ಬ್ರೇಕಿಂಗ್ ನ್ಯೂಸ್

ಸಾರಿಗೆ ಇಲಾಖೆಯು ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ನಿಯಮ ಜಾರಿ

(ನ್ಯೂಸ್‌ ಕಡಬ) newskadaba.com,ಜ.20 ಬೆಂಗಳೂರು:  ಡಿಸೆಂಬರ್ 25 ರಂದು ತಡರಾತ್ರಿ ಬೆಂಗಳೂರಿನಿಂದ ಗೋಕರ್ಣಕ್ಕೆ ಹೋಗುತ್ತಿದ್ದ ಖಾಸಗಿ ಬಸ್​​ ಬೆಂಕಿಗೆ ಆಹುತಿಯಾಗಿ 8 ಜನ ಪ್ರಾಣ ಕಳೆದುಕೊಂಡಿದ್ದರು.ಈ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಕರ್ನಾಟಕ ಸಾರಿಗೆ ಇಲಾಖೆ ಖಾಸಗಿ ಬಸ್​ಗಳಿಗೆ ಕೆಲವೊಂದು ನಿಯಮಗಳನ್ನು ಅನುಸರಿಸುವಂತೆ ಖಡಕ್ ಆಗಿ ಸೂಚನೆ ನೀಡಿದೆ. ವಿಮಾನದಲ್ಲಿ ಟೇಕ್ ಆಫ್​ಗೂ ಮುನ್ನ ಗಗನಸಖ-ಸಖಿಯರು ನೀಡುವ ಸಂದೇಶದಂತೆ, ಖಾಸಗಿ ಬಸ್​​ಗಳಲ್ಲೂ ಸಂದೇಶ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ. ವಿಮಾನದಲ್ಲಿ ಟೇಕ್ ಆಫ್ಫ್​ ಆಗುವುದಕ್ಕೂ ಮುನ್ನ ಪ್ರಯಾಣಿಕರಿಗೆ ತುರ್ತು ದ್ವಾರಗಳ […]

ಸಾರಿಗೆ ಇಲಾಖೆಯು ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ನಿಯಮ ಜಾರಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಸಲೀಲೆ ವಿಡಿಯೋ ವೈರಲ್ ಪ್ರಕರಣ; ಡಿಜಿಪಿ ರಾಮಚಂದ್ರರಾವ್ ಅಮಾನತು.

(ನ್ಯೂಸ್‌ ಕಡಬ) newskadaba.com,ಜ.20 ಬೆಂಗಳೂರು : ರಾಸಲೀಲೆ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕಠಿಣ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ ಅವರನ್ನ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.ನಿನ್ನೆ 10 ದಿನಗಳ ಕಡ್ಡಾಯ ರಜೆ ಮೇಲೆ ತೆರಳಿದ್ದ ರಾಜಚಂದ್ರ ರಾವ್‌ ಅವರನ್ನ ರಾತ್ರಿ ಹೊತ್ತಿಗೆ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ವಿಚಾರಣೆ ಇನ್ನೂ ಬಾಕಿಯಿರುವ ಕಾರಣ ಅಮಾನತುಗೊಳಿಸುರುವುದಾಗಿ ಆದೇಶದಲ್ಲಿ ತಿಳಿಸಿದೆ. ಕಚೇರಿಯಲ್ಲಿ ಕುಳಿತು ಪೊಲೀಸ್ ಸಮವಸ್ತ್ರದಲ್ಲೇ ರಾಮಚಂದ್ರರಾವ್​​ ಮಹಿಳೆಯರೊಂದಿಗೆ ಅಸಭ್ಯವಾಗಿ

ರಾಸಲೀಲೆ ವಿಡಿಯೋ ವೈರಲ್ ಪ್ರಕರಣ; ಡಿಜಿಪಿ ರಾಮಚಂದ್ರರಾವ್ ಅಮಾನತು. Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ 2025-26 ವೇಳಾಪಟ್ಟಿ ಫೆ.10 ರಿಂದ ಫೆ.25ರ ವರೆಗೆ ವೇಳಾಪಟ್ಟಿ ಸಿದ್ದಪಡಿಸಲು ಸೂಚನೆ

