ಬ್ರೇಕಿಂಗ್ ನ್ಯೂಸ್

ಹೊಸ ವರ್ಷದ ಆರಂಭದ ದಿನವೇ ಕೇಂದ್ರ ಸರ್ಕಾರ ಜನರಿಗೆ ದೊಡ್ಡ ಶಾಕ್;ಫೆಬ್ರವರಿ 1ರಿಂದ ದುಬಾರಿಯಾಗಲಿದೆ ಇವುಗಳ ಬೆಲೆ

(ನ್ಯೂಸ್‌ ಕಡಬ) newskadaba.com,ಜ.01 ನವದೆಹಲಿ: ಹೊಸ ವರ್ಷದ ಮೊದಲ ದಿನವೇ ಕೇಂದ್ರ ಸರ್ಕಾರ ಜನರಿಗೆ ಬಿಗ್ ಶಾಕ್ ನೀಡಿದೆ. ಫೆಬ್ರವರಿ 1ರಿಂದ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಪಾನ್ ಮಸಾಲದ ಮೇಲೆ ಹೊಸ ಸೆಸ್ ಅನ್ನು ವಿಧಿಸಿ ಬುಧವಾರವೇ ಅಧಿಸೂಚನೆ ಹೊರಡಿಸಿದೆ. ಇದರಿಂದ ಸಿಗರೇಟ್, ಬೀಡಿ, ಪಾನ್ ಮಸಾಲಗಳ ಬೆಲೆ ಫೆಬ್ರವರಿ 1ರಿಂದ ಹೆಚ್ಚಳವಾಗಲಿದೆ. ತಂಬಾಕು ಉತ್ಪನ್ನಗಳು ಮತ್ತು ಪಾನ್ ಮಸಾಲದ ಮೇಲಿನ ಹೊಸ ಸುಂಕಗಳು ಜಿಎಸ್‌ಟಿ ದರಕ್ಕಿಂತ ಹೆಚ್ಚಾಗಿರುತ್ತದೆ. ಇದು ಇವುಗಳ ಮೇಲೆ […]

ಹೊಸ ವರ್ಷದ ಆರಂಭದ ದಿನವೇ ಕೇಂದ್ರ ಸರ್ಕಾರ ಜನರಿಗೆ ದೊಡ್ಡ ಶಾಕ್;ಫೆಬ್ರವರಿ 1ರಿಂದ ದುಬಾರಿಯಾಗಲಿದೆ ಇವುಗಳ ಬೆಲೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಹೊಸ ವರ್ಷದ ಆರಂಭದಲ್ಲೇ ತುಸು ಹೆಚ್ಚಳ ಕಂಡ ಆಭರಣದ ದರ

(ನ್ಯೂಸ್‌ ಕಡಬ) newskadaba.com,ಜ.01 ಬೆಂಗಳೂರು: ಡಿಸೆಂಬರ್ ಕೊನೆ ವಾರದಲ್ಲಿ ಇಳಿಕೆಯಾದ ಚಿನ್ನದ ಬೆಲೆ, 2026 ರ ವರ್ಷಾರಂಭದಲ್ಲೇ ಇಂದು ಮತ್ತೆ ಹೆಚ್ಚಳ ಕಂಡಿದೆ. ಶುದ್ಧ ಚಿನ್ನದ ಇಂದಿನ ದರ ಜನವರಿ 1 2026, ಗುರುವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 13,506 ರೂಪಾಯಿ ಇದ್ದು, ಇಂದು 17 ರೂಪಾಯಿ ಏರಿಕೆ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,35,060 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು 170 ರೂಪಾಯಿ

ಹೊಸ ವರ್ಷದ ಆರಂಭದಲ್ಲೇ ತುಸು ಹೆಚ್ಚಳ ಕಂಡ ಆಭರಣದ ದರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪಂಜ ಬಾಡಿಗೆ ಮನೆಯಲ್ಲಿದ್ದ ದಂಪತಿಗಳ ಬಂಧನ:ಪುತ್ತೂರಿನಲ್ಲಿ ದರೋಡೆ ಯತ್ನ ಪ್ರಕರಣ ಸಿ.ಸಿ ಕ್ಯಾಮೆರಾ ದಾಖಲೆ ಆಧರಿಸಿ ಆರೆಸ್ಟ್ ಮುಂಡೂರು ಮೂಲದ ಆರೋಪಿಗಳು

