News Kadaba Desk

ಕೊಡಂಗಾಯಿ: ಜೀಪು ಢಿಕ್ಕಿ ► ದ್ವಿಚಕ್ರ ವಾಹನ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ವಿಟ್ಲ, ಜೂ.19. ಜೀಪೊಂದು ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಮಂಗಳವಾರದಂದು ವಿಟ್ಲ ಸಮೀಪದ ಕೊಡಂಗಾಯಿಯಲ್ಲಿ ನಡೆದಿದೆ. ಮೃತ ಸವಾರನನ್ನು ಪಳಿಕೆ ನಿವಾಸಿ ಮಹಮ್ಮದ್ ಸಫ್ವಾನ್(18) ಎಂದು ಗುರುತಿಸಲಾಗಿದೆ. ಈತ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಕೊಡಂಗಾಯಿ ಎಂಬಲ್ಲಿ ಜೀಪು ಢಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡ ಸವಾರ ಸಫ್ವಾನ್ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ವಿಟ್ಲ ಪೊಲೀಸರು ಪರಿಶೀಲನೆ ನಡೆಸಿದ್ದು, ಜೀಪು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೊಡಂಗಾಯಿ: ಜೀಪು ಢಿಕ್ಕಿ ► ದ್ವಿಚಕ್ರ ವಾಹನ ಸವಾರ ಮೃತ್ಯು Read More »

ಕರಾವಳಿ

ಕಡಬ ಗ್ರಾ.ಪಂ. ಮಾಜಿ ಸದಸ್ಯ ಶಬೀರ್ ಪಾಲೆಪ್ಪೆ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಜೂ.19. ಕಡಬ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಕೋಡಿಂಬಾಳ ಕೋಡಿಂಬಾಳ ರಹಮ್ಮಾನಿಯಾ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಖಂಡ ಶಬ್ಬೀರ್ ಮಡ್ಯಡ್ಕ ಇಂದು ನಿಧನ ಹೊಂದಿದರು. ಕಳೆದ ಹಲವು ಸಮಯಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿ ಚಿಕಿತ್ತೆ ಪಡೆದಿದ್ದ ಇವರು ಮಂಗಳವಾರ ಬೆಳಿಗ್ಗೆ ತನ್ನ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಮಡ್ಯಡ್ಕದಲ್ಲಿ ದಿನಸಿ ಅಂಗಡಿ ಹೊಂದಿದ್ದ ಇವರು ಎಲ್ಲರಿಗೂ ಚಿರಪರಿಚಿತರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು

ಕಡಬ ಗ್ರಾ.ಪಂ. ಮಾಜಿ ಸದಸ್ಯ ಶಬೀರ್ ಪಾಲೆಪ್ಪೆ ನಿಧನ Read More »

ಕರಾವಳಿ

ಬದುಕು ಕಟ್ಟಿಕೊಟ್ಟ ಜೆಸಿಬಿಯಲ್ಲೇ ದಿಬ್ಬಣ ಹೊರಟ ಪುತ್ತೂರಿನ ನವದಂಪತಿ ► ‘ಜೆಸಿಬಿ’ ಮಣ್ಣು ಅಗೆಯಲು ಜೈ, ದಿಬ್ಬಣ ತೆರಳಲು ಸೈ ಎಂದ ಚೇತನ್

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ.19. ಮದುವೆಯ ಸಂದರ್ಭದಲ್ಲಿ ಮರೆಯಲಾಗದ ರೀತಿಯಲ್ಲಿ ವಿಭಿನ್ನವಾಗಿ ಏನಾದರೂ ಮಾಡುವುದನ್ನು ಹೆಚ್ಚಾಗಿ ನಾವು ಕಾಣುತ್ತೇವೆ. ಆದರೆ ಜೀವನ ಕಟ್ಟಿಕೊಟ್ಟ ಜೆಸಿಬಿಯಲ್ಲಿಯೇ ನವಜೋಡಿಯೊಂದು ಮದುವೆ ದಿಬ್ಬಣ ಹೊರಟ ಚಿತ್ರವು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜೆಸಿಬಿ ಆಪರೇಟರ್ ವೃತ್ತಿಯಲ್ಲಿರುವ ಪುತ್ತೂರಿನ ಸಂಟ್ಯಾರು ನಿವಾಸಿ ಚೇತನ್ ತಿಂಗಳಾಡಿಯ ಮಮತಾರೊಂದಿಗೆ ಹಸಮಣೆಗೆ ಕಾಲಿಟ್ಟಿದ್ದು, ಕಾರ್ಯಕ್ರಮಗಳೆಲ್ಲಾ ಮುಗಿದ ಕೂಡಲೇ ತನಗೆ ಬದುಕು ಕಟ್ಟಿಕೊಟ್ಟ ಜೆಸಿಬಿಯಲ್ಲೇ ದಿಬ್ಬಣ ಹೊರಟು ಜೆಸಿಬಿ ವಾಹನವು ಮಣ್ಣು ಅಗೆಯಲು ಮಾತ್ರವಲ್ಲ, ದಿಬ್ಬಣಕ್ಕೂ

