News Kadaba Desk

ಭಾರೀ ಮಳೆಯಿಂದಾಗಿ ಹವಾಮಾನದಲ್ಲಿ ಏರುಪೇರು ► ಮಂಗಳೂರಿನಲ್ಲಿ ಇಳಿಸಲು ಅಸಾಧ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಳಿದ ವಿಮಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.30. ದುಬೈನಿಂದ ಹಾಗೂ ಮುಂಬಯಿಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಎರಡು ವಿಮಾನಗಳನ್ನು ವಿಪರೀತ ಮಳೆಯ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ಕೇರಳದಲ್ಲಿ ಇಳಿಸಿದ ಘಟನೆ ಮಂಗಳವಾರದಂದು ನಡೆದಿದೆ. ಮಂಗಳವಾರ ಬೆಳಿಗ್ಗೆಯಿಂದಲೇ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಗರದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹವಾಮಾನ ವೈಪರೀತ್ಯದಿಂದಾಗಿ ವಿಮಾನಗಳನ್ನು ಇಳಿಸಲು ಅಸಾಧ್ಯವಾದ ಕಾರಣ ದುಬೈನಿಂದ ಮಂಗಳೂರಿಗೆ ಬರಬೇಕಾಗಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವನ್ನು ಬೆಂಗಳೂರಿನಲ್ಲಿ ಇಳಿಸಬೇಕಾಯಿತು. ಅಲ್ಲದೆ, ಮುಂಬೈಯಿಂದ ಮಂಗಳೂರಿಗೆ ಬರಬೇಕಾಗಿದ್ದ ಏರ್ ಇಂಡಿಯಾ ವಿಮಾನವನ್ನು […]

ಭಾರೀ ಮಳೆಯಿಂದಾಗಿ ಹವಾಮಾನದಲ್ಲಿ ಏರುಪೇರು ► ಮಂಗಳೂರಿನಲ್ಲಿ ಇಳಿಸಲು ಅಸಾಧ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಳಿದ ವಿಮಾನ Read More »

ಕರಾವಳಿ

ಮುಂಗಾರು ಮಳೆಗೆ ಮಹಿಳೆ ಮೃತ್ಯು ► ಮಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.29. ಕರಾವಳಿಯಲ್ಲಿ ಮಂಗಳವಾರ ಬೆಳಗ್ಗೆಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಹಿಳೆಯೋರ್ವರು ಮೃತಪಟ್ಟಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮನೆಯ ಹಿಂಬದಿಯ ಕಾಂಪೌಂಡ್ ಗೋಡೆ ಕುಸಿದ ಪರಿಣಾಮ ಮಣ್ಣಿನಡಿಗೆ ಸಿಲುಕಿ ಕೊಂಡು ಕೆಪಿಟಿ ಬಳಿಯ ಉದಯ ನಗರ ನಿವಾಸಿ ಮೋಹಿಣಿ (60) ಮೃತಪಟ್ಟಿದ್ದಾರೆ. ಸುಮಾರು ಎಂಟು ಗಂಟೆಗಳ ಕಾಲ‌ ಮಣ್ಣಿನಡಿ ಸಿಲುಕಿದ್ದ ಇವರನ್ನು ರಕ್ಷಿಸಲು ಮಂಗಳೂರು ಪೂರ್ವ ಠಾಣೆ ಪೊಲೀಸರು, ಅಗ್ನಿಶಾಮಕ ದಳ, ಕಂದಾಯ ಇಲಾಖೆ ಮತ್ತು ಸ್ಥಳೀಯರು ಹರಸಾಹಸಪಟ್ಟರೂ ಬದುಕಿಸಲಾಗಲಿಲ್ಲ. ಇನ್ನೊಂದೆಡೆ ಅಡ್ಯಾರ್ ಕಣ್ಣೂರ್

ಮುಂಗಾರು ಮಳೆಗೆ ಮಹಿಳೆ ಮೃತ್ಯು ► ಮಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತ Read More »

