News Kadaba Desk

ಹೊಸ್ಮಠ: ಹಳೆ ಸೇತುವೆಯ ಬದಿಯಲ್ಲಿನ ಮಣ್ಣು ಕುಸಿತ ► ಕೆಲಕಾಲ ಸಂಚಾರ ಅಸ್ತವ್ಯಸ್ತ

ಕಡಬ, ಮೇ.28. ಇಲ್ಲಿನ ಹೊಸ್ಮಠ ಹಳೆ ಸೇತುವೆಯ ಒಂದು ಭಾಗದ ಮಣ್ಣು ಕುಸಿದ ಪರಿಣಾಮ ಕೆಲಕಾಲ ರಸ್ತೆ ಸಂಚಾರದಲ್ಲಿ ತಡೆಯುಂಟಾದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಮುಳುಗು ಸೇತುವೆಗೆ ಬದಲಿಯಾಗಿ ನೂತನ ಸೇತುವೆ ನಿರ್ಮಾಣವಾಗುತ್ತಿದ್ದು, ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಾಗೂ ನೂತನ ಸೇತುವೆ ನಿರ್ಮಾಣದ ಹಿನ್ನೆಲೆಯಲ್ಲಿ ಹಳೆಯ ಸೇತುವೆಯ ಬದಿಯಿಂದ ನೀರನ್ನು ಬಿಟ್ಟಿದ್ದರಿಂದಾಗಿ ಸೇತುವೆಯ ಒಂದು ಭಾಗದ ಮಣ್ಣು ಕುಸಿದಿದೆ. ಸೋಮವಾರ ಮುಂಜಾನೆ ಕೊಲ್ಲೂರಿಗೆ ತೆರಳುತ್ತಿದ್ದ ಕಡಬದ ದೇವಿಪ್ರಸಾದ್ ಹೋಟೆಲ್ […]

ಹೊಸ್ಮಠ: ಹಳೆ ಸೇತುವೆಯ ಬದಿಯಲ್ಲಿನ ಮಣ್ಣು ಕುಸಿತ ► ಕೆಲಕಾಲ ಸಂಚಾರ ಅಸ್ತವ್ಯಸ್ತ Read More »

ಕರಾವಳಿ

ಮಂಗಳೂರು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗಲೇ ಮೃತಪಟ್ಟ ಅಪರಿಚಿತ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.27. ಚಲಿಸುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಪರಿಚಿತ ವ್ಯಕ್ತಿಯೋರ್ವರು ಹೃದಯಾಘಾತಕ್ಕೀಡಾಗಿ ಮೃತಪಟ್ಟ ಘಟನೆ ಶನಿವಾರದಂದು ಮಂಗಳೂರು ಬಸ್ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಸರಕಾರಿ ಬಸ್ ಹತ್ತಿದ್ದ ಈ ಅಪರಿಚಿತ ವ್ಯಕ್ತಿ ಸೀಟಿನಲ್ಲಿ ಮಲಗಿದ್ದು, ಈತ ನಿದ್ದೆ ಮಾಡಿರಬಹುದೆಂದು ಎಲ್ಲರೂ ಭಾವಿಸಿ ಸುಮ್ಮನಿದ್ದರು. ಆದರೆ ಬಸ್ ಕೆಎಸ್ಸಾರ್ಟಿಸಿ ನಿಲ್ದಾಣಕ್ಕೆ ಆಗಮಿಸಿ ಎಲ್ಲ ಪ್ರಯಾಣಿಕರು ಇಳಿದರೂ, ಈತ ಮಲಗಿದ ಸ್ಥಿತಿಯಲ್ಲಿದ್ದುದನ್ನು ಕಂಡು ಬಸ್ಸಿನ ಸಿಬ್ಬಂದಿ ಎಬ್ಬಿಸಲು ಪ್ರಯತ್ನಪಟ್ಟಾಗ ಮೃತಪಟ್ಟಿರುವುದು ಕಂಡು ಬಂದಿದೆ.

