ಬ್ರೇಕಿಂಗ್ ನ್ಯೂಸ್

ಮಾದಕ ವಸ್ತು ಜಾಲ: ದೆಹಲಿ-ಬೆಂಗಳೂರು-ಮಂಗಳೂರು ನಡುವೆ ಡ್ರಗ್ಸ್ ನಂಟು

(ನ್ಯೂಸ್ ಕಡಬ) newskadaba.com ಮಾ. 18 ಮಂಗಳೂರು: ಮಂಗಳೂರು-ರಾಜ್ಯದ ಅತೀ ದೊಡ್ಡ ಡ್ರಗ್ಸ್ ಜಾಲವನ್ನು ಭೇದಿಸಿ ಇಬ್ಬರು ವಿದೇಶಿ ಮಹಿಳೆಯರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಕಳೆದ ವರ್ಷದಲ್ಲಿ ದೆಹಲಿ ಮತ್ತು ಬೆಂಗಳೂರು ನಡುವೆ ೫೯ ಬಾರಿ ಪ್ರಯಾಣಿಸಿದ್ದಾರೆ. ಮಂಗಳೂರು ನಗರ ಪೊಲೀಸರು ಇತ್ತೀಚೆಗೆ ೭೫ ಕೋಟಿ ರೂ. ಮೌಲ್ಯದ ಮಾದಕವಸ್ತು ಜಾಲವನ್ನು ಪತ್ತೆಹಚ್ಚಿದ್ದು, ೩೭.೮೭ ಕೆಜಿ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಇಬ್ಬರು ವಿದೇಶಿ ಪ್ರಜೆಗಳಾದ ಬಾಂಬಾ ಫ್ಯಾಂಟಾ ಮತ್ತು ಅಬಿಗೈಲ್ ಅಡೋನಿಸ್ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಮಾರ್ಚ್ 14ರಂದು ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ […]

ಮಾದಕ ವಸ್ತು ಜಾಲ: ದೆಹಲಿ-ಬೆಂಗಳೂರು-ಮಂಗಳೂರು ನಡುವೆ ಡ್ರಗ್ಸ್ ನಂಟು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಇನ್ನು ಕೆಲವೇ ಗಂಟೆಗಳಲ್ಲಿ ಸುನೀತಾ ವಿಲಿಯಮ್ಸ್ ಬಾಹ್ಯಕಾಶದಿಂದ ಭೂಮಿಗೆ

(ನ್ಯೂಸ್ ಕಡಬ) newskadaba.com ಮಾ. 18 ವಾಷಿಂಗ್ಟನ್:  ಒಂಭತ್ತು ತಿಂಗಳಿಗೂ ಹೆಚ್ಚು ಕಾಲ ಬಾಹ್ಯಕಾಶದಲ್ಲಿ ಅದ್ಭುತ ಸಾಹಸ ಮುಗಿಸಿ ಗಗನಯಾತ್ರಿ ಸುನೀತಾ ವಿಲಿಯಮ್ಸ್ ನಾಳೆ ಬೆಳಗ್ಗಿನಜಾವ ಭೂಮಿಗೆ ವಾಪಸ್ಸಾಗಲಿದ್ದಾರೆ. ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಲೋರ್ ಅವರು ಅಮೆರಿಕದ ಸ್ಥಳೀಯ ಕಾಲಮಾನದ ಪ್ರಕಾರ ಮಂಗಳವಾರ ಸಂಜೆ 5.57ಕ್ಕೆ (ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 3:27) ಭೂಮಿಗೆ ತಲುಪಲಿದ್ದಾರೆ ಎಂದು ನಾಸಾ ತಿಳಿಸಿದೆ. ಸುನಿತಾ ವಿಲಿಯಮ್ಸ್, ಬುಚ್ ವಿಲ್ಲೋರ್ ಮತ್ತು ಮತ್ತೊಬ್ಬ ಅಮೇರಿಕನ್ ಗಗನಯಾತ್ರಿ ನಿಕ್ ಹೇಗ್ ಮತ್ತು ರಷ್ಯಾದ

ಇನ್ನು ಕೆಲವೇ ಗಂಟೆಗಳಲ್ಲಿ ಸುನೀತಾ ವಿಲಿಯಮ್ಸ್ ಬಾಹ್ಯಕಾಶದಿಂದ ಭೂಮಿಗೆ Read More »

