News Kadaba Desk

ಫರಂಗಿಪೇಟೆ: ರೈಲಿನಡಿಗೆ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.22. ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ರೈಲಿನಡಿಗೆ ಬಿದ್ದು ಮೃತಪಟ್ಟ ಘಟನೆ ಶುಕ್ರವಾರದಂದು ಫರಂಗಿಪೇಟೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಪುದು ಗ್ರಾಮದ ಅಮೆಮಾರ್ ನಿವಾಸಿ ಫಾರೂಕ್(45) ಎಂದು ಗುರುತಿಸಲಾಗಿದೆ. ಮಂಗಳೂರು ಬಂದರಿನ ಧಕ್ಕೆಯಲ್ಲಿ ಉದ್ಯೋಗಿಯಾಗಿದ್ದ ಫಾರೂಕ್ ಎಂದಿನಂತೆ ಇಂದು ಮುಂಜಾನೆ ಕೆಲಸಕ್ಕೆ ತೆರಳುವ ಸಮಯ ಹಳಿ ದಾಟುತ್ತಿದ್ದ ವೇಳೆ ಆಕಸ್ಮಿಕವಾಗಿ ರೈಲಿನಡಿಗೆ ಬಿದ್ದು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಇದೇ ದಾರಿಯಿಂದಾಗಿ ತೆರಳುತ್ತಿದ್ದ ಸ್ಥಳೀಯರು ಇವರನ್ನು ಕಂಡು ಆಸ್ಪತ್ರೆಗೆ ದಾಖಲಿಸಿದರಾದರೂ ಅದಾಗಲೇ ಮೃತಪಟ್ಟಿದ್ದರು.

ಫರಂಗಿಪೇಟೆ: ರೈಲಿನಡಿಗೆ ಬಿದ್ದು ವ್ಯಕ್ತಿ ಮೃತ್ಯು Read More »

ಕರಾವಳಿ

ಟೀಂ ಇಂಡಿಯಾದ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಕುಕ್ಕೇ ಸುಬ್ರಹ್ಮಣ್ಯಕ್ಕೆ ಭೇಟಿ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂ.22. ಟೀಮ್ ಇಂಡಿಯಾದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಕುಟುಂಬ ಸಮೇತರಾಗಿ ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕುಕ್ಕೇ ಸುಬ್ರಹ್ಮಣ್ಯಕ್ಕೆ ಗುರುವಾರದಂದು ಭೇಟಿ ನೀಡಿದರು. ರಾಹುಲ್ ಅವರನ್ನು ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಪ್ರಸಾದದೊಂದಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭ ಶ್ರೀ ದೇವಳದ ಶಿಷ್ಠಾಚಾರ ಅಧಿಕಾರಿ ಕೆ.ಎಂ.ಗೋಪಿನಾಥನ್ ನಂಬೀಶ, ಶಿಷ್ಠಾಚಾರ ವಿಭಾಗದ ಪ್ರಮೋದ್ ಕುಮಾರ್.ಎಸ್, ಹರೀಶ್, ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ, ಸ್ಥಳೀಯರಾದ

ಟೀಂ ಇಂಡಿಯಾದ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಕುಕ್ಕೇ ಸುಬ್ರಹ್ಮಣ್ಯಕ್ಕೆ ಭೇಟಿ Read More »

ರಾಷ್ಟ್ರೀಯ ನ್ಯೂಸ್

ಮಲೇಷಿಯಾದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ ► ಸುಳ್ಯದ ವೀಸಾ ಏಜೆಂಟ್ ವಿರುದ್ಧ ದೂರು

(ನ್ಯೂಸ್ ಕಡಬ) newskadaba.com ಸುಳ್ಯ, ಜೂ.22. ಮಲೇಷಿಯಾದಲ್ಲಿ ಉದ್ಯೋಗ ಕೊಡುವುದಾಗಿ ನಂಬಿಸಿ ಹಣ ತೆಗೆದುಕೊಂಡು ಕೆಲಸ ಕೊಡಿಸದೆ ವಂಚಿಸಿದ ಬಗ್ಗೆ ಸಂಸ್ಥೆಯೊಂದರ ವಿರುದ್ಧ ವ್ಯಕ್ತಿಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ. ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಪ್ಲಾಟಿನ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಸರ್ಟಿಸ್ ಸಿಸ್ಕೋ ಕನ್ಸಲ್ಟಂಟ್ಸ್ ಸಂಸ್ಥೆಯ ಅಮರ್ಜಿತ್ (47)ಎಂಬವರು ಉದ್ಯೋಗಕ್ಕಾಗಿ ವೀಸಾ ಮಾಡಿಸಿ ಮಲೇಶಿಯಾಕ್ಕೆ ಕಳುಹಿಸಿ ಕೊಡುತ್ತೇನೆಂದು ಹೇಳಿ 75 ಸಾವಿರ ರೂ. ಹಣವನ್ನು ಮತ್ತು ಪಾಸ್ ಪೋರ್ಟ್ ಅನ್ನು ತೆಗೆದುಕೊಂಡು ಕೆಲಸ ಕೊಡಿಸದೆ ನಂಬಿಸಿ ಮೋಸ

ಮಲೇಷಿಯಾದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ ► ಸುಳ್ಯದ ವೀಸಾ ಏಜೆಂಟ್ ವಿರುದ್ಧ ದೂರು Read More »

ಅಂತರ್ರಾಷ್ಟ್ರೀಯ ನ್ಯೂಸ್

ಬಂಟ್ವಾಳ: ಎಟಿಎಂ ದರೋಡೆಗೆ ವಿಫಲ ಯತ್ನ ► ಏನೂ ಸಿಗದಿದ್ದಾಗ ದರೋಡೆಕೋರ ಮಾಡಿದ‌್ದಾದರೂ ಏನು ಗೊತ್ತೇ..?

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.21. ಸಿಂಡಿಕೇಟ್ ಬ್ಯಾಂಕ್ ಗೆ ಸೇರಿದ ಎಟಿಎಂ ಮೆಷಿನೊಂದರ ದರೋಡೆಗೆ ವಿಫಲ‌ ಯತ್ನವು ಗುರುವಾರ ಬೆಳಗಿನ ಜಾವ ಪಾಣೆ ಮಂಗಳೂರಿನಲ್ಲಿ ನಡೆದಿದೆ. ಗುರುವಾರ ಬೆಳಿಗ್ಗೆ 4 ಗಂಟೆಯ ಸುಮಾರಿಗೆ ಸಿಂಡಿಕೇಟ್ ಬ್ಯಾಂಕಿನ ಎಟಿಎಂನಲ್ಲಿ ಸೈರನ್ ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಎಟಿಎಂ ಯಂತ್ರದ ಕೆಳಗಿನ ಬಾಗಿಲು ತೆರೆದಿದ್ದು ಮಾನಿಟರ್ ಹಾಗೂ ಇತರ ಭಾಗಗಳು ಜಖಂಗೊಂಡಿರುವುದು ಕಂಡುಬಂದಿದೆ. ಜೊತೆಗೆ ಸಿಸಿ ಕ್ಯಾಮರಾ ಹಾಗೂ ಸೈರನ್‌ ಅನ್ನೂ ಹಾನಿಗೈಯಲಾಗಿದ್ದು, ಸಿಸಿ ಕ್ಯಾಮರಾದ

ಬಂಟ್ವಾಳ: ಎಟಿಎಂ ದರೋಡೆಗೆ ವಿಫಲ ಯತ್ನ ► ಏನೂ ಸಿಗದಿದ್ದಾಗ ದರೋಡೆಕೋರ ಮಾಡಿದ‌್ದಾದರೂ ಏನು ಗೊತ್ತೇ..? Read More »

ಕರಾವಳಿ

ನೂಜಿಬಾಳ್ತಿಲ:‌ ಮರಕ್ಕೆ ಢಿಕ್ಕಿ ಹೊಡೆದ ಖಾಸಗಿ ಬಸ್ ► ಅಪಾಯದಿಂದ ಪಾರಾದ ಪ್ರಯಾಣಿಕರು

(ನ್ಯೂಸ್ ಕಡಬ) newskadaba.com ಕಡಬ, ಜೂ.21. ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ಮರಕ್ಕೆ ಢಿಕ್ಕಿ ಹೊಡೆದ ಘಟನೆ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ನೂಜಿಬಾಳ್ತಿಲ ಗ್ರಾಮದ ಪದಕ ತಿರುವಿನಲ್ಲಿ ಗುರುವಾರ ಸಂಜೆ‌ ನಡೆದಿದೆ. ಬೆಂಗಳೂರಿನ ಕುಟುಂಬವೊಂದು ಖಾಸಗಿ ಬಸ್ಸಿನಲ್ಲಿ ಕುಕ್ಕೇ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿ ಬೆಂಗಳೂರಿಗೆ ವಾಪಸಾಗುತಿದ್ದ ಸಂದರ್ಭದಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಡಬ ಠಾಣಾ ಎಎಸ್‌ಐ

