ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ 2025-26 ವೇಳಾಪಟ್ಟಿ ಫೆ.10 ರಿಂದ ಫೆ.25ರ ವರೆಗೆ ವೇಳಾಪಟ್ಟಿ ಸಿದ್ದಪಡಿಸಲು ಸೂಚನೆ

(ನ್ಯೂಸ್‌ ಕಡಬ) newskadaba.com,ಜ.20 ಬೆಂಗಳೂರು: ಶಾಲೆ, ಕಾಲೇಜುಗಳು ವಾರ್ಷಿಕ ಪರೀಕ್ಷೆ ತಯಾರಿಗಳು ಆರಂಭಗೊಂಡಿದೆ. ಇದೀಗ ಶಿಕ್ಷಣ ಇಲಾಖೆ 2025-26ನೇ ಸಾಲಿನ ಪ್ರಥಮ ಪಿಯುಸಿ ತರಗತಿಗಳ ವಾರ್ಷಿಕ ಪರೀಕ್ಷೆ ಕುರಿತು ಮಹತ್ವದ ಸುತ್ತೋಲೆ ಹೊರಡಿಸಿದೆ. ಫೆ.10ರಿಂದ ಫೆ.25ರವರೆಗಿನ ಪ್ರತಿ ಕಾಲೇಜಿಗೆ ಅನ್ವಯವಾಗುವಂತೆ ವೇಳಾಪಟ್ಟಿಯನ್ನು ಸಿದ್ದಪಡಿಸಲು ಸೂಚನೆ ನೀಡಿದೆ. ಇದೇ ವೇಳೆ ಯಾವುದೇ ಕಾರಣಕ್ಕೂ ಪರೀಕ್ಷೆ ಸಂಬಂಧ ಹಣ ಸಂಗ್ರಹಿಸದಂತೆ ತಾಕೀತು ಮಾಡಿದೆ. ಪರೀಕ್ಷಾ ನಿಯಾಮಾವಳಿಗಳನ್ನು ಪಾಲಿಸುವ ಮೂಲಕ ಪರೀಕ್ಷೆ ನಡೆಸಲು ಸುತ್ತೋಲೆಯಲ್ಲಿ ಸೂಚಿಸಿದೆ.

ಪ್ರಥಮ ಪಿಯುಸಿ ಫಲಿತಾಂಶ ದಿನಾಂಕ

ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ ಪರೀಕ್ಷಾ ವೇಳಾಪಟ್ಟಿ ಮಾತ್ರವಲ್ಲ, ಫಲಿತಾಂಶದ ಕುರಿತು ಮಹತ್ವದ ಸೂಚನೆ ನೀಡಿದೆ. ಮಾರ್ಚ್ 30 ರಂದು ಪ್ರಥಮ ಪಿಯುಸಿ ಫಲಿತಾಂಶ ಘೋಷಣೆ ಮಾಡಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.

ಈ ಕುರಿತು ಇಲಾಖೆ ಹೊರಡಿಸಿದ ಸುತ್ತೋಲೆ ವಿವರ

2025-26ನೇ ಸಾಲಿನ ಪ್ರಥಮ ಪಿಯುಸಿ ತರಗತಿಗಳ ವಾರ್ಷಿಕ ಪರೀಕ್ಷೆ ನಡೆಸುವ ಕುರಿತು ಇಲಾಖೆ ಹೊರಡಿಸಿರುವ ದಾಖಲಾತಿ ಮಾರ್ಗಸೂಚಿ ಅನ್ವಯ ದಿನಾಂಕ 10-02-2026 ರಿಂದ 25-02-2026 ರವರೆಗಿನ ದಿನಗಳಲ್ಲಿ ಪ್ರತಿ ಕಾಲೇಜಿಗೆ ಅನ್ವಯವಾಗುವಂತೆ ವೇಳಾಪಟ್ಟಿಯನ್ನು ಸಿದ್ಧಪಡಿಸಿ ಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಿದೆ. ಇದೇ ವೇಳೆ ಯಾವುದೇ ಕಾರಣಕ್ಕೂ ಪರೀಕ್ಷೆ ಸಂಬಂಧ ಹಣ ಸಂಗ್ರಹಿಸದಂತೆ ಹಾಗೂ ಎಲ್ಲಾ ಪರೀಕ್ಷಾ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಪರೀಕ್ಷೆಯನ್ನು ನಡೆಸಲು ತಿಳಿಸಿದೆ.

Scroll to Top