News Kadaba Desk

ಕುಸಿತದ ಭೀತಿಯಲ್ಲಿ ಕೆಮ್ಮಾರ ಸೇತುವೆಯ ಪಾರ್ಶ್ವ ► ಸಂಭಾವ್ಯ ಅಪಾಯವನ್ನು ತಪ್ಪಿಸುವರೇ ಸಂಬಂಧಪಟ್ಟ ಅಧಿಕಾರಿಗಳು..!!

(ನ್ಯೂಸ್ ಕಡಬ) newskadaba.com ಕಡಬ, ಜೂ.17. ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೆಮ್ಮಾರ ಸೇತುವೆಯ ಒಂದು ಪಾರ್ಶ್ವದ ಕಲ್ಲುಗಳು ನೀರಿನ ಹೊಡೆತಕ್ಕೆ ಸಿಲುಕಿದ್ದು, ಕುಸಿತದ ಭೀತಿಯನ್ನು ಎದುರಿಸುತ್ತಿದೆ. ಹಲವು ಅಪಘಾತಗಳು ನಡೆದು ಕೆಲವು ಪ್ರಾಣಹಾನಿ ಸಂಭವಿಸಿದ್ದ ಈ ಸೇತುವೆಯ ಸಂಪರ್ಕಕ್ಕಾಗಿ ಹಾಕಲಾಗಿದ್ದ ಕಲ್ಲುಗಳು ನೀರಿನ ಸೆಳೆತಕ್ಕೆ ಸಿಲುಕಿ ಕುಸಿಯುವ ಸ್ಥಿತಿಯಲ್ಲಿದೆ. ಕರಾವಳಿ ಪ್ರದೇಶದಲ್ಲಿ ಮಳೆಯ ಪ್ರಮಾಣವು ಹೆಚ್ಚಿದಂತೆ ನದಿಯಲ್ಲಿ ನೀರಿನ ಹರಿವು ಕೂಡಾ ಹೆಚ್ಚಿದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಈ ಸೇತುವೆಯ ಫೋಟೊವನ್ನು ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ […]

ಕುಸಿತದ ಭೀತಿಯಲ್ಲಿ ಕೆಮ್ಮಾರ ಸೇತುವೆಯ ಪಾರ್ಶ್ವ ► ಸಂಭಾವ್ಯ ಅಪಾಯವನ್ನು ತಪ್ಪಿಸುವರೇ ಸಂಬಂಧಪಟ್ಟ ಅಧಿಕಾರಿಗಳು..!! Read More »

ಕರಾವಳಿ

ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸದ್ದಕ್ಕೆ ಬೇಸತ್ತ ಮಹಿಳೆ ► ತನ್ನ ಮೂವರು ಮಕ್ಕಳನ್ನು ಕೆರೆಗೆ ದೂಡಿ ತಾನೂ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.17. ಮಕ್ಕಳನ್ನು ಕಾನ್ವೆಂಟ್ ಶಾಲೆಗೆ ಸೇರಿಸಲು ಆರ್ಥಿಕ ಸಂಕಷ್ಟ ಇರುವುದರಿಂದ ಸರಕಾರಿ ಶಾಲೆಗೆ ಕಳುಹಿಸೋಣ ಎಂದುದಕ್ಕೆ ಮಹಿಳೆಯೋರ್ವರು ತನ್ನ ಮೂವರು ಮಕ್ಕಳನ್ನು ಕೆರೆಗೆ ದೂಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಮಾಲೂರು ಮಾಸ್ತಿ ಠಾಣಾ ವ್ಯಾಪ್ತಿಯ ನಕ್ಕನಹಳ್ಳಿ ನಿವಾಸಿ ಪಾರ್ವತಮ್ಮ(25), ತನ್ನ ಮಕ್ಕಳಾದ ಜೀವನ್(7), ಚಂದನ(5) ಹಾಗೂ ಅಕ್ಷಯ್(3)ರನ್ನು ಕೆರೆಗೆ ದೂಡಿಹಾಕಿ ಬಳಿಕ ತಾನೂ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಬೇಕೆನ್ನುವ ಹಠದಿಂದ ಮಂಜುನಾಥ್

ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸದ್ದಕ್ಕೆ ಬೇಸತ್ತ ಮಹಿಳೆ ► ತನ್ನ ಮೂವರು ಮಕ್ಕಳನ್ನು ಕೆರೆಗೆ ದೂಡಿ ತಾನೂ ಆತ್ಮಹತ್ಯೆ Read More »

