News Kadaba Desk

ಮಂಗಳೂರು: 48 ಮೊಬೈಲ್ ಟವರ್ ಗಳ ಬ್ಯಾಟರಿ ಕಳ್ಳತನ ► ಬಿಳಿನೆಲೆ ನಿವಾಸಿ ಸೇರಿದಂತೆ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಜೂ.27. ಮೊಬೈಲ್ ಟವರ್ ಗಳಲ್ಲಿನ ಬ್ಯಾಟರಿ ಕಳವು ಪ್ರಕರಣವನ್ನು ಭೇದಿಸಿರುವ ಉರ್ವ ಠಾಣಾ ಪೊಲೀಸರು ಕಡಬದ ಬಿಳಿನೆಲೆ ನಿವಾಸಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇಂಡಸ್ ಕಂಪೆನಿಗೆ ಸೇರಿದ 48 ಮೊಬೈಲ್ ಟವರ್‌ನ ಬ್ಯಾಟರಿಗಳು ಕಳವಾಗಿರುವ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದ ಉರ್ವ ಠಾಣಾ ಪೊಲೀಸರು ಇಂಡಸ್ ಕಂಪೆನಿಯ ಬ್ಯಾಟರಿಗಳ ನಿರ್ವಹಣೆಯ ಗುತ್ತಿಗೆ ಪಡೆದಿದ್ದ ಸಂಸ್ಥೆಯೊಂದರ ಸಿಬ್ಬಂದಿಗಳಾದ ಕಡಬದ ಬಿಳಿನೆಲೆ ನಿವಾಸಿ ಆನಂದ್(28), ಕಡೂರಿನ ಸೋಮನಹಳ್ಳಿ […]

ಮಂಗಳೂರು: 48 ಮೊಬೈಲ್ ಟವರ್ ಗಳ ಬ್ಯಾಟರಿ ಕಳ್ಳತನ ► ಬಿಳಿನೆಲೆ ನಿವಾಸಿ ಸೇರಿದಂತೆ ಮೂವರ ಬಂಧನ Read More »

ಕರಾವಳಿ

ಬೆಳ್ಳಾರೆ: ಯುವತಿಯನ್ನು ಪುಸಲಾಯಿಸಿ ಮೂವರಿಂದ ಸರಣಿ ಅತ್ಯಾಚಾರ ► ಓರ್ವ ಆರೋಪಿ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜೂ.26. ಯುವತಿಯೋರ್ವಳನ್ನು ಬಲವಂತದಿಂದ ಕರೆದೊಯ್ದು ಮೂವರು ಸರಣಿ ಅತ್ಯಾಚಾರ ಎಸಗಿದ ಘಟನೆ ಸೋಮವಾರದಂದು ಠಾಣಾ ವ್ಯಾಪ್ತಿಯ ಚೊಕ್ಕಾಡಿಯಲ್ಲಿ ನಡೆದಿದೆ. ಹಾಲು ಉತ್ಪಾದಕರ ಸಂಘಕ್ಕೆ ಹಾಲು ಕೊಂಡೊಯ್ದು ಹಿಂದಿರುಗುತ್ತಿದ್ದ ಯುವತಿಯನ್ನು ಇಬ್ಬರು ಆಟೊ ರಿಕ್ಷಾ ಚಾಲಕರು ಸೇರಿದಂತೆ ಮೂವರು ಪುಸಲಾಯಿಸಿ ಬಲವಂತದಿಂದ ಕರೆದೊಯ್ದು ರಬ್ಬರ್ ತೋಟದಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ಮಂಗಳವಾರದಂದು ಬೆಳ್ಳಾರೆ ಠಾಣೆಗೆ‌ ಯುವತಿ ದೂರು ನೀಡಿದ್ದಾರೆ. ಯುವತಿಯ ದೂರಿನಂತೆ ಬೆಳ್ಳಾರೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ

ಬೆಳ್ಳಾರೆ: ಯುವತಿಯನ್ನು ಪುಸಲಾಯಿಸಿ ಮೂವರಿಂದ ಸರಣಿ ಅತ್ಯಾಚಾರ ► ಓರ್ವ ಆರೋಪಿ ವಶಕ್ಕೆ Read More »

ಕರಾವಳಿ

ಕಡಬ: ಎಡೆಬಿಡದ ಮಳೆಗೆ ಗುಡ್ಡ ಕುಸಿದು ಧರೆಗುರುಳಿದ ವಿದ್ಯುತ್ ಕಂಬ ► ಕೆಲವೇ ಕ್ಷಣಗಳ ಅಂತರದಲ್ಲಿ ಅಪಾಯದಿಂದ ಪಾರಾದ ವಿದ್ಯಾರ್ಥಿಗಳು