(ನ್ಯೂಸ್‌ ಕಡಬ) newskadaba.com,ಜ.20 ಬೆಂಗಳೂರು: ಶಾಲೆ, ಕಾಲೇಜುಗಳು ವಾರ್ಷಿಕ ಪರೀಕ್ಷೆ ತಯಾರಿಗಳು ಆರಂಭಗೊಂಡಿದೆ. ಇದೀಗ ಶಿಕ್ಷಣ ಇಲಾಖೆ 2025-26ನೇ ಸಾಲಿನ ಪ್ರಥಮ ಪಿಯುಸಿ ತರಗತಿಗಳ ವಾರ್ಷಿಕ ಪರೀಕ್ಷೆ ಕುರಿತು ಮಹತ್ವದ ಸುತ್ತೋಲೆ ಹೊರಡಿಸಿದೆ. ಫೆ.10ರಿಂದ ಫೆ.25ರವರೆಗಿನ ಪ್ರತಿ ಕಾಲೇಜಿಗೆ ಅನ್ವಯವಾಗುವಂತೆ ವೇಳಾಪಟ್ಟಿಯನ್ನು ಸಿದ್ದಪಡಿಸಲು ಸೂಚನೆ ನೀಡಿದೆ. ಇದೇ ವೇಳೆ ಯಾವುದೇ ಕಾರಣಕ್ಕೂ ಪರೀಕ್ಷೆ ಸಂಬಂಧ ಹಣ ಸಂಗ್ರಹಿಸದಂತೆ ತಾಕೀತು ಮಾಡಿದೆ. ಪರೀಕ್ಷಾ ನಿಯಾಮಾವಳಿಗಳನ್ನು ಪಾಲಿಸುವ ಮೂಲಕ ಪರೀಕ್ಷೆ ನಡೆಸಲು ಸುತ್ತೋಲೆಯಲ್ಲಿ ಸೂಚಿಸಿದೆ. ಪ್ರಥಮ ಪಿಯುಸಿ ಫಲಿತಾಂಶ ದಿನಾಂಕ

ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ 2025-26 ವೇಳಾಪಟ್ಟಿ ಫೆ.10 ರಿಂದ ಫೆ.25ರ ವರೆಗೆ ವೇಳಾಪಟ್ಟಿ ಸಿದ್ದಪಡಿಸಲು ಸೂಚನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,ಜ.20: ರಾಜ್ಯದ ಬಹುತೇಕ ಭಾಗಗಳಲ್ಲಿ ಚಳಿ ಮುಂದುವರಿದಿದೆ. ಇಂದು ಸಹ ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಚಳಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.   ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಚಿಕ್ಕಬಳ್ಳಾಪುರದಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುಳ್ಯ: ಅನಧಿಕೃತ ಅಂಗಡಿಗಳಿಗೆ ಬೀಳಲಿದೆ ಬ್ರೇಕ್ ತೆರವುಗೊಳಿಸಲು ಕಟ್ಟುನಿಟ್ಟಿನ ನೋಟಿಸ್ ನೀಡಿದ ಪಿಡಿಒ..!