ನೂಜಿಬಾಳ್ತಿಲ:‌ ಮರಕ್ಕೆ ಢಿಕ್ಕಿ ಹೊಡೆದ ಖಾಸಗಿ ಬಸ್ ► ಅಪಾಯದಿಂದ ಪಾರಾದ ಪ್ರಯಾಣಿಕರು Read More »

ಕರಾವಳಿ

ಜಿಲ್ಲಾಡಳಿತದ ವತಿಯಿಂದ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.21. ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಆಯುಷ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಗುರುವಾರದಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಚಿವ ಯು.ಟಿ. ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್, ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದರ ಮೋನು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಎಂ.ಆರ್. ರವಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಸೇರಿದಂತೆ ಹಲವರು ಭಾಗಿಯಾದರು.

ಜಿಲ್ಲಾಡಳಿತದ ವತಿಯಿಂದ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆ Read More »

ಕರಾವಳಿ

ಕಬಕ: ಕಾರು ಬೈಕ್ ಗಳಿಗೆ ಸರಣಿ ಢಿಕ್ಕಿ ► ನಾಲ್ವರಿಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ.20. ಕಾರೊಂದು ಮೂರು ಬೈಕ್‌ಗಳಿಗೆ ಸರಣಿ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡ ಘಟನೆ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಕಬಕ ಸಮೀಪ ಬುಧವಾರದಂದು ನಡೆದಿದೆ. ಪುತ್ತೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಕಬಕ ಸಮೀಪದ ಪೋಳ್ಯ ಎಂಬಲ್ಲಿಗೆ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮೂರು ಬೈಕ್‌ಗಳಿಗೆ ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಕಲ್ಲಡ್ಕ ನಿವಾಸಿ ಶ್ರೀಧರ ಗೌಡ (44), ವಿಟ್ಲ ಜೋಗಿಬೆಟ್ಟು ನಿವಾಸಿ

ಕಬಕ: ಕಾರು ಬೈಕ್ ಗಳಿಗೆ ಸರಣಿ ಢಿಕ್ಕಿ ► ನಾಲ್ವರಿಗೆ ಗಾಯ Read More »

ಕರಾವಳಿ

ಮೆಲ್ಕಾರ್: ಬುಡ ಸಮೇತ ನೆಲಕ್ಕುರುಳಿದ ಬೃಹತ್ ಗಾತ್ರದ ಮರ ► ಓರ್ವ ಮೃತ್ಯು, ಇನ್ನೋರ್ವ ಗಂಭೀರ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ.20. ಹೆದ್ದಾರಿ ಬದಿಯಲ್ಲಿದ್ದ ಬೃಹತ್ ಮರವೊಂದು ಬುಡ ಸಮೇತ ಮಗುಚಿ ಬಿದ್ದ ಪರಿಣಾಮ ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಬುಧವಾರ ಸಂಜೆ ಮೆಲ್ಕಾರ್ ನಲ್ಲಿ ಸಂಭವಿಸಿದೆ. ಮೃತನನ್ನು ಮೆಲ್ಕಾರ್ ನಲ್ಲಿ ಸಿಮೆಂಟ್ ಆಕೃತಿ ಕೆಲಸ ನಿರ್ವಹಿಸುತ್ತಿದ್ದ ಉತ್ತರ ಪ್ರದೇಶದ ಮೂಲದ ಕಾರ್ಮಿಕ ರಾಮಸೇವಕ್(36) ಎಂದು ಗುರುತಿಸಲಾಗಿದೆ. ಜತೆಯಲ್ಲಿ ಕೆಲಸ ಮಾಡುತ್ತಿದ್ದ ಇನ್ನೋರ್ವ ಕಾರ್ಮಿಕ ದಿಲೀಪ್ ಗಂಭೀರ ಗಾಯಗೊಂಡಿದ್ದು, ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಬುಧವಾರ ಸಂಜೆ

ಮೆಲ್ಕಾರ್: ಬುಡ ಸಮೇತ ನೆಲಕ್ಕುರುಳಿದ ಬೃಹತ್ ಗಾತ್ರದ ಮರ ► ಓರ್ವ ಮೃತ್ಯು, ಇನ್ನೋರ್ವ ಗಂಭೀರ Read More »

