News Kadaba Desk

ಬಿಳಿನೆಲೆ: ಇನ್ನೋವಾ ವಾಹನಗಳೆರಡರ ಮಧ್ಯೆ ಢಿಕ್ಕಿ

(ನ್ಯೂಸ್ ಕಡಬ) newskadaba.com ಕಡಬ, ನ.18. ಇನೋವಾ ವಾಹನಗಳೆರಡರ ಮಧ್ಯೆ ಢಿಕ್ಕಿ ಸಂಭವಿಸಿದ ಘಟನೆ ಶನಿವಾರದಂದು ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆ ಸಿಪಿಸಿಆರ್‌ಐ ಸಮೀಪ ನಡೆದಿದೆ. ಮಂಗಳೂರಿನ ಮುರಳೀಧರ ಎಂಬವರು ಚಲಾಯಿಸುತ್ತಿದ್ದ ಇನ್ನೋವಾ ವಾಹನಕ್ಕೆ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಉಪ್ಪಿನಂಗಡಿಯ ವಿವೇಕ್ ಎಂಬವರು ಚಲಾಯಿಸುತ್ತಿದ್ದ ಇನ್ನೋವಾ ಬಸ್ಸೊಂದನ್ನು ಓವರ್ಟೇಕ್ ಮಾಡುವ ಭರದಲ್ಲಿ ಢಿಕ್ಕಿಯಾಗಿದೆ. ಘಟನೆಯಲ್ಲಿ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಬಿಳಿನೆಲೆ: ಇನ್ನೋವಾ ವಾಹನಗಳೆರಡರ ಮಧ್ಯೆ ಢಿಕ್ಕಿ Read More »

ಕರಾವಳಿ

ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಟೂರ್ನಮೆಂಟ್ ► ಕಡಬದ ಸೈಂಟ್ ಆ್ಯನ್ಸ್ ಶಾಲೆಗೆ ಹಲವು ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಕಡಬ, ನ.18. ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಟೂರ್ನಮೆಂಟ್ ಚಾಂಪಿಯನ್ – 2017 ಸ್ಪರ್ಧೆಯಲ್ಲಿ ಭಾಗವಹಿಸಿದ ಕಡಬದ ಸೈಂಟ್ ಆ್ಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಬಹುಮಾನ ವಿಜೇತ ವಿದ್ಯಾರ್ಥಿಗಳಾದ ವಸುಧಾ, ಸಾನ್ವಿ, ಸುಮುಖ್, ಪ್ರೇಕ್ಷಕ್, ಪ್ರೀತಮ್, ಪ್ರಕ್ಷಿತ್, ಸಾಯಿ ಪ್ರಣವ್, ಸಾತ್ವಿಕ್, ಸಾಕೇತ್, ಸಿದ್ದಾರ್ಥ್ ಆರ್., ಆವರ್ಿನ್, ಮಹಮ್ಮದ್ ಶಿಫಾನ್, ಸುಶ್ಮಿತಾ, ಶಮಿತಾ ಕೆ. ಹಾಗೂ ಸರ್ವೇಶ್ ಎಂ.ಕೆ. ಅವರನ್ನು ಶಾಲಾ ಸಭಾಂಗಣದಲ್ಲಿ

ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಟೂರ್ನಮೆಂಟ್ ► ಕಡಬದ ಸೈಂಟ್ ಆ್ಯನ್ಸ್ ಶಾಲೆಗೆ ಹಲವು ಪ್ರಶಸ್ತಿ Read More »