(ನ್ಯೂಸ್‌ ಕಡಬ) newskadaba.com,ಜ.19  ಸುಳ್ಯ: ಸರ್ವೆ ನಂಬರ್ 85 /2ರ ಸ್ವಾಧೀನದ ಜಾಗದಲ್ಲಿ ಭೂ ಪರಿವರ್ತನೆ ಗೊಳ್ಳದೆ ಹಾಗೂ ಈ- ಖಾತೆ ಪಡೆಯದೆ , ವಾಣಿಜ್ಯ ಉದ್ದೇಶದ ಕಟ್ಟಡಗಳು ಕಾರ್ಯನಿರ್ವಹಿಸುತ್ತಿರುವ ಆರೋಪ ಹಾಗೂ ದೂರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಇದೀಗ ಅನಧಿಕೃತ ಕಟ್ಟಡಗಳಲ್ಲಿ ಯಾವುದೇ ವ್ಯಾಪಾರ ವಹಿ ವಹಿವಾಟನ್ನು ನಡೆಸದಂತೆ ನೋಟಿಸ್ ನೀಡಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಗ್ರಾಮದ ಆದಿ ಸುಬ್ರಮಣ್ಯ ಎಂಬಲ್ಲಿ ಸರ್ವೆ ನಂಬರ್ 85 /2ರ ಸ್ವಾಧೀನದ ಜಾಗದಲ್ಲಿ ಅನಧಿಕೃತ ಅಂಗಡಿಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸುಬ್ರಹ್ಮಣ್ಯ ಗ್ರಾಮ

ಸುಳ್ಯ: ಅನಧಿಕೃತ ಅಂಗಡಿಗಳಿಗೆ ಬೀಳಲಿದೆ ಬ್ರೇಕ್ ತೆರವುಗೊಳಿಸಲು ಕಟ್ಟುನಿಟ್ಟಿನ ನೋಟಿಸ್ ನೀಡಿದ ಪಿಡಿಒ..! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜಗತ್ತಿನ ಅತಿ ದೊಡ್ಡ ಶಿವಲಿಂಗಕ್ಕೆ ಭಾರತ ವೇದಿಕೆ ಬಿಹಾರದಲ್ಲಿ ಸ್ಥಾಪನೆಯಾಯ್ತು 210 ಟನ್ ತೂಕದ ಬೃಹತ್ ಏಕಶಿಲಾ ಶಿವಲಿಂಗ!

(ನ್ಯೂಸ್‌ ಕಡಬ) newskadaba.com,ಜ.19 : ಭಾರತ ಮತ್ತೊಮ್ಮೆ ವಿಶ್ವದ ಗಮನ ಸೆಳೆದಿದೆ. ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹರಿಯ ಕೈಟ್ವಾಲಿಯಾ ಗ್ರಾಮದಲ್ಲಿ ವಿಶ್ವದ ಅತಿದೊಡ್ಡ ಏಕ ಶಿವಲಿಂಗವನ್ನು ಅಧಿಕೃತವಾಗಿ ಪ್ರತಿಷ್ಠಾಪಿಸುವ ಮೂಲಕ ದೇಶವು ಐತಿಹಾಸಿಕ ದಾಖಲೆಗೆ ನಾಂದಿ ಹಾಡಿದೆ. ​ ವಿರಾಟ್ ರಾಮಾಯಣ ದೇವಾಲಯ ಆವರಣದಲ್ಲಿ ನಡೆದ ಈ ಭವ್ಯ ಶಿವಲಿಂಗ ಪ್ರತಿಷ್ಠಾಪನಾ ಸಮಾರಂಭವು ಅಪಾರ ಧಾರ್ಮಿಕ ವೈಭವಕ್ಕೆ ಸಾಕ್ಷಿಯಾಯಿತು. ವಾರಣಾಸಿ ಹಾಗೂ ಅಯೋಧ್ಯೆಯಿಂದ ಆಗಮಿಸಿದ ಪಂಡಿತರು ವೇದಮಂತ್ರಗಳ ಪಠಣದೊಂದಿಗೆ ಶಿವಲಿಂಗದ ಪ್ರಾಣ ಪ್ರತಿಷ್ಠೆ ನೆರವೇರಿಸಿದರು. ವಿಶೇಷ

