News Kadaba Desk

ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾಡಿದ ಮಾನನಷ್ಟ ಮೊಕದ್ದಮೆ ಎಷ್ಟು ಗೊತ್ತೇ..? ► ಮೊತ್ತವನ್ನು ಕೇಳಿದರೆ ವಿಚಿತ್ರ ಅನ್ನಿಸುತ್ತದೆ

(ನ್ಯೂಸ್ ಕಡಬ) newskadaba.com ಮೈಸೂರು, ಫೆ.27. ತನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದ ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ನಟ ಪ್ರಕಾಶ್ ರೈ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ವಕೀಲ ಮಹದೇವಸ್ವಾಮಿಯವರ ಮೂಲಕ 4 ನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಕೇವಲ ಒಂದು ರೂಪಾಯಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ. ಅಕ್ಟೋಬರ್ 2 ರಂದು ಸಂಸದ ಪ್ರತಾಪ್ ಸಿಂಹ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ, ವಿಚಾರವಾಗಿ ಶೋಕಾಷ್ ನೋಟಿಸ್ ನೀಡಲಾಗಿತ್ತು. 10 ದಿನಗಳಲ್ಲಿ ಈ ಬಗ್ಗೆ ಉತ್ತರ ನೀಡುವಂತೆ […]

ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾಡಿದ ಮಾನನಷ್ಟ ಮೊಕದ್ದಮೆ ಎಷ್ಟು ಗೊತ್ತೇ..? ► ಮೊತ್ತವನ್ನು ಕೇಳಿದರೆ ವಿಚಿತ್ರ ಅನ್ನಿಸುತ್ತದೆ Read More »

ಕರ್ನಾಟಕ

ಮೆಲ್ಕಾರ್: ಕಾರು – ಲಾರಿ ಢಿಕ್ಕಿ ► ಓರ್ವ ಮೃತ್ಯು, ಐವರಿಗೆ ಗಾಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ.27. ಉಪ್ಪಿನಂಗಡಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಮತ್ತು ವಿರುದ್ಧ ದಿಕ್ಕಿನಿಂದ ಆಗಮಿಸಿದ ಲಾರಿ ನಡುವೆ ಮುಖಾಮುಖಿ ಢಿಕ್ಕಿಯುಂಟಾದ ಪರಿಣಾಮ ಓರ್ವ ಮೃತಪಟ್ಟು, ಮಗು ಸಹಿತ ಐವರು ಗಾಯಗೊಂಡ ಘಟನೆ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೆಲ್ಕಾರ್ ಎಂಬಲ್ಲಿ ಮಂಗಳವಾರದಂದು ನಡೆದಿದೆ. ಮೃತರನ್ನು ಕಾರಿನಲ್ಲಿದ್ದ ಪಡುಬಿದ್ರೆ ನಿವಾಸಿ ನಾಗಭೂಷಣ್ (48) ಎಂದು ಗುರುತಿಸಲಾಗಿದ್ದು, ಕಾರು ಚಾಲಕ ಜಗದೀಶ್ (44), ಮಂಜುಶ್ರೀ (27) ಮನನ್ (2), ಕೃಷ್ಣರಾಜ ಭಟ್ (45), ಸುಬ್ರಹ್ಮಣ್ಯ

ಮೆಲ್ಕಾರ್: ಕಾರು – ಲಾರಿ ಢಿಕ್ಕಿ ► ಓರ್ವ ಮೃತ್ಯು, ಐವರಿಗೆ ಗಾಯ Read More »

ಕರಾವಳಿ

ಕ್ಷುಲ್ಲಕ ಕಾರಣಕ್ಕಾಗಿ ಯುವಕ ನೇಣು ಬಿಗಿದು ಆತ್ಮಹತ್ಯೆ ► ಕಾರಣ ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು..!

