ಬ್ರೇಕಿಂಗ್ ನ್ಯೂಸ್

ಮಂಗಳೂರು: ಎಂಟರ ಬಾಲಕಿಯ ಹತ್ಯೆ ಪ್ರಕರಣ- ತನಿಖೆ ಚುರುಕುಗೊಳಿಸಿದ ಪೊಲೀಸರು ➤ 20 ಮಂದಿ ವಶಕ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 23. ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪರಾರಿ ರಾಜ್‌ ಟೈಲ್ಸ್‌‌‌‌ ಹೆಂಚಿನ ಕಾರ್ಖಾನೆ ಸಮೀಪದ ಮೋರಿಯಲ್ಲಿ ಎಂಟು ವರ್ಷ ಹರೆಯದ ಬಾಲಕಿಯ ಮೃತದೇಹ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದು, ಉತ್ತರ ಭಾರತದ 20ಕ್ಕೂ ಮಂದಿಯನ್ನು ವಶಕ್ಕೆ ಪಡೆದ ಘಟನೆ ವರದಿಯಾಗಿದೆ. ಭಾನುವಾರ ಕಾರ್ಖಾನೆಗೆ ರಜೆ ಇದ್ದುದರಿಂದ ಕಾರ್ಮಿಕರು ಅಲ್ಲೇ ವಾಸವಾಗಿದ್ದು, ಈ ವೇಳೆ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ಕೊಲೆಗೈದಿರಬಹುದು ಎನ್ನಲಾಗಿದೆ. ಕಾರ್ಖಾನೆಯನ್ನು ಕೇರಳ ಮೂಲದ […]

ಮಂಗಳೂರು: ಎಂಟರ ಬಾಲಕಿಯ ಹತ್ಯೆ ಪ್ರಕರಣ- ತನಿಖೆ ಚುರುಕುಗೊಳಿಸಿದ ಪೊಲೀಸರು ➤ 20 ಮಂದಿ ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಗಳಿಗೆ ನಿರಂತರ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಕಾಮುಕ ತಂದೆ ➤ ಕೊಚ್ಚಿಕೊಂದ ಮಗಳ ಸ್ನೇಹಿತರು..!

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 23. ಮಗಳ ಸ್ನೇಹಿತರೇ ಸೇರಿ ಆಕೆಯ ತಂದೆಯನ್ನು ಕೊಚ್ಚಿ ಬರ್ಬರವಾಗಿ ಹತ್ಯೆ ನಡೆಸಿದ ಘಟನೆ ಇಬ್ಬರು ಪುತ್ರಿಯರ ಮುಂದೆಯೇ ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಮೀರ್ ಸಾಗರ್ ರಸ್ತೆಯಲ್ಲಿ ನಡೆದಿದೆ. ಹತ್ಯೆಗೀಡಾದವರನ್ನು ದೀಪಕ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ. ಭಾನುವಾರ ತಡರಾತ್ರಿ ದೀಪಕ್ ಕುಮಾರ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬಿಹಾರ ಮೂಲದವನಾಗಿದ್ದ ದೀಪಕ್ ಕುಮಾರ್ ಜಿಕೆವಿಕೆನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು. ಈತ

ಮಗಳಿಗೆ ನಿರಂತರ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಕಾಮುಕ ತಂದೆ ➤ ಕೊಚ್ಚಿಕೊಂದ ಮಗಳ ಸ್ನೇಹಿತರು..! Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಚ್ಚಿದ ಹಾವನ್ನು ಹಿಡಿದುಕೊಂಡೇ ಆಸ್ಪತ್ರೆಗೆ ದಾಖಲಾದ ವ್ಯಕ್ತಿ..!