ತಂತ್ರಜ್ಞಾನ, ಬ್ರೇಕಿಂಗ್ ನ್ಯೂಸ್

ಕಾಂಗ್ರೆಸ್ ಕಾರ್ಯಕರ್ತೆ ಮೇಲೆ ಹೆಚ್.ಎಂ ರೇವಣ್ಣ ಹಲ್ಲೆ-ದೂರು ದಾಖಲು

(ನ್ಯೂಸ್ ಕಡಬ) newskadaba.com ಮಾ. 18 ಬೆಂಗಳೂರು: ಮಾಜಿ ಸಚಿವ ಹೆಚ್.ಎಂ.ರೇವಣ್ಣ ಕಾಂಗ್ರೆಸ್ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿರುವ ಆರೋಪದ ಮೇರೆಗೆ ಬೆಂಗಳೂರಿನ ಹೈ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ ಅವರು ಕುಮಾರಕೃಪಾ ಅತಿಥಿಗೃಹದಲ್ಲಿ ಮಾರ್ಚ್ 17 ರಂದು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ಆರೋಪಿಸಿದ್ದಾರೆ. ಈ ಸಂಬಂಧ ಹೆಚ್‌ಎಂ ರೇವಣ್ಣ ವಿರುದ್ಧ ಆಕೆ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು, ಸಾಕ್ಷ್ಯಧಾರಗಳನ್ನು ನೀಡುವಂತೆ ಕೈ ಕಾರ್ಯಕರ್ತೆಗೆ ನೋಟಿಸ್

ಕಾಂಗ್ರೆಸ್ ಕಾರ್ಯಕರ್ತೆ ಮೇಲೆ ಹೆಚ್.ಎಂ ರೇವಣ್ಣ ಹಲ್ಲೆ-ದೂರು ದಾಖಲು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೋಲ್ಕತ್ತಾದಲ್ಲಿ ಪತ್ತೆಯಾದ HKU1 ಎಂಬ ಹೊಸ ವೈರಸ್ ಪತ್ತೆ

(ನ್ಯೂಸ್ ಕಡಬ) newskadaba.com ಮಾ. 18 ಬೆಂಗಳೂರು: ಕೋವಿಡ್ ನಂತರ ಈಗ ಮತ್ತೊಂದು ವೈರಸ್‌ವೊಂದು ಪತ್ತೆಯಾಗಿದೆ. ಮಾನವ ಕೊರೊನಾ ವೈರಸ್ ಅಥವಾ ಹ್ಯುಮನ್ ಕೊರೊನಾ ವೈರಸ್ ಅಥವಾ  HKU1 ಎಂದು ಕರೆಯಲ್ಪಡುವ ವೈರಸೊಂದು ಕೋಲ್ಕತ್ತಾ ಮೂಲದ ಮಹಿಳೆಯಲ್ಲಿ ಕಾಣಿಸಿಕೊಂಡಿದ್ದು, ಇದು ಕೂಡ ಉಸಿರಾಟಕ್ಕೆ ಸಮಸ್ಯೆ ತಂಡೊಡ್ಡುವ ಕಾಯಿಲೆಯಾಗಿದೆ. ಇದು ತೀವ್ರ ಸ್ವರೂಪ ಪಡೆದಲ್ಲಿ ಶೀತ ಹಾಗೂ ನ್ಯುಮೋನಿಯಾ ಉಂಟು ಮಾಡಬಹುದು. ಆದರೆ ಭಯಪಡುವ ಅಗತ್ಯವಿಲ್ಲ ಆದರು ಬಹಳ ಎಚ್ಚರಿಕೆಯಿಂದ ಇರುವಂತೆ ಎಂದು ತಜ್ಞರು ಸೂಚಿಸಿದ್ದಾರೆ. ಕೋಲ್ಕತ್ತಾದ ಗರಿಯಾ ನಿವಾಸಿಯಾದ 45 ವರ್ಷದ

ಕೋಲ್ಕತ್ತಾದಲ್ಲಿ ಪತ್ತೆಯಾದ HKU1 ಎಂಬ ಹೊಸ ವೈರಸ್ ಪತ್ತೆ Read More »

ಆರೋಗ್ಯ ಮಾಹಿತಿ, ಬ್ರೇಕಿಂಗ್ ನ್ಯೂಸ್

‘ಕೊಂಕಣ ರೈಲ್ವೆ ಭಾರತೀಯ ರೈಲ್ವೆಯಲ್ಲಿ ವಿಲೀನ’- ಕೋಟ ಶ್ರೀನಿವಾಸ ಪೂಜಾರಿ ಆಗ್ರಹ

(ನ್ಯೂಸ್ ಕಡಬ) newskadaba.com ಮಾ. 18 ಬೆಂಗಳೂರು: ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ ಸಂಬಂಧ ಕ್ರಮ ಕೈಗೊಳ್ಳುವಂತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರ ನೇತೃತ್ವದ ಶಾಸಕರ ತಂಡ ಸಚಿವರಿಗೆ ಮನವಿ ಸಲ್ಲಿಸಿದೆ. ರಾಜ್ಯ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು ಈ ಕುರಿತು ಕ್ರಮ ಕೈಗೊಳ್ಳಲು ಸಂಬಂಧಿತರಿಗೆ ಸೂಚಿಸಿದ್ದಾಗಿ ಪ್ರಕಟಣೆ ತಿಳಿಸಿದೆ.