ಬದುಕು ಕಟ್ಟಿಕೊಟ್ಟ ಜೆಸಿಬಿಯಲ್ಲೇ ದಿಬ್ಬಣ ಹೊರಟ ಪುತ್ತೂರಿನ ನವದಂಪತಿ ► ‘ಜೆಸಿಬಿ’ ಮಣ್ಣು ಅಗೆಯಲು ಜೈ, ದಿಬ್ಬಣ ತೆರಳಲು ಸೈ ಎಂದ ಚೇತನ್ Read More »

ಕರಾವಳಿ

ಪುತ್ತೂರು: ಸ್ಕಿಲ್ ಗೇಮ್ ಹೆಸರಿನಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ ► ಮೂವತ್ತಕ್ಕೂ ಹೆಚ್ಚು ಜನರ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ.19. ಸ್ಕಿಲ್ ಗೇಮ್ ನೆಪದಲ್ಲಿ ಅಕ್ರಮವಾಗಿ ಜುಗಾರಿ ನಡೆಸುತ್ತಿದ್ದ ಹೈಟೆಕ್ ಕೇಂದ್ರವೊಂದಕ್ಕೆ ದಾಳಿ ನಡೆಸಿರುವ ಪೊಲೀಸರು ಸಿಬ್ಬಂದಿ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದ ಘಟನೆ ಸೋಮವಾರ ತಡರಾತ್ರಿ ಪುತ್ತೂರಿನಲ್ಲಿ ನಡೆದಿದೆ. ಕಳೆದ ಕೆಲವು ತಿಂಗಳಿನಿಂದ ಪುತ್ತೂರಿನ ಬೊಳುವಾರು ಶಾಲೆಯ ಮುಂಭಾಗದ ಪ್ರತಿಷ್ಠಿತ ಕಟ್ಟಡದಲ್ಲಿ ಹೈಕೋರ್ಟ್ ನ ಆದೇಶವಿದೆ ಎನ್ನುವ ದಾಖಲೆಯನ್ನು ತೋರಿಸಿ ರಾಜಾರೋಷವಾಗಿ ಸ್ಕಿಲ್ ಗೇಮ್ ನಡೆಯುತ್ತಿತ್ತೆನ್ನಲಾಗಿದ್ದು, ಈ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾ ಎಸ್ಪಿ ಡಾ.ರವಿಕಾಂತೇಗೌಡ

ಪುತ್ತೂರು: ಸ್ಕಿಲ್ ಗೇಮ್ ಹೆಸರಿನಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ ► ಮೂವತ್ತಕ್ಕೂ ಹೆಚ್ಚು ಜನರ ಬಂಧನ Read More »

ಕರಾವಳಿ

ಆಲಂಕಾರು: ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಜೂ.19. ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರದಂದು ಆಲಂಕಾರಿನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಆಲಂಕಾರು ಗ್ರಾಮದ ಶರವೂರು ನಾಡ್ತಿಲ ನಿವಾಸಿ ನಾಗಪ್ಪ ಗೌಡ ಎಂಬವರ ಪತ್ನಿ ಲೀಲಾವತಿ(52ವ.) ಎಂದು ಗುರುತಿಸಲಾಗಿದೆ. ಇವರು ಭಾನುವಾರದಂದು ತನ್ನ ಮಗ ದಿನೇಶ್ ಎಂಬರಿಗೆ ಕರೆ ಮಾಡಿ “ಮನಸ್ಸಿಗೆ ತುಂಬಾ ಬೇಸರವಾಗುತ್ತಿದೆ, ನನಗೆ ಬದುಕಲು ಇಷ್ಟವಿಲ್ಲ ಎಂದು ಹೇಳಿ ತನ್ನ ಮನೆಯಲ್ಲಿ ವಿಷ ಪದಾರ್ಥ ಸೇವಿಸಿದ್ದರು. ವಿಷಯ ತಿಳಿದ ಮನೆಯವರು ಇವರನ್ನು

