರಿಸಿದ ಮೈದುನ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸಂಬಳ ಕೇಳಿದ್ದಕ್ಕೆ ದಲಿತ ಕಾರ್ಮಿಕನ ಕೈಕಡಿದ ಭೂಪ..!

(ನ್ಯೂಸ್ ಕಡಬ) newskadaba.com ಮಧ್ಯಪ್ರದೇಶ, ನ. 22. ಸಂಬಳ ಕೇಳಿದ್ದಕ್ಕೆ ದಲಿತ ಕಾರ್ಮಿಕನೋರ್ವನ ಕೈಕಡಿದು ಹೊಲಕ್ಕೆಸೆದಿರುವ ಮನಕಲುಕುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯ ಡೌಲ್ಮ್ ಗ್ರಾಮದಲ್ಲಿ ನಡೆದಿದೆ. ಸಂತ್ರಸ್ತ ಕಾರ್ಮಿಕನನ್ನು ಅಶೋಕ್ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿ ಆರೋಪಿ ಗಣೇಶ್ ಮಿಶ್ರಾ ಎಂಬಾತನ ಮೆಲೆ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಸೆಕ್ಸನ್ ಗಳ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಸಂತ್ರಸ್ತ ಅಶೋಕ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಈತ ತನ್ನ ಸಂಬಳದ

ಸಂಬಳ ಕೇಳಿದ್ದಕ್ಕೆ ದಲಿತ ಕಾರ್ಮಿಕನ ಕೈಕಡಿದ ಭೂಪ..! Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅನ್ಯಕೋಮಿನ ಜೋಡಿಯ ವಿವಾಹ ಪ್ರಕರಣ ➤ ಯುವತಿಯ ಮನವೊಲಿಸಲು ಮನೆಗೆ ಭೇಟಿ ನೀಡಿದ ಸ್ವಾಮೀಜಿಯ ವಿಫಲಯತ್ನ..!

(ನ್ಯೂಸ್ ಕಡಬ) newskadaba.com‌ ಮಂಗಳೂರು, ನ. 22. ಇಲ್ಲಿನ ಖಾಸಗಿ ಮೆಡಿಕಲ್ ಕಾಲೇಜೊಂದರ ಜೋಡಿಗಳು ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಮನೆಯವರನ್ನೆಲ್ಲ ಒಪ್ಪಿಸಿ ಶಾಸ್ತ್ರಬದ್ಧವಾಗಿ ಮದುವೆಯಾಗುತ್ತಿದ್ದಾರೆ. ಕೇರಳದ ಕಣ್ಣೂರಿನಲ್ಲೇ ನ. 29ರಂದು ಇಬ್ಬರ ವಿವಾಹಕ್ಕೆ ಡೇಟ್ ಫಿಕ್ಸ್ ಕೂಡ ಆಗಿದ್ದು, ಈ ಜೋಡಿಯ ವಿವಾಹಕ್ಕೆ ಲವ್ ಜಿಹಾದ್ ಆರೋಪ ಕೂಡಾ ಕೇಳಿಬಂದಿತ್ತು. ಈ ಮದುವೆಯನ್ನು ತಡೆಯಲು ಹಿಂದೂ ಸಂಘಟನೆಗಳು ಮತ್ತು ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿಗಳು, ಆಕೆಯ ಮನೆಗೆ ಭೇಟಿ ನೀಡಿ ಮನವೊಲಿಸಲು ಪ್ರಯತ್ನಿಸಿದ್ದು, ಆದರೆ ಯುವತಿಯು