(ನ್ಯೂಸ್ ಕಡಬ) newskadaba.com ಕಡಬ, ಜೂ.26. ಎಡೆಬಿಡದೆ ಮಳೆ‌ ಸುರಿಯುತ್ತಿರುವುದರಿಂದಾಗಿ ವಿದ್ಯುತ್ ಕಂಬದ ಜೊತೆಗೆ ಗುಡ್ಡ ಕುಸಿದು ಬಿದ್ದ ಘಟನೆ ಕಡಬದ ಮುಖ್ಯ ಪೇಟೆಯಲ್ಲಿ ಮಂಗಳವಾರ ಸಂಜೆ‌ ನಡೆದಿದೆ. ಇಲ್ಲಿನ ಮೀನು ಮಾರುಕಟ್ಟೆಯ ಸಮೀಪದದಲ್ಲಿನ ಗುಡ್ಡೆ ಕುಸಿದಿದ್ದು, ತುದಿಯಲ್ಲಿದ್ದ ವಿದ್ಯುತ್ ಕಂಬ ಧರೆಗುರುಳಿದೆ. ಇದರಿಂದಾಗಿ ಮೀನು ಮಾರುಕಟ್ಟೆಯ ಶೆಡ್ ಗೆ ಹಾನಿಯಾಗಿದೆ. ಎಲ್ಲಾ ದಿನಗಳಲ್ಲಿ ಈ ಸ್ಥಳದಲ್ಲಿ ವಾಹನಗಳನ್ನು ನಿಲುಗಡೆಗೊಳಿಸಲಾಗುತ್ತಿತ್ತಾದರೂ ಇಂದು ಯಾವುದೇ ವಾಹನಗಳಿರಲಿಲ್ಲ. ಅಲ್ಲದೆ ಘಟನೆ ನಡೆಯುವುದಕ್ಕಿಂತ ಕೆಲವೇ ಕ್ಷಣಗಳ ಮೊದಲು ಶಾಲಾ ವಿದ್ಯಾರ್ಥಿಗಳು ಇದೇ

ಕಡಬ: ಎಡೆಬಿಡದ ಮಳೆಗೆ ಗುಡ್ಡ ಕುಸಿದು ಧರೆಗುರುಳಿದ ವಿದ್ಯುತ್ ಕಂಬ ► ಕೆಲವೇ ಕ್ಷಣಗಳ ಅಂತರದಲ್ಲಿ ಅಪಾಯದಿಂದ ಪಾರಾದ ವಿದ್ಯಾರ್ಥಿಗಳು Read More »

ಕರಾವಳಿ

ಕೋಡಿಂಬಾಳದ ಅರ್ಪಾಜೆ ಕೆರೆ ಒತ್ತುವರಿ ಆರೋಪ ► ಕೆರೆ ಅಭಿವೃದ್ಧಿಗೆ ಮುಂದಾದ ಸ್ಥಳೀಯರಿಗೆ ಕಾನೂನಿನ ತೊಡಕು

(ನ್ಯೂಸ್ ಕಡಬ) newskadaba.com ಕಡಬ, ಜೂ.26. ಇಲ್ಲಿನ ಕೋಡಿಂಬಾಳ ಗ್ರಾಮದ ಅರ್ಪಾಜೆಯಲ್ಲಿ  ಸರ್ವೆ ನಂ.33/3 ರಲ್ಲಿ 0.62 ಎಕರೆ ವಿಸ್ತೀರ್ಣದಲ್ಲಿರುವ ಸರಕಾರಿ ಕೆರೆಯನ್ನು ಒತ್ತುವರಿ ಮಾಡಿ ಕೆರೆಯ ಜಮೀನಿನಲ್ಲಿ ಖಾಸಗಿ ವ್ಯಕ್ತಿಗಳು ರಸ್ತೆ ನಿರ್ಮಿಸಿರುವುದರ ವಿರುದ್ಧ ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಹಲವು ತಿಂಗಳು ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ. ತಿಂಗಳ ಹಿಂದೆ ದೂರಿಗೆ ಸ್ಪಂದಿಸಿದ ಪುತ್ತೂರು ತಹಶೀಲ್ದಾರ್ ಅನಂತ ಶಂಕರ ಅವರು ಕೆರೆಯನ್ನು ಅಳೆದು ಗಡಿ ಗುರುತು ಮಾಡಿ ಅತಿಕ್ರಮಣ ನಡೆದಿದ್ದರೆ ಕೂಡಲೇ ತೆರವುಗೊಳಿಸುವಂತೆ ಕಡಬ ಕಂದಾಯ

