News Kadaba Desk

ರಾಷ್ಟ್ರನಿರ್ಮಾಣದಲ್ಲಿ ಯುವಜನತೆ ಸಕ್ರಿಯರಾಗಲು ಭಾರತ್ ಜೋಡೋ ಯುವ ಸಂಘಗಳ ರಚನೆ- ಜಿಲ್ಲಾಧಿಕಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 07. ಯುವಜನರನ್ನು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಪ್ರೋತ್ಸಾಹಿಸುವ ಉದ್ದೇಶದಿಂದ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸುವ ಸಂಬಂಧ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.\ ಪ್ರತಿ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆಗಳ ವಾರ್ಡ್‍ ಗಳಲ್ಲಿ […]

ರಾಷ್ಟ್ರನಿರ್ಮಾಣದಲ್ಲಿ ಯುವಜನತೆ ಸಕ್ರಿಯರಾಗಲು ಭಾರತ್ ಜೋಡೋ ಯುವ ಸಂಘಗಳ ರಚನೆ- ಜಿಲ್ಲಾಧಿಕಾರಿ Read More »

ಕರಾವಳಿ

ಲೋಕಸಭೆಯಲ್ಲಿ ಸೇವಾ ನಿವೃತ್ತ ಯೋಧರ ಪರ ಧ್ವನಿಯೆತ್ತಿದ ಸಂಸದ ಕ್ಯಾ.ಚೌಟ ನಿವೃತ್ತ ಸೈನಿಕರಿಗೆ ECHS ಯೋಜನೆಯಡಿ ಚಿಕಿತ್ಸೆ ಪಡೆಯಲು ಎದುರಾಗಿರುವ ಅಡೆ-ತಡೆಗಳಿಗೆ ಶಾಶ್ವತ ಪರಿಹಾರಕ್ಕೆ ಒತ್ತಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 07. ದೇಶದಲ್ಲಿ ಸೇವಾ ನಿವೃತ್ತ ಸೈನಿಕರು ಹಾಗೂ ಅವರ ಕುಟುಂಬಸ್ಥರಿಗೆ ಯಾವುದೇ ಅಡೆ-ತಡೆಗಳಿಲ್ಲದೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ಅನುಕೂಲವಾಗುವಂತೆ ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆ (ECHS)ಯಡಿಯಲ್ಲಿ ನೋಂದಾಯಿತ ಆಸ್ಪತ್ರೆಗಳ ಕ್ಲೈಮ್‌ಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡುವುದಕ್ಕೆ ರಕ್ಷಣಾ ಸಚಿವಾಲಯವು ಶಾಶ್ವತ ವ್ಯವಸ್ಥೆ ರೂಪಿಸಬೇಕೆಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಲೋಕಸಭೆಯಲ್ಲಿ ‘ನಿಯಮ 377’ರಡಿ ಒತ್ತಾಯಿಸಿದ್ದಾರೆ.   ಸದನದಲ್ಲಿ ಈ ಗಂಭೀರ ವಿಷಯವನ್ನು ಪ್ರಸ್ತಾಪಿಸಿರುವ ಸಂಸದರು, ಯೋಧನಾಗಿ

ಲೋಕಸಭೆಯಲ್ಲಿ ಸೇವಾ ನಿವೃತ್ತ ಯೋಧರ ಪರ ಧ್ವನಿಯೆತ್ತಿದ ಸಂಸದ ಕ್ಯಾ.ಚೌಟ ನಿವೃತ್ತ ಸೈನಿಕರಿಗೆ ECHS ಯೋಜನೆಯಡಿ ಚಿಕಿತ್ಸೆ ಪಡೆಯಲು ಎದುರಾಗಿರುವ ಅಡೆ-ತಡೆಗಳಿಗೆ ಶಾಶ್ವತ ಪರಿಹಾರಕ್ಕೆ ಒತ್ತಾಯ Read More »

