News Kadaba Desk

ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರ ಕಾರು ಚಾಲಕ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಜು.01. ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರ ಕಾರು ಚಾಲಕ, ಪೆರಾಬೆ ಗ್ರಾಮದ ಅಗತ್ತಾಡಿ ನಿವಾಸಿ ಚಿದಾನಂದ ಪೂಜಾರಿ (45) ಹೃದಯಾಘಾತದಿಂದ ಆದಿತ್ಯವಾರ ಸಂಜೆ ನಿಧನರಾದರು. ಮೃತರು ಸಂಜೆ ಮನೆಯಲ್ಲಿ ಕುಳಿತುಕೊಂಡು ಮನೆಯವರೊಂದಿಗೆ ಮಾತನಾಡುತ್ತಿರುವಾಗಲೇ ಕುಸಿದು ಬಿದ್ದರು. ತಕ್ಷಣ ಆಲಂಕಾರಿನ 108 ರಲ್ಲಿ ಆಸ್ಪತ್ರೆಗೆ ಸಾಗಿಸಿದರೂ ಆಲಂಕಾರಿಗೆ ತಲುಪುವಾಗ ಕೊನೆಯುಸಿರೆಳೆದರು. ಇವರು ಕಳೆದ ಹತ್ತು ವರ್ಷಗಳಿಂದ ಶಕುಂತಳಾ ಟಿ.ಶೆಟ್ಟಿಯವರ ಕಾರು ಚಾಲಕರಾಗಿ ದುಡಿಯುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಹಾಗೂ ಒರ್ವ […]

ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರ ಕಾರು ಚಾಲಕ ನಿಧನ Read More »

ಕರ್ನಾಟಕ

ಇನ್ಮುಂದೆ ಕುಕ್ಕೇ ಸುಬ್ರಹ್ಮಣ್ಯದಲ್ಲಿ ಸಂಜೆ ವೇಳೆಯೂ ಆಶ್ಲೇಷಾ ಬಲಿ ಸೇವೆ ► ನೂತನ ಸೇವೆಯಿಂದ ಭಕ್ತಾದಿಗಳಿಗೆ ಹೆಚ್ಚಿನ ಅನುಕೂಲ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜು.01. ಇನ್ಮುಂದೆ ಭಕ್ತರ ಅನುಕೂಲಕ್ಕಾಗಿ ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಜೆಯೂ ಆಶ್ಲೇಷಾ ಬಲಿ ಸೇವೆಯನ್ನು ನಡೆಸಲಾಗುವುದು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರ ಪ್ರಮಾಣ ಅಧಿಕವಾದ ಕಾರಣ ಭಕ್ತರ ಅನುಕೂಲಕ್ಕಾಗಿ ಜುಲೈ 05 ರಿಂದ ಸಂಜೆಯೂ ಆಶ್ಲೇಷಾ ಬಲಿ ಸೇವೆಗೆ ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಅಷ್ಟ ಮಂಗಲ ಚಿಂತನೆಯನ್ನು ಇಡಲಾಗಿದ್ದು, ಪ್ರಶ್ನೆಯಲ್ಲಿ ಕಂಡುಬಂದಂತಹ ಕೆಲವು ಪ್ರಾಯಶ್ಚಿತ್ತಾದಿಗಳನ್ನು ನೆರವೇರಿಸಲಾಗಿದೆ. ಬೆಳಗ್ಗೆ

ಇನ್ಮುಂದೆ ಕುಕ್ಕೇ ಸುಬ್ರಹ್ಮಣ್ಯದಲ್ಲಿ ಸಂಜೆ ವೇಳೆಯೂ ಆಶ್ಲೇಷಾ ಬಲಿ ಸೇವೆ ► ನೂತನ ಸೇವೆಯಿಂದ ಭಕ್ತಾದಿಗಳಿಗೆ ಹೆಚ್ಚಿನ ಅನುಕೂಲ Read More »