‘ಕೊಂಕಣ ರೈಲ್ವೆ ಭಾರತೀಯ ರೈಲ್ವೆಯಲ್ಲಿ ವಿಲೀನ’- ಕೋಟ ಶ್ರೀನಿವಾಸ ಪೂಜಾರಿ ಆಗ್ರಹ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ರೇಟ್‌ ಎಷ್ಟಿದೆ?

(ನ್ಯೂಸ್ ಕಡಬ) newskadaba.com ಮಾ. 18: ಬೆಂಗಳೂರು: ಚಿನ್ನದ ದರ ದಲ್ಲಿ ಇಂದು ಮತ್ತೆ ಏರಿಕೆ ಕಂಡುಬಂದಿದ್ದು, ಗ್ರಾಹಕರಿಗೆ ಮತ್ತೆ ತಲೆನೋವು ಹೆಚ್ಚಾಗುವಂತಾಗಿದೆ. ಮಂಗಳವಾರ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 40ರೂ. ಏರಿಕೆ ಆಗಿ 8,250 ರೂ. ತಲುಪಿದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 44ರೂ. ಏರಿಕೆಯಾಗಿ 9,000 ರೂ.ಗೆ ತಲುಪಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನ 66,000 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 82,500 ರೂ. ಮತ್ತು 100 ಗ್ರಾಂಗೆ

ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ರೇಟ್‌ ಎಷ್ಟಿದೆ? Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುಪ್ರೀಂ ಕೋರ್ಟ್‌ನ ಜಡ್ಜ್ ಆಗಿ ಜೊಯಮಲ್ಯ ಬಾಗ್ಚಿ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಮಾ. 18: ಸುಪ್ರೀಂ ಕೋರ್ಟ್‌ನ ಜಡ್ಜ್ ಆಗಿ ಜೊಯಮಲ್ಯ ಬಾಗ್ಚಿ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ. ಅವರು 2031ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಲಿದ್ದಾರೆ.ಇದಕ್ಕೂ ಮೊದಲು ಕೋಲ್ಕತ್ತಾ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದ ಜೊಯಮಲ್ಯ ಬಾಗ್ಚಿ ಅವರನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರನ್ನಾಗಿ ನೇಮಕ ಮಾಡುವಂತೆ ಮಾ.10 ರಂದು ಅನುಮೋದನೆ ನೀಡಿತ್ತು. ಇಂದು ಸುಪ್ರೀಂ ಕೋರ್ಟ್ ಆವರಣದಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ಅವರು ನ್ಯಾಯಾಧೀಶ ಜೊಯಮಲ್ಯ ಬಾಗ್ಚಿ ಅವರಿಗೆ ಪ್ರಮಾಣ

ಸುಪ್ರೀಂ ಕೋರ್ಟ್‌ನ ಜಡ್ಜ್ ಆಗಿ ಜೊಯಮಲ್ಯ ಬಾಗ್ಚಿ ಅಧಿಕಾರ ಸ್ವೀಕಾರ Read More »

ಬ್ರೇಕಿಂಗ್ ನ್ಯೂಸ್

PM Internship ಯೋಜನೆ ಆ್ಯಪ್ ಬಿಡುಗಡೆ

(ನ್ಯೂಸ್ ಕಡಬ) newskadaba.com ಮಾ. 18: ‘ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಸ್ಕೀಮ್’ ಆ್ಯಪ್ ಅನ್ನು ಇಂದು ಸಚಿವೆ ನಿರ್ಮಲಾ ಸೀತಾರಾಮನ್ ಬಿಡುಗಡೆ ಮಾಡಿದರು. ಕೈಗಾರಿಕೆಗಳಲ್ಲಿ ಗಮನಾರ್ಹ ಬದಲಾವಣೆಗಳು ಆಗುತ್ತಿದೆ, AI, ರೊಬೊಟಿಕ್ಸ್ ಹಾಗೂ ಇತರ ಪ್ರಗತಿಗಳನ್ನು ಒಳಗೊಂಡಿವೆ ಎಂದಿರುವ ನಿರ್ಮಲಾ ಸೀತಾರಾಮನ್ ಪ್ರಧಾನ ಮಂತ್ರಿ ಮೋದಿಯವರ ದೂರದೃಷ್ಟಿಯ ವಿಧಾನವನ್ನು  ಶ್ಲಾಘಿಸಿದರು. ‘ಪ್ರಧಾನ ಮಂತ್ರಿ ಇಂಟರ್ನ್ ಶಿಪ್ ಸ್ಕೀಮ್ ಆ್ಯಪ್’ ಬಿಡುಗಡೆ ಸಂದರ್ಭದಲ್ಲಿ ಉದ್ಯೋಗ ದಾಖಲಾತಿಗಳನ್ನು ಹೆಚ್ಚಿಸಲು, ಉದ್ಯೋಗಾಕಾಂಕ್ಷಿಗಳು ಹಾಗೂ ಉದ್ಯೋಗದಾತರಿಗೆ ಬೆಂಬಲ ನೀಡಲು ಐದು ವಿಭಿನ್ನ ಯೋಜನೆಗಳನ್ನು ಘೋಷಿಸಲಾಗಿದೆ ಎಂದರು.