ಆಲಂಕಾರು: ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ Read More »

ಕರಾವಳಿ

ಬೆಳ್ತಂಗಡಿ: ಖಾಸಗಿ ಬಸ್ಸಿನ ಚಾಲಕ – ನಿರ್ವಾಹಕರ ಅಜಾಗರೂಕತೆಯ ಪರಿಣಾಮ ► ಬಸ್ಸಿನ ಚಕ್ರದಡಿಗೆ ಬಿದ್ದು ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ.18. ಖಾಸಗಿ ಬಸ್ಸಿನ ಚಕ್ರದಡಿಗೆ ಸಿಲುಕಿ ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ತಾಲೂಕಿನ ಕರಂಬಾರಿನ ದರ್ಬೆಪಲ್ಕೆ ಭಜನಾ ಮಂದಿರದ ಬಳಿ ಸೋಮವಾರ ಸಂಜೆ‌ ನಡೆದಿದೆ. ಮೃತ ಬಾಲಕನನ್ನು ಕರಂಬಾರು ಸಮೀಪದ ದರ್ಬೆಪಲ್ಕೆ ನಿವಾಸಿ ಉಮೇಶ್ ಸಫಲ್ಯ ಎಂಬವರ ಪುತ್ರ ಚಿಂತನ್ (8) ಎಂದು ಗುರುತಿಸಲಾಗಿದೆ. ಈತ ತನ್ನ ತಾಯಿಯೊಂದಿಗೆ ಮದುವೆಗೆಂದು ತೆರಳಿದ್ದು, ಗೋಪಾಲಕೃಷ್ಣ ಎಂಬ ಖಾಸಗಿ ಬಸ್ಸಿನಲ್ಲಿ ಹಿಂತಿರುಗಿ ಇಳಿಯುತ್ತಿದ್ದ ವೇಳೆ ಚಾಲಕ ಅಜಾಗರೂಕತೆಯಿಂದ ಬಸ್ ಚಲಾಯಿಸಿದ ಪರಿಣಾಮ ಬಸ್ಸಿನಿಂದ

ಬೆಳ್ತಂಗಡಿ: ಖಾಸಗಿ ಬಸ್ಸಿನ ಚಾಲಕ – ನಿರ್ವಾಹಕರ ಅಜಾಗರೂಕತೆಯ ಪರಿಣಾಮ ► ಬಸ್ಸಿನ ಚಕ್ರದಡಿಗೆ ಬಿದ್ದು ಬಾಲಕ ಮೃತ್ಯು Read More »

ಕರಾವಳಿ

ಕತ್ತಲಲ್ಲಿ ಇದ್ದವರಿಗೆ ‘ಬೆಳಕಿನ ಭಾಗ್ಯ’ ► ನೀತಿ ತಂಡದಿಂದ ವಿನೂತನ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜೂ.18. ವಿದ್ಯುತ್ ಸಂಪರ್ಕ ಇಲ್ಲದ ಮನೆಗಳನ್ನು ಗುರುತಿಸಿ, ವಿದ್ಯುತ್ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಆ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವಿನೂತನ ಕಾರ್ಯಕ್ರಮಕ್ಕೆ ನೀತಿ ತಂಡದಿಂದ ಚಾಲನೆ ನೀಡಲಾಯಿತು. ನೆಲ್ಯಾಡಿ ಕೊಣಾಲು ಪಾಂಡಿಬೆಟ್ಟು ಶಾಖೆಯ ನೇತೃತ್ವದಲ್ಲಿ ಮೆಸ್ಕಾಂ ಇಲಾಖೆಯ ಸಹಕಾರದೊಂದಿಗೆ ಇಲ್ಲಿನ ಒಕ್ಕೆಜಾಲು ನಿವಾಸಿ ಸುಕುಮಾರನ್ ಅವರಿಗೆ ಮತ್ತು ಇಲ್ಲಿನ ದರ್ಖಾಸು ಎಂಬಲ್ಲಿನ ಮೂರು ಮನೆಗಳಿಗೆ ಭಾಗ್ಯಜ್ಯೋತಿ ಯೋಜನೆಯ ಮೂಲಕ ವಿದ್ಯುತ್ ಸಂಪರ್ಕ ನೀಡಲಾಗಿದೆ. ಹಲವಾರು ವರ್ಷಗಳಿಂದ ಈ ಮನೆಯವರು ವಿದ್ಯುತ್

