ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಸುಳ್ಯ: ಅನಧಿಕೃತ ಅಂಗಡಿಗಳಿಗೆ ಬೀಳಲಿದೆ ಬ್ರೇಕ್ ತೆರವುಗೊಳಿಸಲು ಕಟ್ಟುನಿಟ್ಟಿನ ನೋಟಿಸ್ ನೀಡಿದ ಪಿಡಿಒ..! – News Kadaba

ಸುಳ್ಯ: ಅನಧಿಕೃತ ಅಂಗಡಿಗಳಿಗೆ ಬೀಳಲಿದೆ ಬ್ರೇಕ್ ತೆರವುಗೊಳಿಸಲು ಕಟ್ಟುನಿಟ್ಟಿನ ನೋಟಿಸ್ ನೀಡಿದ ಪಿಡಿಒ..!

(ನ್ಯೂಸ್‌ ಕಡಬ) newskadaba.com,ಜ.19  ಸುಳ್ಯ: ಸರ್ವೆ ನಂಬರ್ 85 /2ರ ಸ್ವಾಧೀನದ ಜಾಗದಲ್ಲಿ ಭೂ ಪರಿವರ್ತನೆ ಗೊಳ್ಳದೆ ಹಾಗೂ ಈ- ಖಾತೆ ಪಡೆಯದೆ , ವಾಣಿಜ್ಯ ಉದ್ದೇಶದ ಕಟ್ಟಡಗಳು ಕಾರ್ಯನಿರ್ವಹಿಸುತ್ತಿರುವ ಆರೋಪ ಹಾಗೂ ದೂರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಇದೀಗ ಅನಧಿಕೃತ ಕಟ್ಟಡಗಳಲ್ಲಿ ಯಾವುದೇ ವ್ಯಾಪಾರ ವಹಿ ವಹಿವಾಟನ್ನು ನಡೆಸದಂತೆ ನೋಟಿಸ್ ನೀಡಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ಗ್ರಾಮದ ಆದಿ ಸುಬ್ರಮಣ್ಯ ಎಂಬಲ್ಲಿ ಸರ್ವೆ ನಂಬರ್ 85 /2ರ ಸ್ವಾಧೀನದ ಜಾಗದಲ್ಲಿ ಅನಧಿಕೃತ ಅಂಗಡಿಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತಿಗೆ ದೂರು ಬಂದಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಜಾಗದ ಮಾಲಕರಾದ ಎಂವಿ ಮಂಜುನಾಥ ಹಾಗೂ ಎಂವಿ ಶ್ರೀವತ್ಸ ಬಳ್ಪ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಜಾಗದಲ್ಲಿನ ನಿವೇಶನಗಳಿಗೆ ಭೂ ಪರಿವರ್ತನೆ ಗೊಳಿಸಿ ಹಾಗೂ ಈ- ಖಾತೆ ಪಡೆದುಕೊಂಡು ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿಯಿಂದ ನಿಯಮಾನಸಾರ ವ್ಯಾಪಾರ ಪರವಾನಿಗೆ ಪಡಕೊಳ್ಳುವಂತೆ ಹಾಗೂ ಅಲ್ಲಿಯ ವರೆಗೆ ಇರುವಂತಹ ಅನಧಿಕೃತ ಕಟ್ಟಡಗಳಲ್ಲಿ ಯಾವುದೇ ವ್ಯಾಪಾರ ವಹಿವಾಟನ್ನು ನಡೆಸದಂತೆ ಮತ್ತು ತಪ್ಪಿದಲ್ಲಿ ಮತ್ತು ಮುಂದಿನ ಕ್ರಮ ಕೈಗೊಳ್ಳುವುದಾಗಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ತಿಳಿಸಿದೆ.

Scroll to Top