ಕರಾವಳಿ

ಜುಲೈ 06: ದುಬೈನ ಶೇಖ್ ರಾಶಿದ್ ಅಡಿಟೋರಿಯಂನಲ್ಲಿ ರಾರಾಜಿಸಲಿದೆ ದಾಸ್ ಕುಡ್ಲ ತಂಡ ► 40 ಕ್ಕೂ ಹೆಚ್ಚು ಗಾಯಕರಿಂದ ‘ಸುರ್ ಸಂಗಮ್’ ಸಂಗೀತ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಜೂ.30. ಕರ್ನಾಟಕದಲ್ಲಿ ಸತತ 29 ವರ್ಷಗಳಿಂದ ಸಾವಿರಾರು ಗಾಯಕರಿಂದ ಸಂಗೀತ ಪ್ರೇಮಿಗಳಿಗೆ ರಸದೌತಣ ನೀಡಿದ ದಾಸ್ ಕುಡ್ಲಾಸ್ ತಂಡವು ಇದೀಗ ತಮ್ಮ 30ನೇ ವರ್ಷದ ಸಂಭ್ರಮವನ್ನು ದುಬೈನ ಊದ್ ಮೆಹ್ತಾದಲ್ಲಿರುವ ಇಂಡಿಯನ್ ಹೈಸ್ಕೂಲಿನ ಶೇಕ್ ರಾಶಿದ್ ಅಡಿಟೋರಿಯಂನಲ್ಲಿ ‘ಸುರ್ ಸಂಗಮ್’ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿ ಬಹಳಷ್ಟು ಅದ್ಧೂರಿಯಾಗಿ ಆಚರಿಸಲಿದೆ. ಸೌಹಾರ್ದ ಲಹರಿ ಹಾಗೂ ಪ್ರೀಷಿಯಸ್ ಪಾರ್ಟೀಸ್ ಆಂಡ್ ಎಂಟರ್ಟೈನ್’ಮೆಂಟ್ ಸಹಭಾಗಿತ್ವದಲ್ಲಿ ಜುಲೈ 6 ರಂದು ಸಂಜೆ 6 ಗಂಟೆಯಿಂದ ಸತತ 4 ಗಂಟೆಗಳ

ಜುಲೈ 06: ದುಬೈನ ಶೇಖ್ ರಾಶಿದ್ ಅಡಿಟೋರಿಯಂನಲ್ಲಿ ರಾರಾಜಿಸಲಿದೆ ದಾಸ್ ಕುಡ್ಲ ತಂಡ ► 40 ಕ್ಕೂ ಹೆಚ್ಚು ಗಾಯಕರಿಂದ ‘ಸುರ್ ಸಂಗಮ್’ ಸಂಗೀತ ಕಾರ್ಯಕ್ರಮ Read More »

ಅಂತರ್ರಾಷ್ಟ್ರೀಯ ನ್ಯೂಸ್

ಮೂಡಬಿದಿರೆ: ಅನಾಮಧೇಯ ಕರೆಯಿಂದ ವಂಚನೆಗೊಳಗಾದ ಮಹಿಳೆ ► ಬ್ಯಾಂಕ್ ಮ್ಯಾನೇಜರ್ ಎಂದು‌ ನಂಬಿಸಿ ಎಟಿಎಂ ಪಿನ್ ಪಡೆದು ವಂಚನೆ

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಜೂ.30. ಬ್ಯಾಂಕ್ ಮೆನೇಜರ್ ಹೆಸರಿನಲ್ಲಿ ಮಹಿಳೆಗೆ ಕರೆ ಮಾಡಿ ಎಟಿಎಂ ಕಾರ್ಡ್‌ನ ಪಿನ್ ಪಡೆದು ಮಹಿಳೆಯ ಖಾತೆಯಿಂದ 6 ಸಾವಿರ ರೂ. ಹಣವನ್ನು ತೆಗೆದು ವಂಚಿಸಿದ ಘಟನೆ ಮೂಡಬಿದಿರೆಯಲ್ಲಿ ಶುಕ್ರವಾರದಂದು ನಡೆದಿದೆ. ಶುಕ್ರವಾರ ಮಧ್ಯಾಹ್ನದ ವೇಳೆಗೆ ಮೂಡಬಿದಿರೆಯ ಪಡುಮಾರ್ನಾಡಿನ ಮುರಗೋಳಿ ನಿವಾಸಿ ಮಹಿಳೆಗೆ ವ್ಯಕ್ತಿಯೋರ್ವ ಕರೆ ಮಾಡಿ ತನ್ನನ್ನು ಬೆಂಗಳೂರಿನ ಕಾರ್ಪೊರೇಶನ್ ಬ್ಯಾಂಕ್ ಮೆನೇಜರ್ ಎಂದು ಪರಿಚಯಿಸಿಕೊಂಡು ‘ನಿಮ್ಮ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ. ಕಾರ್ಡ್‌ನ ಹಿಂಬದಿಯಲ್ಲಿರುವ ಸಂಖ್ಯೆಗಳನ್ನು ಕೊಡಿ, ಸರಿಪಡಿಸುವುದಾಗಿ’