ಕತ್ತಲಲ್ಲಿ ಇದ್ದವರಿಗೆ ‘ಬೆಳಕಿನ ಭಾಗ್ಯ’ ► ನೀತಿ ತಂಡದಿಂದ ವಿನೂತನ ಕಾರ್ಯಕ್ರಮ Read More »

ಕರಾವಳಿ

ಕೈಕಂಬಕ್ಕೆ ಮತ್ತೆ ಕಾಲಿಟ್ಟರೇ ನಕ್ಸಲರು…? ► ಭಾಗೀಮಲೆ ರಕ್ಷಿತಾರಣ್ಯದಲ್ಲಿ ಸಂಚರಿಸಿದ ಗುಮಾನಿಯಿಂದ ಆತಂಕದಲ್ಲಿ ಗ್ರಾಮಸ್ಥರು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂ.17. ಇಲ್ಲಿಗೆ ಸಮೀಪದ ಭಾಗಿಮಲೆ ಮೀಸಲು ಅರಣ್ಯದ ಭಾಗ್ಯ ಎಂಬಲ್ಲಿ ಶನಿವಾರ ತಡರಾತ್ರಿ ಶಂಕಿತ ನಕ್ಸಲರು ಸಂಚಾರ ನಡೆಸಿದ್ದಾರೆ ಎಂಬ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ. ಸ್ಥಳೀಯವಾಗಿ ಈ ಕುರಿತು ವದಂತಿ ಹಬ್ಬಿದ್ದು ಈ ಭಾಗದಲ್ಲಿ ಎಎನ್ಎಫ್ ತಂಡವು ರವಿವಾರ ಬೆಳಗ್ಗೆ ಕೂಂಬಿಂಗ್ ಆರಂಭಿಸಿದೆ ಎನ್ನಲಾಗಿದೆ. ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದಲ್ಲಿ ಮೂವರು ನಕ್ಸಲರು ಪ್ರತ್ಯಕ್ಷರಾಗಿದ್ದ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ದಳ ಹಾಗೂ ನಕ್ಸಲ್ ನಿಗ್ರಹ ಸ್ಕ್ವಾಡ್ ಜಂಟಿಯಾಗಿ ಕೂಂಬಿಂಗ್ ಕಾರ್ಯಾಚರಣೆ

ಕೈಕಂಬಕ್ಕೆ ಮತ್ತೆ ಕಾಲಿಟ್ಟರೇ ನಕ್ಸಲರು…? ► ಭಾಗೀಮಲೆ ರಕ್ಷಿತಾರಣ್ಯದಲ್ಲಿ ಸಂಚರಿಸಿದ ಗುಮಾನಿಯಿಂದ ಆತಂಕದಲ್ಲಿ ಗ್ರಾಮಸ್ಥರು Read More »

ಕರಾವಳಿ

ಹದಗೆಟ್ಟ ಕಲ್ಲಾಜೆ – ಅಂತಿಬೆಟ್ಟು ರಸ್ತೆಗೆ ಊರವರಿಂದಲೇ ಕಾಯಕಲ್ಪ ► ಸಡಕ್ ರಸ್ತೆಗೆ ಕಾದು ಸುಸ್ತಾಗಿ ಕೊನೆಗೆ ಶ್ರಮದಾನದ ಮೊರೆ ಹೋದ ಗ್ರಾಮಸ್ಥರು

