ಬ್ರೇಕಿಂಗ್ ನ್ಯೂಸ್

ಮದುವೆಯ ಹಿಂದಿನ ದಿನವೇ ಮದುಮ ಗಳ ಬರ್ಬರ ಕೊಲೆ

(ನ್ಯೂಸ್‌ ಕಡಬ) newskadaba.com,  ಸೆ.24 ಶಿಮ್ಲಾ : ಮದುವೆಗೆ ಸಿದ್ಧವಾಗಿದ್ದ ಮದುಮಗಳನ್ನು ಬರ್ಬರವಾಗಿ ಕೊಲೆಮಾಡಿ, ಆಕೆಯ ದೇಹವನ್ನು ಸುಟ್ಟ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ನಡೆದಿದೆ. ಮೃತಳನ್ನು ಅಂಶಿಕಾ ಠಾಕೂರ್ ಎಂದು ಗುರುತಿಸಲಾಗಿದ್ದು, ಈಕೆ ಬೈರಿಯನ್ ನಿವಾಸಿಯಾಗಿದ್ದು, ದಿವಂಗತ ವಿಪಿನ್ ಠಾಕೂರ್ ಅವರ ಪುತ್ರಿ. ಸೆಪ್ಟೆಂಬರ್ 24 ರ ಬುಧವಾರದಂದು ಭಿಂಡ್ಲಾ ಗ್ರಾಮದ ಯುವಕನೊಂದಿಗೆ ವಿವಾಹ ನಡೆಯಬೇಕಿತ್ತು. ಅಂಶಿಕಾಳ ದೇಹ ಸುಟ್ಟು ಕರಕಲಾಗಿದ್ದಲ್ಲದೆ, ಆಕೆಯ ಮುಖ ಮತ್ತು ಕುತ್ತಿಗೆಯ ಮೇಲೆ ಆಳವಾದ ಗಾಯಗಳು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. […]

ಮದುವೆಯ ಹಿಂದಿನ ದಿನವೇ ಮದುಮ ಗಳ ಬರ್ಬರ ಕೊಲೆ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಭಾರತದ ಸಿನಿಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದ ನಟ ಮೋಹನ್ ಲಾಲ್

(ನ್ಯೂಸ್‌ ಕಡಬ) newskadaba.com,  ಸೆ.24 ನವದೆಹಲಿ: ಮಂಗಳವಾರ ನಡೆದ 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಲಯಾಳಂ ನಟ ಮೋಹನ್ ಲಾಲ್ ಅವರಿಗೆ ಭಾರತದ ಸಿನಿಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಮೋಹನ್ ಲಾಲ್ ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಬಂದಾಗ ಸಭಾಂಗಣದಲ್ಲಿ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದರು. ಚಿತ್ರರಂಗದಲ್ಲಿ ಮೋಹನ್‌ಲಾಲ್‌ ಮಾಡಿದ ಸಾಧನೆಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 65

ಭಾರತದ ಸಿನಿಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದ ನಟ ಮೋಹನ್ ಲಾಲ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ತಂದೆಯ ಚಿಕಿತ್ಸೆಗಾಗಿ ಬೈಕ್ ಗಳ ಕಳ್ಳತನ: ವ್ಯಕ್ತಿ ಬಂಧನ

(ನ್ಯೂಸ್‌ ಕಡಬ) newskadaba.com,  ಸೆ.24 ಬೆಂಗಳೂರು: ವೈಟ್‌ಫೀಲ್ಡ್‌ನಲ್ಲಿ 20 ಬೈಕ್‌ಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ವೈಟ್‌ಫೀಲ್ಡ್ ಪೊಲೀಸರು ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ.ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕದಿರಿ ಮೂಲಕ ಬಿ.ಫಿರೋಜ್ (24) ಬಂಧಿತ ಆರೋಪಿ. ಈತನಿಂದ ಸುಮಾರು 20 ಲಕ್ಷ ರೂ. ಮೌಲ್ಯದ 20 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ವೈಟ್‌ಫೀಲ್ಡ್ ಬಳಿಯ ಅನುಗೊಂಡನಹಳ್ಳಿಯಲ್ಲಿ ತನ್ನ ಹೆಂಡತಿ ಮತ್ತು ಮಗುವಿನೊಂದಿಗೆ ವಾಸವಿದ್ದು, ಈತನ ತಂದೆ ಮೊಹಮ್ಮದ್ ಬಾಷಾ ಕದಿರಿಯಲ್ಲಿ ವಾಸವಿದ್ದಾರೆ. ಮೊಹಮ್ಮದ್ ಬಾಷಾ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣ

ತಂದೆಯ ಚಿಕಿತ್ಸೆಗಾಗಿ ಬೈಕ್ ಗಳ ಕಳ್ಳತನ: ವ್ಯಕ್ತಿ ಬಂಧನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದು ಚಿನ್ನದ ದರದಲ್ಲಿ ಕೊಂಚ ಇಳಿಕೆ

(ನ್ಯೂಸ್‌ ಕಡಬ) newskadaba.com,  ಸೆ.24 ಬೆಂಗಳೂರು : ಚಿನ್ನದ ದರದಲ್ಲಿಇಂದು  ಇಳಿಕೆ ಕಂಡು ಬಂದಿದೆ. 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 30ರೂ ಇಳಿಕೆಯಾಗಿ , 10,575 ರೂ.ಗೆ ತಲುಪಿದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 32ರೂ. ಇಳಿಕೆಯಾಗಿ 11,537 ರೂ ಆಗಿದೆ. ಈ ಮೂಲಕ 22 ಕ್ಯಾರಟ್‌ನ 8 ಗ್ರಾಂ ಚಿನ್ನ 84,600 ರೂ. ಬಾಳಿದರೆ, 10 ಗ್ರಾಂಗೆ ನೀವು 1,05,750 ರೂ. ಹಾಗೂ 100 ಗ್ರಾಂಗೆ 10,57,500 ರೂ.

ಇಂದು ಚಿನ್ನದ ದರದಲ್ಲಿ ಕೊಂಚ ಇಳಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ತೈವಾನ್‌ನಲ್ಲಿ ಸಂಭವಿಸಿದ ರಗಾಸಾ ಚಂಡಮಾರುತಕ್ಕೆ 14 ಮಂದಿ ಸಾವು ; 124 ಮಂದಿ ಕಣ್ಮರೆ

(ನ್ಯೂಸ್‌ ಕಡಬ) newskadaba.com,  ಸೆ.24 ತೈಪೆ : ತೈವಾನ್‌ನಲ್ಲಿ ‘ರಗಾಸಾ’ ಚಂಡಮಾರುತಕ್ಕೆ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದು, 124 ಮಂದಿ ನಾಪತ್ತೆಯಾಗಿದ್ದಾರೆ. ಅವಘಡದಲ್ಲಿ 18 ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕಡಲತೀರದಲ್ಲಿ ಪ್ರವಾಹದಿಂದಾಗಿ ನೂರಾರು ಮರಗಳು ಧರೆಗುರುಳಿವೆ. ಹಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ‘ರಾಗಸ’ ಚಂಡಮಾರುತ ಸೆ. 23ರಂದು ದಕ್ಷಿಣ ಚೀನಾಕ್ಕೆ ಅಪ್ಪಳಿಸಿದೆ. ಇದರಿಂದಾಗಿ ಹಲವೆಡೆ ವ್ಯಾಪಕ ಮಳೆ ಸುರಿಯುತ್ತಿದೆ. ಚಂಡಮಾರುತ ಬುಧವಾರ(ಸೆ.24) ಹಾಂಗ್ ಕಾಂಗ್ ಕರಾವಳಿಗೆ

ತೈವಾನ್‌ನಲ್ಲಿ ಸಂಭವಿಸಿದ ರಗಾಸಾ ಚಂಡಮಾರುತಕ್ಕೆ 14 ಮಂದಿ ಸಾವು ; 124 ಮಂದಿ ಕಣ್ಮರೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