(ನ್ಯೂಸ್ ಕಡಬ) newskadaba.com ಭಟ್ಕಳ, ನ. 23. ಹೆಬ್ಬಾವು ಕಚ್ಚಿದರೂ ಹೆದರದ ವ್ಯಕ್ತಿಯೋರ್ವ ಹಾವನ್ನುಹೊತ್ತುಕೊಂಡೇ ಆಸ್ಪತ್ರೆಗೆ ದಾಖಲಾದ ಆಶ್ಚರ್ಯಕರ ಘಟನೆ ಭಟ್ಕಳದಲ್ಲಿ ಸೋಮವಾರದಂದು ರಾತ್ರಿ ನಡೆದಿದೆ. ಹೆಬ್ಬಾವು ಕಡಿತಕ್ಕೊಳಗಾದ ವ್ಯಕ್ತಿಯನ್ನು ಮಣ್ಕುಳಿ ಸೀತಾರಾಮ ನಾರಾಯಣ ನಾಯ್ಕ ಎಂದು ಗುರುತಿಸಲಾಗಿದೆ. ಕಳೆದೊಂದು ವಾರದಿಂದ ಕೆಲದಿನಗಳಿಂದ ಮಳೆ ಸುರಿಯುತ್ತಿದ್ದು, ರೈಲ್ವೆ ನಿಲ್ದಾಣ ಸಮೀಪದಲ್ಲೇ ಇರುವ ಮನೆಯ ಪಕ್ಕದಲ್ಲಿ ಹೆಬ್ಬಾವೊಂದು ಪ್ರತ್ಯಕ್ಷವಾಗಿದ್ದು, ರಸ್ತೆಯಲ್ಲಿ ಮತ್ಯಾರಿಗಾದರೂ ಕಚ್ಚಿದರೆ ಅಪಾಯವಾಗುತ್ತದೆ ಎಂದು ತಿಳಿದ ಸೀತಾರಾಮ ನಾಯ್ಕ ತನ್ನ ಕೆಲವು ಸ್ನೇಹಿತರ ಸಹಾಯದಿಂದ ಹಾವನ್ನು ಸೆರೆಹಿಡಿಯಲು

ಕಚ್ಚಿದ ಹಾವನ್ನು ಹಿಡಿದುಕೊಂಡೇ ಆಸ್ಪತ್ರೆಗೆ ದಾಖಲಾದ ವ್ಯಕ್ತಿ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಆರೆಸ್ಸೆಸ್ ಕಾರ್ಯಕರ್ತನ ಕೊಲೆ ಪ್ರಕರಣ ಹಿನ್ನೆಲೆ ➤ ಓರ್ವನ ಬಂಧನ

(ನ್ಯೂಸ್ ಕಡಬ) newskadaba.com ತಿರುವನಂತಪುರಂ, ನ. 23. ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ಪದಾಧಿಕಾರಿಯೋರ್ವನನ್ನು ಬಂಧಿಸಿದ ಘಟನೆ ವರದಿಯಾಗಿದೆ. ಈ ಕುರಿತು ಪಾಲಕ್ಕಾಡ್‌ನಲ್ಲಿ ಜಿಲ್ಲಾ ಪೊಲೀಸ್ ಮುಖ್ಯಸ್ಥ ಆರ್ ವಿಶ್ವನಾಥ್ ಮಾಹಿತಿ ನೀಡಿದ್ದು, ಜಿಲ್ಲೆಯ ಮಂಬುರಂನಲ್ಲಿ ನಡೆದ ಸಂಜಿತ್ ಹತ್ಯೆಯಲ್ಲಿ ಬಂಧಿತ ಪಿಎಫ್ ಐ ಕಾರ್ಯಕರ್ತ ನೇರವಾಗಿ ಭಾಗಿಯಾಗಿದ್ದು, ಉಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. ತನಿಖೆಯ ಭಾಗವಾಗಿ ಅವರ ಗುರುತನ್ನು ಬಹಿರಂಗಪಡಿಸಿಲ್ಲ. ಸಂಜತ್

ಆರೆಸ್ಸೆಸ್ ಕಾರ್ಯಕರ್ತನ ಕೊಲೆ ಪ್ರಕರಣ ಹಿನ್ನೆಲೆ ➤ ಓರ್ವನ ಬಂಧನ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಡಬ: ಪೆರಾಬೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ➤ ಆರೋಪಿಗಳಿಗೆ ಷರತ್ತುಬದ್ದ ನಿರೀಕ್ಷಣಾ ಜಾಮೀನು ಮಂಜೂರು

