ಬ್ರೇಕಿಂಗ್ ನ್ಯೂಸ್

ಮುಂದಿನ 3 ದಿನ ರಾಜ್ಯಾದ್ಯಂತ ಭಾರೀ ಮಳೆ ಮುನ್ಸೂಚನೆ: ಕರಾವಳಿ ಜಿಲ್ಲೆಗಳಿಗೆ ಹೈ ಅಲರ್ಟ್!

(ನ್ಯೂಸ್‌ ಕಡಬ) newskadaba.com,  ಜು.10 : ಮುಂಬರುವ ಮೂರು ದಿನಗಳ ಕಾಲ ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗಂಟೆಗೆ 50 ರಿಂದ 60 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಮುನ್ನೆಚ್ಚರಿಕೆಯಾಗಿ ಸಮುದ್ರ ತೀರ ಹಾಗೂ ತಗ್ಗು ಪ್ರದೇಶದ ಜನರಿಗೆ ಸುರಕ್ಷಿತವಾಗಿರಲು ಸೂಚಿಸಲಾಗಿದೆ.

ಮುಂದಿನ 3 ದಿನ ರಾಜ್ಯಾದ್ಯಂತ ಭಾರೀ ಮಳೆ ಮುನ್ಸೂಚನೆ: ಕರಾವಳಿ ಜಿಲ್ಲೆಗಳಿಗೆ ಹೈ ಅಲರ್ಟ್! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆಸ್ಟ್ರೇಲಿಯಾಕ್ಕೆ ಪ್ರಧಾನಿ ಮೋದಿ ಭೇಟಿ: ಮೆಲ್ಬೋರ್ನ್‌ನಲ್ಲಿ ಅನಿವಾಸಿ ಭಾರತೀಯರಿಂದ ಭವ್ಯ ಸಾಂಪ್ರದಾಯಿಕ ಸ್ವಾಗತ

(ನ್ಯೂಸ್‌ ಕಡಬ) newskadaba.com ಜು. 09: ಮೂರು ರಾಷ್ಟ್ರಗಳ ಪ್ರವಾಸದ ಎರಡನೇ ಹಂತವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೂರು ದಿನಗಳ ಅಧಿಕೃತ ಭೇಟಿಗಾಗಿ ಆಸ್ಟ್ರೇಲಿಯಾದ ಮೆಲ್ಬೋರ್ನ್‌ಗೆ ಆಗಮಿಸಿದ್ದು, ಅಲ್ಲಿನ ಅನಿವಾಸಿ ಭಾರತೀಯ ಸಮುದಾಯದಿಂದ ಅಭೂತಪೂರ್ವ ಸಾಂಪ್ರದಾಯಿಕ ಸ್ವಾಗತ ಲಭಿಸಿದೆ. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರನ್ನು ನೂರಾರು ಅನಿವಾಸಿ ಭಾರತೀಯರು ತ್ರಿವರ್ಣ ಧ್ವಜ ಹಾರಿಸಿ, ‘ಭಾರತ್ ಮಾತಾ ಕೀ ಜೈ’ ಮತ್ತು ‘ಮೋದಿ, ಮೋದಿ’ ಘೋಷಣೆಗಳೊಂದಿಗೆ ಆತ್ಮೀಯವಾಗಿ ಬರಮಾಡಿಕೊಂಡರು. ‘ಆಸ್ಟ್ರೇಲಿಯನ್ ಇಂಡಿಯನ್ ಆರ್ಕೆಸ್ಟ್ರಾ’ ತಂಡವು ಪ್ರಸ್ತುತಪಡಿಸಿದ

ಆಸ್ಟ್ರೇಲಿಯಾಕ್ಕೆ ಪ್ರಧಾನಿ ಮೋದಿ ಭೇಟಿ: ಮೆಲ್ಬೋರ್ನ್‌ನಲ್ಲಿ ಅನಿವಾಸಿ ಭಾರತೀಯರಿಂದ ಭವ್ಯ ಸಾಂಪ್ರದಾಯಿಕ ಸ್ವಾಗತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಹಾರಾಷ್ಟ್ರ ಭಾರಿ ಮಳೆ: ಪ್ರವಾಹದ ನೀರಿನಲ್ಲಿ ತೇಲಿಹೋದ HPCL ಘಟಕದ 3,000 ಗ್ಯಾಸ್ ಸಿಲಿಂಡರ್‌ಗಳು!

