News Kadaba Desk

ಪುತ್ತೂರಿನ ತರುಣ ಕಣ್ಮರೆ-ಪ್ರಕರಣ ದಾಖಲು

(ನ್ಯೂಸ್‌ ಕಡಬ) newskadaba.com,  ಡಿ.01 ಪುತ್ತೂರು: ನಗರದ ಪಡೀಲ್ ನ ಚಿಕನ್ ಸೆಂಟರೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ನಾಪತ್ತೆಯಾಗಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬದ್ರುದ್ದೀನ್ ಡಿಕೆ (27) ಕಾಣೆಯಾದ ಯುವಕ. ಈತ ಸುಮಾರು 8 ವರ್ಷಗಳಿಂದ ಚಿಕನ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ನ.29ರಂದು ಎಂದಿನಂತೆ ಬೆಳಗ್ಗೆ 8.45ಕ್ಕೆ ಕೆಲಸಕ್ಕೆ ಹಾಜರಾಗಿದ್ದು, ಬಳಿಕ ಮಾಲಕರಿಗೆ ತಿಳಿಸಿ ಅಂಗಡಿಯಿಂದ ಹೋಗಿದ್ದ ಎನ್ನಲಾಗಿದೆ. ಆ ಬಳಿಕ ಬದ್ರುದ್ದೀನ್ ಕೆಲಸದ ಸ್ಥಳಕ್ಕೂ […]

ಪುತ್ತೂರಿನ ತರುಣ ಕಣ್ಮರೆ-ಪ್ರಕರಣ ದಾಖಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ತಮಿಳುನಾಡಿಗೆ ಅಪ್ಪಳಿಸಿದ ದಿತ್ವಾ ಚಂಡಮಾರುತ

(ನ್ಯೂಸ್‌ ಕಡಬ) newskadaba.com,  ನ.29: ಬಂಗಾಳಕೊಲ್ಲಿಯ ನೈಋತ್ಯ ಮತ್ತು ಶ್ರೀಲಂಕಾದ ಉತ್ತರ ಭಾಗದಲ್ಲಿ ಬೀಸುತ್ತಿರುವ ದಿತ್ವಾ ಚಂಡಮಾರುತ ವಾಯುವ್ಯ ದಿಕ್ಕಿನತ್ತ ಸಾಗುತ್ತಿದ್ದು, ಉತ್ತರ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಗಳಲ್ಲಿ ಶನಿವಾರ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಳಿಗ್ಗೆ 8.30ಕ್ಕೆ ಕೊನೆಗೊಂಡ ಆರು ಗಂಟೆಗಳಲ್ಲಿ ವ್ಯವಸ್ಥೆಯು ಗಂಟೆಗೆ 8 ಕಿ.ಮೀ ವೇಗದಲ್ಲಿ ನಿಧಾನವಾಗಿ ಚಲಿಸುತ್ತಿದೆ ಮತ್ತು ಅದೇ ಪ್ರದೇಶದಲ್ಲಿ ಬಹುತೇಕ ಸ್ಥಿರವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವರದಿ ಮಾಡಿದೆ.

ತಮಿಳುನಾಡಿಗೆ ಅಪ್ಪಳಿಸಿದ ದಿತ್ವಾ ಚಂಡಮಾರುತ Read More »

ಬ್ರೇಕಿಂಗ್ ನ್ಯೂಸ್

ಸುಬ್ರಮಣ್ಯ: ಅಪ್ರಾಪ್ತ ಬಾಲಕನಿಗೆ ಗದರಿಸಿ ಕೋಲಿನಿಂದ ಹಲ್ಲೆ-ಪ್ರಕರಣ ದಾಖಲು

(ನ್ಯೂಸ್‌ ಕಡಬ) newskadaba.com,  ನ.29: ಅಪ್ರಾಪ್ತ ಬಾಲಕನಿಗೆ ಗದರಿಸಿ ಕೋಲಿನಿಂದ ಹೊಡೆದ ಆರೋಪದ ಮೇಲೆ ವ್ಯಕ್ತಿಯೋರ್ವರ ವಿರುದ್ಧ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರ ಮಹಿಳೆಯ ಅಪ್ರಾಪ್ತ ಪ್ರಾಯದ ಮಗನು, ಸ್ಥಳೀಯ ಶಾಲೆಯೊಂದರಲ್ಲಿ ಕಲಿಯುತ್ತಿದ್ದಾನೆ. ನ. 24ರಂದು ಆರೋಪಿ ಚೇತನ್ ಎಂಬವರು ಬಾಲಕನಿಗೆ ಗದರಿಸಿ ಕೋಲಿನಿಂದ ಹೊಡೆಯುತ್ತಿರುವ ವಿಡಿಯೋ ಮೊಬೈಲ್ ನಲ್ಲಿ ಪ್ರಸಾರವಾಗಿರುವುದು ದೂರುದಾರ ಮಹಿಳೆಯ ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಬಾಲಕನ ತಾಯಿ ಆರೋಪಿ ಚೇತನ್ ಅವರ ವಿರುದ್ಧ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ದೂರು