ಮಂಗಳೂರು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗಲೇ ಮೃತಪಟ್ಟ ಅಪರಿಚಿತ Read More »

ಕರಾವಳಿ

ಕೊರಗಜ್ಜನ ಹುಂಡಿಗೆ ಕಾಂಡೋಮ್ ಹಾಕಿ ದರ್ಪ ಮೆರೆದ ಯುವಕರು ► ತಿಂಗಳೊಳಗೆ ಸೊಂಟದ ಬಲ ಕಳೆದುಕೊಂಡಾಗ ಬೆಳಕಿಗೆ ಬಂತು ಕೊರಗಜ್ಜನ ಪವಾಡ

(ನ್ಯೂಸ್ ಕಡಬ) newskadaba.com ಉಡುಪಿ, ಮೇ.27. ಕೊರಗಜ್ಜ ಸ್ವಾಮಿಯ ಕಾಣಿಕೆ‌ ಹುಂಡಿಯ ಮೇಲೆ ಮೂತ್ರ‌ ಮಾಡಿ ಡಬ್ಬಿಯೊಳಗಡೆ ಕಾಂಡೋಮ್ ಹಾಕಿ ಅಗೌರವ ತೋರಿದ ಯುವಕನೋರ್ವನ ಆರೋಗ್ಯದಲ್ಲಿ ಏರುಪೇರಾಗಿ ಕೊನೆಗೆ ಕ್ಷಮೆ ಕೇಳಿ ಘಟನೆ ಇಲ್ಲಿನ ಕಟಪಾಡಿಯಲ್ಲಿ ನಡೆದಿದೆ. ಕಟಪಾಡಿ ಎಸ್.ವಿ.ಎಸ್ ಕಾಲೇಜಿನ ಮುಂಭಾಗದಲ್ಲಿರುವ ಪೇಟೆಬೆಟ್ಟು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಹುಂಡಿಗೆ ಮುಸ್ಲಿಂ ಯುವಕರ ಗುಂಪೊಂದು ಮೂತ್ರಮಾಡಿ, ಡಬ್ಬಿಯ ಒಳಗೆ ಒಂದಿಷ್ಟು ಕಸ ಮತ್ತು ಕಾಂಡೋಮ್ ಹಾಕಿ ದರ್ಪ ಮೆರೆದಿದ್ದಾರೆ ಎನ್ನಲಾಗಿದೆ. ದೈವಸ್ಥಾನದ ವಾರ್ಷಿಕೋತ್ಸವ ಸಮೀಪಿಸಿದಾಗ ಹತ್ತು

ಕೊರಗಜ್ಜನ ಹುಂಡಿಗೆ ಕಾಂಡೋಮ್ ಹಾಕಿ ದರ್ಪ ಮೆರೆದ ಯುವಕರು ► ತಿಂಗಳೊಳಗೆ ಸೊಂಟದ ಬಲ ಕಳೆದುಕೊಂಡಾಗ ಬೆಳಕಿಗೆ ಬಂತು ಕೊರಗಜ್ಜನ ಪವಾಡ Read More »