ಕರಾವಳಿ

ನಾಳೆ ಕಡಬ, ನೆಲ್ಯಾಡಿ, ಸುಬ್ರಹ್ಮಣ್ಯ, ಸವಣೂರು ಭಾಗಗಳಲ್ಲಿ ವಿದ್ಯುತ್ ನಿಲುಗಡೆ

(ನ್ಯೂಸ್ ಕಡಬ) newskadaba.com ಕಡಬ, ಜೂ.20. ತುರ್ತು ಕಾಮಗಾರಿ ನಿಮಿತ್ತ ಜೂನ್ 21 ಗುರುವಾರದಂದು ಕಡಬ ಮೆಸ್ಕಾಂ ವಿಭಾಗದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರ ತನಕ ವಿದ್ಯುತ್ ನಿಲುಗಡೆಗೊಳಿಸಲಾಗುವುದು ಎಂದು ಕಡಬ ಮೆಸ್ಕಾಂ ಎಇಇ ಸಜಿ ಕುಮಾರ್ ತಿಳಿಸಿದ್ದಾರೆ. ಎಚ್‌ಟಿ ಹಾಗೂ ಎಲ್‌ಟಿ ವಿದ್ಯುತ್ ಲೈನ್ ದುರಸ್ತಿ ಹಾಗೂ ಲೈನ್‌ನಡಿಯಲ್ಲಿ ಮರ ಕಟ್ಟಿಂಗ್, ಮರದ ಗೆಲ್ಲು ಕಟ್ಟಿಂಗ್ ಸೇರಿದಂತೆ ತುರ್ತು ದುರಸ್ತಿ ಕಾರ್ಯಕ್ರಮ ಇರುವುದರಿಂದ ಕಡಬ ಮೆಸ್ಕಾಂ ವಿಭಾಗದ ಕಡಬ ನೆಲ್ಯಾಡಿ, ಸುಬ್ರಹ್ಮಣ್ಯ, ಸವಣೂರು

ನಾಳೆ ಕಡಬ, ನೆಲ್ಯಾಡಿ, ಸುಬ್ರಹ್ಮಣ್ಯ, ಸವಣೂರು ಭಾಗಗಳಲ್ಲಿ ವಿದ್ಯುತ್ ನಿಲುಗಡೆ Read More »

ಕರಾವಳಿ

ಶ್ರೀನಗರದ ವಾಸ್ತವ ಸಂಗತಿಗಳು ಮತ್ತು ಮಾಧ್ಯಮದ ವರದಿಗಳು ✍? ಝುಬೈರ್ ಹಳೆನೇರಂಕಿ (CRPF ಯೋಧ)

(ನ್ಯೂಸ್ ಕಡಬ) newskadaba.com ಜಮ್ಮು ಕಾಶ್ಮೀರ, ಜೂ.20. ಜಮ್ಮು ಕಾಶ್ಮೀರ ಭಾರತದ ಸ್ವರ್ಗ ಅಂತಾನೇ ಹೇಳಬಹುದು. ಆದರೆ ಇವತ್ತಿನ ದಿನಗಳಲ್ಲಿ ಕಾಶ್ಮೀರವು ಅತ್ಯಂತ ಚರ್ಚಿತವಾದ ಒಂದು ರಾಜ್ಯವಾಗಿದೆ. ಏಕೆಂದರೆ ಎಲ್ಲರ ಮನಸ್ಸಲ್ಲೂ ಇಲ್ಲಿನ ಸರ್ಕಾರ ಹಾಗೂ ಸೈನಿಕರು ಕಾಶ್ಮೀರದಲ್ಲಿನ ಅಮಾಯಕರನ್ನು ಕೊಲ್ಲುತ್ತಿದ್ದಾರೆ. ಆದರೆ ಇಲ್ಲಿ ನಡೆಯುತ್ತಿರುವ ವಾಸ್ತವ ಸತ್ಯನೇ ಬೇರೆ. ಇಲ್ಲಿ ಸ್ವಾತಂತ್ರ್ಯಾ ನಂತರ ಗಲಭೆಗಳು, ದಂಗೆಗಳು ನಡೆಯುತ್ತಿದ್ದು, ಇದು ಭಾರತ ಪಾಕಿಸ್ತಾನ ಗಡಿ ಪ್ರದೇಶ ಆಗಿರುವುದರಿಂದ ಇಲ್ಲಿ ಗಲಭೆಗಳು ನಡೆಯುವುದು ಸಾಮಾನ್ಯ. ಕಾಶ್ಮೀರದ ವಿಷಯವನ್ನು ಅರಿತಷ್ಟರ

ಶ್ರೀನಗರದ ವಾಸ್ತವ ಸಂಗತಿಗಳು ಮತ್ತು ಮಾಧ್ಯಮದ ವರದಿಗಳು ✍? ಝುಬೈರ್ ಹಳೆನೇರಂಕಿ (CRPF ಯೋಧ) Read More »

ಕರಾವಳಿ
Scroll to Top