ಮೂಡಬಿದಿರೆ: ಅನಾಮಧೇಯ ಕರೆಯಿಂದ ವಂಚನೆಗೊಳಗಾದ ಮಹಿಳೆ ► ಬ್ಯಾಂಕ್ ಮ್ಯಾನೇಜರ್ ಎಂದು‌ ನಂಬಿಸಿ ಎಟಿಎಂ ಪಿನ್ ಪಡೆದು ವಂಚನೆ Read More »

ಕರಾವಳಿ

ಮತ್ತೆ ಮುಳುಗಿದ ಹೊಸ್ಮಠ ಸೇತುವೆ ► ಉಪ್ಪಿನಂಗಡಿ – ಕಡಬ ಸಂಚಾರ ಅಸ್ತವ್ಯಸ್ತ

(ನ್ಯೂಸ್ ಕಡಬ) newskadaba.com ಕಡಬ, ಜೂ.28. ಘಟ್ಟದ ತಪ್ಪಲಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಡಬ ಸಮೀಪದ ಹೊಸಮಠ ಮುಳುಗು ಸೇತುವೆಯು ಗುರುವಾರ ಮಧ್ಯಾಹ್ನದ ಬಳಿಕ ಮತ್ತೆ ಮುಳುಗಡೆಯಾಗಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಕಳೆದ ಕೆಲವು ದಿನಗಳಿಂದ ಕಡಬ ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವುದರ ಪರಿಣಾಮ ನದಿ, ಹಳ್ಳ, ಹೊಳೆಗಳು ತುಂಬಿ ಹರಿಯತೊಡಗಿವೆ. ಗುರುವಾರ ಬೆಳಿಗ್ಗೆಯಿಂದಲೇ ಕಡಬ ಸಮೀಪದ ಹೊಸ್ಮಠದಲ್ಲಿ ಗುಂಡ್ಯ ಹೊಳೆಗೆ ನಿರ್ಮಾಣವಾಗಿದ್ದ ಮುಳುಗು ಸೇತುವೆಯ ಅಂಚಿಗೆ ನೀರು ಹೊಡೆಯುತ್ತಿತ್ತಾದರೂ ಮಧ್ಯಾಹ್ನ ವೇಳೆಗೆ ಮುಳುಗಡೆಯಾಗಿದೆ. ಘಾಟ್ ತಪ್ಪಲಿನಲ್ಲಿ ಮಳೆಯ ಅಬ್ಬರ

ಮತ್ತೆ ಮುಳುಗಿದ ಹೊಸ್ಮಠ ಸೇತುವೆ ► ಉಪ್ಪಿನಂಗಡಿ – ಕಡಬ ಸಂಚಾರ ಅಸ್ತವ್ಯಸ್ತ Read More »

ಕರಾವಳಿ

ಮರ್ಧಾಳ ಸೈಂಟ್ ಮೇರಿಸ್ ಪ್ರೌಢಶಾಲಾ ಆಡಳಿತ ಸಮಿತಿ ಮಾಜಿ ಸದಸ್ಯ ಸಿ.ಜೆ.ಫಿಲಿಪ್ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಜೂ.28. ಮರ್ದಾಳ ಸೈಂಟ್ ಮೇರಿಸ್ ಪ್ರೌಢಶಾಲೆಯ ಆಡಳಿತ ಮಂಡಳಿಯ ಮಾಜಿ ಸದಸ್ಯ, ಐತ್ತೂರು ಗ್ರಾಮದ ಕರಿಮಾಂಗೆಲ್  ಬೆತ್ತೋಡಿ ನಿವಾಸಿ ಸಿ.ಜೆ.ಫಿಲಿಪ್ (85)ರವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರದಂದು ಸ್ವಗೃಹದಲ್ಲಿ ನಿಧನರಾದರು. ಪ್ರಗತಿಪರ ಕೃಷಿಕರಾಗಿದ್ದ ಫಿಲಿಪ್‌ ರವರು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದರು. ಮೃತರು ಪತ್ನಿ ಸೊಸಮ್ಮ, ಪುತ್ರರಾದ ಜೋನ್ ಸಿ.ಪಿ, ಕೋಶಿ ಸಿ.ಪಿ., ಮರ್ದಾಳ ಸೈಂಟ್ ಮೇರಿಸ್ ಪ್ರೌಢಶಾಲೆಯ ಮುಖ್ಯಗುರು ಈಶೋ ಫಿಲಿಪ್, ಪುತ್ರಿಯರಾದ ಆಲೀಸ್ ಸಾಬು, ಶೈಲ ಫಿಲಿಪ್‌ ರನ್ನು