ಕರಾವಳಿ

ಇಚಿಲಂಪಾಡಿ: ಖಾಸಗಿ ಬಸ್ – ಓಮ್ನಿ ಢಿಕ್ಕಿ ► ಓರ್ವ ಮೃತ್ಯು, ನಾಲ್ವರು ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ನ.18. ಖಾಸಗಿ ಬಸ್ ಹಾಗೂ ಓಮ್ನಿ ಕಾರು ನಡುವೆ ಢಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು ನಾಲ್ವರು ಗಂಭೀರ ಗಾಯಗೊಂಡ ಘಟನೆ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಇಚಿಲಂಪಾಡಿ ಎಂಬಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ಬೆಂಗಳೂರಿನಿಂದ ಧರ್ಮಸ್ಥಳ ಮೂಲಕ ಸುಬ್ರಹ್ಮಣ್ಯ ಕ್ಕೆ ತೆರಳುತ್ತಿದ್ದ ಕುಕ್ಕೇಶ್ರೀ ಹೆಸರಿನ ಖಾಸಗಿ ಬಸ್ ಹಾಗೂ ಧರ್ಮಸ್ಥಳ ಕ್ಕೆ ತೆರಳುತ್ತಿದ್ದ ಉಡುಪಿ ಮೂಲದ ಓಮ್ನಿ ಕಾರು ಢಿಕ್ಕಿಯಾಗಿದ್ದು, ಘಟನೆಯಲ್ಲಿ ಕಾರಿನಲ್ಲಿದ್ದ ಓರ್ವ ಮೃತಪಟ್ಟಿದ್ದು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.

ಇಚಿಲಂಪಾಡಿ: ಖಾಸಗಿ ಬಸ್ – ಓಮ್ನಿ ಢಿಕ್ಕಿ ► ಓರ್ವ ಮೃತ್ಯು, ನಾಲ್ವರು ಗಂಭೀರ Read More »

ಕರಾವಳಿ

ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಲಾರಿ ► ಮಹಿಳಾ ಪೊಲೀಸ್ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಮುರ್ಡೇಶ್ವರ, ನ.18. ಲಾರಿಯೊಂದು ಸ್ಕೂಟಿಗೆ ಢಿಕ್ಕಿ ಹೊಡೆದ ಪರಿಣಾಮ ಮಹಿಳಾ ಪೊಲೀಸ್ ಸಿಬ್ಬಂದಿಯೋರ್ವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಮುರ್ಡೇಶ್ವರ ಮುಖ್ಯ ದ್ವಾರದ ಬಳಿ ಶುಕ್ರವಾರದಂದು ನಡೆದಿದೆ. ಮೃತರನ್ನು ಮುರ್ಡೇಶ್ವರ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿ ಶ್ರೀಮತಿ ಮೃಧುಲಾ ಆಚಾರ್ಯ(37) ಎಂದು ಗುರುತಿಸಲಾಗಿದೆ. ಇವರು ತನ್ನ ದ್ವಿಚಕ್ರ ವಾಹನದಲ್ಲಿ ರಸ್ತೆ ದಾಟುತ್ತಿರುವಾಗ ಭಟ್ಕಳ ಕಡೆಯಿಂದ ಬಂದ ಲಾರಿಯು ಢಿಕ್ಕಿ ಹೊಡೆದಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಭಟ್ಕಳ ಸರಕಾರಿ

ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಲಾರಿ ► ಮಹಿಳಾ ಪೊಲೀಸ್ ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ

ವೈದ್ಯರ ಮುಷ್ಕರಕ್ಕೆ ಜಿಲ್ಲೆಯಲ್ಲಿ ಮತ್ತೊಂದು ಬಲಿ ► ಸೂಕ್ತ ಚಿಕಿತ್ಸೆ ಸಿಗದೆ ವಿಟ್ಲ ನಿವಾಸಿ ಮೃತ್ಯು

