ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
2025ನೇ ಸಾಲಿನ ಸ್ನಾತಕೋತ್ತರ ಆಯುಷ್ ಪ್ರವೇಶ ಅರ್ಜಿ ಸಲ್ಲಿಕೆಗೆ ನ.10 ರಂದು ಕೊನೆಯ ದಿನ: ಕೆಇಎ – News Kadaba

2025ನೇ ಸಾಲಿನ ಸ್ನಾತಕೋತ್ತರ ಆಯುಷ್ ಪ್ರವೇಶ ಅರ್ಜಿ ಸಲ್ಲಿಕೆಗೆ ನ.10 ರಂದು ಕೊನೆಯ ದಿನ: ಕೆಇಎ

(ನ್ಯೂಸ್‌ ಕಡಬ) newskadaba.com,  ನ.08 ಬೆಂಗಳೂರು: ಪಿಜಿ ಆಯುಷ್ ಕೋರ್ಸುಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆನ್‌ಲೈನ್ ಮೂಲಕ ಅರ್ಜಿ ಕರೆದಿದೆ. ಎಐಎಪಿಜಿಇಟಿ-2025ರಲ್ಲಿ ಅರ್ಹತೆ ಪಡೆದಿರುವ ಆಸಕ್ತ ಅಭ್ಯರ್ಥಿಗಳು ನ.10ರ ಸಂಜೆ 4 ರೊಳಗೆ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ನೋಂದಣಿ ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ ರೂ 2,000 ಇದ್ದು (ರೂ 1,000 ಪ.ಜಾ/ಪ.ಪಂ, ಪ್ರವರ್ಗ-1 ಅಭ್ಯರ್ಥಿಗಳಿಗೆ), ಇದನ್ನು ನ.10ರ ಸಂಜೆ 6 ರೊಳಗೆ ಆನ್‌ಲೈನ್ ಮೂಲಕ ಪಾವತಿಸಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ವೇಳಾಪಟ್ಟಿ, ದಾಖಲಾತಿ ಪರಿಶೀಲನೆ, ಸಲ್ಲಿಸಬೇಕಾದ ಮೂಲ ದಾಖಲಾತಿಗಳು ಮತ್ತಿತರ ಮಾಹಿತಿಯನ್ನು http://kea.kar.nic.in ನಲ್ಲಿ ಗಮನಿಸಬಹುದು. ಎಐಎಪಿಜಿಇಟಿ-25ರ ಮಾಹಿತಿ ಪುಸ್ತಕದಲ್ಲಿ ನೀಡಿರುವ ಅರ್ಹತಾ ಷರತ್ತುಗಳು ಹಾಗೂ ಇನ್ನಿತರ ಮಾಹಿತಿಯನ್ನೂ ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿದೆ ಎಂದು ಅವರು ಹೇಳಿದ್ದಾರೆ…

Scroll to Top