ಕರಾವಳಿ

ಕುದ್ರೋಳಿ: ಮಹಿಳೆಗೆ ಚೂರಿ ಇರಿತ ಪ್ರಕರಣವೂ ► ಸುಳ್ಳು ಸುದ್ದಿ ಹರಡಿದ ವಿಕೃತರೂ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.26. ಮನೆಗೆ ನುಗ್ಗಿ ಮಹಿಳೆಯೋರ್ವರಿಗೆ ಚೂರಿಯಿಂದ ಇರಿದ ಪ್ರಕರಣವೊಂದು ಕುದ್ರೋಳಿಯಲ್ಲಿ ನಡೆದಿದ್ದು, ಈ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹರಿದಾಡಿ ಸಮಾಜದಲ್ಲಿ ಕೋಮು ಪ್ರಚೋದನೆ ಉಂಟುಮಾಡಿದ ಘಟನೆ ಶುಕ್ರವಾರದಂದು ನಡೆದಿದೆ. ಗುರುವಾರ ರಾತ್ರಿ ನಗರದ ಕುದ್ರೋಳಿಯಲ್ಲಿನ ಫ್ಲಾಟೊಂದರ ಒಳ‌ನುಗ್ಗಿದ ಯುವಕನೋರ್ವ ಮನೆಯಲ್ಲಿರುವ ಮಹಿಳೆಗೆ ಆಕೆಯ ಮಗನ ಎದುರೇ ಚಾಕುವಿನಿಂದ ಇರಿದು ಪರಾರಿಯಾಗುತ್ತಾನೆ. ಮಹಿಳೆಯ ಬೊಬ್ಬೆ ಕೇಳಿ ಸ್ಥಳಕ್ಕೆ ಧಾವಿಸಿದ ನೆರೆಹೊರೆಯವರು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸುತ್ತಾರೆ. ಸ್ಥಳದಲ್ಲಿ ಆತಂಕದ

ಕುದ್ರೋಳಿ: ಮಹಿಳೆಗೆ ಚೂರಿ ಇರಿತ ಪ್ರಕರಣವೂ ► ಸುಳ್ಳು ಸುದ್ದಿ ಹರಡಿದ ವಿಕೃತರೂ Read More »

ಕರಾವಳಿ

ನೆಲ್ಯಾಡಿ: ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜಿಗೆ ಚಾಲನೆ ► ಬಿ.ಎ., ಬಿ.ಕಾಂ., ಬಿ.ಬಿ.ಎ. ತರಗತಿಗಳಿಗೆ ದಾಖಲಾತಿ ಆರಂಭ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮೇ.26. ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಮಂಗಳೂರು ವಿಶ್ವವಿದ್ಯಾನಿಲಯದ ಘಟಕವು ನೆಲ್ಯಾಡಿಯಲ್ಲಿ ಆರಂಭಗೊಳ್ಳಲಿದ್ದು, ಆ ಪ್ರಯುಕ್ತ ಶುಕ್ರವಾರದಂದು ಸಂತಜಾರ್ಜ್ ವಿದ್ಯಾಸಂಸ್ಥೆ ಆವರಣದಲ್ಲಿ ಕಾಲೇಜಿನ ಕಚೇರಿ ಉದ್ಘಾಟಿಸಿ ದಾಖಲಾತಿಗೆ ಚಾಲನೆ ನೀಡಲಾಯಿತು. ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ವಿ.ವಿ.ಉಪಕುಲಪತಿ ಪ್ರೊ.ಭೈರಪ್ಪ, ಮಂಗಳೂರು ವಿಶ್ವವಿದ್ಯಾನಿಲಯವು ದೇಶದಲ್ಲಿಯೇ 31ನೇ ಸ್ಥಾನವನ್ನು ಪಡೆದುಕೊಂಡಿದೆ. ರಾಜ್ಯ ಸರಕಾರದ ನೆರವಿನೊಂದಿಗೆ ಉಡುಪಿಯಲ್ಲಿ 141 ಕೋಟಿ ರೂ.ವೆಚ್ಚದಲ್ಲಿ ವಿಜ್ಞಾನ ಸಂಶೋಧನಾ ಕೇಂದ್ರವು ಆರಂಭಗೊಳ್ಳಲಿದ್ದು ಇದು ರಾಷ್ಟ್ರದಲ್ಲೇ ಪ್ರಪ್ರಥಮ ಪ್ರಯತ್ನವಾಗಿದೆ. ನೆಲ್ಯಾಡಿಯಲ್ಲಿ ಕಾಲೇಜು ಆರಂಭಿಸಲು