(ನ್ಯೂಸ್ ಕಡಬ) newskadaba.com ಹೆಬ್ರಿ, ಫೆ.27. ಕ್ಷುಲ್ಲಕ ಕಾರಣಕ್ಕಾಗಿ ಯುವಕನೊರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಚ್ಚೂರು ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಹೆಬ್ರಿ ಸಮೀಪದ ಕುಚ್ಚೂರು ಗ್ರಾಮದ ಕೆಳಬಾದ್ಲು ನಿವಾಸಿ ಶೇಖರ ಎಂಬವರ ಪುತ್ರ ಮಂಜುನಾಥ್ (23) ಎಂದು ಗುರುತಿಸಲಾಗಿದೆ. ಮದ್ಯ ಸೇವನೆ ಮಾಡಿ ಮನೆಗೆ ಬಂದು ಟಿ.ವಿ. ನೋಡುತ್ತಿದ್ದ ಮಂಜುನಾಥನಲ್ಲಿ ಆತನ ತಂದೆ ಶೇಖರ್ ಅವರು ಟಿವಿಯ ಶಬ್ದವನ್ನು ಕಡಿಮೆ ಮಾಡುವಂತೆ ಹೇಳಿದ್ದಾರೆ. ಅಷ್ಟಕ್ಕೇ ಬೇಸರಗೊಂಡ ಮಂಜುನಾಥ್ ಮನೆಯಲ್ಲಿ

ಕ್ಷುಲ್ಲಕ ಕಾರಣಕ್ಕಾಗಿ ಯುವಕ ನೇಣು ಬಿಗಿದು ಆತ್ಮಹತ್ಯೆ ► ಕಾರಣ ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು..! Read More »

ಕರಾವಳಿ

ಚಿತ್ರನಟಿ ಶ್ರೀದೇವಿ ಮೃತದೇಹದ ರವಾನೆಗೆ ಕೊನೆಗೂ ಗ್ರೀನ್ ಸಿಗ್ನಲ್ ► ಮೃತದೇಹ ಹೇಗೆ ಭಾರತಕ್ಕೆ ಬರುತ್ತಿದೆ ಎನ್ನುವ ಕುತೂಹಲವೇ…?

(ನ್ಯೂಸ್ ಕಡಬ) newskadaba.com ದುಬೈ, ಫೆ.27. ಶನಿವಾರ ತಡರಾತ್ರಿ ದುಬೈನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಭಾರತದ ಹಿರಿಯ ಬಹುಭಾಷಾ ನಟಿ ಶ್ರೀದೇವಿಯವರ ಮೃತದೇಹವನ್ನು ಭಾರತಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಪ್ರಕರಣದಲ್ಲಿನ ಹಲವು ಊಹಾಪೋಹಗಳಿಂದಾಗಿ ಮೃತದೇಹದ ರವಾನೆ ವಿಳಂಬವಾಗಿತ್ತು. ಆದರೆ ಮಂಗಳವಾರದಂದು ಸಂಜೆ ವೇಳೆಗೆ ಇದ್ದ ಅಡೆತಡೆಗಳೆಲ್ಲಾ ನಿವಾರಣೆಗೊಂಡಿದ್ದು, ಮೃತದೇಹವನ್ನು ಭಾರತಕ್ಕೆ ತರುವ ಪ್ರಯತ್ನ ಮುಂದುವರಿದಿದೆ. ಹೃದಯ ಸ್ಥಂಬನದಿಂದಾಗಿ ಮೃತಪಟ್ಟಿದ್ದಾರೆ‌ ಎಂದು ಮೊದಲು ಹೇಳಲಾಗಿತ್ತಾದರೂ, ಆ ನಂತರ ಬಾತ್ ಟಬ್ ನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ವರದಿ

ಚಿತ್ರನಟಿ ಶ್ರೀದೇವಿ ಮೃತದೇಹದ ರವಾನೆಗೆ ಕೊನೆಗೂ ಗ್ರೀನ್ ಸಿಗ್ನಲ್ ► ಮೃತದೇಹ ಹೇಗೆ ಭಾರತಕ್ಕೆ ಬರುತ್ತಿದೆ ಎನ್ನುವ ಕುತೂಹಲವೇ…? Read More »