(ನ್ಯೂಸ್‌ ಕಡಬ) newskadaba.com,  ಜು.09 : ಮುಂಬೈ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಯಗಢ ಜಿಲ್ಲೆಯ ಪನ್ವೇಲ್ ತಾಲೂಕಿನ ಚವಾಣೆ ಗ್ರಾಮದಲ್ಲಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಘಟಕಕ್ಕೆ ಪ್ರವಾಹದ ನೀರು ನುಗ್ಗಿದ್ದು, ಸುಮಾರು 3,000 ಗ್ಯಾಸ್ ಸಿಲಿಂಡರ್‌ಗಳು ನೀರಿನಲ್ಲಿ ತೇಲಿ ಹೋಗಿವೆ. ಪಾತಾಳಗಂಗಾ ನದಿಯ ಪ್ರವಾಹದ ಹೊಡೆತಕ್ಕೆ ಸಿಲುಕಿ HPCL ಬಾಟ್ಲಿಂಗ್ ಘಟಕದ ಆವರಣದಲ್ಲಿದ್ದ ಗ್ಯಾಸ್ ತುಂಬಿದ ಹಾಗೂ ಖಾಲಿ ಸಿಲಿಂಡರ್‌ಗಳು ನದಿಯಲ್ಲಿ ಕೊಚ್ಚಿ ಹೋಗಿವೆ. ನೂರಾರು ಸಿಲಿಂಡರ್‌ಗಳು ತೇಲುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ

ಮಹಾರಾಷ್ಟ್ರ ಭಾರಿ ಮಳೆ: ಪ್ರವಾಹದ ನೀರಿನಲ್ಲಿ ತೇಲಿಹೋದ HPCL ಘಟಕದ 3,000 ಗ್ಯಾಸ್ ಸಿಲಿಂಡರ್‌ಗಳು! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪಣಂಬೂರು ಬೀಚ್‌ನಲ್ಲಿ ಭಾರಿ ಕಡಲು ಕೊರೆತ: ಎರಡು ಬೃಹತ್ ಮರಗಳು ಧರೆಗುರುಳಿ, ಸ್ಥಳೀಯರಲ್ಲಿ ಆತಂಕ!

(ನ್ಯೂಸ್‌ ಕಡಬ) newskadaba.com,  ಜು.09 ಮಂಗಳೂರು: ನಗರದ ಪ್ರಸಿದ್ಧ ಪಣಂಬೂರು ಅಂತರರಾಷ್ಟ್ರೀಯ ಬೀಚ್‌ನಲ್ಲಿ ಕಳೆದ ಕೆಲವು ದಿನಗಳಿಂದ ಬೀಸುತ್ತಿರುವ ಭಾರಿ ಗಾಳಿ ಮತ್ತು ಕಡಲಬ್ಬರದ ಪರಿಣಾಮವಾಗಿ ಕಡಲು ಕೊರೆತ ಉಂಟಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬೀಚ್‌ನ ಪ್ರಮುಖ ತಡೆಗೋಡೆ, ಕಚೇರಿ ಹಾಗೂ ಟಿಕೆಟ್ ಕೌಂಟರ್ ಸಮೀಪ ಕಡಲು ಕೊರೆತ ತೀವ್ರವಾಗಿದ್ದು, ಎರಡು ಬೃಹತ್ ಮರಗಳು ಧರೆಗುರುಳಿವೆ.ಕೋಸ್ಟ್ ಗಾರ್ಡ್ ಕಚೇರಿ ಸಮೀಪ ಹೆಚ್ಚಿನ ಹಾನಿಯಾಗದಂತೆ ತಡೆಯಲು ತಾತ್ಕಾಲಿಕವಾಗಿ ಬೃಹತ್ ಕಲ್ಲುಗಳನ್ನು ಅಳವಡಿಸಲಾಗಿದೆ. ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಿದ್ದರೂ, ತೀರದಲ್ಲಿ

ಪಣಂಬೂರು ಬೀಚ್‌ನಲ್ಲಿ ಭಾರಿ ಕಡಲು ಕೊರೆತ: ಎರಡು ಬೃಹತ್ ಮರಗಳು ಧರೆಗುರುಳಿ, ಸ್ಥಳೀಯರಲ್ಲಿ ಆತಂಕ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಏರ್‌ಟೆಲ್, ಜಿಯೋ ಗ್ರಾಹಕರಿಗೆ ಬಿಗ್ ಶಾಕ್: ₹51 ಪ್ಲಾನ್‌ನಲ್ಲಿ ಬಿಎಸ್‌ಎನ್‌ಎಲ್‌ ಬೆಸ್ಟ್!