(ನ್ಯೂಸ್ ಕಡಬ) newskadaba.com ವಿಟ್ಲ, ನ.17. ವೈದ್ಯರು ನಡೆಸುತ್ತಿರುವ ಮುಷ್ಕರಕ್ಕೆ ರಾಜ್ಯದ ವಿವಿಧೆಡೆ ಹಲವು ಜೀವಗಳು ಬಲಿಯಾಗಿರುವಂತೆಯೇ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರದಂದು ಎರಡು ಜೀವಗಳು ಬಲಿಯಾಗಿವೆ‌. ಶುಕ್ರವಾರದಂದು ಸೂಕ್ತ ಚಿಕಿತ್ಸೆ ದೊರೆಯದೆ ಪುತ್ತೂರಿನ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಮೃತಪಟ್ಟ ಘಟನೆಯ ಮರುಕ್ಷಣವೇ ವಿಟ್ಲದಲ್ಲಿ ವ್ಯಕ್ತಿಯೋರ್ವರು ಶುಕ್ರವಾರದಂದು ಸಂಜೆ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ವಿಟ್ಲ ಕಸಬಾ ಗ್ರಾಮದ ರಾಯರಬೆಟ್ಟು ನಿವಾಸಿ ರುಕ್ಮ ಪೂಜಾರಿ ಎಂಬವರ ಪುತ್ರ ರಜತ್ (27) ಎಂದು ಗುರುತಿಸಲಾಗಿದೆ. ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಇವರನ್ನು

ವೈದ್ಯರ ಮುಷ್ಕರಕ್ಕೆ ಜಿಲ್ಲೆಯಲ್ಲಿ ಮತ್ತೊಂದು ಬಲಿ ► ಸೂಕ್ತ ಚಿಕಿತ್ಸೆ ಸಿಗದೆ ವಿಟ್ಲ ನಿವಾಸಿ ಮೃತ್ಯು Read More »

ಕರಾವಳಿ

ವೈದ್ಯರ ಮುಷ್ಕರಕ್ಕೆ ಜಿಲ್ಲೆಯಲ್ಲಿ ಮೊದಲ ಬಲಿ ► ಪುತ್ತೂರಿನ ಕಾಲೇಜು ವಿದ್ಯಾರ್ಥಿನಿ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ನ.17. ಕರ್ನಾಟಕ ಖಾಸಗಿ ಆಸ್ಪತ್ರೆ ನಿಯಂತ್ರಣ ತಿದ್ದುಪಡಿ ವಿಧೇಯಕ (ಕೆಪಿಎಂಇ) ವಿರುದ್ಧ ಖಾಸಗಿ ವೈದ್ಯರು ನಡೆಸುತ್ತಿರುವ ಮುಷ್ಕರದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‌ ವಿದ್ಯಾರ್ಥಿನಿಯೋರ್ವರು ಮೊದಲ‌ ಬಲಿಯಾಗಿದ್ದಾರೆ. ಮೃತರನ್ನು ಪುತ್ತೂರು ವಿವೇಕಾನಂದ ಕಾಲೇಜಿನ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಪೂಜಾ(19) ಎಂದು ಗುರುತಿಸಲಾಗಿದೆ. ಈಕೆ ತನ್ನ ಎರಡೂ ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿದ್ದು, ವಾರದಲ್ಲಿ ಎರಡು ಬಾರಿ ಡಯಾಲಿಸಿಸ್ ನಡೆಸಲಾಗುತ್ತಿತ್ತು. ಆದರೆ ವೈದ್ಯರ ಮುಷ್ಕರದಿಂದಾಗಿ ಡಯಾಲಿಸಿಸ್ ನಡೆಸಿರಲಿಲ್ಲವೆನ್ನಲಾಗಿದ್ದು, ಅನಾರೋಗ್ಯ ತೀವ್ರಗೊಂಡ ಹಿನ್ನೆಲೆಯಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ

ವೈದ್ಯರ ಮುಷ್ಕರಕ್ಕೆ ಜಿಲ್ಲೆಯಲ್ಲಿ ಮೊದಲ ಬಲಿ ► ಪುತ್ತೂರಿನ ಕಾಲೇಜು ವಿದ್ಯಾರ್ಥಿನಿ ಮೃತ್ಯು Read More »