ನೆಲ್ಯಾಡಿ: ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜಿಗೆ ಚಾಲನೆ ► ಬಿ.ಎ., ಬಿ.ಕಾಂ., ಬಿ.ಬಿ.ಎ. ತರಗತಿಗಳಿಗೆ ದಾಖಲಾತಿ ಆರಂಭ Read More »

ಕರಾವಳಿ

ಕರಾಯ ವಿದ್ಯುತ್ ಕೇಂದ್ರದ ಹೊರೆಯನ್ನು ಪ್ರತ್ಯೇಕಿಸುವ ಕಾಮಗಾರಿ ಹಿನ್ನೆಲೆ ► ಇಂದು(ಮೇ.26) ಪುತ್ತೂರು, ಸುಳ್ಯ, ಕಡಬ ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

(ನ್ಯೂಸ್ ಕಡಬ) newskadaba.com ಪುತ್ತೂರು, ಮೇ.26. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಟಿ.ಎಲ್. ಮತ್ತು ಎಸ್.ಎಸ್. ವಿಭಾಗ ಮಂಗಳೂರು ವತಿಯಿಂದ ಹಾಲಿ 110 ಕೆವಿ ನೆಟ್ಲಮುಡ್ನೂರು – ಪುತ್ತೂರು ಏಕಮಾರ್ಗವನ್ನು ದ್ವಿಮಾರ್ಗ ರಚಿಸಿ 110 ಕೆವಿ ನೆಟ್ಲಮುಡ್ನೂರು – ಪುತ್ತೂರು ಮಾರ್ಗದಿಂದ 110/11 ಕೆವಿ ಕರಾಯ ವಿದ್ಯುತ್ ಕೇಂದ್ರದ ಹೊರೆಯನ್ನು ಪ್ರತ್ಯೇಕಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಮೇ 26 ಶನಿವಾರ ಬೆಳಿಗ್ಗೆ 08 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ನಿಲುಗಡೆಗೊಳಿಸಲಾಗುವುದು. ಆದುದರಿಂದ 110/11 ಕೆವಿ ಪುತ್ತೂರು

ಕರಾಯ ವಿದ್ಯುತ್ ಕೇಂದ್ರದ ಹೊರೆಯನ್ನು ಪ್ರತ್ಯೇಕಿಸುವ ಕಾಮಗಾರಿ ಹಿನ್ನೆಲೆ ► ಇಂದು(ಮೇ.26) ಪುತ್ತೂರು, ಸುಳ್ಯ, ಕಡಬ ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ Read More »

ಕರಾವಳಿ

ಶತಾಯುಷಿ ಸಾಲುಮರದ ತಿಮ್ಮಕ್ಕನನ್ನು ವಾಟ್ಸ್ಅಪ್ ನಲ್ಲಿ ಕೊಂದ ಕಿಡಿಗೇಡಿಗಳು ► ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುಳ್ಳು ಸಂದೇಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.26. ಶತಾಯುಷಿ ಸಾಲುಮರದ ತಿಮ್ಮಕ್ಕನನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೊಂದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಸಾಲುಮರದ ತಿಮ್ಮಕ್ಕ ಇನ್ನಿಲ್ಲ ಎಂಬ ಸಂದೇಶವನ್ನು ಯಾರೋ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಾದ ವಾಟ್ಸ್ಅಪ್ ಹಾಗೂ ಫೇಸ್‌ಬುಕ್‌ ಗಳಲ್ಲಿ ಹರಿಯಬಿಟ್ಟು ವಿಕೃತ ಸಂತೋಷವನ್ನು ಅನುಭವಿಸಿದ್ದಾರೆ. ಶುಕ್ರವಾರ ರಾತ್ರಿಯಿಂದ ಹರಿದಾಡತೊಡಗಿದ ಈ ಸಂದೇಶವನ್ನು ನಿಜ ಎಂದು ತಿಳಿದು ಹಲವರು ನಾಮುಂದು ತಾಮುಂದು ಎನ್ನುವಂತೆ ಶೇರ್ ಮಾಡಿದ್ದಾರೆ. ಕೊನೆಗೆ ಇದು ಒಂದು ಸುಳ್ಳು ಸುದ್ದಿಯಾಗಿದ್ದು, ಯಾರೋ ವಿಕೃತ ಸಂತೋಷಿಗಳ ಕುತಂತ್ರದಿಂದಾಗಿ