ಕೋಡಿಂಬಾಳದ ಅರ್ಪಾಜೆ ಕೆರೆ ಒತ್ತುವರಿ ಆರೋಪ ► ಕೆರೆ ಅಭಿವೃದ್ಧಿಗೆ ಮುಂದಾದ ಸ್ಥಳೀಯರಿಗೆ ಕಾನೂನಿನ ತೊಡಕು Read More »

ಕರಾವಳಿ

ಬಂಟ್ವಾಳ: ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಯುವತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ.26. ಯುವತಿಯೋರ್ವಳು ತನ್ನ ಮೈಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ‌ಘಟನೆ ಬಂಟ್ವಾಳದ ದಡ್ಡಲಕಾಡು ಎಂಬಲ್ಲಿ ಸೋಮವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಬಂಟ್ವಾಳ ತಾಲೂಕಿನ ದಡ್ಡಲಕಾಡು ನಿವಾಸಿ ಪವಿತ್ರಾ‌(20) ಎಂದು ಗುರುತಿಸಲಾಗಿದೆ. ತಂದೆ ತಾಯಿ ಇಲ್ಲದೆ ಅನಾಥೆಯಾಗಿದ್ದ ಪವಿತ್ರಾ ತನ್ನ ಅಜ್ಜಿಯ ಜೊತೆಗೆ ವಾಸ ಮಾಡಿಕೊಂಡಿದ್ದು ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರೆನ್ನಲಾಗಿದೆ. ಸೋಮವಾರದಂದು ಅಡುಗೆ ಕೋಣೆಯಲ್ಲಿ ಮೈಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಂಟ್ವಾಳ: ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಯುವತಿ ಆತ್ಮಹತ್ಯೆ Read More »

ಕರಾವಳಿ

ಬಂಟ್ವಾಳ: ಮಹಾಮಳೆಗೆ ಮುರಿದು ನದಿಗೆ ಬಿದ್ದ ಮುಳ್ಳರಪಟ್ಣ ಸೇತುವೆ ► ವಾಹನ ಸಂಚಾರವಿಲ್ಲದ ಕಾರಣ ತಪ್ಪಿದ ಭಾರೀ ಅನಾಹುತ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ.25. ನದಿಗೆ ಅಡ್ಡಲಾಗಿ ಕಟ್ಟಿಲಾಗಿದ್ದ ಸೇತುವೆಯೊಂದು ಕುಸಿದು ನದಿಗೆ ಬಿದ್ದ ಘಟನೆ ಬಂಟ್ವಾಳ ತಾಲೂಕಿನ ಮುಲ್ಲರಪಟ್ಣದಲ್ಲಿ ಸೋಮವಾರ ಸಂಜೆ‌ ನಡೆದಿದೆ. ಕುಪ್ಪೆಪದವು – ಬಿ.ಸಿ‌. ರೋಡ್ ರಾಜ್ಯ ಹೆದ್ದಾರಿಯ ಮುಲ್ಲರಪಟ್ಣ ಎಂಬಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆಯು ಸೋಮವಾರ ಸಂಜೆ ಇದ್ದಕ್ಕಿದ್ದಂತೆ ತುಂಬಿ ಹರಿಯುತ್ತಿರುವ ಫಲ್ಗುಣಿ ನದಿಗೆ ಬಿದ್ದಿದೆ. ಈ ಸಂದರ್ಭದಲ್ಲಿ ಸೇತುವೆಯ ಮೇಲೆ ಯಾವುದೇ ವಾಹನ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಸೇತುವೆಯ ಅಡಿಭಾಗದಲ್ಲಿ ಮರಳುಗಾರಿಕೆ ನಡೆಸಿರುವ

ಬಂಟ್ವಾಳ: ಮಹಾಮಳೆಗೆ ಮುರಿದು ನದಿಗೆ ಬಿದ್ದ ಮುಳ್ಳರಪಟ್ಣ ಸೇತುವೆ ► ವಾಹನ ಸಂಚಾರವಿಲ್ಲದ ಕಾರಣ ತಪ್ಪಿದ ಭಾರೀ ಅನಾಹುತ Read More »

ಕರಾವಳಿ

ಚಕ್ರವಿಲ್ಲದೆ ಸ್ಥಗಿತಗೊಂಡ ಕಡಬದ ಜೀವರಕ್ಷಕ ► ತುರ್ತು ಸಂದರ್ಭದಲ್ಲಿ ಉಪಯೋಗಕ್ಕೆ ಬಾರದ 108 ಆಂಬ್ಯುಲೆನ್ಸ್

