ಬಂಟ್ವಾಳ: ಬುಲ್ಲೆಟ್ – ಟಿಪ್ಪರ್ ನಡುವೆ ಢಿಕ್ಕಿ ➤ ಸವಾರರಿಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮೇ.08. ರಾಯಲ್ ಎನ್ ಫೀಲ್ಡ್ ಬುಲ್ಲೆಟ್ ಹಾಗೂ ಟಿಪ್ಪರ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬುಧವಾರದಂದು ಬಂಟ್ವಾಳದಲ್ಲಿ ಸಂಭವಿಸಿದೆ.

ಮೃತರನ್ನು ಬಂಟ್ವಾಳ ನಿವಾಸಿ ರಮೇಶ ಪೂಜಾರಿ ಎಂಬವರ ಪುತ್ರ ಸುರೇಂದ್ರ (33) ಹಾಗೂ ಸಹ ಸವಾರೆಯನ್ನು ಮೃತರ ಸಂಬಂಧಿ ಮಹಿಳೆ ಜಯಲಕ್ಷ್ಮಿ(36) ಎಂದು ಗುರುತಿಸಲಾಗಿದೆ. ಇವರು ಬುಧವಾರದಂದು ಪ್ರಯಾಣಿಸುತ್ತಿದ್ದ ಬುಲ್ಲೆಟ್ ವಾಹನವು ಬಂಟ್ವಾಳ ತಾಲೂಕಿನ ಅಣ್ಣಳಿಕೆ – ಹಿರ್ಣಿ ನಡುವಿನ ಕುಮೇರು ಎಂಬಲ್ಲಿ ಟಿಪ್ಪರ್ ಮಧ್ಯೆ ಮುಖಾಮುಖಿ ಢಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಬಂಟ್ವಾಳ ಸಂಚಾರಿ ಠಾಣೆ ಎಸೈ ಮಂಜುನಾಥ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಮಹಜರು ನಡೆಸಿದರು.

Scroll to Top