ಕರ್ನಾಟಕ

ದುಬೈನಲ್ಲಿ ದುರಂತ: ಶೋರೂಮ್ ಸ್ಫೋಟದಲ್ಲಿ ಮಲಯಾಳಿ ಸೋಶಿಯಲ್ ಮೀಡಿಯಾ ಮ್ಯಾನೇಜರ್ ಮೃತ್ಯು

(ನ್ಯೂಸ್‌ ಕಡಬ) newskadaba.com ,ಆ.06: ದುಬೈನ ಕಾರು ಶೋ ರೂಮ್‌ನಲ್ಲಿ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಕೇರಳದ ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ. ಮೃತರನ್ನು ಕೊಲ್ಲಂ ಜಿಲ್ಲೆಯ ಕೊಟ್ಟಾರಕರ ನಿವಾಸಿ ಶಿಜಿನ್ ಪೌಲ್ (27) ಎಂದು ಗುರುತಿಸಲಾಗಿದೆ.. ಅವರು ದುಬೈಯ ಶೇಕ್ ಜಾಯೇದ್ ರಸ್ತೆಯಲ್ಲಿರುವ ಕಾರು ಶೋರೂಮ್‌ನಲ್ಲಿ ಸೋಶಿಯಲ್ ಮೀಡಿಯಾ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ಸ್ಫೋಟ ಸಂಭವಿಸಿದೆ. ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಕೆಲಸಕ್ಕೆ ಸೇರಿದ್ದರು. ಪೌಲ್ ಅವರು ಮೃತಪಟ್ಟಿರುವುದನ್ನು ದುಬೈಯ ಭಾರತೀಯ ದೂತವಾಸ ಕಚೇರಿ ದೃಢಪಡಿಸಿದೆ.

ದುಬೈನಲ್ಲಿ ದುರಂತ: ಶೋರೂಮ್ ಸ್ಫೋಟದಲ್ಲಿ ಮಲಯಾಳಿ ಸೋಶಿಯಲ್ ಮೀಡಿಯಾ ಮ್ಯಾನೇಜರ್ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೆಂಗಳೂರು-ಮಂಗಳೂರು ವಂದೇ ಭಾರತ್‌ ಟ್ರಯಲ್ ರನ್‌ಗೆ ಹೊಸ ದಿನಾಂಕ ನಿಗದಿ

(ನ್ಯೂಸ್‌ ಕಡಬ) newskadaba.com ,ಆ.06: ತಾಂತ್ರಿಕ ಕಾರಣಗಳಿಂದ ಜೂನ್‌ನಲ್ಲಿ ರದ್ದಾಗಿದ್ದ ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರವು ಆಗಸ್ಟ್ 11 ರಿಂದ 20 ರವರೆಗೆ ನಡೆಯಲಿದೆ. ಕಡಿದಾದ ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ಮಾರ್ಗದಲ್ಲಿ (55 ಕಿ.ಮೀ, 57 ಸುರಂಗಗಳು, 108 ತಿರುವುಗಳು) ಸುರಕ್ಷಿತವಾಗಿ ಸಂಚರಿಸಲು ಅತ್ಯಗತ್ಯವಾದ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (AEB) ವ್ಯವಸ್ಥೆ ಹೊಂದಿರುವ ವಿಶೇಷ ರೇಕ್ ಈಗ ಲಭ್ಯವಾಗಿದೆ.ಈ ತಂತ್ರಜ್ಞಾನದಿಂದಾಗಿ ರೈಲಿಗೆ ಹೊರಗಿನಿಂದ ಹೆಚ್ಚುವರಿ ಎಂಜಿನ್ (ಬ್ಯಾಂಕರ್) ಜೋಡಿಸುವ ಸಮಯ ಉಳುಮೆ ಆಗಲಿದ್ದು, ಗರಿಷ್ಠ 30