(ನ್ಯೂಸ್ ಕಡಬ) newskadaba.com ಕಡಬ, ಜೂ.25. ಅಪಘಾತ ಮತ್ತು ತುರ್ತು ಆರೋಗ್ಯ ಸಮಸ್ಯೆ ಸಂಭವಿಸಿದಾಗ ಆಸ್ಪತ್ರೆಗೆ ಕೊಂಡೊಯ್ಯಲು ವಾಹನ ಸಮಸ್ಯೆ ಬರಬಾರದು. ಇದರಿಂದ ಜನರು ಪ್ರಾಣ ಕಳೆದುಕೊಳ್ಳಬಾರದು ಎಂಬ ಸದುದ್ದೇಶದಿಂದ ಸರಕಾರ 108 ವಾಹನವನ್ನು ಪ್ರಾರಂಭಿಸಿತ್ತು. ಜನರು ಇದರ ಪ್ರಯೋಜನವನ್ನು ಪಡೆದುಕೊಂಡರು, ಆದರೆ ಕಡಬದ ಆಂಬ್ಯುಲೆನ್ಸ್ ಮಾತ್ರ ಒಂದಲ್ಲ ಒಂದು ಸಮಸ್ಯೆಯಿಂದ ಜನರಿಗೆ ತೊಂದರೆಯನ್ನುಂಟು ಮಾಡುತ್ತಿದೆ. ಇದೀಗ ಕಳೆದೊಂದು ವಾರದಿಂದ ಕಡಬದ ಆ್ಯಂಬುಲೆನ್ಸ್ ನಾಪತ್ತೆಯಾಗಿದೆ, ಈ ಬಗ್ಗೆ 108 ವಾಹನದ ಮೇಲಾಧಿಕಾರಿಗಳನ್ನು ಸಂಪರ್ಕಿಸಿದರೆ ಟಯರ್ ಸಮಸ್ಯೆಯಿಂದ 108

ಚಕ್ರವಿಲ್ಲದೆ ಸ್ಥಗಿತಗೊಂಡ ಕಡಬದ ಜೀವರಕ್ಷಕ ► ತುರ್ತು ಸಂದರ್ಭದಲ್ಲಿ ಉಪಯೋಗಕ್ಕೆ ಬಾರದ 108 ಆಂಬ್ಯುಲೆನ್ಸ್ Read More »

ಕರಾವಳಿ

ನೂಜಿಬಾಳ್ತಿಲ ಬೆಥನಿ ಪ.ಪೂ.ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆ ► ವಿದ್ಯಾರ್ಥಿ ನಾಯಕಿಯಾಗಿ ಇಂದಿಕಾ ಕೆ. ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜೂ.24. ನೂಜಿಬಾಳ್ತಿಲ ಬೆಥನಿ ಪದವಿ ಪೂರ್ವ ಕಾಲೇಜಿನ 2018-19ನೇ ಸಾಲಿನ ಕಾಲೇಜು ವಿದ್ಯಾರ್ಥಿ ನಾಯಕಿಯಾಗಿ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿನಿ ಇಂದಿಕಾ ಕೆ. ಚುನಾಯಿತರಾಗಿದ್ದಾರೆ. ಶನಿವಾರದಂದು ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ ಇಂದಿಕಾ ಕೆ., ಅತ್ಯಧಿಕ ಮತ ಪಡೆದು ನಾಯಕಿಯಾಗಿ ಆಯ್ಕೆಗೊಂಡರು. ಇವರು ಕಡಬದ ಪರ್ತಕರ್ತ ಖಾದರ್ ಸಾಹೇಬ್ ಹಾಗೂ ಕಲ್ಲುಗುಡ್ಡೆ  ಅಂಗನವಾಡಿ ಕಾರ್ಯಕರ್ತೆ ಅಮೀನ ಕೆ. ದಂಪತಿಯ ಪುತ್ರಿಯಾಗಿದ್ದಾರೆ.