ಮರ್ಧಾಳ ಸೈಂಟ್ ಮೇರಿಸ್ ಪ್ರೌಢಶಾಲಾ ಆಡಳಿತ ಸಮಿತಿ ಮಾಜಿ ಸದಸ್ಯ ಸಿ.ಜೆ.ಫಿಲಿಪ್ ನಿಧನ Read More »

ಕರಾವಳಿ

ಪುತ್ತೂರು: ಬೈಕ್ ಮಗುಚಿ ಬಿದ್ದು ನವ ವಿವಾಹಿತೆ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ.27. ಬೈಕ್ ಪಲ್ಟಿಯಾಗಿ ಗಂಭೀರ ಗಾಯಗೊಂಡಿದ್ದ ನವ ವಿವಾಹಿತೆಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬುಧವಾರದಂದು ಪುತ್ತೂರಿನಲ್ಲಿ ನಡೆದಿದೆ. ಮೃತರನ್ನು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ನಿವಾಸಿ ಕಾಂತಪ್ಪ ಗೌಡರ ಪುತ್ರಿ, ಸುಳ್ಯ ತಾಲ್ಲೂಕಿನ ಬೆಳ್ಳಾರೆ ಕೊಡಿಬೈಲು ನಿವಾಸಿ ಗಿರೀಶ್ ಎಂಬವರ ಪತ್ನಿ ಸುನಂದ ಎಂದು ಗುರುತಿಸಲಾಗಿದೆ. ಪುತ್ತೂರಿನಲ್ಲಿ ಉದ್ಯೋಗದಲ್ಲಿದ್ದ ಸುನಂದ ಶನಿವಾರದಂದು ತನ್ನ ಸಹೋದರನೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದಾಗ ನಾಯಿಯೊಂದು ಅಡ್ಡ ಬಂದ ಪರಿಣಾಮ ಬೈಕ್ ಮಗುಚಿ ಬಿದ್ದು ಸುನಂದಾ ರಸ್ತೆಗೆ ಎಸೆಯಲ್ಪಟ್ಟಿದ್ದರು.

ಪುತ್ತೂರು: ಬೈಕ್ ಮಗುಚಿ ಬಿದ್ದು ನವ ವಿವಾಹಿತೆ ಮೃತ್ಯು Read More »

ಕರಾವಳಿ

ಮರ್ಧಾಳ: ಅಡಿಕೆ ತೋಟದಲ್ಲಿ ಕುಸಿದು ಬಿದ್ದು ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಜೂ.27. ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಸಮೀಪದ ಐತ್ತೂರಿನಲ್ಲಿ ಬುಧವಾರ ಸಂಜೆ ನಡೆದಿದೆ. ಮೃತ ಯುವಕನನ್ನು ಐತ್ತೂರು ಗ್ರಾಮದ ಕೆರ್ಮಾಯಿ ನಿವಾಸಿ ದೇವಸ್ಯ ಎಂಬವರ ಪುತ್ರ ಪ್ರಿನ್ಸ್ ಪಿ.ಡಿ.(23) ಎಂದು ಗುರುತಿಸಲಾಗಿದೆ. ಈತ ಕೆರ್ಮಾಯಿ ಸೈಂಟ್ ಮೇರೀಸ್ ಚರ್ಚಿನ ತೋಟದಲ್ಲಿ ಕೂಲಿ ಕೆಲಸದಲ್ಲಿ ನಿರತನಾಗಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಅಡಿಕೆ‌ ಮರದ ಗುಂಡಿಗೆ ಬಿದ್ದಿದ್ದಾನೆ ಎನ್ನಲಾಗಿದೆ. ತಕ್ಷಣವೇ ಉಳಿದ ಕೆಲಸಗಾರರು ಈತನನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿದರಾದರೂ ಅದಾಗಲೇ ಮೃತಪಟ್ಟಿದ್ದಾಗಿ