ಬೆಂಗಳೂರು-ಮಂಗಳೂರು ವಂದೇ ಭಾರತ್‌ ಟ್ರಯಲ್ ರನ್‌ಗೆ ಹೊಸ ದಿನಾಂಕ ನಿಗದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿರ್ಲಕ್ಷ್ಯದ ಆರೋಪ| ಮೂಲಭೂತ ತಪಾಸಣೆಯಿಲ್ಲದೆ ಚಿಕಿತ್ಸೆ, ಡಿ.ಎಚ್.ಒ. ಮಧ್ಯಪ್ರವೇಶದ ಬಳಿಕ ಪರೀಕ್ಷೆ- ಎದೆಯ ಸೋಂಕು ಪತ್ತೆ

(ನ್ಯೂಸ್‌ ಕಡಬ) newskadaba.com ,ಆ.06 ಕಡಬ: ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರಿಗೆ ಸಮರ್ಪಕ ವೈದ್ಯಕೀಯ ಸೇವೆ ದೊರೆಯುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ರೋಗಿಗಳಿಗೆ ಅಗತ್ಯ ಮೂಲಭೂತ ವೈದ್ಯಕೀಯ ತಪಾಸಣೆ ನಡೆಸದೆ ಔಷಧಿ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಬೆಳಕಿಗೆ ಬಂದಿದೆ. ಕೋಡಿಂಬಾಳದ ವ್ಯಕ್ತಿಯೊಬ್ಬರಿಗೆ ಜ್ವರ ಹಾಗೂ ದೈಹಿಕ ಬಳಲಿಕೆಯ ಲಕ್ಷಣಗಳಿದ್ದರೂ ಯಾವುದೇ ಮೂಲಭೂತ ಪರೀಕ್ಷೆ ನಡೆಸದೆ ಔಷಧಿ ನೀಡಲಾಗಿದ್ದು, ಬಳಿಕ ಜಿಲ್ಲಾ ಆರೋಗ್ಯಾಧಿಕಾರಿಗಳ ಮಧ್ಯಪ್ರವೇಶದ ನಂತರ ನಡೆಸಿದ ಪರೀಕ್ಷೆಯಲ್ಲಿ ಎದೆಯ ಸೋಂಕು  ಪತ್ತೆಯಾಗಿ ಸೂಕ್ತ

ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿರ್ಲಕ್ಷ್ಯದ ಆರೋಪ| ಮೂಲಭೂತ ತಪಾಸಣೆಯಿಲ್ಲದೆ ಚಿಕಿತ್ಸೆ, ಡಿ.ಎಚ್.ಒ. ಮಧ್ಯಪ್ರವೇಶದ ಬಳಿಕ ಪರೀಕ್ಷೆ- ಎದೆಯ ಸೋಂಕು ಪತ್ತೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸೂರಿಂಜೆ: ವಾಲಿಬಾಲ್ ಆಡುತ್ತಿದ್ದಾಗ ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು

(ನ್ಯೂಸ್‌ ಕಡಬ) newskadaba.com ,ಆ.06 : ವಾಲಿಬಾಲ್ ಆಡುತ್ತಿದ್ದ ಬಾಲಕನೊಬ್ಬ ಕುಸಿದು ಬಿದ್ದು ಮೃತಪಟ್ಟ ಘಟನೆ ಸುರತ್ಕಲ್ ಸಮೀಪದ ಸೂರಿಂಜೆಯಲ್ಲಿ ಆ.5ರ ಬುಧವಾರ ಸಂಭವಿಸಿದೆ. ಈತ ಸೂರಿಂಜೆ ಕೋಟೆ ಬೋಳ್ಳಾರು ಸರಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಸ್ನೇಹಿತರೊಂದಿಗೆ ಸೂರಿಂಜೆ ಮೈದಾನದಲ್ಲಿ ಆಡುತ್ತಿದ್ದ ವೇಳೆ ಕುಸಿದು ಬಿದ್ದಾಗ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಎನ್ನಲಾಗಿದೆ

ಸೂರಿಂಜೆ: ವಾಲಿಬಾಲ್ ಆಡುತ್ತಿದ್ದಾಗ ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಿಮೆ ಬೆಲೆಯ ಪ್ಲಾನ್‌ಗಳಿಗೆ ಬ್ರೇಕ್ ಹಾಕಿದ ಏರ್‌ಟೆಲ್: ಚಂದಾದಾರರಿಗೆ ಶಾಕಿಂಗ್ ನ್ಯೂಸ್!