ಕರಾವಳಿ

ಕಡಬ: ವರದಕ್ಷಿಣೆ ತರುವಂತೆ ಕಿರುಕುಳ ► ಪತಿ, ಸಂಬಂಧಿಕರ ವಿರುದ್ಧ ದೂರು

(ನ್ಯೂಸ್ ಕಡಬ) newskadaba.com ಕಡಬ, ಮೇ.28. ವರದಕ್ಷಿಣೆ ನೀಡುವಂತೆ ಆಗ್ರಹಿಸಿ ತನ್ನ ಪತಿ ಮತ್ತು ಮನೆಯವರು ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದಾರೆ‌ ಎಂದು ಆರೋಪಿಸಿ ಮಹಿಳೆಯೋರ್ವರು ಕಡಬ ಠಾಣೆಗೆ ದೂರು‌ ನೀಡಿದ್ದಾರೆ. ಇಲ್ಲಿನ ಕೋಡಿಂಬಾಳ ಗ್ರಾಮದ ಹಳೆಸ್ಟೇಷನ್ ನಿವಾಸಿ ಸಕೀನಾ ಎಂಬವರನ್ನು ಕಳೆದ ಫೆಬ್ರವರಿಯಲ್ಲಿ ಕಾಸರಗೋಡು ಜಿಲ್ಲೆಯ ಉದುಮ ನಿವಾಸಿ ಅಹ್ಮದ್ ಶಕೀಬ್ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು. ಆ ನಂತರದ ದಿನಗಳಲ್ಲಿ ತನ್ನ ಗಂಡ, ಮಾವ ಅಹಮ್ಮದ್ ಸತ್ತಾರ್ ಹಾಗೂ ಅತ್ತೆ ಬೀಬಿಯವರು ಜೊತೆ ಸೇರಿ

ಕಡಬ: ವರದಕ್ಷಿಣೆ ತರುವಂತೆ ಕಿರುಕುಳ ► ಪತಿ, ಸಂಬಂಧಿಕರ ವಿರುದ್ಧ ದೂರು Read More »

ಕರಾವಳಿ

ಕರಾವಳಿಯಲ್ಲಿ ಭಾರೀ ಗಾಳಿ ಮಳೆಯ ಹಿನ್ನೆಲೆ ► ಇಂದು ನಾಳೆ ಶಾಲಾ ಕಾಲೇಜುಗಳಿಗೆ ರಜೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.29. ಕರಾವಳಿಯಲ್ಲಿ ಭಾರೀ ಗಾಳಿ – ಮಳೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ಮಂಗಳವಾರ ಮತ್ತು ಬುಧವಾರದಂದು ರಜೆ ಘೋಷಿಸಲಾಗಿದೆ. ಕರಾವಳಿಯ ತಗ್ಗು ಪ್ರದೇಶಗಳು ಜಲಾವೃತವಾಗಿರುವುದರಿಂದ ಪರಿಸರದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಕರಾವಳಿಯಲ್ಲಿ ಭಾರೀ ಗಾಳಿ ಮಳೆಯ ಹಿನ್ನೆಲೆ ► ಇಂದು ನಾಳೆ ಶಾಲಾ ಕಾಲೇಜುಗಳಿಗೆ ರಜೆ Read More »

