News Kadaba Desk

ಸಂಪಾಜೆ: ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದ ಕಾರು ➤ ಓರ್ವ ಸ್ಥಳದಲ್ಲೇ ಮೃತ್ಯು, ಮತ್ತೋರ್ವ ಗಂಭೀರ

(ನ್ಯೂಸ್ ಕಡಬ) newskadaba.com ಸುಳ್ಯ, ಮೇ.13. ನಿಂತಿದ್ದ ಲಾರಿಗೆ ಕಾರೊಂದು ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಸಂಪಾಜೆಯಲ್ಲಿ ಸೋಮವಾರದಂದು ಸಂಭವಿಸಿದೆ. ಮೃತ ವ್ಯಕ್ತಿಯನ್ನು ಪುತ್ತೂರಿನ ಬೆದ್ರಾಳ ನಿವಾಸಿ ಜಯರಾಮ ಎಂದು ಗುರುತಿಸಲಾಗಿದೆ. ಜಯರಾಮರು ತನ್ನ ಸಹೋದರನೊಂದಿಗೆ ಮಡಿಕೇರಿಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದಾಗ ಸಂಪಾಜೆ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆದಿದ್ದು, ಗಾಯಗೊಂಡ ಜಯರಾಮರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. […]

ಸಂಪಾಜೆ: ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದ ಕಾರು ➤ ಓರ್ವ ಸ್ಥಳದಲ್ಲೇ ಮೃತ್ಯು, ಮತ್ತೋರ್ವ ಗಂಭೀರ Read More »

ಕರ್ನಾಟಕ

ಇನ್ಮುಂದೆ ಪೆಟ್ರೋಲ್ – ಡೀಸೆಲ್ ಇಲ್ಲದೆ ನೀರಿನಿಂದ ವಾಹನ ಚಲಾಯಿಸಬಹುದು..!! ➤ ನೂತನ ಸಂಶೋಧನೆ ಕಂಡುಹಿಡಿದ ತಮಿಳುನಾಡಿನ ಇಂಜಿನಿಯರ್‌

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.12. ದಿನೇ ದಿನೇ ಗಗನಕ್ಕೇರುತ್ತಿರುವ ಪೆಟ್ರೋಲ್, ಡೀಸೆಲ್‍ ಬೆಲೆ ಹೆಚ್ಚಳದಿಂದ ತತ್ತರಿಸಿರುವ ಜನತೆಗೆ ಮೆಕ್ಯಾನಿಕಲ್‍ ಇಂಜಿನಿಯರ್‌ ಓರ್ವರು ಸಿಹಿಸುದ್ದಿ ನೀಡಿದ್ದು, ನೀರನ್ನು ಇಂಧನವಾಗಿ ಬಳಸಿ ನೀರಿನಿಂದಲೇ ವಾಹನವನ್ನು ಚಲಾಯಿಸುವ ಸಂಶೋಧನೆಯನ್ನು ಮಾಡಿದ್ದಾರೆ. ಕಳೆದ ಸುಮಾರು 10 ವರ್ಷಗಳ ಕಾಲ ಸಂಶೋಧನೆ ನಡೆಸಿ ಯಶಸ್ವಿಯಾದ ತಮಿಳುನಾಡಿನ ಮೆಕ್ಯಾನಿಕಲ್‍ ಇಂಜಿನಿಯರ್‌ ಸೌಂದರ್ಯ ರಾಜನ್‍ ಗೆ ಜಪಾನ್ ದೇಶವು ಪ್ರೋತ್ಸಾಹ ನೀಡಿದ್ದು, ವಾಹನದಲ್ಲಿ ಅಳವಡಿಸಿರುವ ಡಿಸ್ಟಿಲ್ಡ್ ವಾಟರ್ ನ್ನು ಪೆಟ್ರೋಲ್‍ ಮತ್ತು ಡೀಸೆಲ್‍ ಗೆ ಬದಲಾಗಿ

ಇನ್ಮುಂದೆ ಪೆಟ್ರೋಲ್ – ಡೀಸೆಲ್ ಇಲ್ಲದೆ ನೀರಿನಿಂದ ವಾಹನ ಚಲಾಯಿಸಬಹುದು..!! ➤ ನೂತನ ಸಂಶೋಧನೆ ಕಂಡುಹಿಡಿದ ತಮಿಳುನಾಡಿನ ಇಂಜಿನಿಯರ್‌ Read More »