ಕರ್ನಾಟಕ

ಸುಳ್ಯ: ನಕ್ಸಲ್ ನಿಗ್ರಹ ದಳದಿಂದ ಕೂಂಬಿಂಗ್ ► ಕಾರ್ಯಾಚರಣೆ ವೇಳೆ ಹೃದಯಾಘಾತದಿಂದ ಎಎನ್ಎಫ್ ಯೋಧ ಮೃತ್ಯು

ಸಾಂದರ್ಭಿಕ ಚಿತ್ರ (ನ್ಯೂಸ್ ಕಡಬ) newskadaba.com ಸುಳ್ಯ, ಜೂ.16. ತಾಲೂಕಿನ ಮಡಪ್ಪಾಡಿ ಗ್ರಾಮದಲ್ಲಿ ಮೂವರು ಶಂಕಿತ ನಕ್ಸಲರು ಪ್ರತ್ಯಕ್ಷರಾಗಿದ್ದ ಹಿನ್ನೆಲೆಯಲ್ಲಿ ಕೂಂಬಿಂಗ್ ಕಾರ್ಯಾಚರಣೆಗೆ ತೆರಳಿದ್ದ ನಕ್ಸಲ್ ನಿಗ್ರಹ ದಳದ ಯೋಧರೋರ್ವರು ಹೃದಯಾಘಾತದಿಂದಾಗಿ ಮೃತಪಟ್ಟ ಘಟನೆ ಶನಿವಾರದಂದು ನಡೆದಿದೆ. ಮೃತ ಯೋಧನನ್ನು ಕಾರ್ಕಳ ಮೂಲದ ರಂಗಸ್ವಾಮಿ (48) ಎಂದು ಗುರುತಿಸಲಾಗಿದೆ. ಇವರು ತನ್ನ ತಂಡದೊಂದಿಗೆ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಕೋಟೆ ಕಾಡು ಅರಣ್ಯ ಪ್ರದೇಶದಲ್ಲಿ ಎಂಬಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಹೃದಯಾಘಾತಕ್ಕೊಳಗಾಗಿದ್ದು, ತಕ್ಷಣವೇ ತಮ್ಮ ತಂಡದ ಸದಸ್ಯರು

ಸುಳ್ಯ: ನಕ್ಸಲ್ ನಿಗ್ರಹ ದಳದಿಂದ ಕೂಂಬಿಂಗ್ ► ಕಾರ್ಯಾಚರಣೆ ವೇಳೆ ಹೃದಯಾಘಾತದಿಂದ ಎಎನ್ಎಫ್ ಯೋಧ ಮೃತ್ಯು Read More »

ಕರಾವಳಿ

ಶವ ರಾಜಕೀಯ ಮಾಡುವ ಕರಾವಳಿಯಲ್ಲಿ ನೆಲೆ‌ನಿಂತ ಮಾನವೀಯತೆ ► ಸಂಬಂಧಿಕರಿದ್ದೂ ಅನಾಥವಾದ ಹಿಂದೂ ಮಹಿಳೆಯ ಅಂತ್ಯಸಂಸ್ಕಾರಗೈದ ಮುಸ್ಲಿಮರು

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ.16. ಶವವನ್ನಿಟ್ಟು ರಾಜಕೀಯ ಮಾಡುವಂತಹ ಕೋಮು ಸೂಕ್ಷ್ಮ ಪ್ರದೇಶವಾದ ಕರಾವಳಿಯಲ್ಲಿ ಅಂತ್ಯಸಂಸ್ಕಾರಕ್ಕೆ ಹಣವಿಲ್ಲದೆ ಪರದಾಡುತ್ತಿದ್ದ ಹಿಂದೂ ಮಹಿಳೆಯೋರ್ವರ ಮೃತದೇಹವನ್ನು ಮುಸ್ಲಿಂ ಬಾಂಧವರು ಹಣ ಸಂಗ್ರಹಿಸಿ ಅಂತ್ಯಸಂಸ್ಕಾರಗೈದ‌ ಅಪರೂಪದ ಘಟನೆ ಪುತ್ತೂರಿನಲ್ಲಿ ಶನಿವಾರದಂದು ನಡೆದಿದೆ. ಪುತ್ತೂರಿನ ಕಬಕ‌ ಗ್ರಾಮದ ವಿದ್ಯಾಪುರ ಕಾಲನಿ ನಿವಾಸಿ‌ ದಿ. ನಾರಾಯಣ ಸಿಂಗ್ ಎಂಬವರ ಪುತ್ರಿ ಭವಾನಿ (52 ವ.) ಶನಿವಾರದಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ತನ್ನ ಚಿಕ್ಕಪ್ಪನ ಮಗನ ಮನೆಯಲ್ಲಿ ವಾಸವಾಗಿದ್ದ ಭವಾನಿಯವರು ಮೃತಪಟ್ಟ ವಿಚಾರವನ್ನು ಅವರ