ರಾಷ್ಟ್ರೀಯ ನ್ಯೂಸ್

ಕಡಬ: ಆಕ್ಟಿವಾ – ಓಮ್ನಿ ಢಿಕ್ಕಿ ► ಯುವತಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಫೆ.27. ಹೋಂಡಾ ಆಕ್ಟಿವಾಗೆ ಓಮ್ನಿ ಕಾರೊಂದು ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಆಕ್ಟಿವಾ ಸವಾರೆ ಯುವತಿಯೋರ್ವಳು ಗಾಯಗೊಂಡ ಘಟನೆ ಕಡಬದ ಹಿಂದುಸ್ತಾನ್ ಪೆಟ್ರೋಲ್ ಬಂಕ್ ಬಳಿ ಮಂಗಳವಾರದಂದು ಸಂಜೆ ನಡೆದಿದೆ. ಗಾಯಾಳು ಯುವತಿಯನ್ನು 102 ನೇ ನೆಕ್ಕಿಲಾಡಿ‌ ಗ್ರಾಮದ ಕೆರ್ಮಾಯಿ ಕಾಲನಿ ನಿವಾಸಿ ಸುಬ್ರಹ್ಮಣ್ಯಂ ಎಂಬುವರ ಪುತ್ರಿ ದಿವ್ಯಾ ಎಂದು ಗುರುತಿಸಲಾಗಿದೆ. ಪೆಟ್ರೋಲ್ ತುಂಬಿಸಿ ತೆರಳುತ್ತಿದ್ದ ಆಕ್ಟಿವಾಗೆ ಓಮ್ನಿ ಕಾರು ಹಿಂದಿನಿಂದ ಢಿಕ್ಕಿ ಹೊಡೆದಿದ್ದು, ಗಾಯಾಳು ಯುವತಿಗೆ ಕಡಬ ಸಮುದಾಯ ಆಸ್ಪತ್ರೆಯಲ್ಲಿ

ಕಡಬ: ಆಕ್ಟಿವಾ – ಓಮ್ನಿ ಢಿಕ್ಕಿ ► ಯುವತಿಗೆ ಗಾಯ Read More »

ಕರಾವಳಿ

ಬಣ್ಣಗಳ ಹಬ್ಬ ಹೋಳಿ ಆಚರಣೆ ► ಹೇಗೆ ಮುಂಜಾಗರೂಕತೆ ವಹಿಸಬೇಕು..?

(ನ್ಯೂಸ್ ಕಡಬ) newskadaba.com ವಿಶೇಷ ಲೇಖನ, ಫೆ.27. ಚಳಿಗಾಲ ಮುಗಿದು ವಸಂತ ಕಾಲ ಕಾಲಿಡುವ ಸಮಯದಲ್ಲಿ ಬರುವ ಬಣ್ಣಗಳ ಹಬ್ಬ ಹೋಳಿ. ಗಂಡು, ಹೆಣ್ಣು, ಮಕ್ಕಳು, ಮುದುಕರು, ಬಡವ ಬಲ್ಲಿದ, ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಭೇದಬಾವವಿಲ್ಲದೆ ಪರಸ್ಪರ ಬಣ್ಣದ ಓಕುಳಿಯನ್ನು ಎರಚಿಕೊಂಡು ಮನರಂಜನೆಯ ಉತ್ತುಂಗಕ್ಕೇರಿ, ದ್ವೇಷ, ಕ್ರೋಧ, ಮದ ಮತ್ಸರಗಳಿಗೆ ಇತಿಶ್ರೀ ಹಾಡಿ ಪ್ರೀತಿ ಪ್ರೇಮ, ಮಮತೆ, ಗೌರವದಿಂದ ಎಲ್ಲವನ್ನು ಮರೆತು ಸ್ನೇಹ ಹಸ್ತ ಚಾಚುವ ಒಂದು ವಿಶಿಷ್ಠ ಹಬ್ಬವೇ ಹೋಳಿ. ಹೆಚ್ಚಾಗಿ ಉತ್ತರ ಭಾರತದಲ್ಲಿ

ಬಣ್ಣಗಳ ಹಬ್ಬ ಹೋಳಿ ಆಚರಣೆ ► ಹೇಗೆ ಮುಂಜಾಗರೂಕತೆ ವಹಿಸಬೇಕು..? Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