ಶತಾಯುಷಿ ಸಾಲುಮರದ ತಿಮ್ಮಕ್ಕನನ್ನು ವಾಟ್ಸ್ಅಪ್ ನಲ್ಲಿ ಕೊಂದ ಕಿಡಿಗೇಡಿಗಳು ► ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುಳ್ಳು ಸಂದೇಶ Read More »

ಕರ್ನಾಟಕ

ಜನರನ್ನು ಉದ್ರೇಕಗೊಳಿಸಿ ಕರಾವಳಿ ಪ್ರದೇಶವನ್ನು ಹಾಳು ಮಾಡುವಂತಹಾ ಘಟನೆ ಇನ್ಮುಂದೆ ನಡೀಲಿಕ್ಕೆ ಸಾಧ್ಯವಿಲ್ಲ..!! ► ಮತೀಯವಾದಿಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದ ಸಿಎಂ ಕುಮಾರಸ್ವಾಮಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.26. ಬಹುಮತ ಸಾಬೀತುಪಡಿಸಿದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ‌ ಮಾಡದಿದ್ದಲ್ಲಿ ಸೋಮವಾರದಂದು ಕರ್ನಾಟಕ ಬಂದ್ ಗೆ ಕರೆ ನೀಡಿದ ವಿಪಕ್ಷ ನಾಯಕ ಯಡಿಯೂರಪ್ಪರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಬಿಎಸ್ವೈ ಭಾಷಣ‌ ಮುಗಿಸಿ ಸಭಾ ತ್ಯಾಗ ಮಾಡಿದ ನಂತರ ಮಾತನಾಡಿದ ಕುಮಾರಸ್ವಾಮಿ, ಸೋಮವಾರದೊಳಗೆ ಸಾಲಮನ್ನಾ ಮಾಡದಿದ್ದಲ್ಲಿ ಕರ್ನಾಟಕ ಬಂದ್ ಮಾಡುತ್ತಾರಂತೆ. ಇಂತಹಾ ಹಲವು ಬಂದ್ ಗಳನ್ನು ನನ್ನ ರಾಜಕೀಯ ಜೀವನದಲ್ಲಿ ನಾನು ನೋಡಿದ್ದೇನೆ. ಈ ರೀತಿ ಜನಗಳನ್ನು ಇವರೇನಾದರೂ ಉದ್ರೇಕಗೊಳಿಸಿ,

ಜನರನ್ನು ಉದ್ರೇಕಗೊಳಿಸಿ ಕರಾವಳಿ ಪ್ರದೇಶವನ್ನು ಹಾಳು ಮಾಡುವಂತಹಾ ಘಟನೆ ಇನ್ಮುಂದೆ ನಡೀಲಿಕ್ಕೆ ಸಾಧ್ಯವಿಲ್ಲ..!! ► ಮತೀಯವಾದಿಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದ ಸಿಎಂ ಕುಮಾರಸ್ವಾಮಿ Read More »