ಶವ ರಾಜಕೀಯ ಮಾಡುವ ಕರಾವಳಿಯಲ್ಲಿ ನೆಲೆ‌ನಿಂತ ಮಾನವೀಯತೆ ► ಸಂಬಂಧಿಕರಿದ್ದೂ ಅನಾಥವಾದ ಹಿಂದೂ ಮಹಿಳೆಯ ಅಂತ್ಯಸಂಸ್ಕಾರಗೈದ ಮುಸ್ಲಿಮರು Read More »

ಕರಾವಳಿ

ನಕ್ಸಲರು ಪ್ರತ್ಯಕ್ಷರಾಗಿದ್ದ ಹಿನ್ನೆಲೆ ► ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದಲ್ಲಿ ಕೂಂಬಿಂಗ್ ಆರಂಭ

ಸಾಂದರ್ಭಿಕ ಚಿತ್ರ (ನ್ಯೂಸ್ ಕಡಬ) newskadaba.com ಸುಳ್ಯ, ಜೂ.16. ತಾಲೂಕಿನ ಮಡಪ್ಪಾಡಿ ಗ್ರಾಮದಲ್ಲಿ ಮೂವರು ಶಂಕಿತ ನಕ್ಸಲರು ಪ್ರತ್ಯಕ್ಷರಾಗಿದ್ದ ಹಿನ್ನೆಲೆಯಲ್ಲಿ ಶನಿವಾರದಂದು ನಕ್ಸಲ್ ನಿಗ್ರಹ ದಳದಿಂದ ಕೂಂಬಿಂಗ್ ಆರಂಭಿಸಲಾಗಿದೆ. ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ನಿವಾಸಿ ಜಯರಾಮ್ ಎಂಬವರ ಮನೆಯ ರಬ್ಬರ್ ಟ್ಯಾಪಿಂಗ್ ಕೆಲಸಗಾರ ಕೇರಳ ಮೂಲದ ಥಾಮಸ್.ಎ.ಜೆ. ಎಂಬವರು ಗುರುವಾರ ರಾತ್ರಿ ಊಟಕ್ಕೆ ಕುಳಿತಿರುವಾಗ ಮೂವರು ಶಂಕಿತ ನಕ್ಸಲರು ಮನೆ ಒಳಗೆ ಬಂದು ಬಂದೂಕನ್ನು ತೋರಿಸಿ ತನಗೆಂದು ಮಾಡಿಟ್ಟಿದ್ದ ಅಡುಗೆಯನ್ನು ತೆಗೆದುಕೊಂಡು ಮನೆಯ ಹೊರಗೆ

ನಕ್ಸಲರು ಪ್ರತ್ಯಕ್ಷರಾಗಿದ್ದ ಹಿನ್ನೆಲೆ ► ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದಲ್ಲಿ ಕೂಂಬಿಂಗ್ ಆರಂಭ Read More »