ಅನ್ಯಕೋಮಿನ ಜೋಡಿಯ ವಿವಾಹ ಪ್ರಕರಣ ➤ ಯುವತಿಯ ಮನವೊಲಿಸಲು ಮನೆಗೆ ಭೇಟಿ ನೀಡಿದ ಸ್ವಾಮೀಜಿಯ ವಿಫಲಯತ್ನ..! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮದುವೆಯಾದರೂ ಫೋಕ್ಸೋ ಪ್ರಕರಣ ರದ್ದಾಗುವುದಿಲ್ಲ ➤ ಹೈಕೋರ್ಟ್ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 22. ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ಆರೋಪಿಯ ವಿರುದ್ಧ ಅತ್ಯಾಚಾರವೆಸಗಿ ಮದುವೆಯಾದರೂ ಫೋಕ್ಸೋ ಕೇಸ್ ರದ್ದಾಗುವುದಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಫೋಕ್ಸೋ ಪ್ರಕರಣದಲ್ಲಿ ಸಂತ್ರಸ್ತೆಯನ್ನೇ ಮದುವೆಯಾಗಿದ್ದ ಆರೋಪಿ ವಿರುದ್ಧ ಕೇಸ್ ರದ್ದು ಮಾಡಲು ಹೈಕೋರ್ಟ್ ನಿರಾಕರಿಸಿದೆ. ಸಂತ್ರಸ್ತೆಯನ್ನು ಆರೋಪಿ ಮದುವೆಯಾಗಿದ್ದರೂ ಅತ್ಯಾಚಾರ ಪ್ರಕರಣ ರದ್ದಾಗುವುದಿಲ್ಲವೆಂದು ಸ್ಪಷ್ಟಪಡಿಸಿದೆ.

ಮದುವೆಯಾದರೂ ಫೋಕ್ಸೋ ಪ್ರಕರಣ ರದ್ದಾಗುವುದಿಲ್ಲ ➤ ಹೈಕೋರ್ಟ್ ಸ್ಪಷ್ಟನೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಳ್ಳತನಗೈಯ್ಯಲು ಡಯೆಟ್ ಮಾಡಿ ತೂಕ ಇಳಿಸಿದ ಖತರ್ನಾಕ್ ಕಳ್ಳ..! ➤ ಉಂಡ ಮನೆಗೆ ಕನ್ನ ಹಾಕಿದ

(ನ್ಯೂಸ್ ಕಡಬ) newskadaba.com ಅಹ್ಮದಾಬಾದ್‌, ನ. 22. ಕಳ್ಳನೋರ್ವ ಕಳ್ಳತನಕ್ಕಾಗಿಯೇ ಡಯೆಟ್ ಮಾಡಿದ ಘಟನೆ ಗುಜರಾತ್‌ನ ಅಹ್ಮದಾ ಬಾದ್‌ನಿಂದ ವರದಿಯಾಗಿದೆ. ಡಯೆಟ್‌ ಮಾಡಿದ ಈತನ ಹೆಸರು ಮೋತಿಸಿಂಗ್‌ ಚೌಹಾನ್‌. ಈತ ಅಹ್ಮದಾಬಾದ್‌ನ ಬೋಪಾಲ್‌ ಪ್ರಾಂತ್ಯದಲ್ಲಿನ ವಾಸವಾಗಿದ್ದ ಮೋಹಿತ್‌ ಮೊರಾಡಿಯಾ ಎಂಬವರ ಮನೆಯಲ್ಲಿ ಎರಡು ವರ್ಷದ ಹಿಂದೆ ಕೆಲಸದಾಳಾಗಿದ್ದು, ಆತನಿಗೆ ಆ ಮನೆಯವರು ಬೆಲೆಬಾಳುವ ವಸ್ತುಗಳನ್ನು ಎಲ್ಲಿ ಬಚ್ಚಿಡುತ್ತಾರೆ ಎಂದು ಗೊತ್ತಿತ್ತು. ಆ ಮನೆಗೆ ಕನ್ನ ಹಾಕಲು ನಿರ್ಧರಿಸಿದ್ದರೂ, ಮನೆಯ ಎರಡೂ ಬಾಗಿಲಿನ ಸಮೀಪ ಸಿಸಿಟಿವಿ ಇದ್ದಿದ್ದರಿಂದ ಧೈರ್ಯ