(ನ್ಯೂಸ್‌ ಕಡಬ) newskadaba.com,ಜ.01 ಮಂಗಳೂರು: ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಎ.ವಿ. ನಾರಾಯಣ ಅವರ ಪುತ್ತೂರಿನ ಮನೆಯಲ್ಲಿ ಡಿ.17ರಂದು ಮಧ್ಯರಾತ್ರಿ ಕಳವು ಯತ್ನ ನಡೆದಿದ್ದು ಮನೆಯವರನ್ನು ಬೆದರಿಸಿ ಬೆಲೆಬಾಳುವ ಸೊತ್ತುಗಳನ್ನು ದೋಚಲು ಯತ್ನಿಸಿದ ಪ್ರಕರಣ ಸಂಬಂಧಿಸಿ ಪುರೋಹಿತ ಕೆಲಸ ಮಾಡುವ ಅರ್ಚಕ ಮತ್ತು ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಎ.ವಿ. ನಾರಾಯಣ ಅವರ ಪುತ್ತೂರಿನ ಮನೆಯಲ್ಲಿ ಡಿ.17ರಂದು ಮಧ್ಯರಾತ್ರಿ ಕಳವು ಯತ್ನ ನಡೆದಿದ್ದು ಮನೆಯವರನ್ನು ಬೆದರಿಸಿ ಬೆಲೆಬಾಳುವ ಸೊತ್ತುಗಳನ್ನು ದೋಚಲು

ಪಂಜ ಬಾಡಿಗೆ ಮನೆಯಲ್ಲಿದ್ದ ದಂಪತಿಗಳ ಬಂಧನ:ಪುತ್ತೂರಿನಲ್ಲಿ ದರೋಡೆ ಯತ್ನ ಪ್ರಕರಣ ಸಿ.ಸಿ ಕ್ಯಾಮೆರಾ ದಾಖಲೆ ಆಧರಿಸಿ ಆರೆಸ್ಟ್ ಮುಂಡೂರು ಮೂಲದ ಆರೋಪಿಗಳು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದೇಶದ ಹಾಗೂ ವಿಶ್ವದ ಜನತೆಗೆ ಹೊಸ ವರ್ಷದ ಹೃತ್ಪೂರ್ವಕ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

(ನ್ಯೂಸ್‌ ಕಡಬ) newskadaba.com, ಜ.01 ನವದೆಹಲಿ: ಜನತೆಗೆ ಹೊಸ ವರ್ಷದ ಶುಭಾಶಯ ತಿಳಿಸಿ, ಆರೋಗ್ಯ ಸಮೃದ್ಧಿಗಾಗಿ ಪ್ರಾರ್ಥಿಸಿದ ಪ್ರಧಾನಿ ಮೋದಿ, ಶಾಂತಿ, ಸಮೃದ್ಧಿ ಮತ್ತು ಉತ್ತಮ ಆರೋಗ್ಯದ ಆಶಯವನ್ನು ವ್ಯಕ್ತಪಡಿಸಿದ ಅವರು, ಜನರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕೆಂದು ಹಾರೈಸಿದ್ದಾರೆ “ಹೊಸ ವರ್ಷವು ನಿಮ್ಮ ಪ್ರಯತ್ನಗಳಲ್ಲಿ ಯಶಸ್ಸು ಮತ್ತು ನೀವು ಮಾಡುವ ಎಲ್ಲದರಲ್ಲೂ ಸಾಧನೆಯೊಂದಿಗೆ ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ,” ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಹಂಚಿಕೊಂಡ ಸಂದೇಶದಲ್ಲಿ ತಿಳಿಸಿದ್ದಾರೆ. ಏತನ್ಮಧ್ಯೆ

ದೇಶದ ಹಾಗೂ ವಿಶ್ವದ ಜನತೆಗೆ ಹೊಸ ವರ್ಷದ ಹೃತ್ಪೂರ್ವಕ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೆಂಗಳೂರು: ಎಂಜಿ ರೋಡ್ ರಷ್‌ನಲ್ಲಿ ಮಡದಿ ಕಣ್ಮರೆ; ಆಘಾತ ತಾಳಲಾರದೆ ಗಂಡನಿಗೆ ಪಿಟ್ಸ್!