ಅನಾರೋಗ್ಯ ಪೀಡಿತ ಮಹಿಳೆಗೆ ಸರ್ವೆ ಯುವಕ ಮಂಡಲದಿಂದ ಧನಸಹಾಯ

(ನ್ಯೂಸ್ ಕಡಬ) newskadaba.com ಸವಣೂರು, ಫೆ.27. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಭಕ್ತಕೋಡಿ ಪಾಲೆತ್ತಗುರಿ ನಿವಾಸಿ ಪದ್ಮನಾಭ ಅವರ ಪತ್ನಿ ಸೀತಾ ಅವರಿಗೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚಕ್ಕಾಗಿ ಸರ್ವೆ ಷಣ್ಮುಖ ಯುವಕ ಮಂಡಲದ ವತಿಯಿಂದ 5000 ರೂ.ಗಳ ಆರ್ಥಿಕ ನೆರವು ನೀಡಲಾಯಿತು. ಷಣ್ಮುಖ ಯುವಕ ಮಂಡಲದ ಮಾಜಿ ಅಧ್ಯಕ್ಷರಾದ, ತಾಲೂಕು ಯುವಜನ ಒಕ್ಕೂಟದ ಕಾರ್ಯದರ್ಶಿ ಸುಬ್ರಹ್ಮಣ್ಯ ಕರುಂಬಾರು ಹಾಗೂ ರಾಜೇಶ್ ಎಸ್.ಡಿ. ಧನ ಸಹಾಯ ಹಸ್ತಾಂತರಿಸಿದರು. ಸರ್ವೆ ಎಸ್.ಜಿ.ಎಂ. ಪ್ರೌಢಶಾಲೆಯ ಮುಖ್ಯಗುರು ಶ್ರೀನಿವಾಸ್ ಎಚ್.ಬಿ. ಯುವಕ ಮಂಡಲದ ಪದಾಧಿಕಾರಿಗಳಾದ

ಅನಾರೋಗ್ಯ ಪೀಡಿತ ಮಹಿಳೆಗೆ ಸರ್ವೆ ಯುವಕ ಮಂಡಲದಿಂದ ಧನಸಹಾಯ Read More »

ಕರಾವಳಿ

ಕ್ಷಣಕ್ಕೊಂದು ತಿರುವು ಪಡೆಯುತ್ತಿರುವ ಹಿರಿಯ ನಟಿ ಶ್ರೀದೇವಿ ಸಾವು ಪ್ರಕರಣ ► ದುಬೈ ಪೊಲೀಸರಿಂದ ತೀವ್ರಗೊಂಡ ತನಿಖೆ

(ನ್ಯೂಸ್ ಕಡಬ) newskadaba.com ದುಬೈ, ಫೆ.27. ಶನಿವಾರ ತಡರಾತ್ರಿ ದುಬೈನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಭಾರತದ ಹಿರಿಯ ಬಹುಭಾಷಾ ನಟಿ ಶ್ರೀದೇವಿ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಹೃದಯ ಸ್ಥಂಬನದಿಂದಾಗಿ ಮೃತಪಟ್ಟಿದ್ದಾರೆ‌ ಎಂದು ಮೊದಲು ಹೇಳಲಾಗಿತ್ತಾದರೂ, ಆ ನಂತರ ಬಾತ್ ಟಬ್ ನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿತ್ತು. ಈ ನಡುವೆ ಮರಣೋತ್ತರ ಪರೀಕ್ಷೆಯ‌ ವರದಿಯಲ್ಲಿ ಅನುಮಾನ ವ್ಯಕ್ತಪಡಿಸಿರುವ ದುಬೈ ಕಾನೂನು ತಜ್ಞರು ಮೃತದೇಹದ ಹಸ್ತಾಂತರಕ್ಕೆ‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಪುನಃ

ಕ್ಷಣಕ್ಕೊಂದು ತಿರುವು ಪಡೆಯುತ್ತಿರುವ ಹಿರಿಯ ನಟಿ ಶ್ರೀದೇವಿ ಸಾವು ಪ್ರಕರಣ ► ದುಬೈ ಪೊಲೀಸರಿಂದ ತೀವ್ರಗೊಂಡ ತನಿಖೆ Read More »