(ನ್ಯೂಸ್ ಕಡಬ) newskadaba.com ಕಡಬ, ನ. 23. ತಾಲೂಕಿನ ಪೆರಾಬೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸುತ್ತಿರುವ ಮೂವರು ಆರೊಪಿಗಳಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ರು ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿಗಳಾದ ತುಳಸಿ, ಚಂದ್ರಶೇಖರ್ ಮತ್ತು ಅಶೋಕ ಎಂಬವರಿಗೆ ನಿರೀಕ್ಷಣಾ ಜಾಮೀನು ನೀಡಲಾಗಿದೆ. ಎಸ್ಟಿ ಹಾಗೂ ಎಸ್ಸಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲೆಂದು ಪೆರಾಬೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಯ್ದಿರಿಸಿದ್ದ 0.70 ಎಕ್ರೆ ಸರಕಾರಿ ಜಮೀನಿಗೆ ಅಕ್ಟೋಬರ್ 10ರಂದು

ಕಡಬ: ಪೆರಾಬೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ➤ ಆರೋಪಿಗಳಿಗೆ ಷರತ್ತುಬದ್ದ ನಿರೀಕ್ಷಣಾ ಜಾಮೀನು ಮಂಜೂರು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೆಲಸದ ಒತ್ತಡದಿಂದ ಖಿನ್ನತೆಗೊಳಗಾಗಿ‌ದ್ದ ಶಿಕ್ಷಕಿ ಆತ್ಮಹತ್ಯೆ..!

(ನ್ಯೂಸ್ ಕಡಬ) newskadaba.com ಮಣಿಪಾಲ, ನ. 23. ಕೆಲಸದ ಒತ್ತಡದಿಂದ ಬೇಸತ್ತಿದ್ದ ಶಿಕ್ಷಕಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಲೆವೂರು ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಅಮೃತಾ ಎಂದು ಗುರುತಿಸಲಾಗಿದೆ. ಇವರು ಕಳೆದ 8 ವರ್ಷಗಳಿಂದ ವಿದ್ಯೋದಯ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕೆಲಸದ ಒತ್ತಡದಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲಸದ ಒತ್ತಡದಿಂದ ಖಿನ್ನತೆಗೊಳಗಾಗಿ‌ದ್ದ ಶಿಕ್ಷಕಿ ಆತ್ಮಹತ್ಯೆ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ➤ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಉಡುಪಿ, ನ. 22. ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮಹಿಳಾ ಠಾಣಾ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಗಳನ್ನು ಸಂದೀಪ್ ನಾಯ್ಕ ಹಾಗೂ ವಿಘ್ನೇಶ್ ನಾಯ್ಕ ಎಂದು ಗುರುತಿಸಲಾಗಿದೆ. ಸಂತ್ರಸ್ತ ಬಾಲಕಿಯ ತಂದೆ ಹಾಗೂ ತಾಯಿ ಕೆಲಸಕ್ಕೆ ಹೋದ ಸಂದರ್ಭ ಆರೋಪಿಗಳು ಬಾಲಕಿಯ ಮನೆಗೆ ಬಂದು ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎನ್ನಲಾಗಿದೆ. ಬಾಲಕಿಗೆ ಅಪ್ಪ, ಅಮ್ಮನನ್ನು ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿ ಬಾಲಕಿಗೆ ದೌರ್ಜನ್ಯ ನಡೆಸಿರುವುದಾಗಿ ಬಾಲಕಿಯ

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ➤ ಇಬ್ಬರ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಇಬ್ಬರು ಮಕ್ಕಳ ಮುಂದೆಯೇ ತಂದೆಯ ಭೀಕರ ಕೊಲೆ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 22. ಇಬ್ಬರು ಹೆಣ್ಣುಮಕ್ಕಳ ಮುಂದೆಯೇ ತಂದೆಯನ್ನು ಭೀಕರ ಹತ್ಯೆಗೈದಿರುವ ಬೀಭತ್ಸ ಘಟನೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ವೀರ್ ಸಾಗರ್ ರಸ್ತೆಯಲ್ಲಿ ನಡೆದಿದೆ. ಹತ್ಯೆಗೊಳಗಾದವರನ್ನು ಬಿಹಾರ್ ಮೂಲದ ದೀಪಕ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ. ಜಿಕೆವಿಕೆ ನಲ್ಲಿ ಸೆಕ್ಯೂರಿಟಿ ಕೆಲಸ ನಿರ್ವಹಿಸುತ್ತಿದ್ದ ಇವರು ಯಲಹಂಕದ ನ್ಯೂಟೌನ್ ಬಳಿ ಬಾಡಿಗೆ ಮನೆಯಲ್ಲಿ ಪತ್ನಿ, ಇಬ್ಬರು ಪುತ್ರಿಯರೊಂದಿಗೆ ವಾಸವಾಗಿದ್ದು, ಪತ್ನಿ ಇತ್ತೀಚೆಗೆ ಬಿಹಾರದ ತವರು ಮನೆಗೆ ತೆರಳಿದ್ದರು ಎನ್ನಲಾಗಿದೆ. ಭಾನುವಾರ

