ಕಡಬ: ಪರಿಸರದಲ್ಲಿ ಗುಡುಗು ಮಿಶ್ರಿತ ಭಾರೀ ಮಳೆ ➤ ಮಳೆಯಿಂದಾಗಿ ತಂಪಾದ ಇಳೆ
(ನ್ಯೂಸ್ ಕಡಬ) newskadaba.com ಕಡಬ, ಮೇ.18. ಕಡಬ ಪರಿಸರದಲ್ಲಿ ಶನಿವಾರ ರಾತ್ರಿ ಗುಡುಗು, ಮಿಂಚು ಮಿಶ್ರಿತ ಭಾರೀ ಗುಡುಗು ಮಳೆ ಸುರಿದಿದ್ದು, ಬಿಸಿಲಿನ ತಾಪದಿಂದ ಕಾದು ಕೆಂಪಾಗಿದ್ದ ಇಳೆಯನ್ನು ತಂಪೆರೆದಿದೆ. ಕಡಬ, ಹೊಸ್ಮಠ, ಕುದ್ಮಾರು, ಪಂಜ, ಕೋಡಿಂಬಾಳ, ಮರ್ಧಾಳ, ನೆಟ್ಟಣ, ಬಿಳಿನೆಲೆ ಪರಿಸರದಲ್ಲಿ ಗುಡುಗು – ಮಿಂಚಿನ ಆರ್ಭಟದೊಂದಿಗೆ ಭಾರೀ ಗಾಳಿ ಮಳೆಯಾಗಿದ್ದು, ಕೊಯಿಲ, ಆತೂರು ಪರಿಸರದಲ್ಲಿ ಸಾಧಾರಣ ಗುಡುಗಿನೊಂದಿಗೆ ತುಂತುರು ಮಳೆಯಾಗಿದೆ. ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಪ್ರಾಣಿ – ಪಕ್ಷಿಗಳು ನಿಟ್ಟುಸಿರು ಬಿಡುವಂತಾಗಿದೆ.
ಕಡಬ: ಪರಿಸರದಲ್ಲಿ ಗುಡುಗು ಮಿಶ್ರಿತ ಭಾರೀ ಮಳೆ ➤ ಮಳೆಯಿಂದಾಗಿ ತಂಪಾದ ಇಳೆ Read More »
ಕರಾವಳಿ