(ನ್ಯೂಸ್‌ ಕಡಬ) newskadaba.com ,ಆ.06 : 28 ದಿನಗಳ ವ್ಯಾಲಿಡಿಟಿ, ದಿನಕ್ಕೆ 1GB ಡೇಟಾ, ಅನ್‌ಲಿಮಿಟೆಡ್ ಕಾಲ್ ಹಾಗೂ 100 SMS ನೀಡುತ್ತಿದ್ದ ಜನಪ್ರಿಯ 299 ರೂ. ಪ್ರಿಪೇಯ್ಡ್ ಪ್ಲಾನ್ ಅನ್ನು ಏರ್‌ಟೆಲ್ ದಿಢೀರ್ ತೆಗೆದುಹಾಕಿದೆ.ಈಗ 28 ದಿನಗಳ ವ್ಯಾಲಿಡಿಟಿಗೆ 349 ರೂ. ಪ್ಲಾನ್ ಲಭ್ಯವಿದ್ದು, ಇದರಲ್ಲಿ ದಿನಕ್ಕೆ 2GB ಡೇಟಾ (ಡಬಲ್ ಡೇಟಾ), ಅನ್‌ಲಿಮಿಟೆಡ್ ಕಾಲಿಂಗ್ ಹಾಗೂ ಆಪಲ್ ಮ್ಯೂಸಿಕ್ ಚಂದಾದಾರಿಕೆ ಸಿಗಲಿದೆ. 299 ರೂ. ಪ್ಲಾನ್ ಜೊತೆಗೆ 56 ದಿನಗಳ 579 ರೂ. ಹಾಗೂ

ಕಡಿಮೆ ಬೆಲೆಯ ಪ್ಲಾನ್‌ಗಳಿಗೆ ಬ್ರೇಕ್ ಹಾಕಿದ ಏರ್‌ಟೆಲ್: ಚಂದಾದಾರರಿಗೆ ಶಾಕಿಂಗ್ ನ್ಯೂಸ್! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಟೀಲು ದೇವಸ್ಥಾನದ ಗೋಪುರ ಸ್ವಚ್ಛತೆಗೆ ಡ್ರೋನ್ ತಂತ್ರಜ್ಞಾನ

(ನ್ಯೂಸ್‌ ಕಡಬ) newskadaba.com ,ಆ.06 : ಮಂಗಳೂರಿನ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಂಪ್ರದಾಯಿಕ ವಿಧಾನದ ಬದಲಾಗಿ ಮೊದಲ ಬಾರಿಗೆ ಡ್ರೋನ್ ಬಳಸಿ ಗೋಪುರದಲ್ಲಿದ್ದ ಪಾಚಿ ಹಾಗೂ ಧೂಳನ್ನು ಯಶಸ್ವಿಯಾಗಿ ಸ್ವಚ್ಛಗೊಳಿಸಲಾಗಿದೆ. ಮಂಗಳೂರಿನ ದುರ್ಗಾ ಫೆಸಿಲಿಟಿ ಸಂಸ್ಥೆಯ ಸಜ್ಜಿದಾನಂದ ಶೆಟ್ಟಿ ಅವರು ₹12 ಲಕ್ಷ ವೆಚ್ಚದಲ್ಲಿ ತಂದಿರುವ ಈ ಡ್ರೋನ್, 10 ಲೀಟರ್ ನೀರು ಹಾಗೂ ಹೈ-ಪ್ರೆಶರ್ ವಾಟರ್ ಜೆಟ್ ಸಿಂಪಡಿಸುವ ವ್ಯವಸ್ಥೆ ಹೊಂದಿದ್ದು, 300 ಮೀಟರ್ ಎತ್ತರದವರೆಗೂ ಸ್ವಚ್ಛಗೊಳಿಸುವ ಸಾಮರ್ಥ್ಯ ಹೊಂದಿದೆ.ಎತ್ತರದ ಸ್ಕ್ಯಾಫೋಲ್ಡಿಂಗ್‌ ಮತ್ತು

