ಬ್ರೇಕಿಂಗ್ ನ್ಯೂಸ್

ಒಂದು ರಾಷ್ಟ್ರ- ಒಂದು ಚುನಾವಣೆಯಿಂದ ಕಡಿಮೆ ಖರ್ಚು, ಅಭಿವೃದ್ಧಿ ಹೆಚ್ಚು: ಅಣ್ಣಾಮಲೈ

(ನ್ಯೂಸ್ ಕಡಬ) newskadaba.com ಮಾ. 15 ಬೆಂಗಳೂರು : ಒಂದು ದೇಶ ಒಂದೇ ಚುನಾವಣೆಯಿಂದ ಪ್ರಾದೇಶಿಕ ಪಕ್ಷವು ರಾಷ್ಟ್ರಹಿತದೊಂದಿಗೆ ಹಾಗೂ ರಾಷ್ಟ್ರೀಯ ಪಕ್ಷವು ಪ್ರಾದೇಶಿಕ ಹಿತೈಷಿಯಾಗಿ ಚಿಂತಿಸುವಂತೆ ಆಗಲಿದೆ ಎಂದು ತುಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ತಿಳಿಸಿದರು. ಪ್ರಜಾಸತ್ತಾತ್ಮಕ ವ್ಯವಸ್ಥೆ ಬಲಪಡಿಸುವ ಮತದಾನದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವಂತಾಗಬೇಕು ಎಂದು ಆಶಿಸಿದ್ದಾರೆ. ತಮಿಳುನಾಡು ಬಜೆಟ್‌ನಲ್ಲಿ ರೂಪಾಯಿ ಚಿಹ್ನೆಯನ್ನು ತಮಿಳು ಅಕ್ಷರ ‘ರೂ’ ನೊಂದಿಗೆ ಬದಲಾಯಿಸುವ ಡಿಎಂಕೆ ನಿರ್ಧಾರವನ್ನು ಉಲ್ಲೇಖಿಸಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ, ‘ಒಂದು ರಾಷ್ಟ್ರ, […]

ಒಂದು ರಾಷ್ಟ್ರ- ಒಂದು ಚುನಾವಣೆಯಿಂದ ಕಡಿಮೆ ಖರ್ಚು, ಅಭಿವೃದ್ಧಿ ಹೆಚ್ಚು: ಅಣ್ಣಾಮಲೈ Read More »

ಬ್ರೇಕಿಂಗ್ ನ್ಯೂಸ್

ಶಿವಸೇನಾ ನಾಯಕನ ಹತ್ಯೆ ಪ್ರಕರಣ – ಮೂವರ ಬಂಧನ

(ನ್ಯೂಸ್ ಕಡಬ) newskadaba.com ಮಾ. 15 ಬೆಂಗಳೂರು: ಸಿಐಎ ಮೋಗಾ ಮತ್ತು ಸಿಐಎ ಮಾಲೌತ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಶಿವಸೇನೆಯ ಜಿಲ್ಲಾಧ್ಯಕ್ಷ ಮಂಗತ್ ರಾಯ್ ಮಂಗಾ ಹತ್ಯೆಗೆ ಸಂಬಂಧಿಸಿದಂತೆ ಮೂವರು ಶಂಕಿತರನ್ನು ಬಂಧಿಸಲಾಯಿತು. ಶಂಕಿತರನ್ನು ಅರುಣ್ ಅಲಿಯಾಸ್ ದೀಪು, ಅರುಣ್ ಅಲಿಯಾಸ್ ಸಿಂಘಾ ಮತ್ತು ರಾಜ್‌ವೀರ್ ಅಲಿಯಾಸ್ ಲಡ್ಡೊ ಎಂದು ಗುರುತಿಸಲಾಗಿದೆ. ಮಂಗತ್ ರಾಯ್ (ಶಿವಸೇನಾ ಮೋಗಾ) ಹತ್ಯೆಯನ್ನು ಎಫ್‌ಐಆರ್ ಸಂಖ್ಯೆ 64/2025 ರ ಅಡಿಯಲ್ಲಿ ತನಿಖೆ ನಡೆಸಲಾಗುತ್ತಿದೆ. ಇದನ್ನು ಮೋಗಾದ ಪಿಎಸ್ ಸಿಟಿ ಸೌತ್‌ನಲ್ಲಿ ಸೆಕ್ಷನ್ 103(1), 191(3), 190

