ಜಾಗದ ತಕರಾರು ➤ ಮಹಿಳೆಗೆ ನಾಡಕೋವಿಯಿಂದ ಗುಂಡು ಹಾರಿಸಿದ ಮೈದುನ..!



(ನ್ಯೂಸ್ ಕಡಬ) newskadaba.com ಪುತ್ತೂರು, ನ. 22. ಜಮೀನು ವಿಚಾರಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆದು ಮಹಿಳೆಯೋರ್ವರಿಗೆ ನಾಡಕೋವಿಯಿಂದ ಶೂಟ್ ಮಾಡಿದ ಪ್ರಕರಣ ತಾಲೂಕಿನ ನರಿಮೊಗರು ಗ್ರಾಮದ ವೀರಮಂಗಲ ಎಂಬಲ್ಲಿ ಭಾನುವಾರದಂದು ನಡೆದಿದೆ.







ಆರೋಪಿ ದೇವಪ್ಪ ಎಂಬಾತ ತನ್ನ ಅತ್ತಿಗೆ ಧರ್ಣಮ್ಮ ಎಂಬವರಿಗೆ ನಾಡಕೋವಿಯಿಂದ ಶೂಟ್ ಮಾಡಿದ್ದು, ಗುಂಡು ಗುರಿ ತಪ್ಪಿದ ಕಾರಣ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ಡಿವೈಎಸ್ಪಿ ಗಾನ ಕುಮಾರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






 

error: Content is protected !!
Scroll to Top