ಮರ್ಧಾಳ: ಅಡಿಕೆ ತೋಟದಲ್ಲಿ ಕುಸಿದು ಬಿದ್ದು ಯುವಕ ಮೃತ್ಯು Read More »

ಕರಾವಳಿ

ಅಡ್ಯಾರ್: ಭೀಕರ ಸರಣಿ ಅಪಘಾತ ► ಓರ್ವ ಮೃತ್ಯು, ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.27. ಎರಡು ಕಾರುಗಳು, ಬೈಕ್ ಹಾಗೂ ಆಟೋ ರಿಕ್ಷಾ ನಡುವೆ ನಡೆದ ಸರಣಿ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ನಗರದ ಹೊರವಲಯದ ಅಡ್ಯಾರಿನಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ. ಮೃತ ಯುವಕನನ್ನು ಇಲೆಕ್ಟ್ರೀಷಿಯನ್ ವೃತ್ತಿಯಲ್ಲಿದ್ದ ಫಾರೂಕ್(26) ಎಂದು ಗುರುತಿಸಲಾಗಿದೆ. ಬಿ.ಸಿ.ರೋಡ್ ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ವಾಹನಗಳು ಏಕಮುಖ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಕಣ್ಣೂರು ಮಸೀದಿ ಬಳಿ ತಲುಪಿದಾಗ ಹನೀಫ್ ಎಂಬವರು ಚಲಾಯಿಸುತ್ತಿದ್ದ ಕಾರು ಉಳಿದ ವಾಹನಗಳಿಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿದೆ.

ಅಡ್ಯಾರ್: ಭೀಕರ ಸರಣಿ ಅಪಘಾತ ► ಓರ್ವ ಮೃತ್ಯು, ಮೂವರಿಗೆ ಗಾಯ Read More »

ಕರಾವಳಿ

ಬೆಳ್ಳಾರೆ: ಹಾಡುಹಗಲೇ ಬಲಾತ್ಕಾರವಾಗಿ ಸಾಮೂಹಿಕ ಅತ್ಯಾಚಾರ ► ರಿಕ್ಷಾ ಚಾಲಕರು ಸೇರಿದಂತೆ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜೂ.27. ಠಾಣಾ ವ್ಯಾಪ್ತಿಯ ಶೇಣಿಯಲ್ಲಿ ಯುವತಿಯೋರ್ವಳನ್ನು ಬಲವಂತದಿಂದ ಕರೆದೊಯ್ದು ಸರಣಿ ಅತ್ಯಾಚಾರಗೈದ ಪ್ರಕರಣದ ಮೂವರು ಆರೋಪಿಗಳನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅಮರ ಮೂಡ್ನೂರು ಗ್ರಾಮದ ಕುಡುಂಬಿಲ ನಿವಾಸಿ ಕುಂಇಪ್ಪ ನಾಯ್ಕ ಎಂಬವರ ಪುತ್ರ ಜಯಪ್ರಕಾಶ್ (25), ಚೊಕ್ಕಾಡಿಯ ನೇಣಾರು ನಿವಾಸಿ ಕೂಸಪ್ಪ ನಾಯ್ಕ ಎಂಬವರ ಪುತ್ರ ರಂಜಿತ್ (20), ಕುಕ್ಕುಜಡ್ಕದ ನೇರ್ಲಡ್ಕ ನಿವಾಸಿ ಗುಡ್ಡಪ್ಪನಾಯ್ಕ ಎಂಬವರ ಪುತ್ರ ರವೀಂದ್ರ (35) ಎಂದು ಗುರುತಿಸಲಾಗಿದೆ. ಆರೋಪಿಗಳು ಸೋಮವಾರ ಸಂಜೆ ಹಾಲು

ಬೆಳ್ಳಾರೆ: ಹಾಡುಹಗಲೇ ಬಲಾತ್ಕಾರವಾಗಿ ಸಾಮೂಹಿಕ ಅತ್ಯಾಚಾರ ► ರಿಕ್ಷಾ ಚಾಲಕರು ಸೇರಿದಂತೆ ಮೂವರ ಬಂಧನ Read More »

ಕರಾವಳಿ
Scroll to Top