‘ಗುರುತಿನ ಚೀಟಿ ಇಲ್ಲದೆ ಸ್ಕ್ಯಾನಿಂಗ್ ಮಾಡಿದರೆ ಕಠಿಣ ಕ್ರಮ’- ಡಾ. ಎಚ್ ಆರ್ ತಿಮ್ಮಯ್ಯ

(ನ್ಯೂಸ್‌ ಕಡಬ) newskadaba.com,  ಸೆ.24 ಮಂಗಳೂರು: ಸ್ಕ್ಯಾನಿಂಗ್ ಸೆಂಟರ್‌ಗಳು ರೋಗಿಗಳಿಂದ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಪಡೆದು ನಂತರವೇ ಸ್ಕ್ಯಾನ್ ಮಾಡಬೇಕು, ಇಲ್ಲದಿದ್ದರೆ ಅಂತಹ ಕೇಂದ್ರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಿಎಚ್‌ಒ ಎಚ್ಚರಿಕೆ ನೀಡಿದ್ದಾರೆ. ಮಂಗಳವಾರ ನಡೆದ ಪ್ರಸವಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ತಂತ್ರ (ನಿರ್ಬಂಧ ಕಾಯ್ದೆ), 1994 ರ ಕುರಿತ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, “ಗುರುತಿನ ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು. ಅಧಿಕಾರಿಗಳು ಸ್ಕ್ಯಾನಿಂಗ್ ಕೇಂದ್ರಗಳಿಗೆ

‘ಗುರುತಿನ ಚೀಟಿ ಇಲ್ಲದೆ ಸ್ಕ್ಯಾನಿಂಗ್ ಮಾಡಿದರೆ ಕಠಿಣ ಕ್ರಮ’- ಡಾ. ಎಚ್ ಆರ್ ತಿಮ್ಮಯ್ಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಗಾಳ ಕೊಲ್ಲಿ : ವಾಯುಭಾರ ಕುಸಿತ – ಸೆ.29ರವರೆಗೆ ರಾಜ್ಯದಲ್ಲಿ ಮಳೆಯ ಅಬ್ಬರ

(ನ್ಯೂಸ್‌ ಕಡಬ) newskadaba.com,  ಸೆ.24 ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ರಾಜ್ಯದಲ್ಲಿ ಸೆ.29ರವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಉಪಸಾಗರದ ಉತ್ತರ ಒಡಿಶಾ, ಆಂಧ್ರದ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತದಿಂದಾಗಿ ಕರ್ನಾಟಕದಲ್ಲಿ ಭಾರೀ ಮಳೆಯಾಗಲಿದೆ. ಹೀಗಾಗಿ ರಾಜ್ಯದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸೆ.23ರಿಂದ ಸೆ.29ರವರೆಗೆ ಹಲವಡೆ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಉತ್ತರ ಒಳನಾಡು, ಕರಾವಳಿ ಭಾಗ ಹಾಗೂ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ.

ಬಂಗಾಳ ಕೊಲ್ಲಿ : ವಾಯುಭಾರ ಕುಸಿತ – ಸೆ.29ರವರೆಗೆ ರಾಜ್ಯದಲ್ಲಿ ಮಳೆಯ ಅಬ್ಬರ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅರಣ್ಯದಲ್ಲಿ 15 ದಿನದ ಮಗುವಿನ ದೇಹ ಪತ್ತೆ

(ನ್ಯೂಸ್‌ ಕಡಬ) newskadaba.com,  ಸೆ.24 ಜೈಪುರ : ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಕಾಡಿನಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿದ್ದು, ಮಗುವಿನ ತುಟಿಗಳನ್ನು ಗಮ್‌ ಹಾಕಿ ಅಂಟಿಸಿ ವಿಕೃತಿ ಮೆರೆಯಲಾಗಿತ್ತು. ಮಗುವನ್ನು ಕಂಡ ದನಗಾಹಿಯೊಬ್ಬ ರಕ್ಷಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ. ಮಗುವಿನ ಬಾಯಿಗೆ ಹಾಕಿದ್ದ ಗಮ್‌ ತೆಗೆದು ನೋಡಿದಾಗ ಬಾಯೊಳಗೆ ಕಲ್ಲನ್ನು ಹಾಕಲಾಗಿತ್ತು ಎಂದು ತಿಳಿದು ಬಂದಿದೆ. ಕೂಡಲೇ ಶಿಶುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವನ್ನು ಕೊಲ್ಲಲು ಈ ರೀತಿ ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ಭಿಲ್ವಾರದ ಮಂಡಲಗಢ ವಿಧಾನಸಭಾ ಕ್ಷೇತ್ರದ ಬಿಜೋಲಿಯಾ