ಕರಾವಳಿ

ಮಂಗಳೂರು: ಗೃಹರಕ್ಷಕ ದಳ ಸೇರ್ಪಡೆಗೆ ಆಸಕ್ತ ಪುರುಷರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.16. ಮಂಗಳೂರು, ಮುಲ್ಕಿ, ಪಣಂಬೂರು, ಮೂಡಬಿದಿರೆ, ಸುರತ್ಕಲ್ ಈ ಸ್ಥಳಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ಗೃಹರಕ್ಷಕರಾಗಿ ಕರ್ತವ್ಯ ನಿರ್ವಹಿಸಲು ಆಸಕ್ತಿಯುಳ್ಳ ಪುರುಷ ಅಭ್ಯರ್ಥಿಗಳಿಂದ ಮಾತ್ರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 20 ವರ್ಷ ಮೇಲ್ಪಟ್ಟು 50 ವರ್ಷಗಳ ಒಳಗಿನ ವಯಸ್ಸಿನವರಾಗಿರಬೇಕು. ಅರ್ಜಿಯನ್ನು ಜಿಲ್ಲಾ ಗೃಹರಕ್ಷಕ ದಳ ಕಛೇರಿ, ಮೇರಿಹಿಲ್, ಮಂಗಳೂರು ಇಲ್ಲಿ ಕಛೇರಿ ಸಮಯ ಬೆಳಿಗ್ಗೆ 10 ರಿಂದ ಸಂಜೆ 5.30ರ ಒಳಗೆ ಪಡೆದುಕೊಳ್ಳಬಹುದು. ಕಛೇರಿಯ ದೂರವಾಣಿ ಸಂಖ್ಯೆ : 0824-2220562. ಅರ್ಜಿ ಸ್ವೀಕರಿಸುವ ಕೊನೆಯ

ಮಂಗಳೂರು: ಗೃಹರಕ್ಷಕ ದಳ ಸೇರ್ಪಡೆಗೆ ಆಸಕ್ತ ಪುರುಷರಿಂದ ಅರ್ಜಿ ಆಹ್ವಾನ Read More »

ಕರಾವಳಿ

ಮಳೆಯ ಪ್ರಮಾಣ ತಗ್ಗಿದ ಹಿನ್ನೆಲೆ ► ಚಾರ್ಮಾಡಿ ಘಾಟ್ ನಲ್ಲಿ ಸಂಚಾರ ಪುನರಾರಂಭ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜೂ.16. ಚಾರ್ಮಾಡಿ ಘಾಟ್ ನಲ್ಲಿ ಭೂಕುಸಿತದಿಂದಾಗಿ ಸ್ಥಗೊತಗೊಂಡಿದ್ದ ವಾಹನ ಸಂಚಾರವು ಶುಕ್ರವಾರದಿಂದ ಸರಾಗವಾಗಿ ಆರಂಭಗೊಂಡಿದೆ. ಚಾರ್ಮಾಡಿ ಘಾಟಿಯಲ್ಲಿ ಉಂಟಾಗಿದ್ದ ಭೂ ಕುಸಿತದ ಮಣ್ಣು ಹಾಗೂ ಮರಗಳ ತೆರವು ಕಾರ್ಯವು ಗುರುವಾರ ಸಂಜೆಯ ವೇಳೆಗೆ ಮುಕ್ತಾಯಗೊಂಡಿದ್ದು, ಗುರುವಾರ ರಾತ್ರಿಯಿಂದಲೇ ಚಾರ್ಮಾಡಿ ಘಾಟಿಯಲ್ಲಿ ಕಾರು, ಜೀಪು ಸೇರಿದಂತೆ ಲಘು ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿತ್ತು. ಶುಕ್ರವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ ಸಕಲೇಶಪುರ ಉಪ ವಿಭಾಗದ ಎಂಜಿನಿಯರ್‌ಗಳು ಘಾಟಿಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿದ್ದು, ವಾಹನ ಸಂಚಾರಕ್ಕೆ

ಮಳೆಯ ಪ್ರಮಾಣ ತಗ್ಗಿದ ಹಿನ್ನೆಲೆ ► ಚಾರ್ಮಾಡಿ ಘಾಟ್ ನಲ್ಲಿ ಸಂಚಾರ ಪುನರಾರಂಭ Read More »

ಕರ್ನಾಟಕ

ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ► ಎರಡು ವಾರಗಳ ಕಾಲ ಇಲ್ಲೇ ಉಳಿದುಕೊಳ್ಳಲಿರುವ ಸಿದ್ದರಾಮಯ್ಯ

