ವಾರದಲ್ಲಿ 2 ದಿನ ವರ್ಕ್ ಫ್ರಂ ಹೋಮ್ ಕೆಲಸ-ದೆಹಲಿ ಸಿಎಂ ರೇಖಾ ಗುಪ್ತಾ ಆದೇಶ



(ನ್ಯೂಸ್‌ ಕಡಬ) com,  ಮೇ.15: ಪ್ರಧಾನಿ ಮೋದಿ ಇಂಧನ ಮಿತವಾಗಿ ಬಳಸುವಂತೆ ಕರೆ ನೀಡಿದ ಬೆನ್ನಲ್ಲೇ ದೆಹಲಿ ಸಿಎಂ ರೇಖಾ ಗುಪ್ತಾ ರಾಜ್ಯದ ಸರ್ಕಾರಿ ಉದ್ಯೋಗಿಗಳಿಗೆ ವಾರದಲ್ಲಿ 2 ದಿನ ವರ್ಕ್ ಫ್ರಂ ಹೋಮ್ ಕೆಲಸ ಮಾಡಲು ಆದೇಶಿಸಿದ್ದಾರೆ..







ಭಾರತದ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ರಕ್ಷಿಸುವ ಸಲುವಾಗಿ, ಅನಗತ್ಯ ಇಂಧನ ಬಳಕೆ ಕಡಿಮೆ ಮಾಡಲು ಹಾಗೂ 1 ವರ್ಷಗಳ ಕಾಲ ಚಿನ್ನ ಖರೀದಿಯನ್ನು ಮುಂದೂಡುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆಯನ್ನು ಪಾಲಿಸಲು ಬಿಜೆಪಿ ಸರ್ಕಾರ ಆಡಳಿತವಿರುವ ರಾಜ್ಯಗಳು ದಿಟ್ಟ ಹೆಜ್ಜೆ ಇಟ್ಟಿದೆ.






ದೆಹಲಿ ಸಿಎಂ ರೇಖಾ ಗುಪ್ತಾ, `ನನ್ನ ಭಾರತ, ನನ್ನ ಕೊಡುಗೆ’ (ಮೇರಾ ಭಾರತ್ ಮೇರಾ ಯೋಗಧಾನ್) ಅಭಿಯಾನದಡಿ ನಾಳೆಯಿಂದ (ಮೇ 15) ಜಾರಿಗೆ ಬರುವಂತೆ ಸರ್ಕಾರಿ ನೌಕರರಿಗೆ ಹೊಸದೊಂದು ನಿಯಮಾವಳಿ ಜಾರಿಗೊಳಿಸಿದ್ದಾರೆ. ಅದರಂತೆ ವಾರದಲ್ಲಿ 2 ದಿನ ವರ್ಕ್ ಫ್ರಂ ಹೋಮ್ ಆದೇಶಿಸಿದ್ದಾರೆ.

ಸರ್ಕಾರಿ ನೌಕರಿಗೆ ಹೊಸ ನಿಯಮ
ವಾರದಲ್ಲಿ 2 ದಿನ `ವರ್ಕ್ ಫ್ರಮ್ ಹೋಮ್’ , ವಾರದಲ್ಲಿ ಒಂದು ದಿನ ಮೆಟ್ರೋ ರೈಲಲ್ಲಿ ಸಂಚಾರ ಕಡ್ಡಾಯ, ಶೇ.50ರಷ್ಟು ಸರ್ಕಾರಿ ಸಭೆಗಳು ಆನ್‌ಲೈನ್ ಮೂಲಕ, ಮುಂದಿನ 6 ತಿಂಗಳು ಹೊಸ ವಾಹನ ಖರೀದಿ ಇಲ್ಲ(ಪೆಟ್ರೋಲ್, ಡೀಸೆಲ್, ಎಲೆಕ್ಟಿçಕ್ ಹೊಸ ವಾಹನ ಖರೀದಿ ಇಲ್ಲ), ಅಧಿಕಾರಿಗಳ ಪೆಟ್ರೋಲ್ ಮಿತಿಯಲ್ಲಿ ಶೇ.20ರಷ್ಟು ಕಡಿತ (200 ಲೀಟರ್ ಕೊಡ್ತಿದ್ದರು), ಅಧಿಕಾರಿಗಳ ವಿದೇಶಿ ಪ್ರವಾಸ ರದ್ದು, ಸರ್ಕಾರಿ ನೌಕರರ ಕಾಲೋನಿಗೆ 58 ವಿಶೇಷ ಬಸ್‌ಗಳು

ಪ್ರತಿ ಸೋಮವಾರ ಎಲ್ಲಾ ಸಚಿವರು, ಅಧಿಕಾರಿಗಳು ಮತ್ತು ನೌಕರರು ಮೆಟ್ರೋದಲ್ಲಿ ಸಂಚರಿಸುವ ಮೂಲಕ `ಮಂಡೇ ಮೆಟ್ರೋ’ದಲ್ಲಿ ಪಾಲ್ಗೊಳ್ಳುತ್ತಾರೆ. ಪ್ರತಿ ವಾರದ ಒಂದು ದಿನ “ವಾಹನ ರಹಿತ ದಿನ”ವನ್ನು ಆಚರಿಸಲು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಮುಂದಿನ ಆರು ತಿಂಗಳವರೆಗೆ ಪೆಟ್ರೋಲ್, ಡೀಸೆಲ್ ಅಥವಾ ವಿದ್ಯುತ್ ಹೊಸ ವಾಹನ ಖರೀದಿ ಇರುವುದಿಲ್ಲ. ಜೊತೆಗೆ ನೌಕರರಿಗೆ ಸಾರಿಗೆ ಭತ್ಯೆಯನ್ನು 10% ಹೆಚ್ಚಿಸಲಾಗುವುದು. ಇನ್ನೂ ಅಧಿಕಾರಿಗಳ ವಿದೇಶಿ ಪ್ರಯಾಣದ ಮೇಲೂ ನಿಷೇಧ ಹೇರಲಾಗಿದೆ. ದೆಹಲಿ ಸರ್ಕಾರದ ಯಾವುದೇ ಸಚಿವರು ಅಥವಾ ಅಧಿಕಾರಿಗಳು ಮುಂದಿನ ಒಂದು ವರ್ಷ ಯಾವುದೇ ಅಧಿಕೃತ ವಿದೇಶ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

error: Content is protected !!
Scroll to Top