(ನ್ಯೂಸ್‌ ಕಡಬ) newskadaba.com,  ಜು.09 ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ಸೂಕ್ತವಾದ ಡೇಟಾ ಮತ್ತು ಕರೆ ಸೌಲಭ್ಯ ನೀಡಲು ಟೆಲಿಕಾಂ ಕಂಪನಿಗಳ ನಡುವೆ ತೀವ್ರ ಪೈಪೋಟಿ ನಡೆದಿದೆ. ಏರ್‌ಟೆಲ್, ಜಿಯೋ ಮತ್ತು ಬಿಎಸ್‌ಎನ್‌ಎಲ್ ಕಂಪನಿಗಳ ₹51 ಆಸುಪಾಸಿನ ಪ್ಲಾನ್‌ಗಳ ಹೋಲಿಕೆ ಇಲ್ಲಿದೆ: 1. ಬಿಎಸ್‌ಎನ್‌ಎಲ್‌ (BSNL) – ₹51 ಪ್ಲಾನ್: ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 ಉಚಿತ SMS. ದಿನಕ್ಕೆ 2GB ಹೈ-ಸ್ಪೀಡ್ ಡೇಟಾ (28 ದಿನಗಳಿಗೆ ಒಟ್ಟು 56GB ಡೇಟಾ).ವ್ಯಾಲಿಡಿಟಿ: 28 ದಿನಗಳು.  

ಏರ್‌ಟೆಲ್, ಜಿಯೋ ಗ್ರಾಹಕರಿಗೆ ಬಿಗ್ ಶಾಕ್: ₹51 ಪ್ಲಾನ್‌ನಲ್ಲಿ ಬಿಎಸ್‌ಎನ್‌ಎಲ್‌ ಬೆಸ್ಟ್! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಯಲ್ಲಾಪುರದಲ್ಲಿ ಭೀಕರ ರಸ್ತೆ ಅಪಘಾತ: ಲಾರಿ-ಕ್ರೂಸರ್ ಮುಖಾಮುಖಿ ಡಿಕ್ಕಿ, ಆರು ಮಂದಿ ಸ್ಥಳದಲ್ಲೇ ದುರ್ಮರಣ

(ನ್ಯೂಸ್‌ ಕಡಬ) newskadaba.com,  ಜು.09 ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಆರತಿಬೈಲುನಲ್ಲಿ ಲಾರಿ ಹಾಗೂ ಕ್ರೂಸರ್ ವಾಹನಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯ ತೀವ್ರತೆಗೆ ಆರು ಜನರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಮೃತರನ್ನು ಧಾರವಾಡ ಮೂಲದ ಬಸವರಾಜ್, ಮಂಜುನಾಥ್ ಚುಲ್ಲಕ್ಕಿ, ಅಭಿಷೇಕ್ ಮಲ್ಲೇಶ್ ಮಡಬಾವಿ ಮತ್ತು ಅಕ್ಷಯ್ ಮಲ್ಲಣ್ಣನವರ್ ಎಂದು ಗುರುತಿಸಲಾಗಿದೆ. ಉಳಿದ ಇಬ್ಬರ ಗುರುತು ಇನ್ನು ಪತ್ತೆಯಾಗಬೇಕಿದೆ. ಕ್ರೂಸರ್ ವಾಹನವು ಧಾರವಾಡದಿಂದ ಅಂಕೋಲಾ ಕಡೆಗೆ ಪ್ರಯಾಣಿಸುತ್ತಿದ್ದಾಗ, ಯಲ್ಲಾಪುರದಿಂದ ಅಂಕೋಲಾ ಕಡೆಗೆ ಹೋಗುತ್ತಿದ್ದ ಲಾರಿ ನಡುವೆ ಈ

