ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಶೇ.10 ಕಮಿಷನ್‌ ಆಸೆಗೆ 22 ಮಕ್ಕಳನ್ನು ಕೊಂದ ವೈದ್ಯರು! – News Kadaba

ಶೇ.10 ಕಮಿಷನ್‌ ಆಸೆಗೆ 22 ಮಕ್ಕಳನ್ನು ಕೊಂದ ವೈದ್ಯರು!

(ನ್ಯೂಸ್‌ ಕಡಬ) newskadaba.com,  ಅ.15  ಭೋಪಾಲ್‌: ಮಧ್ಯಪ್ರದೇಶದಲ್ಲಿ 22 ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್‌ ಸಿರಫ್‌ ಅನ್ನು ಶಿಫಾರಸು ಮಾಡಲು ಡಾ. ಪ್ರವೀಣ್‌ ಸೋನಿ ಶೇ.10ರಷ್ಟು ಕಮಿಷನ್‌ ಪಡೆಯುತ್ತಿದ್ದರು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.ಮಕ್ಕಳ ಸಾವಿನ ಬೆನ್ನಲ್ಲೇ ಪೊಲೀಸರು, ಮಕ್ಕಳಿಗೆ ಸಿರಪ್‌ ಶಿಫಾರಸು ಮಾಡಿದ್ದ ಡಾ. ಪ್ರವೀಣ್‌ ಸೋನಿಯನ್ನು ಬಂಧಿಸಿದ್ದರು.

ಪ್ರಕರಣದ ವಿಚಾರಣೆ ವೇಳೆ, ಕೋಲ್ಡ್ರಿಫ್‌ ಸಿರಫ್‌ ಶಿಫಾರಸು ಮಾಡಲು ಶ್ರೀಶನ್‌ ಕಂಪನಿಯಿಂದ ಶೇ.10ರಷ್ಟು ಕಮಿಷನ್‌ ಪಡೆಯುತ್ತಿದ್ದೆ ಎಂಬುದನ್ನು ಡಾ.ಸೋನಿ ಒಪ್ಪಿದ್ದಾರೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

ಕೋಲ್ಡ್ರಿಫ್‌ ಔಷಧ ಸೇವಿಸಿದ ಹಲವು ಮಕ್ಕಳಲ್ಲಿ ಮೂತ್ರ ಸಂಬಂಧಿ ಸಮಸ್ಯೆ ಕಾಣಿಸಿಕೊಂಡ ಬಳಿಕವೂ ಡಾ.ಸೋನಿ ಸೇರಿದಂತೆ ಹಲವು ವೈದ್ಯರು ಮಕ್ಕಳಿಗೆ ಕೋಲ್ಡ್ರಿಫ್‌ ಸಿರಪ್‌ ಶಿಫಾರಸು ಮುಂದುವರೆಸಿದ್ದರು ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

Scroll to Top