ಶಿವಸೇನಾ ನಾಯಕನ ಹತ್ಯೆ ಪ್ರಕರಣ – ಮೂವರ ಬಂಧನ Read More »

ಬ್ರೇಕಿಂಗ್ ನ್ಯೂಸ್

ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ: ವಿಪಕ್ಷಗಳ ವಿರೋಧ ನಡುವೆಯೂ ಸಚಿವ ಸಂಪುಟ ಗ್ರೀನ್ ಸಿಗ್ನಲ್

(ನ್ಯೂಸ್ ಕಡಬ) newskadaba.com ಮಾ. 15 ಬೆಂಗಳೂರು: ಪರಿಶಿಷ್ಟ ಜಾತಿ–ಪಂಗಡ, ಹಿಂದುಳಿದವರು ಹಾಗೂ ಮುಸ್ಲಿಂ ಸಮುದಾಯದ ಗುತ್ತಿಗೆದಾರರಿಗೆ ರೂ.2 ಕೋಟಿ ವೆಚ್ಚದ ಕಾಮಗಾರಿಗಳು, ರೂ.1 ಕೋಟಿವರೆಗಿನ ಸರಕು ಮತ್ತು ಸೇವೆಗಳ ಪೂರೈಕೆಯ ಟೆಂಡರ್‌ನಲ್ಲಿ ಮೀಸಲಾತಿ ಕಲ್ಪಿಸುವ ತೀರ್ಮಾನದ ಜೊತೆಗೆ ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ನೀಡಲು ರಾಜ್ಯ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ. ವಿಧಾನಸೌಧದ ಕ್ಯಾಬಿನೆಟ್ ಹಾಲ್​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ ಗುತ್ತಿಗೆಯಲ್ಲಿ ಮುಸ್ಲೀಮರಿಗೆ ಮೀಸಲಾತಿ ವಿಚಾರವಾಗಿ ಬಜೆಟ್​ನಲ್ಲಿ ಘೋಷಣೆ ಮಾಡಿದಂತೆ

ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ: ವಿಪಕ್ಷಗಳ ವಿರೋಧ ನಡುವೆಯೂ ಸಚಿವ ಸಂಪುಟ ಗ್ರೀನ್ ಸಿಗ್ನಲ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಕ್ರಮ ಪಿಸ್ತೂಲ್ ಮಾರಾಟ ಜಾಲ ಪತ್ತೆ: ಐವರ ಬಂಧನ

(ನ್ಯೂಸ್ ಕಡಬ) newskadaba.com ಮಾ. 15: ಮಂಗಳೂರು : ಅಕ್ರಮ ಪಿಸ್ತೂಲ್ ಮಾರಾಟ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಪತ್ತೆ ಹೆಚ್ಚಿದ್ದಾರೆ. ಕರಾವಳಿಯಲ್ಲಿ ನಿಷೇಧಿತ  PFI ಸಂಘಟನೆ ಮತ್ತೆ ಆಕ್ಟಿವ್ ಆಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.  ಕೇರಳ ಮೂಲದ ಕ್ರಿಮಿನಲ್ ಗಳಾದ ಅಬ್ದುಲ್ ಲತೀಫ್, ನೌಫಲ್, ಮಹಮ್ಮದ್ ಅಸ್ಗರ್, ಮಹಮ್ಮದ್ ಸಾಲಿ ಬಂಧಿತರು. ಬಂಧಿತರಿಂದ ಮೂರು ಪಿಸ್ತೂಲ್ ಮತ್ತು ಆರು ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.  ಕೇರಳದಲ್ಲಿ ನಿಷೇಧಿತ PFI ಸಂಘಟನೆಯೊಂದಿಗೆ ಆರೋಪಿಗಳು ನೇರ ಸಂಬಂಧ ಹೊಂದಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ

ಅಕ್ರಮ ಪಿಸ್ತೂಲ್ ಮಾರಾಟ ಜಾಲ ಪತ್ತೆ: ಐವರ ಬಂಧನ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮಾರ್ಚ್ ನಲ್ಲಿ 2 ದಿನ ರಾಷ್ಟ್ರಾದ್ಯಂತ ಬ್ಯಾಂಕ್ ಮುಷ್ಕರ

(ನ್ಯೂಸ್ ಕಡಬ) newskadaba.com ಮಾ. 14 :ನವದೆಹಲಿ: ಭಾರತೀಯ ಬ್ಯಾಂಕುಗಳ ಸಂಘ (ಐಬಿಎ) ಜೊತೆ ಪ್ರಮುಖ ಬೇಡಿಕೆಗಳ ಕುರಿತು ನಡೆದ ಚರ್ಚೆಗಳು ಯಾವುದೇ ಸಕಾರಾತ್ಮಕ ಫಲಿತಾಂಶವನ್ನು ನೀಡದ ಕಾರಣ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಯುಎಫ್ ಬಿಯು ನಿರ್ಧರಿಸಿದೆ. ಐಬಿಎ ಜೊತೆಗಿನ ಸಭೆಯಲ್ಲಿ, ಎಲ್ಲಾ ಯುಎಫ್‌ಬಿಯು ಘಟಕಗಳು ಎಲ್ಲಾ ಕೇಡರ್‌ಗಳಲ್ಲಿ ನೇಮಕಾತಿ ಮತ್ತು ಐದು ದಿನಗಳ ಕೆಲಸದ ವಾರ ಸೇರಿದಂತೆ ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸಿತ್ತು. ಆದರೂ, ಪ್ರಮುಖ ಸಮಸ್ಯೆಗಳು ಬಗೆಹರಿಯದೆ ಉಳಿದಿವೆ ಎಂದು ಬ್ಯಾಂಕ್ ನೌಕರರ ರಾಷ್ಟ್ರೀಯ ಒಕ್ಕೂಟ (ಎನ್‌ಸಿಬಿಇ) ಪ್ರಧಾನ ಕಾರ್ಯದರ್ಶಿ ಎಲ್ ಚಂದ್ರಶೇಖರ್

ಮಾರ್ಚ್ ನಲ್ಲಿ 2 ದಿನ ರಾಷ್ಟ್ರಾದ್ಯಂತ ಬ್ಯಾಂಕ್ ಮುಷ್ಕರ Read More »

ಬ್ರೇಕಿಂಗ್ ನ್ಯೂಸ್

ಮಾ.19 ರಂದು ಸುನೀತಾ ವಿಲಿಯಮ್ಸ್ ಭೂಮಿಗೆ ವಾಪಾಸ್ !

(ನ್ಯೂಸ್ ಕಡಬ) newskadaba.com ಮಾ. 14 : ವಾಷಿಂಗ್ಟನ್:‌ ಒಂಬತ್ತು ತಿಂಗಳಿನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಮಾರ್ಚ್ 19 ರ ಮೊದಲು ಭೂಮಿಗೆ ಹಿಂತಿರುಗುವುದಿಲ್ಲ ಎಂದು ನಾಸಾ ದೃಢಪಡಿಸಿದೆ. ಮಾರ್ಚ್ 19 ರ ನಂತರ ಅವರು ಭೂಮಿಗೆ ವಾಪಾಸಗಲಿದ್ದಾರೆ. ಎಂಟು ದಿನಗಳ ವಾಸ್ತವ್ಯಕ್ಕಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ಐಎಸ್ಎಸ್) ತಲುಪಿದ್ದ ಇವರಿಬ್ಬರು ಬೋಯಿಂಗ್ನ ದೋಷಪೂರಿತ ಸ್ಟಾರ್ಲೈನರ್ನಲ್ಲಿ ಪ್ರಯಾಣಿಸಿದ ನಂತರ ಒಂಬತ್ತು ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದರು. ಅಮೆರಿಕದ ಬಾಹ್ಯಾಕಾಶ