PM Internship ಯೋಜನೆ ಆ್ಯಪ್ ಬಿಡುಗಡೆ Read More »

ಬ್ರೇಕಿಂಗ್ ನ್ಯೂಸ್

ತುಳು- ಕನ್ನಡ ವಿದ್ವಾಂಸ ವಾಮನ ನಂದಾವರ ನಿಧನ

(ನ್ಯೂಸ್ ಕಡಬ) newskadaba.com ಮಾ. 15 : ಮಂಗಳೂರು: ತುಳು- ಕನ್ನಡ ವಿದ್ವಾಂಸ ಹಾಗೂ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾಗಿದ್ದ ಡಾ.ವಾಮನ ನಂದಾವರ (81) ಶನಿವಾರ ನಿಧನರಾದರು. ಕಳೆದ ಕೆಲ ವರ್ಷಗಳಿಂದ ಅವರು ಅನಾರೋಗ್ಯ ಪೀಡಿತರಾಗಿದ್ದರು. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರ ಗ್ರಾಮದ ಇವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾಗಿದ್ದರು. ಹೆಸರಾಂತ ಜಾನಪದ ವಿದ್ವಾಂಸರಾಗಿದ್ದ ಡಾ. ವಾಮನ ಅವರು ಹೇಮಾಂಶು ಪ್ರಕಾಶನದ ಮೂಲಕ ಅನೇಕ ಬರಹಗಾರರನ್ನು, ಕಲಾವಿದರನ್ನು ರೂಪಿಸಿದ್ದಲ್ಲದೇ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ದಕ್ಷಿಣ ಕನ್ನಡ

ತುಳು- ಕನ್ನಡ ವಿದ್ವಾಂಸ ವಾಮನ ನಂದಾವರ ನಿಧನ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ವೈಮಾನಿಕ ದಾಳಿಯಲ್ಲಿ ಐಸಿಸ್ ಉಗ್ರ ಸಂಘಟನೆಯ ಮತ್ತೊಬ್ಬ ಪ್ರಮುಖನ ಹತ್ಯೆ

(ನ್ಯೂಸ್ ಕಡಬ) newskadaba.com ಮಾ. 15 : ಐಸಿಸ್ ಸಂಘಟನೆಯ ಪ್ರಮುಖ ನಾಯಕನನ್ನು ನಿಖರ ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಿರುವುದಾಗಿ ಅಮೆರಿಕ ಘೋಷಿಸಿದೆ. ಇರಾಕ್‌ನ ಅಲ್ ಅನ್ವರ್ ಪ್ರಾಂತ್ಯದಲ್ಲಿ ನಡೆದ ನಿಖರ ವೈಮಾನಿಕ ದಾಳಿಯಲ್ಲಿ ಅಬು ಖದೀಜಾ ಎಂದೂ ಕರೆಯಲ್ಪಡುವ ಅಬ್ದಲ್ಲಾ ಮಕ್ಕಿ ಮುಸ್ಲಿಹ್ ಅಲ್-ರಿಫಾಯಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಇರಾಕ್ ಗುಪ್ತಚರ ಮತ್ತು ಭದ್ರತಾ ಪಡೆಗಳ ಸಮನ್ವಯದೊಂದಿಗೆ ಅಮೆರಿಕ ಘೋಷಿಸಿದೆ. ಅಬು ಖದೀಜಾ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕ ಗುಂಪಿನ ಜಾಗತಿಕ ಕಾರ್ಯಾಚರಣೆಗಳ ಮುಖ್ಯಸ್ಥರಾಗಿದ್ದರು ಮತ್ತು ಜಾಗತಿಕವಾಗಿ ಗುಂಪಿನ ಎರಡನೇ

ವೈಮಾನಿಕ ದಾಳಿಯಲ್ಲಿ ಐಸಿಸ್ ಉಗ್ರ ಸಂಘಟನೆಯ ಮತ್ತೊಬ್ಬ ಪ್ರಮುಖನ ಹತ್ಯೆ Read More »

ಬ್ರೇಕಿಂಗ್ ನ್ಯೂಸ್
Scroll to Top