ಕಳ್ಳತನಗೈಯ್ಯಲು ಡಯೆಟ್ ಮಾಡಿ ತೂಕ ಇಳಿಸಿದ ಖತರ್ನಾಕ್ ಕಳ್ಳ..! ➤ ಉಂಡ ಮನೆಗೆ ಕನ್ನ ಹಾಕಿದ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಎಂಟು ವರ್ಷದ ಮಗುವನ್ನು ಅತ್ಯಾಚಾರವೆಸಗಿ ಕೊಲೆಮಾಡಿ ಚರಂಡಿಗೆಸೆದ ಕಿಡಿಗೇಡಿಗಳು ➤ ಕರಾವಳಿಯನ್ನೇ ಬೆಚ್ಚಿಬೀಳಿಸುವ ಘಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 21. ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರೋರ್ವರ ಎಂಟು ವರ್ಷದ ಮಗುವೊಂದನ್ನು ಅತ್ಯಾಚಾರಗೈದು ಕೊಲೆಮಾಡಿ ಚರಂಡಿಗೆಸೆದು ಹೋದ ಘಟನೆ ಕಂಕನಾಡಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಉಳಾಯಿಬೆಟ್ಟು ಟೈಲ್ಸ್ ಫ್ಯಾಕ್ಟರಿಯ ಆವರಣದಲ್ಲಿ ನಡೆದಿದೆ. ಜಾರ್ಖಂಡ್ ಮೂಲದ ಕಾರ್ಮಿಕರು ಟೈಲ್ಸ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಇದರಲ್ಲಿ ಒಂದು ಮಗು ಸಂಜೆ ವೇಳೆಗೆ ಕಾಣೆಯಾಗಿತ್ತು. ಕಾರ್ಮಿಕರು ಹಾಗೂ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಸಂಜೆ 6 ಗಂಟೆಯ ವೇಳೆಗೆ ಅಲ್ಲೇ ಪಕ್ಕದ ಚರಂಡಿಯಲ್ಲಿ ಮಗುವಿನ ಮೃತದೇಹ

ಎಂಟು ವರ್ಷದ ಮಗುವನ್ನು ಅತ್ಯಾಚಾರವೆಸಗಿ ಕೊಲೆಮಾಡಿ ಚರಂಡಿಗೆಸೆದ ಕಿಡಿಗೇಡಿಗಳು ➤ ಕರಾವಳಿಯನ್ನೇ ಬೆಚ್ಚಿಬೀಳಿಸುವ ಘಟನೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ: ಹಾಡು ಹಗಲೇ ಮನೆಯಂಗಳದಲ್ಲಿ ಕಾಡಾನೆ ಪ್ರತ್ಯಕ್ಷ..! ➤ ಆತಂಕದಲ್ಲಿ ಜನತೆ

(ನ್ಯೂಸ್ ಕಡಬ) newskadaba.com ಕಡಬ, ನ. 21. ಹಾಡುಹಗಲೇ ಕಾಡಾನೆ ಹಿಂಡೊಂದು ಮನೆ ಅಂಗಳ ಹಾಗೂ ತೋಟಕ್ಕೆ ಲಗ್ಗೆಯಿಟ್ಟು ಜನರನ್ನು ಭಯಬೀತಿ ಗೊಳಿಸುತ್ತಿರುವ ಘಟನೆ ಕಡಬ ತಾಲೂಕಿನ ಕಡ್ಯ ಕೊಣಾಜೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯ ಕೊಣಾಜೆ ಕಡ್ಯ ಪ್ರದೇಶದಲ್ಲಿ ಕಾಡಾನೆ ರಾತ್ರಿ ಹಾಗೂ ಹಾಡು ಹಗಲಲ್ಲೂ ತೋಟಕ್ಕೆ ನುಗ್ಗಿ ಕೃಷಿ ನಾಶ ಪಡಿಸುತ್ತಿರುವ ದೂರು ಕೇಳಿಬಂದಿದೆ. ಹಲವರ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆ ನೂರಾರು ಅಡಿಕೆ ಗಿಡ, ಬಾಳೆ ಸೇರಿದಂತೆ ಇತರೆ ಕೃಷಿಗಳನ್ನು

ಕಡಬ: ಹಾಡು ಹಗಲೇ ಮನೆಯಂಗಳದಲ್ಲಿ ಕಾಡಾನೆ ಪ್ರತ್ಯಕ್ಷ..! ➤ ಆತಂಕದಲ್ಲಿ ಜನತೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆಡುಗಳ್ಳರ ಬೇಟೆಗೆ ಹೋದ ಪೊಲೀಸ್ ಅಧಿಕಾರಿಯನ್ನೇ ಹತ್ಯೆಗೈದ ಕಳ್ಳರ ಗ್ಯಾಂಗ್..!