ಜಗತ್ತಿನ ಅತಿ ದೊಡ್ಡ ಶಿವಲಿಂಗಕ್ಕೆ ಭಾರತ ವೇದಿಕೆ ಬಿಹಾರದಲ್ಲಿ ಸ್ಥಾಪನೆಯಾಯ್ತು 210 ಟನ್ ತೂಕದ ಬೃಹತ್ ಏಕಶಿಲಾ ಶಿವಲಿಂಗ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಚಾರ್ಮಡಿ ಘಾಟ್‌ ಅರಣ್ಯಕ್ಕೆ ಬೆಂಕಿ ನೂರಾರು ಎಕರೆ ಅರಣ್ಯ ಸಂಪತ್ತು ಸುಟ್ಟು ಭಸ್ಮ

(ನ್ಯೂಸ್‌ ಕಡಬ) newskadaba.com,ಜ.19 : ಆಕಸ್ಮಿಕ ಬೆಂಕಿ ಬಿದ್ದು ಹತ್ತಾರು ಎಕರೆ ಅರಣ್ಯ ಪ್ರದೇಶ ಹೊತ್ತಿ ಉರಿದಿರುವ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಹಾರ ಸಮೀಪದ ಮಲಯ ಮಾರುತ ಬಳಿ ನಡೆದಿದೆ.ನಿರಂತರ ಗಾಳಿಯಿಂದ ಬೆಂಕಿಯ ಕೆನ್ನಾಲಿಗೆ ಹೆಚ್ಚಾಗುತ್ತಿದೆ. ಕಾಡ್ಗಿಚ್ಚಿಗೆ ಹತ್ತಾರು ಎಕರೆ ಅರಣ್ಯ ಪ್ರದೇಶ ಹೊತ್ತಿ ಉರಿಯುತ್ತಿದ್ದು, ಆತಂಕ ಉಂಟುಮಾಡಿದೆ. ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಲು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಕೆನ್ನಾಲಿಗೆ ಹಬ್ಬುತ್ತಲೇ ಇದೆ. ಗುಡ್ಡದಲ್ಲಿ ಬೀಸುತ್ತಿರುವ ಭಾರೀ ಗಾಳಿಯಿಂದ ಬೆಂಕಿ

ಚಾರ್ಮಡಿ ಘಾಟ್‌ ಅರಣ್ಯಕ್ಕೆ ಬೆಂಕಿ ನೂರಾರು ಎಕರೆ ಅರಣ್ಯ ಸಂಪತ್ತು ಸುಟ್ಟು ಭಸ್ಮ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಭಾರತದಲ್ಲಿ 50,000 ಉದ್ಯೋಗಿಗಳ ನೇಮಕ ಘೋಷಣೆ ಜಾಗತಿಕ ಸೇವಾ ದಿಗ್ಗಜ ‘ಡೆಲಾಯ್ಟ್’

(ನ್ಯೂಸ್‌ ಕಡಬ) newskadaba.com,ಜ.19 ಮಂಗಳೂರು: ಜಾಗತಿಕ ವೃತ್ತಿಪರ ಸೇವೆಗಳ ಪ್ರಮುಖ ಸಂಸ್ಥೆಯಾದ ಡೆಲಾಯ್ಟ್ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಬಲಪಡಿಸಲು ಮುಂದಾಗಿದ್ದು, ಸುಮಾರು 50,000 ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆ. ಅಲ್ಲದೆ, ಕರಾವಳಿ ನಗರಿ ಮಂಗಳೂರಿನಲ್ಲಿಯೂ ತನ್ನ ಶಾಖೆಯನ್ನು ತೆರೆಯುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದೇವೆ ಎಂದು ಡೆಲಾಯ್ಟ್ ದಕ್ಷಿಣ ಏಷ್ಯಾ ಸಿಇಒ ರೋಮಲ್ ಶೆಟ್ಟಿ ತಿಳಿಸಿದ್ದಾರೆ. ಶುಕ್ರವಾರ ನಗರದಲ್ಲಿ ನಡೆದ ಸ್ಟಾರ್ಟಪ್‌ಗಳ ಸಮಾವೇಶವಾದ ‘ಟೈಕಾನ್ ಮಂಗಳೂರು 2026’ ನಲ್ಲಿ ಟೈ ಮಂಗಳೂರು ಅಧ್ಯಕ್ಷ ರೋಹಿತ್ ಭಟ್ ಅವರೊಂದಿಗಿನ