ಸುಬ್ರಮಣ್ಯ: ಅಪ್ರಾಪ್ತ ಬಾಲಕನಿಗೆ ಗದರಿಸಿ ಕೋಲಿನಿಂದ ಹಲ್ಲೆ-ಪ್ರಕರಣ ದಾಖಲು Read More »

ಕರಾವಳಿ

ಇಬ್ಬರೂ ಒಟ್ಟಿಗೆ ಸಾಗುವುದೇ ನಮ್ಮ ನಡುವೆ ಆಗಿರುವ ಒಪ್ಪಂದ : ಸಿಎಂ

(ನ್ಯೂಸ್‌ ಕಡಬ) newskadaba.com,  ನ.29: ಪಕ್ಷದ ವರಿಷ್ಠರ ತೀರ್ಮಾನ, ಸೂಚನೆಯಂತೆ ನಾನು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡೆದುಕೊಳ್ಳುತ್ತೇವೆ ಎಂದು ತೀರ್ಮಾನಿಸಿದ್ದೇವೆ. ಸಚಿವರಾಗಲಿ, ಶಾಸಕರಾಗಿ ಸರ್ಕಾರದ ವಿರುದ್ಧವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಜೋರಾದ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಶನಿವಾರ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ನಂತರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ನಾವಿಬ್ಬರೂ ಪಕ್ಷದ ವರಿಷ್ಠರು ಸೂಚಿಸಿದಂತೆ ನಡೆದುಕೊಳ್ಳುತ್ತೇವೆ ಎಂದು ತೀರ್ಮಾನಿಸಿದ್ದೇವೆ. ಅಧಿವೇಶನ ಇರುವುದರಿಂದ ಇಬ್ಬರಿಗೂ ಗೊಂದಲಗಳನ್ನು ತಿಳಿಗೊಳಿಸುವ ಕೆಲಸ

ಇಬ್ಬರೂ ಒಟ್ಟಿಗೆ ಸಾಗುವುದೇ ನಮ್ಮ ನಡುವೆ ಆಗಿರುವ ಒಪ್ಪಂದ : ಸಿಎಂ Read More »

ಕರ್ನಾಟಕ

ಸಿಎಂ-ಡಿಸಿಎಂ ಜಂಟಿ ಸುದ್ದಿಗೋಷ್ಠಿ

(ನ್ಯೂಸ್‌ ಕಡಬ) newskadaba.com,  ನ.29: ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಭಾರೀ ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಡಿಸಿಎಂ ಡಿಕೆ ಶಿವಕುಮಾರ್‌ ಭೇಟಿ ನೀಡಿದ್ದಾರೆ. ಡಿಕೆ.ಶಿವಕುಮಾರ್ ಅವರು ಕಾವೇರಿ ನಿವಾಸಕ್ಕೆ ಆಗಮಿಸುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಶಿವಕುಮಾರ್ ಅವರು ಉಪಹಾರ ಸೇವಿಸಿದ್ದಾರೆ. ಇದೀಗ ಬ್ರೇಕ್ ಫಾಸ್ಟ್ ಮೀಟಿಂಗ್ ಅಂತ್ಯವಾಗಿದ್ದು, ಉಭಯ ನಾಯಕರು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು. ಸಿಎಂ ಸಿದ್ದರಾಮಯ್ಯ ಮಾತನಾಡಿ, ಹೈಕಮಾಂಡ್‌ ನಿರ್ಧಾರದ ಮೇಲೆ ನಾವಿಬ್ಬರೂ ಬ್ರೇಕ್‌ಫಸ್ಟ್‌ ಮೀಟಿಂಗ್‌ ಸೇರಿದ್ದೆವು. ಮೀಟಿಂಗ್‌ನಲ್ಲಿ 2028 ರ

ಸಿಎಂ-ಡಿಸಿಎಂ ಜಂಟಿ ಸುದ್ದಿಗೋಷ್ಠಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