ಅಂತರ್ರಾಷ್ಟ್ರೀಯ ನ್ಯೂಸ್

ಕೆಲವರು ಊರಿನಲ್ಲಿ ಡೋಂಗಿ ಮಾಡಿ ಗಲ್ಫ್ ಗೆ ತೆರಳುತ್ತಾರೆ: ಆಹಾರ ಸಚಿವ ಯು.ಟಿ.ಖಾದರ್ ► ಸಚಿವರ ಹೇಳಿಕೆಗೆ ತಿರುಗಿ ಬಿದ್ದಿರುವ ಗಲ್ಫ್ ನಿವಾಸಿಗಳಿಂದ ಆಕ್ರೋಶ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.27. ಕೆಲವು ಪ್ರವಾಸಿಗಳು ಊರಿನಲ್ಲಿ ಡೋಂಗಿ ಮಾಡಿ ಗಲ್ಫ್ ರಾಷ್ಟ್ರಕ್ಕೆ ಹೋಗುತ್ತಾರೆ ಎಂದು ಸಚಿವ ಯು.ಟಿ. ಖಾದರ್ ಹೇಳಿಕೆ ನೀಡಿದ್ದನ್ನು ಖಂಡಿಸಿರುವ ಗಲ್ಫ್ ನಿವಾಸಿಗಳು ಸಚಿವರ ವಿರುದ್ಧ ಸಮರ ಸಾರಿದ್ದಾರೆ. ಪುತ್ತೂರು ಸಮೀಪದ ಮಾಡನ್ನೂರು ಮಖಾಂ ಉರೂಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ್ದ ಕರ್ನಾಟಕ ರಾಜ್ಯ ಆಹಾರ ಸಚಿವ ಯು.ಟಿ.ಖಾದರ್, ಇಂದು ಕೆಲವು ಕಡೆಗಳಲ್ಲಿ ದೇಶಕ್ಕೆ ಮಾರಕವಾಗುವ ಕೆಲವು ವಿಚಾರಗಳು ನಡೆಯುತ್ತಿದ್ದು, ಅಂತಹವರಿಗೆ ಯಾರೂ ಬೆಂಬಲವನ್ನು ನೀಡಬಾರದು. ನಾನು ಹಿಂದೂ

ಕೆಲವರು ಊರಿನಲ್ಲಿ ಡೋಂಗಿ ಮಾಡಿ ಗಲ್ಫ್ ಗೆ ತೆರಳುತ್ತಾರೆ: ಆಹಾರ ಸಚಿವ ಯು.ಟಿ.ಖಾದರ್ ► ಸಚಿವರ ಹೇಳಿಕೆಗೆ ತಿರುಗಿ ಬಿದ್ದಿರುವ ಗಲ್ಫ್ ನಿವಾಸಿಗಳಿಂದ ಆಕ್ರೋಶ Read More »

ಕರಾವಳಿ

ಇಂದು ಪುತ್ತೂರಿಗೆ ಆಗಮಿಸಲಿದ್ದಾರೆ ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.27. ಬಿಗ್ ಬಾಸ್ ಕನ್ನಡದ ಸೀಸನ್ 5 ವಿನ್ನರ್ ಹಾಸನ ಮೂಲದ ಚಂದನ್ ಶೆಟ್ಟಿ ಮಂಗಳವಾರದಂದು ಸಂಜೆ ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ನಡೆಯುತ್ತಿರುವ ಕಾಲೇಜು ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಪುತ್ತೂರಿಗೆ ಆಗಮಿಸಲಿದ್ದಾರೆ. ಸೈಂಟ್ ಫಿಲೋಮಿನಾ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ಚಂದನ್ ಶೆಟ್ಟಿ ಇಂದು ಅದೇ ಕಾಲೇಜಿನಲ್ಲಿ ನಡೆಯುವ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಸಂಜೆ ಆರು ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿಯವರು ಹಿರಿಯ ವಿದ್ಯಾರ್ಥಿಯಾಗಿ ಕಾರ್ಯಕ್ರಮ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಪುತ್ತೂರಿಗೆ ಆಗಮಿಸಲಿದ್ದಾರೆ ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ Read More »

ಕರಾವಳಿ
Scroll to Top