ಕಟೀಲು ದೇವಸ್ಥಾನದ ಗೋಪುರ ಸ್ವಚ್ಛತೆಗೆ ಡ್ರೋನ್ ತಂತ್ರಜ್ಞಾನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ: ಮದ್ಯಪಾನ ಮಾಡಿ ವಾಹನ ಚಾಲನೆ – ಚಾಲಕರ ಡ್ರೈವಿಂಗ್ ಲೈಸೆನ್ಸ್ 3 ತಿಂಗಳು ಅಮಾನತು

(ನ್ಯೂಸ್‌ ಕಡಬ) newskadaba.com ,ಆ.06 ಕಡಬ: ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ಚಾಲಕರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದು, ಡ್ರಿಂಕ್ ಅಂಡ್ ಡ್ರೈವ್ ಪ್ರಕರಣಗಳಲ್ಲಿ ಸಿಕ್ಕಿಬಿದ್ದ ಚಾಲಕರ ಚಾಲನಾ ಪರವಾನಗಿಯನ್ನು 3 ತಿಂಗಳುಗಳ ಕಾಲ ಅಮಾನತುಗೊಳಿಸಲಾಗಿದೆ. ಆರ್.ಟಿ.ಒ ಹಾಗೂ ಸಂಚಾರ ನಿಯಮಗಳ ಪ್ರಕಾರ, ಮದ್ಯಪಾನ ಸೇವಿಸಿ ಚಾಲನೆ ಮಾಡುವುದು ಗಂಭೀರ ಅಪರಾಧವಾಗಿದ್ದು, ರಸ್ತೆ ಸುರಕ್ಷತೆ ಹಾಗೂ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಕಡಬ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದರು. ಪರಿಶೀಲನೆ ವೇಳೆ

ಕಡಬ: ಮದ್ಯಪಾನ ಮಾಡಿ ವಾಹನ ಚಾಲನೆ – ಚಾಲಕರ ಡ್ರೈವಿಂಗ್ ಲೈಸೆನ್ಸ್ 3 ತಿಂಗಳು ಅಮಾನತು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

05 ವರ್ಷಗಳಿಂದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದಾತನ ದಸ್ತಗಿರಿ.

(ನ್ಯೂಸ್‌ ಕಡಬ) newskadaba.com ,ಆ.06: ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ: 65/2017 ಕಲಂ, 397, 395 ಜೊತೆಗೆ 34 ಐಪಿಸಿ ಪ್ರಕರಣದಲ್ಲಿ ಆರೋಪಿತನಾಗಿ ಸುಮಾರು 5 ವರ್ಷಗಳಿಂದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರಂಟ್ ಆಸಾಮಿ.. ಬೆಂಗಳೂರು ನಿವಾಸಿ ಮೂರ್ತಿ @ ಪಿಂಟು (37) ಎಂಬಾತನನ್ನು, ಧರ್ಮಸ್ಥಳ ಪೊಲೀಸ್ ಠಾಣಾ  ಸಿಬ್ಬಂದಿಗಳಾದ  ವ್ರಷಭ, ಚರಣ್ ರಾಜ್  ರವರು ಬೆಂಗಳೂರಿನಲ್ಲಿ ದಸ್ತಗಿರಿ ಮಾಡಿ, ದಿನಾಂಕ 05/08/2026 ರಂದು ನ್ಯಾಯಾಧೀಶರ ಸಮ್ಮುಖದಲ್ಲಿ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿರುತ್ತದೆ.

05 ವರ್ಷಗಳಿಂದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದಾತನ ದಸ್ತಗಿರಿ. Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top