‘ಭಾಷಾ ನಿಯಂತ್ರಣಕ್ಕಾಗಿ ಹಿಂಸೆ ತಪ್ಪು’- ಸುನಿಲ್ ಶೆಟ್ಟಿ

(ನ್ಯೂಸ್‌ ಕಡಬ) newskadaba.com,  ನ.29: ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಮರಾಠಿ ಮತ್ತು ವಲಸಿಗರ ನಡುವೆ ಮರಾಠಿ ಭಾಷೆಯ ಕುರಿತು ದೊಡ್ಡ ಚರ್ಚೆ ನಡೆಯುತ್ತಿದೆ. ಬಾಲಿವುಡ್ ಹಿರಿಯ ನಟ ಸುನಿಲ್ ಶೆಟ್ಟಿ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ‘ಭಾಷಾ ನಿಯಂತ್ರಣಕ್ಕಾಗಿ ಹಿಂಸೆ ತಪ್ಪು’ ಎಂದು ತಿಳಿಸಿದ್ದಾರೆ. ಮರಾಠಿ ಭಾಷೆಯ ಮೇಲಿನ ಪ್ರಸ್ತುತ ರಾಜಕೀಯ ಮತ್ತು ಅದರಿಂದಾಗುತ್ತಿರುವ ಹಿಂಸಾಚಾರದ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ಮರಾಠಿ ಭಾಷೆಯ ಮೇಲೆ ರಾಜಕೀಯ ಮಾಡುವುದು ಮತ್ತು ಅದನ್ನು

‘ಭಾಷಾ ನಿಯಂತ್ರಣಕ್ಕಾಗಿ ಹಿಂಸೆ ತಪ್ಪು’- ಸುನಿಲ್ ಶೆಟ್ಟಿ Read More »

ಬ್ರೇಕಿಂಗ್ ನ್ಯೂಸ್

ಪ್ರವಾಹದಿಂದ ತತ್ತರಿಸಿದ ಶ್ರೀಲಂಕಾಗೆ ಭಾರತ ನೆರವು: ‘ಆಪರೇಷನ್ ಸಾಗರ ಬಂಧು’ ಅಡಿ ಕಾರ್ಯಾಚರಣೆ ಆರಂಭ

(ನ್ಯೂಸ್‌ ಕಡಬ) newskadaba.com,  ನ.29: ಪ್ರವಾಹ ಮತ್ತು ಭೂಕುಸಿತದಿಂದ ತತ್ತರಿಸಿರುವ ಶ್ರೀಲಂಕಾಕ್ಕೆ ನೆರವು ನೀಡಲು ಭಾರತ ‘ಆಪರೇಷನ್ ಸಾಗರ ಬಂಧು’ ಅಡಿಯಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದೆ. ಇದರ ಭಾಗವಾಗಿ ಪ್ರವಾಹ ಪೀಡಿತ ಪ್ರದೇಶಗಳಿಂದ ಸ್ಥಳಾಂತರಗೊಂಡವರಿಗಾಗಿ ತುರ್ತು ಪರಿಹಾರ ಸಾಮಗ್ರಿಗಳನ್ನ ಭಾರತ ಕಳುಹಿಸಿದೆ. ಶ್ರೀಲಂಕಾದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಅಲ್ಲಲ್ಲಿ ಗುಡ್ಡ ಕುಸಿತ ಸಂಭವಿಸಿ, ರಸ್ತೆಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಪ್ರವಾಹ ಮತ್ತು ಭೂಕುಸಿತದಿಂದಾಗಿ ಸುಮಾರು 100 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ

ಪ್ರವಾಹದಿಂದ ತತ್ತರಿಸಿದ ಶ್ರೀಲಂಕಾಗೆ ಭಾರತ ನೆರವು: ‘ಆಪರೇಷನ್ ಸಾಗರ ಬಂಧು’ ಅಡಿ ಕಾರ್ಯಾಚರಣೆ ಆರಂಭ Read More »