ಮಾ.19 ರಂದು ಸುನೀತಾ ವಿಲಿಯಮ್ಸ್ ಭೂಮಿಗೆ ವಾಪಾಸ್ ! Read More »

ಬ್ರೇಕಿಂಗ್ ನ್ಯೂಸ್

ಬೈಕ್‌ನಲ್ಲಿ ಬೆನ್ನಟ್ಟಿ ಗುಂಡಿಕ್ಕಿ ಶಿವಸೇನಾ ನಾಯಕನ ಹತ್ಯೆ

(ನ್ಯೂಸ್ ಕಡಬ) newskadaba.com ಮಾ. 14 : ಮೊಗಾದಲ್ಲಿ ಶಿವಸೇನೆಯ ಜಿಲ್ಲಾಧ್ಯಕ್ಷನನ್ನು ಬೈಕ್‌ನಲ್ಲಿ ಬೆನ್ನಟ್ಟಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ದಾಳಿಯಲ್ಲಿ ಒಬ್ಬ ಬಾಲಕ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ರಾತ್ರಿ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಗತ್ ರೈ ಮಂಗಾ ಹಾಲು ಖರೀದಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ರಾತ್ರಿ 10 ಗಂಟೆ ಸುಮಾರಿಗೆ ಮೂವರು ಅಪರಿಚಿತ ವ್ಯಕ್ತಿಗಳು ಆತನ ಮೇಲೆ ಗುಂಡು ಹಾರಿಸಿದರು ಎನ್ನಲಾಗಿದೆ, ಆದರೆ ಗುಂಡು ಮಂಗಾನ ಕೈಯಿಂದ ತಪ್ಪಿ 12 ವರ್ಷದ ಬಾಲಕನಿಗೆ

ಬೈಕ್‌ನಲ್ಲಿ ಬೆನ್ನಟ್ಟಿ ಗುಂಡಿಕ್ಕಿ ಶಿವಸೇನಾ ನಾಯಕನ ಹತ್ಯೆ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕೊಡಗು : 7ನೇ ತರಗತಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು

(ನ್ಯೂಸ್ ಕಡಬ) newskadaba.com ಮಾ. 14: ಇಲ್ಲಿನ ವಸತಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ. ಪೂರ್ವಿಕಾ (13) ಸಾವನ್ನಪ್ಪಿದ ವಿದ್ಯಾರ್ಥಿನಿ. ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲ್ಲೂಕಿನ, ಕ್ಯಾತೆ ಗ್ರಾಮದ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದ ಪೂರ್ವಿಕಾ ನನಗೆ ಸುಸ್ತಾಗುತ್ತಿದೆ ಎಂದು ಹೇಳಿದ್ದಳು. ಕೂಡಲೇ ಶಿಕ್ಷಕರು ಆಕೆಗೆ ಕೊಡ್ಲಿಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹಾಸನದ ಖಾಸಗಿ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಸಾವನ್ನಪ್ಪಿದ್ದಾಳೆ.

ಕೊಡಗು : 7ನೇ ತರಗತಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಮೇರಿಕನ್ ಏರ್‌ಲೈನ್ಸ್ ವಿಮಾನಕ್ಕೆ ಬೆಂಕಿ, ಅಚ್ಚರಿಯ ರೀತಿಯಲ್ಲಿ ಪ್ರಯಾಣಿಕರು ಪಾರು