ಕರಾವಳಿ

ಅಗಲ ಕಿರಿದಾದ ಕಡಬ – ಪಂಜ ರಸ್ತೆಯ ಅಭಿವೃದ್ಧಿಗೆ ಚಾಲನೆ ► 5 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಣಗೊಳ್ಳುತ್ತಿದೆ ಜಿಲ್ಲಾ ಮುಖ್ಯರಸ್ತೆ

(ನ್ಯೂಸ್ ಕಡಬ) newskadaba.com ಕಡಬ, ನ.18. ಸುಳ್ಯ ತಾಲೂಕಿನಿಂದ ಪ್ರಸ್ತಾವಿತ ಕಡಬ ತಾಲೂಕನ್ನು ಸಂಪಕರ್ಿಸುವ ಪ್ರಮುಖ ಜಿಲ್ಲಾ ರಸ್ತೆಯಾಗಿರುವ ಕಡಬ-ಪಂಜ ರಸ್ತೆಯನ್ನು ಆಗಲಗೊಳಿಸಿ ಉನ್ನತೀಕರಿಸುವ ಕಾಮಗಾರಿ ಆರಂಭಗೊಂಡಿದ್ದು, ಸುಳ್ಯ ಶಾಸಕ ಎಸ್.ಅಂಗಾರ ಅವರ ಮುತುವರ್ಜಿಯಿಂದಾಗಿ ಪರಿಸರದ ಜನರ ಬಹುಕಾಲದ ಬೇಡಿಕೆಯೊಂದು ಈಡೇರುತ್ತಿದೆ. ಕಡಬದಿಂದ ಪಂಜ, ನಿಂತಿಕಲ್, ಬೆಳ್ಳಾರೆ ಮೂಲಕ ಸುಳ್ಯಕ್ಕೆ ಪ್ರಯಾಣಿಸುವ ಜನರಿಗೆ ಕಡಬ-ಪಂಜ ನಡುವಿನ ಪ್ರಯಾಣ ಅತ್ಯಂತ ತ್ರಾಸದಾಯಕ ಪ್ರಯಾಣ ಎನ್ನುವ ಕಾರಣದಿಂದಾಗಿ ಸದ್ರಿ ರಸ್ತೆಯ ಅಭಿವೃದ್ಧಿಗೆ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿಗಳನ್ನು ಸಲ್ಲಿಸಲಾಗಿತ್ತು. ಅಗಲ ಕಿರಿದಾದ

ಅಗಲ ಕಿರಿದಾದ ಕಡಬ – ಪಂಜ ರಸ್ತೆಯ ಅಭಿವೃದ್ಧಿಗೆ ಚಾಲನೆ ► 5 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಣಗೊಳ್ಳುತ್ತಿದೆ ಜಿಲ್ಲಾ ಮುಖ್ಯರಸ್ತೆ Read More »

ಕರಾವಳಿ

ಯಡಿಯೂರಪ್ಪ, ಶೋಭಾ ಕರಂದ್ಲಾಜೆಯ‌ ವಿರುದ್ಧ ವಾಟ್ಸಪ್ ನಲ್ಲಿ ಅವಹೇಳನ ► ಬಿಜೆಪಿಯ ಮೂವರ ವಿರುದ್ಧ ದೂರು ದಾಖಲು

(ನ್ಯೂಸ್ ಕಡಬ) newskadaba.com ಉಡುಪಿ, ನ.17. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆಯ ಫೋಟೊಗಳನ್ನು ಅಶ್ಲೀಲವಾಗಿ ಚಿತ್ರಿಸಿ ವಾಟ್ಸ್ಆ್ಯಪ್ ನಲ್ಲಿ ರವಾನಿಸಿದ ಆರೋಪದಲ್ಲಿ ಕುಂದಾಪುರದ ಮೂವರು ಬಿಜೆಪಿ ಮುಖಂಡರ ವಿರುದ್ಧ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಜೆಪಿ ಹಿಂದುಳಿದ ಮೋರ್ಚಾದ ಜಿಲ್ಲಾಧ್ಯಕ್ಷ ಹಾಗೂ ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ್ ಕಾವೇರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ. ಕಿಶೋರ್ ಕುಮಾರ್, ಮುಖಂಡ ರಾಜು ಪೂಜಾರಿ ಹಾಗೂ ಇತರರ ವಿರುದ್ಧ ಕುಂದಾಪುರ ಬಿಜೆಪಿ