ಕರಾವಳಿ

ಅತ್ತಾವರ: ಮಗುವೊಂದು ನೆರೆನೀರಿನಲ್ಲಿ ಕೊಚ್ಚಿ ಹೋದ ಶಂಕೆ ► ಅಗ್ನಿಶಾಮಕ ದಳದಿಂದ ಮುಂದುವರಿದ ಶೋಧ ಕಾರ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.29. ಮಂಗಳೂರಿನಲ್ಲಿ ಮಗುವೊಂದು ಮಳೆ ನೀರಿಗೆ ಕೊಚ್ಚಿಹೋದ ಬಗ್ಗೆ ಶಂಕೆಯುಂಟಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಶೋಧ ಕಾರ್ಯ ಆರಂಭವಾಗಿದೆ. ನಗರದ ವಿವಿಧೆಡೆ ಮಂಗಳವಾರ ಬೆಳಿಗ್ಗೆಯಿಂದಲೇ ಭಾರೀ ಮಳೆಯಾಗುತ್ತಿದ್ದು, ಅತ್ತಾವರದಲ್ಲಿ ಮಗುವೊಂದು ಕಾಣೆಯಾಗಿದ್ದು, ನೀರಿನಲ್ಲಿ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ. ಅಲ್ಲದೆ ಜಲಾವೃತವಾಗಿರುವ ಕಡೆಗಳಲ್ಲಿನ ಮನೆಗಳಿಂದ ಸಾರ್ವಜನಿಕರನ್ನು ಬೇರೆಡೆಗೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಅತ್ತಾವರ: ಮಗುವೊಂದು ನೆರೆನೀರಿನಲ್ಲಿ ಕೊಚ್ಚಿ ಹೋದ ಶಂಕೆ ► ಅಗ್ನಿಶಾಮಕ ದಳದಿಂದ ಮುಂದುವರಿದ ಶೋಧ ಕಾರ್ಯ Read More »

ಕರಾವಳಿ

ಮೀನುಗಾರಿಕೆಗೆ ತೆರಳಿದ್ದ ಬೋಟ್ ಮಗುಚಿ ಇಬ್ಬರು ಕಣ್ಮರೆ ► ನಾಲ್ವರ ರಕ್ಷಿಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು

ಸಾಂದರ್ಭಿಕ ಚಿತ್ರ (ನ್ಯೂಸ್ ಕಡಬ) newskadaba.com ಕಾರವಾರ, ಮೇ.29. ಮೀನುಗಾರಿಕೆಗೆ ತೆರಳಿದ್ದ ಬೋಟೊಂದು ಮಗುಚಿದ ಪರಿಣಾಮ ಇಬ್ಬರು ನೀರುಪಾಲಾದ ಘಟನೆ ಹೊನ್ನಾವರದಲ್ಲಿ ಮಂಗಳವಾರದಂದು ನಡೆದಿದೆ. ತಮಿಳುನಾಡು ಮೂಲದ ಬೋಟ್ ನಲ್ಲಿ ಆರು ಜನರಿದ್ದು, ಮೀನುಗಾರಿಕೆಗೆಂದು ತೆರಳಿದ್ದ ವೇಳೆ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಬೋಟ್ ಮಗುಚಿ ಬಿದ್ದಿದೆ. ಬೋಟ್ ನಲ್ಲಿದ್ದ ನಾಲ್ವರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಇಬ್ಬರು ಕಣ್ಮರೆಯಾಗಿದ್ದು, ಕಾರವಾರ ಹಾಗೂ ಮಂಗಳೂರು ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ಕಣ್ಮರೆಯಾದವರ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಮೀನುಗಾರಿಕೆಗೆ ತೆರಳಿದ್ದ ಬೋಟ್ ಮಗುಚಿ ಇಬ್ಬರು ಕಣ್ಮರೆ ► ನಾಲ್ವರ ರಕ್ಷಿಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು Read More »