ಅಂತರ್ರಾಷ್ಟ್ರೀಯ ನ್ಯೂಸ್

ಇಂದು (ಮೇ‌.12) ವಿಶ್ವ ದಾದಿಯರ ದಿನ ➤ ರೋಗಿಗಳ ಶುಶ್ರೂಷೆಯ ಪ್ರಮುಖ ಕೇಂದ್ರಬಿಂದು ನರ್ಸ್ ಗಳ ಬಗ್ಗೆ ವಿಶೇಷ ಲೇಖನ

(ನ್ಯೂಸ್ ಕಡಬ) newskadaba.com ವಿಶೇಷ ಲೇಖನ: ಪ್ರತಿ ವರ್ಷ “ಮೇ 12ರಂದು ವಿಶ್ವ ದಾದಿಯರ ದಿನ” ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಈ ದಿನ ಖ್ಯಾತ ದಾದಿ ಪ್ಯಾರೆನ್ಸ್ ನೈಟಿಂಗೇಲ್ ಅವರು ಹುಟ್ಟಿದ ದಿನವೂ ಹೌದು. ಅವರು ಮನುಕುಲಕ್ಕೆ ನೀಡಿದ ಅಮೋಘ ಸೇವೆಯನ್ನು ಸ್ಮರಿಸುವ ಸಲುವಾಗಿ “ವಿಶ್ವ ದಾದಿಯರ ದಿನ” ಎಂದು ಜಗತ್ತಿನಾದ್ಯಂತ ಮೇ 12ರಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. 2019ರ ಆಚರಣೆಯ ಧ್ಯೇಯ ವಾಕ್ಯವೆಂದರೆ “ಆರೋಗ್ಯ ಪ್ರತಿ ಮನುಷ್ಯನ ಮೂಲಭೂತ ಹಕ್ಕು” ಎಂಬುದಾಗಿರುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ

ಇಂದು (ಮೇ‌.12) ವಿಶ್ವ ದಾದಿಯರ ದಿನ ➤ ರೋಗಿಗಳ ಶುಶ್ರೂಷೆಯ ಪ್ರಮುಖ ಕೇಂದ್ರಬಿಂದು ನರ್ಸ್ ಗಳ ಬಗ್ಗೆ ವಿಶೇಷ ಲೇಖನ Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

ಕೊಯಿಲ ತ್ರಿವೇಣಿ ಸರ್ಕಲ್ ಬಳಿ ಪಂಚಾಯಿತಿಯಿಂದ ಕುಡಿಯುವ ನೀರಿನ ತೊಟ್ಟಿ ➤ ದಾಹ ನೀಗಿಸಿಕೊಳ್ಳುತ್ತಿರುವ ಪ್ರಾಣಿ – ಪಕ್ಷಿಗಳು

(ನ್ಯೂಸ್ ಕಡಬ) newskadaba­­.com ಕಡಬ, ಮೇ.12. ಈ ಬಾರಿ ಬೇಸಿಗೆಯ ಕಾವು  ಏರುತ್ತಿದ್ದಂತೆ  ನೀರಿನ ಹಾಹಾಕಾರ  ಹೆಚ್ಚಾಗುತ್ತಿದ್ದು ಮನುಷ್ಯನು ವಿವಿಧ ರೀತಿಯಲ್ಲಿ ತನ್ನ ದಾಹ ನೀಗಿಸಿಕೊಳ್ಳುತ್ತಿದ್ದರೆ ಪ್ರಾಣಿ ಪಕ್ಷಿಗಳ ಪಾಡು ಯಾರಿಗೂ ಕೇಳದಂತಿದೆ. ಇಂತಹ ಪರಿಸ್ಥಿತಿಯಲ್ಲಿ  ಕೊಯಿಲ ಗ್ರಾಮ ಪಂಚಾಯಿತಿ ತನ್ನ ವ್ಯಾಪ್ತಿಯ ತ್ರಿವೇಣಿ ಸರ್ಕಲ್ ಬಳಿ  ರಸ್ತೆ ಪಕ್ಕದಲ್ಲಿ ಕುಡಿಯುವ ನೀರಿನ ತೊಟ್ಟಿಯೊಂದನ್ನು ನಿರ್ಮಿಸಿದ ಪರಿಣಾಮ ಪ್ರಾಣಿ ಪಕ್ಷಿಗಳ ದಾಹ ನೀಗುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಉಪ್ಪಿನಂಗಡಿ – ಕಡಬ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಿಂದ ಟಿಸಿಲೊಡೆದ

ಕೊಯಿಲ ತ್ರಿವೇಣಿ ಸರ್ಕಲ್ ಬಳಿ ಪಂಚಾಯಿತಿಯಿಂದ ಕುಡಿಯುವ ನೀರಿನ ತೊಟ್ಟಿ ➤ ದಾಹ ನೀಗಿಸಿಕೊಳ್ಳುತ್ತಿರುವ ಪ್ರಾಣಿ – ಪಕ್ಷಿಗಳು Read More »