ಯಲ್ಲಾಪುರದಲ್ಲಿ ಭೀಕರ ರಸ್ತೆ ಅಪಘಾತ: ಲಾರಿ-ಕ್ರೂಸರ್ ಮುಖಾಮುಖಿ ಡಿಕ್ಕಿ, ಆರು ಮಂದಿ ಸ್ಥಳದಲ್ಲೇ ದುರ್ಮರಣ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಗ್ರಾಹಕರಿಗೆ ಶಾಕ್: ಪ್ರತಿ ಗ್ರಾಂ ಚಿನ್ನದ ದರದಲ್ಲಿ ಹೆಚ್ಚಳ; ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ದರ ಹೀಗಿದೆ

(ನ್ಯೂಸ್‌ ಕಡಬ) newskadaba.com,  ಜು.09  : 24 ಕ್ಯಾರೆಟ್ (ಶುದ್ಧ ಚಿನ್ನ): ಪ್ರತಿ 1 ಗ್ರಾಂ ಚಿನ್ನದ ಬೆಲೆಯಲ್ಲಿ 11 ರೂ. ಏರಿಕೆಯಾಗಿದ್ದು, 14,324 ರೂ. ತಲುಪಿದೆ. ಇನ್ನು 10 ಗ್ರಾಂ ಅಪರಂಜಿ ಚಿನ್ನದ ಬೆಲೆ 1,43,240 ರೂ. ಆಗಿದೆ. 22 ಕ್ಯಾರೆಟ್ (ಆಭರಣ ಚಿನ್ನ): ಪ್ರತಿ 1 ಗ್ರಾಂಗೆ 10 ರೂ. ಹೆಚ್ಚಳದೊಂದಿಗೆ 13,130 ರೂ. ಹಾಗೂ 10 ಗ್ರಾಂ ಆಭರಣ ಚಿನ್ನದ ಬೆಲೆ 1,31,300 ರೂ. ದಾಖಲಾಗಿದೆ.

ಗ್ರಾಹಕರಿಗೆ ಶಾಕ್: ಪ್ರತಿ ಗ್ರಾಂ ಚಿನ್ನದ ದರದಲ್ಲಿ ಹೆಚ್ಚಳ; ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ದರ ಹೀಗಿದೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೊಡಗಿನಲ್ಲಿ ಮಳೆ ಅಬ್ಬರ: ಜುಲೈ 10 ರಿಂದ 12 ರವರೆಗೆ ಪ್ರಸಿದ್ಧ ಪ್ರವಾಸಿ ತಾಣ ‘ರಾಜಾಸೀಟ್’ ಪ್ರವೇಶ ಬಂದ್!

(ನ್ಯೂಸ್‌ ಕಡಬ) newskadaba.com,  ಜು.09  : ರಾಜ್ಯದ ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಕೊಡಗು ಹಾಗೂ ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿಗಳು ಉಕ್ಕಿ ಹರಿಯುತ್ತಿದ್ದು, ಭೂಕುಸಿತ ಹಾಗೂ ಮರ ಉರುಳುವ ಘಟನೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊಡಗಿನ ಪ್ರಮುಖ ಪ್ರವಾಸಿ ತಾಣವಾದ ರಾಜಾಸೀಟ್‌ಗೆ ಜುಲೈ 10ರಿಂದ 12ರವರೆಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ತಲಕಾವೇರಿ ಹಾಗೂ ಭಾಗಮಂಡಲ

ಕೊಡಗಿನಲ್ಲಿ ಮಳೆ ಅಬ್ಬರ: ಜುಲೈ 10 ರಿಂದ 12 ರವರೆಗೆ ಪ್ರಸಿದ್ಧ ಪ್ರವಾಸಿ ತಾಣ ‘ರಾಜಾಸೀಟ್’ ಪ್ರವೇಶ ಬಂದ್! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉದ್ಯೋಗ ಆಕಾಂಕ್ಷಿಗಳಿಗೆ ಸುವರ್ಣಾವಕಾಶ: ಕೇಂದ್ರ ಲೋಕಸೇವಾ ಆಯೋಗದಿಂದ 450 ವಿವಿಧ ಪ್ರತಿಷ್ಠಿತ ಹುದ್ದೆಗಳ ಭರ್ತಿಗೆ ಅಧಿಸೂಚನೆ