ನೂಜಿಬಾಳ್ತಿಲ ಬೆಥನಿ ಪ.ಪೂ.ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆ ► ವಿದ್ಯಾರ್ಥಿ ನಾಯಕಿಯಾಗಿ ಇಂದಿಕಾ ಕೆ. ಆಯ್ಕೆ Read More »

ಕರಾವಳಿ

ಪೆರ್ನೆ: ಖಾಸಗಿ ಬಸ್ – ಕಾರು ಮುಖಾಮುಖಿ ಢಿಕ್ಕಿ ► ಹಲವರಿಗೆ ಗಾಯ

 ಕಾರು ಮತ್ತು ಖಾಸಗಿ ಬಸ್ ನಡುವೆ ಢಿಕ್ಕಿ ಸಂಭವಿಸಿದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರ್ನೆಯಲ್ಲಿ ಭಾನುವಾರ ಸಂಜೆ ನಡೆದಿದೆ. ಉಪ್ಪಿನಂಗಡಿಯಿಂದ ಮಂಗಳೂರಿಗೆ ತೆರಳುತ್ತಿದ್ದ ರಾಜಶ್ರೀ ಹೆಸರಿನ ಖಾಸಗಿ ಬಸ್ ಹಾಗೂ ವಿರುದ್ಧ ದಿಕ್ಕಿನಿಂದ ಆಗಮಸುತ್ತಿದ್ದ ಸ್ವಿಫ್ಟ್ ಕಾರು ನಡುವೆ ಪೆರ್ನೆಯ ದೋರ್ಮೆ ಮಸೀದಿ ಬಳಿ ಮುಖಾಮುಖಿ ಢಿಕ್ಕಿಯಾಗಿದೆ. ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ಹೆಚ್ಚಿನ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.

ಪೆರ್ನೆ: ಖಾಸಗಿ ಬಸ್ – ಕಾರು ಮುಖಾಮುಖಿ ಢಿಕ್ಕಿ ► ಹಲವರಿಗೆ ಗಾಯ Read More »

ಕರಾವಳಿ

ಕೆಎಸ್ಸಾರ್ಟಿಸಿ ಬಸ್ಸನ್ನು ಅಟ್ಟಾಡಿಸಿಕೊಂಡು ಬಂದು ಢಿಕ್ಕಿ ಹೊಡೆದ ಕಾಡಾನೆ ► ಬಿಳಿನೆಲೆಯಲ್ಲಿ ಕಾರಿನ ಮೇಲೆ ಕಾಡಾನೆ ದಾಳಿಯಂತಹುದೇ ಇನ್ನೊಂದು ಘಟನೆ

(ನ್ಯೂಸ್ ಕಡಬ) newskadaba.com ಮೈಸೂರು, ಜೂ.24. ಮರಿಯಾ‌ನೆಯನ್ನು ರಕ್ಷಿಸುವ ಸಲುವಾಗಿ ತಾಯಿ ಆನೆಯೊಂದು ಬಸ್ಸೊಂದನ್ನು ಅಟ್ಟಾಡಿಸಿಕೊಂಡು ಹೋದ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಬಳಿ ಭಾನುವಾರದಂದು ನಡೆದಿದೆ. ಚಿಕ್ಕಮಗಳೂರಿನಿಂದ ಗುಂಡ್ಲುಪೇಟೆ ಮಾರ್ಗವಾಗಿ ಕಲ್ಲಿಕೋಟೆಗೆ ಪ್ರಯಾಣಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯ ಪ್ರದೇಶಕ್ಕೆ ತಲುಪಿದಾಗ ಮರಿಯಾನೆಯೊಂದಿಗೆ ತಾಯಿ ಆನೆಯು ರಸ್ತೆಯಲ್ಲಿ ಹಾದು ಹೋಗುತ್ತಿತ್ತೆನ್ನಲಾಗಿದ್ದು, ಈ ವೇಳೆ ಮರಿಯಾನೆಯ ರಕ್ಷಣೆಗೋಸ್ಕರ ಬಸ್ಸನ್ನೇ ಅಟ್ಟಾಡಿಸಿಕೊಂಡು ಬಂದು ಢಿಕ್ಕಿ ಹೊಡೆದಿದೆ. ಇದರಿಂದ ಆತಂಕಗೊಂಡ ಪ್ರಯಾಣಿಕರು ಬೊಬ್ಬೆ ಹೊಡೆದಾಗ ಆನೆಯು ಹಿಂತಿರುಗಿ

ಕೆಎಸ್ಸಾರ್ಟಿಸಿ ಬಸ್ಸನ್ನು ಅಟ್ಟಾಡಿಸಿಕೊಂಡು ಬಂದು ಢಿಕ್ಕಿ ಹೊಡೆದ ಕಾಡಾನೆ ► ಬಿಳಿನೆಲೆಯಲ್ಲಿ ಕಾರಿನ ಮೇಲೆ ಕಾಡಾನೆ ದಾಳಿಯಂತಹುದೇ ಇನ್ನೊಂದು ಘಟನೆ Read More »

ಕರ್ನಾಟಕ
Scroll to Top