ಅಂತರ್ರಾಷ್ಟ್ರೀಯ ನ್ಯೂಸ್

ಸುಳ್ಯ : ಮಹಡಿ ಮೇಲಿಂದ ಬಿದ್ದು ಗಾಯಗೊಂಡಿದ್ದ ಮಹಿಳೆ ಮೃತ್ಯು

(ನ್ಯೂಸ್‌ ಕಡಬ) newskadaba.com,  ನ.29: ಮಹಡಿ ಮೇಲಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತಪಟ್ಟ ಘಟನೆ ಸುಳ್ಯದ ಸಂಪಾಜೆಯ ಚೌಕಿ ಬಳಿ ಗುರುವಾರ ಸಂಭವಿಸಿದೆ. ಮೂಲತಃ ಚೆಂಬು ಗ್ರಾಮದ ಉಂಬಳೆ ನಿವಾಸಿ ಆಗಿರುವ ಪ್ರಸ್ತುತ ಸಂಪಾಜೆಯ ಚೌಕಿ ಬಳಿಯ ಕಮಲ (85) ತನ್ನ ಮನೆಯ ಮಹಡಿಯಿಂದ ಇಳಿದುಕೊಂಡು ಬರುತ್ತಿರುವಾಗ ಕಾಲು ಜಾರಿ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಂಬುಲೆನ್ಸ್ ಮೂಲಕ ಸುಳ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು

ಸುಳ್ಯ : ಮಹಡಿ ಮೇಲಿಂದ ಬಿದ್ದು ಗಾಯಗೊಂಡಿದ್ದ ಮಹಿಳೆ ಮೃತ್ಯು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ದೆಹಲಿ ವಾಯು ಮಾಲಿನ್ಯದ ಬಗ್ಗೆ ಪ್ರಧಾನಿ ಮೋದಿಗೆ ಕಿರಣ್ ಬೇಡಿ ಪತ್ರ

(ನ್ಯೂಸ್‌ ಕಡಬ) newskadaba.com,  ನ.29: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಹಲವೆಡೆಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ 369ರಷ್ಟು ದಾಖಲಾಗಿದೆ. ಹೆಚ್ಚುತ್ತಿರುವ ಮಾಲಿನ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಪುದುಚೇರಿ ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಕಿರಣ್ ಬೇಡಿ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಈ ಕುರಿತು ಬರೆಯುತ್ತಾ, ಪ್ರಧಾನಿ ಮೋದಿ

ದೆಹಲಿ ವಾಯು ಮಾಲಿನ್ಯದ ಬಗ್ಗೆ ಪ್ರಧಾನಿ ಮೋದಿಗೆ ಕಿರಣ್ ಬೇಡಿ ಪತ್ರ Read More »

ರಾಷ್ಟ್ರೀಯ ನ್ಯೂಸ್

ಎ320 ಸಾಫ್ಟ್ವೇರ್ನಲ್ಲಿ ದೋಷ: 250ಕ್ಕೂ ಹೆಚ್ಚು ವಿಮಾನ ಹಾರಾಟ ವಿಳಂಬ/ರದ್ದಾಗುವ ಸಾಧ್ಯತೆ

(ನ್ಯೂಸ್‌ ಕಡಬ) newskadaba.com,  ನ.29: ದೇಶದಲ್ಲಿ ಕಾರ್ಯ ನಿರ್ವಹಿಸುವ ಇಂಡಿಗೋ, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ನಿರ್ವಹಿಸುವ ಹಲವಾರು ವಿಮಾನಗಳು ತಮ್ಮ ಎ320 ಸಾಫ್ಟ್‌ವೇರ್‌ನಲ್ಲಿ ಉಂಟಾದ ದೋಷದಿಂದಾಗಿ ಅಡಚಣೆ ಉಂಟಾಗುವ ಸಾಧ್ಯತೆಗಳಿವೆ. ತಾಂತ್ರಿಕ ದೋಷದಿಂದ ಸುಮಾರು 200 ರಿಂದ 250 ವಿಮಾನಗಳ ಹಾರಾಟ ರದ್ದಾಗುವ ಅಥವಾ ವಿಮಾನ ಹಾರಾಟದಲ್ಲಿ ವಿಳಂಬವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಫ್ರೆಂಚ್ ವಿಮಾನಯಾನ ಕಂಪನಿ ಏರ್‌ಬಸ್, ಅತಿಯಾದ ಸೌರ ವಿಕಿರಣವು ಎ320 ಸರಣಿಯ ವಿಮಾನಗಳ ಹಾರಾಟ ನಿಯಂತ್ರಣಗಳಿಗೆ ಅಗತ್ಯವಾದ ನಿರ್ಣಾಯಕ ಡೇಟಾವನ್ನ ನಾಶಪಡಿಸಬಹುದು.

ಎ320 ಸಾಫ್ಟ್ವೇರ್ನಲ್ಲಿ ದೋಷ: 250ಕ್ಕೂ ಹೆಚ್ಚು ವಿಮಾನ ಹಾರಾಟ ವಿಳಂಬ/ರದ್ದಾಗುವ ಸಾಧ್ಯತೆ Read More »

ರಾಷ್ಟ್ರೀಯ ನ್ಯೂಸ್
Scroll to Top