ಕರಾವಳಿ

ಭಾರೀ ಗಾಳಿ‌-ಮಳೆಗೆ ತತ್ತರಿಸಿದ ಕರಾವಳಿ ► ಮಂಗಳೂರು ನಗರ ಪ್ರದೇಶ ಜಲಾವೃತ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.29. ರಾಜ್ಯಕ್ಕೆ ಮುಂಗಾರು ಕಾಲಿಟ್ಟಿದ್ದು, ವಾಯುಭಾರ ಕುಸಿತಗೊಂಡು ಕರಾವಳಿಯಾದ್ಯಂತ ಮಂಗಳವಾರ ಬೆಳಿಗ್ಗೆಯಿಂದಲೇ ಭಾರೀ ಮಳೆಯಾಗಿದೆ. ಚರಂಡಿಗಳಲ್ಲಿ ಹೂಳು ತುಂಬಿಕೊಂಡಿರುವುದರಿಂದ ಮಂಗಳೂರು ನಗರ ಪ್ರದೇಶಗಳಲ್ಲಿ ಕೃತಕ‌ ನೆರೆಯಾಗಿದ್ದು, ಪಾದಚಾರಿಗಳು, ವಾಹನ ಸವಾರರು ತೀವ್ರ ತೊಂದರೆಗೊಳಗಾಗಿದ್ದಾರೆ‌. ನಗರದ ವಿವಿಧ ಪ್ರದೇಶಗಳಲ್ಲಿ ಹಲವು ಮನೆಗಳಿಗೆ, ಅಂಗಡಿಗಳ ಒಳಗೆ ನೀರು ನುಗ್ಗಿದ್ದು, ಸಾರ್ವಜನಿಕರು ಸಂಕಷ್ಟಕ್ಕೊಳಗಾಗಿದ್ದಾರೆ. ಮುಖ್ಯ ರಸ್ತೆಯಲ್ಲಿ ಸಂಚರಿಸಲಾಗದಂತಹ ಪರಿಸ್ಥಿತಿ ತಲೆದೋರಿದ್ದು, ನಗರ ಪ್ರದೇಶಗಳಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯವುಂಟಾಗಿದೆ.

ಭಾರೀ ಗಾಳಿ‌-ಮಳೆಗೆ ತತ್ತರಿಸಿದ ಕರಾವಳಿ ► ಮಂಗಳೂರು ನಗರ ಪ್ರದೇಶ ಜಲಾವೃತ Read More »

ಕರಾವಳಿ

ನೆಲ್ಯಾಡಿ: ಸಿಡಿಲು ಬಡಿದು ಓರ್ವ ಮೃತ್ಯು ► ತಾಯಿ-ಮಗು ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮೇ.29. ಸಿಡಿಲಿನ ಆರ್ಭಟಕ್ಕೆ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನೆಲ್ಯಾಡಿಯಲ್ಲಿ ಸೋಮವಾರದಂದು ನಡೆದಿದೆ. ಮೃತ ವ್ಯಕ್ತಿಯನ್ನು ನೆಲ್ಯಾಡಿ ಗ್ರಾಮದ ಪಡುಬೆಟ್ಟು ಸರಳೀಕರೆ ನಿವಾಸಿ ಪ್ರವೀಣ್ ಡಿಸೋಜಾ ಎಂದು‌ ಗುರುತಿಸಲಾಗಿದೆ. ಮೇಸ್ತ್ರಿ ವೃತ್ತಿಯನ್ನು ನಿರ್ವಹಿಸುತ್ತಿದ್ದ ಪ್ರವೀಣ್ ತನ್ನ ಮನೆಯ ಹಾಲ್ ನಲ್ಲಿ ಕಿಟಕಿಯ ಪಕ್ಕದಲ್ಲಿ ಕುಳಿತಿದ್ದಾಗ ಸಿಡಿಲು ಬಡಿದಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಮೃತಪಟ್ಟಿದ್ದಾರೆ. ಮನೆಯಲ್ಲಿದ್ದ ಅವರ ಪತ್ನಿ ಲಲಿತಾ ಡಿಸೋಜ ಹಾಗೂ ಪುತ್ರಿ ಪ್ರಣೀತಾ ಪ್ರಿಯಾ ಡಿಸೋಜ ಅಪಾಯದಿಂದ ಪಾರಾಗಿದ್ದಾರೆ.

ನೆಲ್ಯಾಡಿ: ಸಿಡಿಲು ಬಡಿದು ಓರ್ವ ಮೃತ್ಯು ► ತಾಯಿ-ಮಗು ಅಪಾಯದಿಂದ ಪಾರು Read More »

ಕರಾವಳಿ

ರೈತರು ಯಾರೂ ಆತುರದ ನಿರ್ಧಾರ ತೆಗೆದುಕೊಳ್ಳದೆ ಸಂಯಮದಿಂದಿರಿ ► ಸಾಲಮನ್ನಾದ ಸುಳಿವು ನೀಡಿದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ

(ನ್ಯೂಸ್ ಕಡಬ) newskadaba.com ಮೈಸೂರು, ಮೇ.29. ರೈತರು ಯಾರೂ ಆತುರದ‌ ನಿರ್ಧಾರಗಳನ್ನು ತೆಗೆದುಕೊಳ್ಳದೆ ಸಂಯಮದಿಂದ ಇರುವಂತೆ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಜಾತ್ಯಾತೀತ ತತ್ವಗಳು ಉಳಿಯಬೇಕೆಂಬ ನಿಲುವಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿದ್ದು, ಎರಡೂ ಪಕ್ಷಗಳ ಮುಖಂಡರು ಸಾಲ‌ಮನ್ನಾ ವಿಚಾರವಾಗಿ ಸರಿಯಾದ ಕ್ರಮಗಳನ್ನು ಕೈಗೊಳ್ಳಲಿದ್ದೇವೆ. ಒಂದು ವಾರಗಳ ಕಾಲ ಕಾಯುವಂತೆ ರೈತರಲ್ಲಿ ಮನವಿ ಮಾಡಿದ್ದು, ಈ ಮೂಲಕ ಸಾಲಮನ್ನಾದ ಸುಳಿವನ್ನು ನೀಡಿದ್ದಾರೆ.

ರೈತರು ಯಾರೂ ಆತುರದ ನಿರ್ಧಾರ ತೆಗೆದುಕೊಳ್ಳದೆ ಸಂಯಮದಿಂದಿರಿ ► ಸಾಲಮನ್ನಾದ ಸುಳಿವು ನೀಡಿದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ Read More »

ಕರ್ನಾಟಕ

ಕೊಣಾಜೆ: ಭಾರೀ ಗಾಳಿ ಮಳೆ ► ಧರೆಗುರುಳಿದ ವಿದ್ಯುತ್ ಪರಿವರ್ತಕ

(ನ್ಯೂಸ್ ಕಡಬ) newskadaba.com ಕಡಬ, ಮೇ.29. ಕಡಬ ಭಾಗದಲ್ಲಿ ಭಾನುವಾರ ರಾತ್ರಿ ಗಾಳಿ ಸಹಿತ ಮಳೆಗೆ ಕಡಬ – ಕೊಣಾಜೆ ರಸ್ತೆಯ ಕೊಣಾಜೆ ಎಂಬಲ್ಲಿ ವಿದ್ಯುತ್ ಪರಿವರ್ತಕ ಹೊತ್ತ ಎರಡು ವಿದ್ಯುತ್ ಕಂಬಗಳು ಪರಿವರ್ತಕ ಸಹಿತ ಧರೆಗುರುಳಿ ಮೆಸ್ಕಾಂಗೆ ಅಪಾರ ನಷ್ಟವುಂಟಾಗಿದೆ. ವಿದ್ಯುತ್ ಕಂಬ ಹಲವು ದಿನಗಳಿಂದ ವಾಲಿ ನಿಂತು ಅಪಾಯವನ್ನು ಸೂಚಿಸುತ್ತಿರುವ ಬಗ್ಗೆ ಸ್ಥಳೀಯರು ಮೆಸ್ಕಾಂನ ಗಮನ ಸೆಳೆದಿದ್ದರು. ಆದರೂ ಇಲಾಖೆಯಿಂದ ಯಾವುದೇ ಸ್ಪಂದನೆ ವ್ಯಕ್ತವಾಗಿರಲಿಲ್ಲ ಎನ್ನಲಾಗಿದೆ. ಭಾನುವಾರದಂದು ಪರಿವರ್ತಕ ಧರೆಗುರುಳಿದ್ದು, ಅಪಾರ ನಷ್ಟ ಸಂಭವಿಸಿದೆ

ಕೊಣಾಜೆ: ಭಾರೀ ಗಾಳಿ ಮಳೆ ► ಧರೆಗುರುಳಿದ ವಿದ್ಯುತ್ ಪರಿವರ್ತಕ Read More »

ಕರಾವಳಿ
Scroll to Top