ಕರ್ನಾಟಕ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಕ್ಕಳ ಅಪಹರಣ ಸುದ್ದಿ ಶುದ್ಧ ಸುಳ್ಳು ► ಯಾರೂ ಆತಂಕಪಡುವ ಅಗತ್ಯವಿಲ್ಲ: ಬೆಳ್ಳಾರೆ ಠಾಣಾ ಸಬ್ ಇನ್ಸ್‌ಪೆಕ್ಟರ್ ಈರಯ್ಯ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮೇ.25. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ವಾಟ್ಸ್ಅಪ್ ಗಳಲ್ಲಿ ಹರಿದಾಡುತ್ತಿರುವ ಮಕ್ಕಳ ಅಪಹರಣದ ಬಗೆಗಿನ ವೀಡಿಯೋ ಕ್ಲಿಪ್ ಗಳು ಹಾಗೂ ಸಂದೇಶಗಳು ಸುಳ್ಳಾಗಿದ್ದು ಅನಪೇಕ್ಷಣೀಯವಾಗಿರುತ್ತದೆ. ಆದುದರಿಂದ ಇಂತಹ ಪ್ರಚೋದನಕಾರಿ ಉಹಾಪೋಹಗಳಿಗೆ ಹಾಗೂ ಸಂದೇಶಗಳಿಗೆ ಕಿವಿಗೊಡದೆ ಮತ್ತು ತಮ್ಮ ಗ್ರಾಮಗಳಲ್ಲಿ ಅಪರಿಚಿತ ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಅವರ ಮೇಲೆ ಹಲ್ಲೆ ಮಾಡುವುದಾಗಲಿ, ಮತ್ಯಾವುದೇ ಕೃತ್ಯಕ್ಕೆ ಮುಂದಾಗದೇ ಪೊಲೀಸ್ ಠಾಣಾ ದೂರವಾಣಿ ಸಂಖ್ಯೆ 08257-271995 ಅಥವಾ 9843053901ಕ್ಕೆ ಕರೆ ಮಾಡುವ ಮೂಲಕ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಕ್ಕಳ ಅಪಹರಣ ಸುದ್ದಿ ಶುದ್ಧ ಸುಳ್ಳು ► ಯಾರೂ ಆತಂಕಪಡುವ ಅಗತ್ಯವಿಲ್ಲ: ಬೆಳ್ಳಾರೆ ಠಾಣಾ ಸಬ್ ಇನ್ಸ್‌ಪೆಕ್ಟರ್ ಈರಯ್ಯ Read More »

ಕರಾವಳಿ

ಕುಂತೂರು: ಶಾಲೆಗೆಂದು ತೆರಳಿ ನಾಪತ್ತೆಯಾಗಿದ್ದ ಬಾಲಕ ಬೆಂಗಳೂರಿನಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಮೇ.24. ಶಾಲೆಗೆಂದು ತೆರಳಿ ಮನೆಯಿಂದ ತೆರಳಿ ಶಾಲೆಗೂ ತೆರಳದೆ ಮನೆಗೂ ಬಾರದೆ ನಾಪತ್ತೆಯಾಗಿದ್ದ ಬಾಲಕ ಶುಕ್ರವಾರದಂದು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾನೆ. ಕುಂತೂರು ಗ್ರಾಮದ ಕಂಡತ್ತಡ್ಕ ನಿವಾಸಿ ಜಯಂತಿ ಎಂಬವರ ಪುತ್ರ, ಪದವು ಸೈಂಟ್ ಜಾರ್ಜ್ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಶರತ್ ಕುಮಾರ್ ಬುಧವಾರದಂದು ಶಾಲೆಗೆಂದು ತೆರಳಿ ಆ ಬಳಿಕ ನಾಪತ್ತೆಯಾಗಿದ್ದನೆನ್ನಲಾಗಿದೆ. ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಾಡಿ ಪತ್ತೆಯಾಗದ ಕಾರಣ ಆತನ ತಾಯಿ ಕಡಬ ಠಾಣೆಗೆ ದೂರು ನೀಡಿದ್ದರು. ಶುಕ್ರವಾರದಂದು ಈತನನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ

ಕುಂತೂರು: ಶಾಲೆಗೆಂದು ತೆರಳಿ ನಾಪತ್ತೆಯಾಗಿದ್ದ ಬಾಲಕ ಬೆಂಗಳೂರಿನಲ್ಲಿ ಪತ್ತೆ Read More »

ಕರಾವಳಿ
Scroll to Top