(ನ್ಯೂಸ್‌ ಕಡಬ) newskadaba.com, ಜ.01 ಬೆಂಗಳೂರು : ಹೊಸ ವರ್ಷದ ಮುನ್ನಾದಿನದ ಸಂಭ್ರಮಕ್ಕಾಗಿ ಬೆಂಗಳೂರಿನ ಎಂ.ಜಿ. ರಸ್ತೆಗೆ ದಂಪತಿಗಳು ಆಗಮಿಸಿದ್ದರು. ಆದರೆ, ಮಿತಿಮೀರಿದ ಜನದಟ್ಟಣೆಯ ನಡುವೆ ಪತ್ನಿ ಪತಿಯಿಂದ ಬೇರ್ಪಟ್ಟು ನಾಪತ್ತೆಯಾಗಿದ್ದಾರೆ. ಎಷ್ಟು ಹುಡುಕಿದರೂ ಪತ್ನಿ ಸಿಗದಿದ್ದಾಗ ಪತಿ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ… ತನ್ನ ಕಣ್ಣೆದುರೇ ಪತ್ನಿ ಕಣ್ಮರೆಯಾದ ಆಘಾತ ಮತ್ತು ಮಾನಸಿಕ ಒತ್ತಡದಿಂದಾಗಿ ಪತಿಗೆ ಸ್ಥಳದಲ್ಲೇ ಪಿಟ್ಸ್ (ಫಿಟ್ಸ್) ಕಾಣಿಸಿಕೊಂಡಿದೆ. ರಸ್ತೆಯಲ್ಲೇ ಅಸ್ವಸ್ಥಗೊಂಡು ಬಿದ್ದ ಪತಿಯನ್ನು ಕಂಡು ಸಾರ್ವಜನಿಕರು ತಕ್ಷಣ ಸಹಾಯಕ್ಕೆ ಧಾವಿಸಿದ್ದಾರೆ. ಸ್ಥಳದಲ್ಲಿದ್ದವರ ನೆರವಿನೊಂದಿಗೆ

ಬೆಂಗಳೂರು: ಎಂಜಿ ರೋಡ್ ರಷ್‌ನಲ್ಲಿ ಮಡದಿ ಕಣ್ಮರೆ; ಆಘಾತ ತಾಳಲಾರದೆ ಗಂಡನಿಗೆ ಪಿಟ್ಸ್! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್.ವಿನಯ ಹೆಗ್ಡೆ

(ನ್ಯೂಸ್‌ ಕಡಬ) newskadaba.com, ಜ.01  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‌ಶೈಕ್ಷಣಿಕ-ಕೈಗಾರಿಕಾ ಕ್ರಾಂತಿ ನಡೆಸಿದ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎನ್.ವಿನಯ ಹೆಗ್ಡೆ (86) ಇಂದು(ಜ.1) ಬೆಳಗ್ಗೆ ನಿಧನರಾಗಿದ್ದಾರೆ. ಶಿಕ್ಷಣ ತಜ್ಞ, ಉದ್ಯಮಿ, ಸಮಾಜ ಸೇವಕರಾಗಿದ್ದ ವಿನಯ ಹೆಗ್ಡೆ ನಿಟ್ಟೆ ಶಿಕ್ಷಣ ಸಂಸ್ಥೆಗಳ ವಿಸ್ತರಣೆಯಲ್ಲಿ ಗಮನಾರ್ಹ ಪಾತ್ರ ವಹಿಸಿದ್ದರು. ಶಿಕ್ಷಣ ಮತ್ತು ಸಮಾಜ ಸೇವೆಗಾಗಿ ಅವರು ರಾಜ್ಯೋತ್ಸವ ಪ್ರಶಸ್ತಿ, ಗೌರವ ಡಾಕ್ಟರೇಟ್ ಸಹಿತ ಹಲವು ಗೌರವಗಳಿಗೆ ಪಾತ್ರರಾಗಿದ್ದರು. ಲೋಕಸಭಾ ಸ್ಪೀಕರ್ ಆಗಿದ್ದ ದಿವಂಗತ ಜಸ್ಟಿಸ್ ಕೆ.ಎಸ್. ಹೆಗ್ಡೆ ಅವರ

ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್.ವಿನಯ ಹೆಗ್ಡೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹೊಸ ವರ್ಷದ ಆರಂಭದಲ್ಲಿ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆ

(ನ್ಯೂಸ್‌ ಕಡಬ) newskadaba.com, ಜ.01 : ಹೊಸ ವರ್ಷದ ಮೊದಲ ದಿನವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಕೆ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಪ್ರತಿ ತಿಂಗಳಿನಂತೆ ಈ ಬಾರಿಯೂ ಗೃಹ ಮತ್ತು ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯನ್ನು ನವೀಕರಿಸಲಾಗಿದೆ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಇಂಡಿಯನ್ ಆಯಿಲ್ ಪ್ರಕಾರ, ದೆಹಲಿಯಲ್ಲಿ ಇಂದಿನಿಂದ 19 ಕೆಜಿ ಎಲ್‌ಪಿಜಿ ಸಿಲಿಂಡರ್ 1580.50 ರೂ.ಗಳ ಬದಲಿಗೆ 1691.50 ರೂ.ಗಳಿಗೆ ಲಭ್ಯವಾಗಲಿದೆ. ಕೋಲ್ಕತ್ತಾದಲ್ಲಿ ಈಗ 1795 ರೂ.ಗಳಿಗೆ ಲಭ್ಯವಾಗಲಿದೆ. ಕೋಲ್ಕತ್ತಾದಲ್ಲಿಯೂ 111