ಇಬ್ಬರು ಮಕ್ಕಳ ಮುಂದೆಯೇ ತಂದೆಯ ಭೀಕರ ಕೊಲೆ..! Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಅಕ್ರಮ ಗಣಿಗಾರಿಕೆ ತಹಶೀಲ್ದಾರ್ ದಿಢೀರ್ ದಾಳಿ ➤ ಹಿಟಾಚಿ ಹಾಗೂ ಲಾರಿ ವಶಕ್ಕೆ

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ನ. 22. ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿತ್ತು ಎನ್ನಲಾದ ಪಡು ಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ತಂದ್ರಕೆರೆ ಗಂಪದದ್ದ ಗ್ರಾನೈಟ್ ಕಲ್ಲಿನ ಕೋರೆಗೆ ರವಿವಾರ ರಾತ್ರಿ ದಿಢೀರ್ ದಾಳಿ ನಡೆಸಿದ ತಹಶೀಲ್ದಾರ್ ನೇತೃತ್ವದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ ಘಟನೆ ನಡೆದಿದೆ. ದಾಳಿಯ ವೇಳೆ ಗ್ರಾನೈಟ್ ಕಲ್ಲು ಲೋಡ್ ಹೊಂದಿದ್ದ ಒಂದು ಲಾರಿ, ಒಂದು ಹಿಟಾಚಿ ಮತ್ತು ಗ್ರಾನೈಟ್ ಕಟ್ಟಿಂಗ್ ಬ್ಲಾಸ್ಟಿಂಗ್ ಯಂತ್ರವೊಂದನ್ನು ವಶಪಡಿಸಿಕೊಂಡಿದ್ದಾರೆ. ಇಲ್ಲಿನ ಸರಕಾರಿ ಜಾಗವೊಂದರಲ್ಲಿ

ಅಕ್ರಮ ಗಣಿಗಾರಿಕೆ ತಹಶೀಲ್ದಾರ್ ದಿಢೀರ್ ದಾಳಿ ➤ ಹಿಟಾಚಿ ಹಾಗೂ ಲಾರಿ ವಶಕ್ಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸೋಮೇಶ್ವರ ಬೀಚ್ ನಲ್ಲಿ ಕಸ ಎಸೆದ ಯುವತಿಯರು ➤ ದಂಡ ವಿಧಿಸಿ ಎಚ್ಚರಿಕೆ ನೀಡಿದ ಪುರಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 22. ನಗರದ ಹೊರವಲಯದ ಸೋಮೇಶ್ವರ ಬೀಚ್ ತೀರದಲ್ಲಿ ಪ್ಲಾಸ್ಟಿಕ್ ಎಸೆದ ಪ್ರವಾಸಿ ಯುವತಿಯರಿಗೆ ಸೋಮೇಶ್ವರ ಪುರಸಭೆ ವತಿಯಿಂದ 500 ದಂಡ ವಿಧಿಸಿದ ಘಟನೆ ವರದಿಯಾಗಿದೆ. ಸೋಮೇಶ್ವರ ಸಮುದ್ರ ತೀರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಸಮುದ್ರ ತೀರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವೂ ಹೆಚ್ಚಾಗಿ ಕಂಡುಬಂದಿದೆ. ಇದರಿಂದ ಸೋಮೇಶ್ವರ ಪುರಸಭೆಯು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳ ನೇತ್ರತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ 1 ಟನ್ ನಷ್ಟು ಪ್ಲಾಸ್ಟಿಕ್ ಸಂಗ್ರಹಿಸಿದ್ದರು.

ಸೋಮೇಶ್ವರ ಬೀಚ್ ನಲ್ಲಿ ಕಸ ಎಸೆದ ಯುವತಿಯರು ➤ ದಂಡ ವಿಧಿಸಿ ಎಚ್ಚರಿಕೆ ನೀಡಿದ ಪುರಸಭೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top