(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ಜೂ.16. ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಕೂಟದ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದು, ಎರಡು ವಾರಗಳ ಕಾಲ ಇಲ್ಲೇ ಉಳಿದುಕೊಳ್ಳಲಿದ್ದಾರೆ. ಬೆಂಗಳೂರಿನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಅಗಮಿಸುವ ಅವರು ಅಲ್ಲಿಂದ ರಸ್ತೆ ಮಾರ್ಗವಾಗಿ ಧರ್ಮಸ್ಥಳಕ್ಕೆ ಪ್ರಯಾಣಿಸಲಿದ್ದಾರೆ. ಧರ್ಮಸ್ಥಳದಲ್ಲಿರುವ ನ್ಯಾಚುರೋಪತಿ ಚಿಕಿತ್ಸಾ ಕೇಂದ್ರದಲ್ಲಿ ಮುಂದಿನ ಎರಡು ವಾರಗಳ ಕಾಲ ವಿರಾಮ ಹಾಗು ಚಿಕಿತ್ಸೆ ಪಡೆಯಲಿದ್ದಾರೆ. ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಒತ್ತಡ ನಿವಾರಣೆಗಾಗಿ

ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ► ಎರಡು ವಾರಗಳ ಕಾಲ ಇಲ್ಲೇ ಉಳಿದುಕೊಳ್ಳಲಿರುವ ಸಿದ್ದರಾಮಯ್ಯ Read More »

ಕರ್ನಾಟಕ

ಸುಳ್ಯದ ಗ್ರಾಮವೊಂದರಲ್ಲಿ ಪ್ರತ್ಯಕ್ಷರಾದ ಶಂಕಿತ‌ ನಕ್ಸಲರು ► ಆತಂಕದಲ್ಲಿ ಗ್ರಾಮಸ್ಥರು

(ನ್ಯೂಸ್ ಕಡಬ) newskadaba.com ಸುಳ್ಯ, ಜೂ.15. ಮೂವರು ಶಂಕಿತ ನಕ್ಸಲರು ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದಲ್ಲಿ ಶುಕ್ರವಾರದಂದು ಬೆಳಿಗ್ಗೆ ಪ್ರತ್ಯಕ್ಷರಾಗಿದ್ದು, ಸ್ಥಳೀಯರನ್ನು ಆತಂಕಕ್ಕೀಡುಮಾಡಿದೆ. ಇಂದು ಬೆಳಗ್ಗೆ ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ನಿವಾಸಿ ಜಯರಾಮ ಎಂಬವರ ತೋಟದ ಬಳಿ ಶಸ್ತ್ರಸಜ್ಜಿತ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ನಡೆದುಕೊಂಡು ಹೋಗಿದ್ದು, ಸ್ಥಳೀಯರು ಈ ಬಗ್ಗೆ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಸುಳ್ಯ ಠಾಣಾ ಪೋಲಿಸರು ತನಿಖೆಯನ್ನು ಮುಂದುವರಿಸಿದ್ದಾರೆ‌.

ಸುಳ್ಯದ ಗ್ರಾಮವೊಂದರಲ್ಲಿ ಪ್ರತ್ಯಕ್ಷರಾದ ಶಂಕಿತ‌ ನಕ್ಸಲರು ► ಆತಂಕದಲ್ಲಿ ಗ್ರಾಮಸ್ಥರು Read More »

ಕರಾವಳಿ

ಪ್ರವಾಸೋದ್ಯಮ ಇಲಾಖೆಯಿಂದ ಟ್ಯಾಕ್ಸಿ ವಿತರಣೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.15. ಪ್ರವಾಸೋದ್ಯಮ ಇಲಾಖೆಯಿಂದ 2018-19ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳ ಯೋಜನೆಯಡಿಯಲ್ಲಿ ಲಘುವಾಹನ ಚಾಲನಾ ಪರವಾನಗಿ ಹಾಗೂ ಚಾಲಕರ ಬ್ಯಾಡ್ಜ್ ಹೊಂದಿರುವ 20 ರಿಂದ 40 ವರ್ಷ ವಯೋಮಿತಿಯೊಳಗಿನ ನಿರುದ್ಯೋಗಿ ವಿದ್ಯಾವಂತ ಯುವಕ/ಯುವತಿಯರಿಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳುವ ಸಲುವಾಗಿ ಪ್ರವಾಸಿ ವಾಹನಗಳನ್ನು ಖರೀದಿಸಿ ವಿತರಿಸುವ ಸಲುವಾಗಿ ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪ್ರವಾಸಿ ಟ್ಯಾಕ್ಸಿಗಳಿಗೆ

ಪ್ರವಾಸೋದ್ಯಮ ಇಲಾಖೆಯಿಂದ ಟ್ಯಾಕ್ಸಿ ವಿತರಣೆಗೆ ಅರ್ಜಿ ಆಹ್ವಾನ Read More »

ಕರಾವಳಿ
Scroll to Top