(ನ್ಯೂಸ್‌ ಕಡಬ) newskadaba.com,  ಜು.09  ಕೇಂದ್ರ ಲೋಕಸೇವಾ ಆಯೋಗವು (UPSC) ವೈದ್ಯಾಧಿಕಾರಿ, ಡ್ರಗ್ ಇನ್‌ಸ್ಪೆಕ್ಟರ್ ಸೇರಿದಂತೆ ಒಟ್ಟು 450 ವಿವಿಧ ಪ್ರತಿಷ್ಠಿತ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಡ್ರಗ್ ಇನ್‌ಸ್ಪೆಕ್ಟರ್ (186), ಅಸಿಸ್ಟೆಂಟ್ ಪ್ರೊಫೆಸರ್ (104), ಕಂಪನಿ ಪ್ರಾಸಿಕ್ಯೂಟರ್ (18), ಲೀಗಲ್ ಆಫೀಸರ್ (12), ವೈದ್ಯಾಧಿಕಾರಿ (3) ಹಾಗೂ ಇತರೆ ಆಡಳಿತಾತ್ಮಕ/ತಾಂತ್ರಿಕ ಹುದ್ದೆಗಳು. ಹುದ್ದೆಗಳಿಗೆ ಅನುಗುಣವಾಗಿ MBBS, B.Pharm, BE/B.Tech, LLB, ಅಥವಾ ಯಾವುದೇ ಮಾನ್ಯತೆ ಪಡೆದ

ಉದ್ಯೋಗ ಆಕಾಂಕ್ಷಿಗಳಿಗೆ ಸುವರ್ಣಾವಕಾಶ: ಕೇಂದ್ರ ಲೋಕಸೇವಾ ಆಯೋಗದಿಂದ 450 ವಿವಿಧ ಪ್ರತಿಷ್ಠಿತ ಹುದ್ದೆಗಳ ಭರ್ತಿಗೆ ಅಧಿಸೂಚನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಂಬಳ ಲೋಕದ ಧ್ವನಿ ನಿರಂಜನ್ ರೈ ಮಠಂದಬೆಟ್ಟು ಇನ್ನಿಲ್ಲ: ಸಭೆಯ ನಡುವೆಯೇ ಹೃದಯಾಘಾತ

(ನ್ಯೂಸ್‌ ಕಡಬ) newskadaba.com,  ಜು.09  ಪುತ್ತೂರು: ಪುತ್ತೂರು ಭೂ ನ್ಯಾಯಮಂಡಳಿ ಸದಸ್ಯ ಹಾಗೂ ಪ್ರಸಿದ್ಧ ಕಂಬಳ ವ್ಯಾಖ್ಯಾನಕಾರರಾದ ನಿರಂಜನ್ ರೈ ಮಠಂದಬೆಟ್ಟು (ಜುಲೈ 8) ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪುತ್ತೂರು ಸಹಾಯಕ ಆಯುಕ್ತರ (AC) ಕಚೇರಿಯಲ್ಲಿ ಎಸಿ ಸ್ಟೆಲ್ಲಾ ವರ್ಗೀಸ್ ಅವರ ಅಧ್ಯಕ್ಷತೆಯಲ್ಲಿ ಭೂ ನ್ಯಾಯಮಂಡಳಿ ಸಭೆ ನಡೆಯುತ್ತಿದ್ದಾಗ ಈ ದುರಂತ ಸಂಭವಿಸಿದೆ. ಸಭೆಯ ನಡುವೆ ನಿರಂಜನ್ ರೈ ಅವರು ತೀವ್ರ ಹೃದಯಾಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅಲ್ಲಿದ್ದ ಸಹಾಯಕ ಆಯುಕ್ತರು, ತಹಶೀಲ್ದಾರ್ ಹಾಗೂ ಇತರೆ

ಕಂಬಳ ಲೋಕದ ಧ್ವನಿ ನಿರಂಜನ್ ರೈ ಮಠಂದಬೆಟ್ಟು ಇನ್ನಿಲ್ಲ: ಸಭೆಯ ನಡುವೆಯೇ ಹೃದಯಾಘಾತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top