(ನ್ಯೂಸ್ ಕಡಬ) newskadaba.com ಮಾ. 14: ಹಾರಾಟದ ವೇಳೆ ಸಮಸ್ಯೆ ಉಂಟಾಗಿ ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಅಮೇರಿಕನ್ ಏರ್‌ಲೈನ್ಸ್ ವಿಮಾನವು ಬೆಂಕಿಗೆ ಆಹುತಿಯಾಗಿದ್ದು, ಅಚ್ಚರಿಯಲ್ಲಿ ಪ್ರಯಾಣಿಕರು ಜೀವ ಉಳಿಸಿಕೊಳ್ಳಲು ಹೊರಗೆ ಹಾರಿದ್ದಾರೆ. ಕೊಲೊರಾಡೋ ಸ್ಟಿಂಗ್ಸ್ ವಿಮಾನ ನಿಲ್ದಾಣದಿಂದ ಡಲ್ಲಾಸ್ ಫೋರ್ಟ್ ವರ್ತ್ಗೆ ತೆರಳುತ್ತಿದ್ದ ಅಮೇರಿಕನ್ ರ್ಏಲೈನ್ಸ್ ಬೋಯಿಂಗ್ 737-800 ವಿಮಾನದ ಎಂಜಿನ್ ಸಮಸ್ಯೆ ಗಮನಿಸಿ ಪೈಲಟ್ ತುರ್ತು ವರದಿ ಮಾಡಿದ ನಂತರ ಹತ್ತಿರದ ಡೆನ್ವರ್‌ಗೆ ತಿರುಗಿಸಲಾಯಿತು ಮತ್ತು ಸುರಕ್ಷಿತವಾಗಿ ಇಳಿಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಅಮೇರಿಕನ್ ಏರ್‌ಲೈನ್ಸ್ ವಿಮಾನಕ್ಕೆ ಬೆಂಕಿ, ಅಚ್ಚರಿಯ ರೀತಿಯಲ್ಲಿ ಪ್ರಯಾಣಿಕರು ಪಾರು Read More »

ಬ್ರೇಕಿಂಗ್ ನ್ಯೂಸ್

ಕೃತಕ ಹೃದಯದಿಂದ 100 ದಿನಗಳ ಕಾಲ ಬದುಕುಳಿದ ವ್ಯಕ್ತಿ

(ನ್ಯೂಸ್ ಕಡಬ) newskadaba.com ಮಾ. 14: ಆಸ್ಟ್ರೇಲಿಯಾದಲ್ಲಿ ಕೃತಕ ಹೃದಯ ಅಳವಡಿಸಿದ ವ್ಯಕ್ತಿಯೊಬ್ಬರು 100 ದಿನಗಳ ಕಾಲ ಆರೋಗ್ಯವಾಗಿ ಬದುಕುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಆಸ್ಟ್ರೇಲಿಯಾದ 40 ವರ್ಷದ ರೋಗಿಯೊಬ್ಬರು ಹೃದಯ ನೀಡುವಂತಹ ದಾನಿಗಾಗಿ ಕಾಯುತ್ತಿದ್ದರಿಂದ ವೈದ್ಯರು ಅವರಿಗೆ ಕೃತಕ ಟೈಟಾನಿಯಂ ಹೃದಯವನ್ನು ಅಳವಡಿಸಿದ್ದಾರೆ. ಅಚ್ಚರಿ ಎಂಬಂತೆ ಅವರು ನೂರು ದಿನಗಳ ಕಾಲ ಬದುಕಿದ್ದು, ಆ ಮೂಲಕ ಈ ತಂತ್ರಜ್ಞಾನದಿಂದ ದೀರ್ಘಕಾಲ ಬದುಕಿದ ವ್ಯಕ್ತಿ ಎಂದು ಎನಿಸಿಕೊಂಡಿದ್ದಾರೆ. ಹೃದಯ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿ ಪ್ರಸ್ತುತ ಇದೀಗ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿ

ಕೃತಕ ಹೃದಯದಿಂದ 100 ದಿನಗಳ ಕಾಲ ಬದುಕುಳಿದ ವ್ಯಕ್ತಿ Read More »

ಬ್ರೇಕಿಂಗ್ ನ್ಯೂಸ್
Scroll to Top