ವಿಶೇಷ ಲೇಖನಗಳು

ಪುತ್ತೂರು: ಪುಟ್ಟ ಕಂದಮ್ಮನನ್ನು ಒಂಟಿಯಾಗಿ ಕಾರಿನೊಳಗೆ ಬಿಟ್ಟು ತೆರಳಿದ ಪೋಷಕರು ➤ ಹೊರಬರಲಾರದೆ ಇಕ್ಕಟ್ಟಿನಲ್ಲಿ ಒದ್ದಾಡಿದ ಪುಟ್ಟ ಮಗು

(ನ್ಯೂಸ್ ಕಡಬ) newskadaba.com ಪುತ್ತೂರು, ಮೇ.09. ಬಟ್ಟೆ ಖರೀದಿಗೆಂದು ಆಗಮಿಸಿದ ದಂಪತಿಯ ಎಡವಟ್ಟಿನಿಂದಾಗಿ ಪುಟ್ಟ ಮಗುವೊಂದು ಸುಮಾರು 20 ನಿಮಿಷಗಳ ಕಾಲ ಕಾರಿನೊಳಗೆ ಸಿಲುಕಿಕೊಂಡು ಒದ್ದಾಡಿದ ಘಟನೆ ಗುರುವಾರದಂದು ಪುತ್ತೂರಿನಲ್ಲಿ ನಡೆದಿದೆ. ಬಟ್ಟೆ ಖರೀದಿಸಲೆಂದು ಬಂದಿದ್ದ ದಂಪತಿ ತಮ್ಮ ಸ್ವಿಪ್ಟ್ ಡಿಸೈರ್ ಕಾರನ್ನು ಪುತ್ತೂರಿನ ಸಂಜೀವ ಶೆಟ್ಟಿ ಬಟ್ಟೆ ಮಳಿಗೆಯ ಮುಂಭಾಗದಲ್ಲಿ ನಿಲ್ಲಿಸಿ ಪುಟ್ಟ ಮಗುವನ್ನು ಅದರಲ್ಲೇ ಬಿಟ್ಟು ತೆರಳಿದ್ದಾರೆ. ಕಾರಿನ ಕೀ ಒಳಗಡೆ ಬಾಕಿಯಾಗಿದ್ದು, ಡೋರ್ ಆಟೋ ಲಾಕ್ ಆಗಿದೆ. ಮಗು ಕೀಯನ್ನು ಕೈಯಲ್ಲಿ ಹಿಡಿದುಕೊಂಡು

ಪುತ್ತೂರು: ಪುಟ್ಟ ಕಂದಮ್ಮನನ್ನು ಒಂಟಿಯಾಗಿ ಕಾರಿನೊಳಗೆ ಬಿಟ್ಟು ತೆರಳಿದ ಪೋಷಕರು ➤ ಹೊರಬರಲಾರದೆ ಇಕ್ಕಟ್ಟಿನಲ್ಲಿ ಒದ್ದಾಡಿದ ಪುಟ್ಟ ಮಗು Read More »

ರಾಷ್ಟ್ರೀಯ ನ್ಯೂಸ್

ಕೆಂಜಾಳ: ಅರಣ್ಯ ಇಲಾಖೆಯ ವಸತಿ ಗೃಹಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾದ ಕಾರು ➤ ಸಿನಿಮೀಯ ಶೈಲಿಯಲ್ಲಿ ಕಾರಿನಲ್ಲಿದ್ದವರು ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಕಡಬ, ಮೇ.08. ರಸ್ತೆಯಲ್ಲಿ ಅಡ್ಡ ಬಂದ ನಾಯಿಯನ್ನು ಬದುಕಿಸುವ ಸಲುವಾಗಿ ಬ್ರೇಕ್ ಹಾಕಿದಾಗ ನಿಯಂತ್ರಣ ತಪ್ಪಿದ ರೆನಾಲ್ಟ್‌ ಡಸ್ಟರ್ ಕಾರೊಂದು ಅರಣ್ಯ ಇಲಾಖೆಯ ವಸತಿ ಗೃಹದ ಕಟ್ಟಡಕ್ಕೆ ಢಿಕ್ಕಿ ಹೊಡೆದು ಮಗುಚಿ ಬಿದ್ದ ಘಟನೆ ಕೊಂಬಾರು ಗ್ರಾಮದ ಕೆಂಜಾಲದಲ್ಲಿ ಬುಧವಾರದಂದು ನಡೆದಿದೆ. ಬೆಂಗಳೂರಿನಿಂದ ಕುಕ್ಕೇ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಡಸ್ಟರ್ ಕಾರಿಗೆ ಕೆಂಜಾಳ ಸಮೀಪ ನಾಯಿಯೊಂದು ಅಡ್ಡ ಬಂದಿದೆ ಎನ್ನಲಾಗಿದೆ. ನಾಯಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಿದಾಗ ಚಾಲಕನ ನಿಯಂತ್ರಣ ತಪ್ಪಿದ್ದು, ರಸ್ತೆ ಬದಿಯಲ್ಲಿನ ಅರಣ್ಯ