ಭಾರತದಲ್ಲಿ 50,000 ಉದ್ಯೋಗಿಗಳ ನೇಮಕ ಘೋಷಣೆ ಜಾಗತಿಕ ಸೇವಾ ದಿಗ್ಗಜ ‘ಡೆಲಾಯ್ಟ್’ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಗಗನಕ್ಕೇರಿದ ಚಿನ್ನ ಮತ್ತು ಬೆಳ್ಳಿಯ ಬೆಲೆ

(ನ್ಯೂಸ್‌ ಕಡಬ) newskadaba.com,ಜ.19 ಬೆಂಗಳೂರು: ಇಂದು ಒಂದೇ ದಿನ ಬರೋಬ್ಬರಿ 1910 ರೂಪಾಯಿ ಹೆಚ್ಚಳ ಆಗುವ ಮೂಲಕ ಚಿನ್ನದ ಬೆಲೆ ಗರಿಷ್ಠ ಮಟ್ಟಕ್ಕೇರಿದೆ. ಚಿನ್ನದ ದರವು ಸಾರ್ವಕಾಲಿಕ ಗರಿಷ್ಠ ದರವಾದ 1 ಲಕ್ಷದ 45 ಸಾವಿರ 690 ರೂಪಾಯಿಗೆ ಹೆಚ್ಚಳ ಕಂಡಿದೆ. ಶುದ್ಧ ಚಿನ್ನದ ಇಂದಿನ ದರ ಎಷ್ಟಿದೆ ಜನವರಿ 19 2026, ಸೋಮವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 14,569 ರೂಪಾಯಿ ಇದ್ದು, ಇಂದು 191 ರೂಪಾಯಿ ಏರಿಕೆ ಆಗಿದೆ. 10

ಗಗನಕ್ಕೇರಿದ ಚಿನ್ನ ಮತ್ತು ಬೆಳ್ಳಿಯ ಬೆಲೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸ್ಪೇನ್‌ನಲ್ಲಿ ಭೀಕರ ರೈಲು ದುರಂತ ಎರಡು ಹೈಸ್ಪೀಡ್ ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ – 21 ಸಾವು

(ನ್ಯೂಸ್‌ ಕಡಬ) newskadaba.com,ಜ.19 ಸ್ಪೇನ್:  ಆಂಡಲೂಸಿಯಾದ ದಕ್ಷಿಣ ಪ್ರದೇಶದಲ್ಲಿ ಹೈಸ್ಪೀಡ್ ರೈಲುಗಳ ನಡುವೆ ಡಿಕ್ಕಿ ಸಂಭವಿಸಿ 21 ಜನರು ಸಾವನ್ನಪ್ಪಿದ್ದು, 70 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ. ಭಾನುವಾರ ಸಂಜೆ ಮಲಗಾದಿಂದ ಮ್ಯಾಡ್ರಿಡ್‌ಗೆ ಪ್ರಯಾಣಿಸುತ್ತಿದ್ದ ರೈಲು ಅಡಾಮುಜ್ ಬಳಿ ಹಳಿತಪ್ಪಿ, ಇನ್ನೊಂದು ಹಳಿ ದಾಟಿ ಮುಂದೆ ಬರುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆ ರೈಲು ಕೂಡ ಹಳಿತಪ್ಪಿತು ಎಂದು ಸ್ಪೇನ್‌ನಅಡಿಫ್ ರೈಲು ಜಾಲ ನಿರ್ವಾಹಕರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ದುರಂತದಲ್ಲಿ 21 ಜನರು

ಸ್ಪೇನ್‌ನಲ್ಲಿ ಭೀಕರ ರೈಲು ದುರಂತ ಎರಡು ಹೈಸ್ಪೀಡ್ ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ – 21 ಸಾವು Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top