ಯಡಿಯೂರಪ್ಪ, ಶೋಭಾ ಕರಂದ್ಲಾಜೆಯ‌ ವಿರುದ್ಧ ವಾಟ್ಸಪ್ ನಲ್ಲಿ ಅವಹೇಳನ ► ಬಿಜೆಪಿಯ ಮೂವರ ವಿರುದ್ಧ ದೂರು ದಾಖಲು Read More »

ಕರ್ನಾಟಕ

ಉಪ್ಪಿನಂಗಡಿ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಮೃತ್ಯು ► ಹೃದಯಾಘಾತದ ಶಂಕೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.17. ಬೆಂಗಳೂರಿನಿಂದ ಮಂಗಳೂರು ತೆರಳುತ್ತಿದ್ದ ವೋಲ್ವೋ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಅಪರಿಚಿತ ವ್ಯಕ್ತಿಯೋರ್ವರು ಬಸ್ಸಿನಲ್ಲಿಯೇ ಮೃತಪಟ್ಟ ಘಟನೆ ಗುರುವಾರ ರಾತ್ರಿ ಉಪ್ಪಿನಂಗಡಿ ಸಮೀಪದಲ್ಲಿ ನಡೆದಿದೆ. ಹೃದಯಾಘಾತದಿಂದಾಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದ್ದು, ಮೃತರ ಪರಿಚಯ ಇನ್ನಷ್ಟೇ ತಿಳಿದು ಬರಬೇಕಿದೆ. ಮೃತರ ಜೇಬಿನಲ್ಲಿ ಯದೀಶ್ ಡಿ. ವರದಿಗಾರರು, ಕರ್ನಾಟಕ ರಾಜಕೀಯ ಎನ್ನುವ ಐಡಿ ಕಾರ್ಡ್ ಪತ್ತೆಯಾಗಿದೆ ಎನ್ನಲಾಗಿದೆ.

ಉಪ್ಪಿನಂಗಡಿ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಮೃತ್ಯು ► ಹೃದಯಾಘಾತದ ಶಂಕೆ Read More »

ಕರಾವಳಿ

ಕಡಬ: ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದ ಅಧಿಕಾರಿ ► ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

(ನ್ಯೂಸ್ ಕಡಬ) newskadaba.com ಕಡಬ, ನ.16. ಸರಕಾರದಿಂದ ದೊರೆಯಲ್ಪಡುವ ಸಹಾಯಧನ ಬಿಡುಗಡೆಗಾಗಿ ಕಡಬದಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದ ಅಧಿಕಾರಿಗೆ ಲೋಕಾಯುಕ್ತ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ. ಕಡಬದ ವ್ಯಾಪಾರಿಯಾಗಿದ್ದ ಜೋನ್ಸನ್ ಪಿ.ಜೆ. ಎಂಬವರಿಂದ 2009 ಜೂನ್‌ 26 ರಂದು ಲಂಚಕ್ಕೆ ಬೇಡಿಕೆ ಇಟ್ಟು, ಹತ್ತು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ‌ ಸಿಕ್ಕಿ ಬಿದ್ದಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಖಾದಿ ಗ್ರಾಮೋದ್ಯೋಗ ಇಲಾಖೆಯ ಅಧಿಕಾರಿ ಭಾಸ್ಕರ ಪ್ರಭು ಎಂಬವರ

ಕಡಬ: ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದ ಅಧಿಕಾರಿ ► ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ Read More »

ಕರಾವಳಿ
Scroll to Top