ಕೆಂಜಾಳ: ಅರಣ್ಯ ಇಲಾಖೆಯ ವಸತಿ ಗೃಹಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾದ ಕಾರು ➤ ಸಿನಿಮೀಯ ಶೈಲಿಯಲ್ಲಿ ಕಾರಿನಲ್ಲಿದ್ದವರು ಅಪಾಯದಿಂದ ಪಾರು Read More »

ಕರಾವಳಿ

ಬಂಟ್ವಾಳ: ಬುಲ್ಲೆಟ್ – ಟಿಪ್ಪರ್ ನಡುವೆ ಢಿಕ್ಕಿ ➤ ಸವಾರರಿಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮೇ.08. ರಾಯಲ್ ಎನ್ ಫೀಲ್ಡ್ ಬುಲ್ಲೆಟ್ ಹಾಗೂ ಟಿಪ್ಪರ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬುಧವಾರದಂದು ಬಂಟ್ವಾಳದಲ್ಲಿ ಸಂಭವಿಸಿದೆ. ಮೃತರನ್ನು ಬಂಟ್ವಾಳ ನಿವಾಸಿ ರಮೇಶ ಪೂಜಾರಿ ಎಂಬವರ ಪುತ್ರ ಸುರೇಂದ್ರ (33) ಹಾಗೂ ಸಹ ಸವಾರೆಯನ್ನು ಮೃತರ ಸಂಬಂಧಿ ಮಹಿಳೆ ಜಯಲಕ್ಷ್ಮಿ(36) ಎಂದು ಗುರುತಿಸಲಾಗಿದೆ. ಇವರು ಬುಧವಾರದಂದು ಪ್ರಯಾಣಿಸುತ್ತಿದ್ದ ಬುಲ್ಲೆಟ್ ವಾಹನವು ಬಂಟ್ವಾಳ ತಾಲೂಕಿನ ಅಣ್ಣಳಿಕೆ – ಹಿರ್ಣಿ ನಡುವಿನ ಕುಮೇರು ಎಂಬಲ್ಲಿ ಟಿಪ್ಪರ್

ಬಂಟ್ವಾಳ: ಬುಲ್ಲೆಟ್ – ಟಿಪ್ಪರ್ ನಡುವೆ ಢಿಕ್ಕಿ ➤ ಸವಾರರಿಬ್ಬರು ಮೃತ್ಯು Read More »

ಕರಾವಳಿ

ನೆಲ್ಯಾಡಿ: ಚಾಲಕನ ನಿಯಂತ್ರಣ ತಪ್ಪಿ ಜೀಪು ಪಲ್ಟಿ ➤ ಬಾಲಕ ಮೃತ್ಯು, ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮೇ.08. ಚಾಲಕನ ನಿಯಂತ್ರಣ ತಪ್ಪಿದ ಜೀಪೊಂದು ಪಲ್ಟಿಯಾದ ಪರಿಣಾಮ ಬಾಲಕನೋರ್ವ ಮೃತಪಟ್ಟು, ಹಲವರು ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ನೆಲ್ಯಾಡಿಯಲ್ಲಿ ಸಂಭವಿಸಿದೆ. ಮೃತ ಬಾಲಕನನ್ನು ನೆಲ್ಯಾಡಿ ಅತ್ರಿಜಾಲು ನಿವಾಸಿ ಸುಂದರ ಗೌಡ ಎಂಬವರ ಪುತ್ರ ಪಡುಬೆಟ್ಟು ಶಾಲೆಯ 7ನೇ ತರಗತಿ ವಿದ್ಯಾರ್ಥಿ ಸುಶ್ಮಿತ್(13) ಎಂದು ಗುರುತಿಸಲಾಗಿದೆ. ಉಪ್ಪಿನಂಗಡಿಯಲ್ಲಿ ನಡೆದ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ನೆಲ್ಯಾಡಿ ಕಡೆಗೆ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಗಾಯಗೊಂಡ ಗಾಯಾಳುಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನೆಲ್ಯಾಡಿ: ಚಾಲಕನ ನಿಯಂತ್ರಣ ತಪ್ಪಿ ಜೀಪು ಪಲ್ಟಿ ➤ ಬಾಲಕ ಮೃತ್ಯು, ಹಲವರಿಗೆ ಗಾಯ Read More »

ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಗುಡುಗು ಮಿಶ್ರಿತ ಧಾರಾಕಾರ ಮಳೆ ➤ ಕಡಬ ಪರಿಸರದಲ್ಲಿ ಮೋಡ ಕವಿದ ವಾತಾವರಣ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.07. ಜಿಲ್ಲೆಯ ವಿವಿಧೆಡೆ ಗುಡುಗು – ಮಿಂಚು ಸಹಿತ ಧಾರಾಕಾರ ಮಳೆಯಾಗಿದ್ದು, ಭೂಮಿ ತಂಪಾಗಿದೆ. ಪುತ್ತೂರು, ಕಬಕ, ಬಂಟ್ವಾಳ, ಅಡ್ಯಾರು, ಉಪ್ಪಿನಂಗಡಿ, ಹಿರೇ ಬಂಡಾಡಿ, ಸುಳ್ಯ ಪರಿಸರದಲ್ಲಿ ಸಾಮಾನ್ಯ ಮಳೆಯಾಗಿದ್ದು, ಮೆಲ್ಕಾರ್, ಸಜಿಪದಲ್ಲಿ ಧಾರಾಕಾರ ಮಳೆಯಾಗಿದೆ. ಕಡಬ ಪರಿಸರದಲ್ಲಿ ಮೋಡ ಕವಿದ ವಾತಾವರಣವಿದ್ದು, ಪೆರಿಯಶಾಂತಿ, ಇಚಿಲಂಪಾಡಿ ಭಾಗದಲ್ಲಿ ತುಂತುರು ಮಳೆಯಾಗಿದೆ. ಜಿಲ್ಲೆಯ ವಿವಿಧೆಡೆ ಮಳೆಯಾದುದರಿಂದ ತೀವ್ರ ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನತೆ ನಿಟ್ಟುಸಿರು ಬಿಡುವಂತಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಗುಡುಗು ಮಿಶ್ರಿತ ಧಾರಾಕಾರ ಮಳೆ ➤ ಕಡಬ ಪರಿಸರದಲ್ಲಿ ಮೋಡ ಕವಿದ ವಾತಾವರಣ Read More »

ಕರಾವಳಿ

ಶಿರಾಡಿ: ಆಳಕ್ಕೆ ಉರುಳಿದ ಟೊಯೋಟಾ ಎಟಿಯೋಸ್ ಕಾರು ➤ ಓರ್ವ ಮೃತ್ಯು, ನಾಲ್ವರಿಗೆ ಗಾಯ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮೇ.07. ಚಾಲಕನ ನಿಯಂತ್ರಣ ತಪ್ಪಿದ ಟೊಯೋಟಾ ಎಟಿಯೋಸ್ ಕಾರೊಂದು ರಸ್ತೆ ಬದಿಯ ಆಳ ಪ್ರದೇಶಕ್ಕೆ ಉರುಳಿ ಬಿದ್ದುದರಿಂದ ಓರ್ವ ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿಯಲ್ಲಿ ಮಂಗಳವಾರದಂದು ನಡೆದಿದೆ. ಬೆಂಗಳೂರು ಮೂಲದ ಯಾತ್ರಾರ್ಥಿಗಳಿದ್ದ ಕಾರು ಧರ್ಮಸ್ಥಳದಿಂದ ಬೆಂಗಳೂರಿಗೆ ಹಿಂತಿರುಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಗ್ರಾಮದ ಕೊಡ್ಯಕಲ್ಲುವಿನಲ್ಲಿ ರಸ್ತೆ ಬದಿಯ ಆಳವಾದ ಗುಂಡಿಗೆ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ಬೆಂಗಳೂರು ಮೂಲದ ವ್ಯಕ್ತಿಯೋರ್ವರು

ಶಿರಾಡಿ: ಆಳಕ್ಕೆ ಉರುಳಿದ ಟೊಯೋಟಾ ಎಟಿಯೋಸ್ ಕಾರು ➤ ಓರ್ವ ಮೃತ್ಯು, ನಾಲ್ವರಿಗೆ ಗಾಯ Read More »

ಕರ್ನಾಟಕ
Scroll to Top