(ನ್ಯೂಸ್ ಕಡಬ) newskadaba.com ತಿರುಚ್ಚಿ, ನ. 21. ಆಡುಗಳ್ಳರನ್ನು ಹಿಡಿಯಲು ಹೋದ ಸಬ್ ಇನ್ಸ್ ಪೆಕ್ಟರ್ ಓರ್ವನನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆಗೈದ ಘಟನೆ ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ಗಡಿಭಾಗದ ಕಲಮಾವೂರು ಎಂಬಲ್ಲಿ ನಡೆದಿದೆ. ಹತ್ಯೆಗೊಳಗಾದವರನ್ನು ಎಸ್.ಐ ಭೂಮಿನಾಥನ್ ಎಂದು ಗುರುತಿಸಲಾಗಿದೆ. ತಿರುಚ್ಚಿ ಜಿಲ್ಲೆಯ ಪರಿಸರದಲ್ಲಿ ರಾತ್ರಿ ವೇಳೆ ಆಡುಗಳನ್ನು ನಿರಂತರವಾಗಿ ಕಳ್ಳತನ ಮಾಡಲಾಗುತ್ತಿದೆ ಎಂಬುವುದಾಗಿ ದೂರು ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಎಸ್ ಐ ಭೂಮಿನಾಥನ್ ಅವರ ನೇತೃತದಲ್ಲಿ ಪೊಲೀಸರು ವಿಶೇಷ ತಂಡದೊಂದಿಗೆ ಪಹರೆ ನಡೆಸುತ್ತಿದ್ದರು. ಶನಿವಾರದಂದು

ಆಡುಗಳ್ಳರ ಬೇಟೆಗೆ ಹೋದ ಪೊಲೀಸ್ ಅಧಿಕಾರಿಯನ್ನೇ ಹತ್ಯೆಗೈದ ಕಳ್ಳರ ಗ್ಯಾಂಗ್..! Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪಬ್ಜಿ ಆಟದಲ್ಲಿ ತಲ್ಲೀನರಾಗಿದ್ದ ಬಾಲಕರಿಗೆ ಗೂಡ್ಸ್ ಢಿಕ್ಕಿ ➤ ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಮಥುರಾ, ನ. 21. ರೈಲ್ವೇ ಟ್ರ್ಯಾಕ್ ನಲ್ಲಿ ಕುಳಿತು ಪಬ್ಜಿ ಆಡುತ್ತಿದ್ದ ಇಬ್ಬರು ಬಾಲಕರು ಗೂಡ್ಸ್ ರೈಲಿಗೆ ಸಿಲುಕಿ ಮೃತಪಟ್ಟ ಘಟನೆ ಮಥುರಾದಲ್ಲಿ ನಡೆದಿದೆ. ಮೃತಪಟ್ಟವರನ್ನು ಗೌರವ್ ಕುಮಾರ್ ಮತ್ತು ಕಪಿಲ್ ಕುಮಾರ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಆಟದಲ್ಲಿ ಮಗ್ನರಾಗಿದ್ದರು ಎನ್ನಲಾಗಿದೆ. ಎರಡೂ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಒಂದು ಮೊಬೈಲ್ ಹಾನಿಗೊಳಗಾಗಿದ್ದರೆ, ಇನ್ನೊಂದರಲ್ಲಿ PUBG ಇನ್ನೂ ಚಾಲನೆಯಲ್ಲೇ ಇತ್ತು ಎಂದು ಜಮುನಾಪರ್ ಪೊಲೀಸ್ ಠಾಣೆಯ (SHO) ಶಶಿ ಪ್ರಕಾಶ್ ಸಿಂಗ್ ಹೇಳಿದ್ದಾರೆ.  

ಪಬ್ಜಿ ಆಟದಲ್ಲಿ ತಲ್ಲೀನರಾಗಿದ್ದ ಬಾಲಕರಿಗೆ ಗೂಡ್ಸ್ ಢಿಕ್ಕಿ ➤ ಇಬ್ಬರು ಮೃತ್ಯು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top