(ನ್ಯೂಸ್ ಕಡಬ) newskadaba.com ಕಡಬ, ಜೂ.17. ಮರ್ದಾಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಲ್ಲಾಜೆ ಅಂತಿಬೆಟ್ಟು ಮಾರ್ಗವಾಗಿ ಕೋರಿಯಾರ್ ಮೂಲಕ ಕೋಡಿಂಬಾಳ ಸೇರಬೇಕಾದ ಗ್ರಾಮ ಸಡಕ್ ರಸ್ತೆಯು ಮಂಜೂರಾಗಿ ವರ್ಷಗಳೇ ಕಳೆದರೂ ರಸ್ತೆ ಅಭಿವೃದ್ಧಿಯಾಗದ ಹಿನ್ನೆಲೆಯಲ್ಲಿ ಈ ಭಾಗದ ಗ್ರಾಮಸ್ಥರೆಲ್ಲ ಸೇರಿಕೊಂಡು ಕೆಸರುಮಯ, ಹೊಂಡ, ಗುಂಡಿಗಳಿಂದ ಕೂಡಿದ ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ತಿಗೊಳಿಸಿದ ಘಟನೆ ಭಾನುವಾರದಂದು ‌ನಡೆದಿದೆ. ಕಲ್ಲಾಜೆಯಿಂದ ಅಂತಿಬೆಟ್ಟುವರೆಗಿನ ಸುಮಾರು ೫೦ಕ್ಕೂ ಮೆಲ್ಪಟ್ಟ ಗ್ರಾಮಸ್ಥರು ಒಟ್ಟಾಗಿ ಬೆಳಿಗ್ಗೆಯಿಂದ ಸಂಜೆಯ ತನಕ ಶ್ರಮದಾನದ ಮೂಲಕ ರಸ್ತೆಯನ್ನು ದುರಸ್ಥಿಗೊಳಿಸಿದ್ದಾರೆ.

ಹದಗೆಟ್ಟ ಕಲ್ಲಾಜೆ – ಅಂತಿಬೆಟ್ಟು ರಸ್ತೆಗೆ ಊರವರಿಂದಲೇ ಕಾಯಕಲ್ಪ ► ಸಡಕ್ ರಸ್ತೆಗೆ ಕಾದು ಸುಸ್ತಾಗಿ ಕೊನೆಗೆ ಶ್ರಮದಾನದ ಮೊರೆ ಹೋದ ಗ್ರಾಮಸ್ಥರು Read More »

ಕರಾವಳಿ

ಕಡಬ ತಾಲೂಕು ಕಾರ್ಯಾರಂಭಕ್ಕೆ ಅಧಿಕಾರಿಗಳಿಂದ ಭರದ ಸಿದ್ಧತೆ ► ಕೋರ್ಟ್ ಸೇರಿದಂತೆ ಹೆಚ್ಚಿನ ಇಲಾಖೆಗಳು ಬಂಟ್ರ ಗ್ರಾಮದ ಮುಂಚಿಕಾಪಿಗೆ

(ನ್ಯೂಸ್ ಕಡಬ) newskadaba.com ಕಡಬ, ಜೂ.17. ನೂತನ ಕಡಬ ತಾಲೂಕು ಅನುಷ್ಠಾನಗೊಂಡು ಉದ್ಘಾಟನಾ ಭಾಗ್ಯಕ್ಕೆ ಕಾಲ ಸನ್ನಿಹಿತವಾಗಿದ್ದು, ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರುವ ಸಮಯ ಬಂದಿದೆ. ಪುತ್ತೂರು ತಾಲೂಕಿನ 35 ಗ್ರಾಮಗಳು ಹಾಗೂ ಸುಳ್ಯ ತಾಲೂಕಿನ 7 ಗ್ರಾಮಗಳನ್ನು ಸೇರಿಸಿಕೊಂಡು ಒಟ್ಟು 42 ಗ್ರಾಮಗಳ ವ್ಯಾಪ್ತಿಯ ನೂತನ ಕಡಬ ತಾಲೂಕು ರೂಪುಗೊಂಡಿದ್ದು, ಹೊಸ ತಾಲೂಕಿನ ಒಟ್ಟು ಜನಸಂಖ್ಯೆ 1,20,086 (2011ರ ಜನಗಣತಿಯಂತೆ) ಇದ್ದು, ಒಟ್ಟು 149159.8 ಎಕರೆ ಭೌಗೋಳಿಕ ವಿಸ್ತೀರ್ಣವನ್ನು ಹೊಂದಿದೆ. ನೂತನ ತಾಲೂಕಿನಲ್ಲಿ

ಕಡಬ ತಾಲೂಕು ಕಾರ್ಯಾರಂಭಕ್ಕೆ ಅಧಿಕಾರಿಗಳಿಂದ ಭರದ ಸಿದ್ಧತೆ ► ಕೋರ್ಟ್ ಸೇರಿದಂತೆ ಹೆಚ್ಚಿನ ಇಲಾಖೆಗಳು ಬಂಟ್ರ ಗ್ರಾಮದ ಮುಂಚಿಕಾಪಿಗೆ Read More »

ಕರಾವಳಿ
Scroll to Top