ಹೊಸ ವರ್ಷದ ಆರಂಭದಲ್ಲಿ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಿಟ್ಲ : ಇಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಭೀಕರ ಬೆಂಕಿ ಅವಘಡ – ಅಪಾರವಾದ ನಷ್ಟ

(ನ್ಯೂಸ್‌ ಕಡಬ) newskadaba.com, ಜ.01 ವಿಟ್ಲ: ನಗರದ ಮಂಗಳೂರು ರಸ್ತೆಯಲ್ಲಿರುವ ಇಲೆಕ್ಟ್ರಾನಿಕ್ಸ್ ಅಂಗಡಿಯೊಂದರಲ್ಲಿ ಬುಧವಾರ ತಡ ರಾತ್ರಿ ಆಕಸ್ಮಿಕವಾಗಿ ಕಾಣಿಸಿಕೊಂಡ ಭೀಕರ ಬೆಂಕಿಯು ಕ್ಷಣಾರ್ಧದಲ್ಲಿ ಅಕ್ಕಪಕ್ಕದ ಮಳಿಗೆಗಳಿಗೂ ವ್ಯಾಪಿಸಿದ್ದು, 5-6 ಮಳಿಗೆಗಳಿಗೆ ಹಬ್ಬಿ, ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ. ಸಂತೋಷ್ ಕುಮಾರ್ ಕೊಡಂಗೆ ಅವರ ಮಾಲಕತ್ವದ ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಮೊದಲು ಬೆಂಕಿ ಕಾಣಿಸಿ ಕೊಂಡಿದೆ. ಅಂಗಡಿಯೊಳಗಿದ್ದ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ವಸ್ತುಗಳಿಂದಾಗಿ ಜ್ವಾಲೆಯ ತೀವ್ರತೆ ಏಕಾಏಕಿ ಹೆಚ್ಚಾಗಿದೆ. ಸ್ಥಳೀಯರು

ವಿಟ್ಲ : ಇಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಭೀಕರ ಬೆಂಕಿ ಅವಘಡ – ಅಪಾರವಾದ ನಷ್ಟ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com, ಜ.01 :  ದಕ್ಷಿಣ ಒಳನಾಡಿನ ನಾಲ್ಕು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಾಮರಾಜನಗರ, ಕೊಡಗು, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಒಂಹವೆ ಮುಂದುವರಿಯಲಿದೆ ಎಂದು ಹವಾಮಾನ ವರದಿ ತಿಳಿಸಿದೆ. ಬೆಂಗಳೂರಿನಲ್ಲಿ ಜ.3ರವರೆಗೂ ಚಳಿ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು : ಹೊಸ ವರ್ಷಾಚರಣೆ – ಮಾರ್ಗಸೂಚಿ ಪಾಲಿಸಲು ಪೊಲೀಸ್ ಆಯುಕ್ತರ ಆದೇಶ

(ನ್ಯೂಸ್‌ ಕಡಬ) newskadaba.com,ಡಿ.31: ಹೊಸ ವರ್ಷಾಚರಣೆ ಬಗ್ಗೆ ಈಗಾಗಲೇ ಪೊಲೀಸ್ ಇಲಾಖೆಯು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಇವುಗಳನ್ನು ಎಲ್ಲ ಕಾರ್ಯಕ್ರಮಗಳ ಆಯೋಜಕರು, ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಆದೇಶ ನೀಡಿದ್ದಾರೆ. ಮಾರ್ಗಸೂಚಿಗಳ ವಿವರ ಈ ರೀತಿಯಾಗಿದೆ. ಅನುಮತಿ ಪಡೆಯದೇ ಸಾರ್ವಜನಿಕವಾಗಿ ಯಾವುದೇ ಆಚರಣೆಗಳನ್ನು ಮಾಡಲು ಅವಕಾಶ ಇರುವುದಿಲ್ಲ. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಗಳು,ಕಿರುಕುಳವಾಗದಂತೆ ಜವಾಬ್ದಾರಿಯುತವಾಗಿ ಸಂಭ್ರಮಾಚರಣೆ ನಡೆಸುವಂತೆ ಸೂಚಿಸಲಾಗಿದೆ. ಸಂಭ್ರಮಾಚರಣೆ ಹೆಸರಿನಲ್ಲಿ ಅತೀವೇಗದ ಚಾಲನೆ, ವೀಲಿಂಗ್‌ನ ನಡೆಸುವುದು, ಅಸಭ್ಯವರ್ತನೆ, ಸಾರ್ವಜನಿಕ

ಮಂಗಳೂರು : ಹೊಸ ವರ್ಷಾಚರಣೆ – ಮಾರ್ಗಸೂಚಿ ಪಾಲಿಸಲು ಪೊಲೀಸ್ ಆಯುಕ್ತರ ಆದೇಶ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Scroll to Top