ಕಡಬ: ಆಕ್ಟಿವಾ – ಓಮ್ನಿ ಢಿಕ್ಕಿ ► ಯುವತಿಗೆ ಗಾಯ



(ನ್ಯೂಸ್ ಕಡಬ) newskadaba.com ಕಡಬ, ಫೆ.27. ಹೋಂಡಾ ಆಕ್ಟಿವಾಗೆ ಓಮ್ನಿ ಕಾರೊಂದು ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಆಕ್ಟಿವಾ ಸವಾರೆ ಯುವತಿಯೋರ್ವಳು ಗಾಯಗೊಂಡ ಘಟನೆ ಕಡಬದ ಹಿಂದುಸ್ತಾನ್ ಪೆಟ್ರೋಲ್ ಬಂಕ್ ಬಳಿ ಮಂಗಳವಾರದಂದು ಸಂಜೆ ನಡೆದಿದೆ.







ಗಾಯಾಳು ಯುವತಿಯನ್ನು 102 ನೇ ನೆಕ್ಕಿಲಾಡಿ‌ ಗ್ರಾಮದ ಕೆರ್ಮಾಯಿ ಕಾಲನಿ ನಿವಾಸಿ ಸುಬ್ರಹ್ಮಣ್ಯಂ ಎಂಬುವರ ಪುತ್ರಿ ದಿವ್ಯಾ ಎಂದು ಗುರುತಿಸಲಾಗಿದೆ. ಪೆಟ್ರೋಲ್ ತುಂಬಿಸಿ ತೆರಳುತ್ತಿದ್ದ ಆಕ್ಟಿವಾಗೆ ಓಮ್ನಿ ಕಾರು ಹಿಂದಿನಿಂದ ಢಿಕ್ಕಿ ಹೊಡೆದಿದ್ದು, ಗಾಯಾಳು ಯುವತಿಗೆ ಕಡಬ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.






error: Content is protected !!
Scroll to Top