ಅರಣ್ಯದಲ್ಲಿ 15 ದಿನದ ಮಗುವಿನ ದೇಹ ಪತ್ತೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಂಗಳೂರು : ಪ್ರತಿಷ್ಠಿತ ಪಿಇಎಸ್ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ

(ನ್ಯೂಸ್‌ ಕಡಬ) newskadaba.com,  ಸೆ.24 ಬೆಂಗಳೂರು: ಆದಾಯ ಮೀರಿ ಅಸ್ತಿಗಳಿಕೆ ಹಾಗೂ ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಪ್ರತಿಷ್ಠಿತ ​ PES ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆದಿದೆ. ಬೆಳ್ಳಂ ಬೆಳಗ್ಗೆಯೇ ಬೆಂಗಳೂರಿನ PES ಕಾಲೇಜುಗಳು  ಸೇರಿದಂತೆ ಹಲವು ಕಡೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಪಿಇಎಸ್‌ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದಂತೆ ಕಾಲೇಜಿನ ಮಾಲೀಕರು, ಆಡಳಿತ ಮಂಡಳಿಯವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಹೊಸಕೆರೆಹಳ್ಳಿ ಪಿಇಎಸ್ ಕಾಲೇಜು ,

ಬೆಂಗಳೂರು : ಪ್ರತಿಷ್ಠಿತ ಪಿಇಎಸ್ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದ್ವಿಚಕ್ರ ವಾಹನ ಪೋಲಿಸ್ ಜೀಪ್ ಗೆ ಡಿಕ್ಕಿ; ಸವಾರನಿಗೆ ಗಾಯ

(ನ್ಯೂಸ್‌ ಕಡಬ) newskadaba.com,  ಸೆ.24 ಬಂಟ್ವಾಳ : ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಸವಾರನೋರ್ವ ಪೋಲಿಸ್ ಜೀಪ್ ಗೆ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಪುಂಜಾಲಕಟ್ಟೆ ಎಂಬಲ್ಲಿ ನಡೆದಿದೆ. ಪಿಲಾತಬೆಟ್ಟು ನಿವಾಸಿ ಹರ್ಷಿತ್ (19) ಗಾಯಗೊಂಡ ಯುವಕನಾಗಿದ್ದಾನೆ. ಧರ್ಮಸ್ಥಳ ಪೋಲೀಸ್ ಠಾಣೆಯ ಪಿಎಸ್.ಐ.ಮಂಗಳೂರು ನ್ಯಾಯಾಲಯಕ್ಕೆ ಸಾಕ್ಷಿ ನುಡಿಯಲು ಇಲಾಖೆಯ ಪೋಲಿಸ್ ಜೀಪ್ ನಲ್ಲಿ ಹೋಗುತ್ತಿದ್ದ ವೇಳೆಗೆ ಪುಂಜಾಲಕಟ್ಟೆ ಕಟ್ಟೆಮನೆ ರಾಷ್ಟ್ರೀಯ ಹೆದ್ದಾರಿ ತಿರುವಿನಲ್ಲಿ ದ್ವಿ ಚಕ್ರವಾಹನ ಸವಾರ ನಿಯಂತ್ರಣ ಕಳೆದುಕೊಂಡು ಪೋಲೀಸ್ ಜೀಪ್ ಗೆ ಡಿಕ್ಕಿ ಹೊಡೆದು ರಸ್ತೆಗೆ

ದ್ವಿಚಕ್ರ ವಾಹನ ಪೋಲಿಸ್ ಜೀಪ್ ಗೆ ಡಿಕ್ಕಿ; ಸವಾರನಿಗೆ ಗಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top