News Kadaba Desk

➤➤ Big Breaking News ಪುತ್ತೂರು: ಕೆರೆಗೆ ಉರುಳಿದ ಕಾರು ➤ ಒಂದೇ ಕುಟುಂಬದ ನಾಲ್ವರು ಮೃತ್ಯು

(ನ್ಯೂಸ್ ಕಡಬ) ‌newskadaba.com ಪುತ್ತೂರು, ಸೆ.02. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಕೆರೆಗೆ ಬಿದ್ದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ದಾರುಣ ಘಟನೆ ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಕಾವು ಎಂಬಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಮೃತರು ಮಡಿಕೇರಿಯ ಶುಂಠಿ ಕೊಪ್ಪ ನಿವಾಸಿಗಳೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಪತಿ – ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮಂಗಳೂರಿಗೆ ಆಗಮಿಸಿ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. […]

➤➤ Big Breaking News ಪುತ್ತೂರು: ಕೆರೆಗೆ ಉರುಳಿದ ಕಾರು ➤ ಒಂದೇ ಕುಟುಂಬದ ನಾಲ್ವರು ಮೃತ್ಯು Read More »

ಕರ್ನಾಟಕ

ಕರ್ನಾಟಕ ಋಣಮುಕ್ತ ಕಾಯ್ದೆಯ ಬಗ್ಗೆ ಸ್ಪಷ್ಟನೆ ➤ ನೀವು ಮಾಡಿರುವ ಸಾಲಕ್ಕೆ ಕಾಯ್ದೆ ಅನ್ವಯ ಆಗುತ್ತದೆಯೇ ಎಂದು ತಿಳಿಯಬೇಕೇ..?

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.02. ಋಣಮುಕ್ತ ಕಾಯ್ದೆಯನ್ವಯ ಖಾಸಗಿ ಲೇವಾದೇವಿದಾರರಿಂದ ಮತ್ತು ಗಿರವಿದಾರರಿಂದ ಸಾಲ ಪಡೆದಿದ್ದಲ್ಲಿ ಕರ್ನಾಟಕ ಋಣ ಪರಿಹಾರ ಕಾಯ್ದೆ 2018 ರಂತೆ ಪರಿಹಾರ ಪಡೆಯಲು ಅರ್ಹರಿರುವುದಾಗಿ ಪ್ರಕಟಿಸಲಾಗಿದ್ದು, ಆದಾಗ್ಯೂ ಅನೇಕ ಫಲಾನುಭವಿಗಳು ದೂರವಾಣಿ ಕರೆ ಮಾಡಿ ಸಹಕಾರಿ ಸಂಘಗಳಲ್ಲಿ, ಬ್ಯಾಂಕ್‍ಗಳಲ್ಲಿ, ಇತರೇ ಹಣಕಾಸು ಸಂಸ್ಥೆಯಿಂದ ಪಡಕೊಂಡ ಸಾಲ, ಚಿನ್ನಾಭರಣಗಳನ್ನು ಅಡವಿಟ್ಟು ಪಡೆದ ಸಾಲಗಳಿಗೆ ಅನ್ವಯಿಸುತ್ತದೆಯಾ ಎಂಬ ಬಗ್ಗೆ ವಿಚಾರಿಸುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟಪಡಿಸುವುದೇನೆಂದರೆ, ಸರಕಾರಿ ಕಂಪೆನಿಗಳು/ ಜೀವವಿಮಾ ನಿಗಮ/ ಸಹಕಾರಿ ಸಂಘಗಳು/ ಸೌಹಾರ್ದ ಸಹಕಾರಿ

ಕರ್ನಾಟಕ ಋಣಮುಕ್ತ ಕಾಯ್ದೆಯ ಬಗ್ಗೆ ಸ್ಪಷ್ಟನೆ ➤ ನೀವು ಮಾಡಿರುವ ಸಾಲಕ್ಕೆ ಕಾಯ್ದೆ ಅನ್ವಯ ಆಗುತ್ತದೆಯೇ ಎಂದು ತಿಳಿಯಬೇಕೇ..? Read More »

ಕರ್ನಾಟಕ

ಬಲ್ಯ: ಕೆರೆಗೆ ಬಿದ್ದು ಯುವತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಸೆ.01. ಕಳೆದ 20 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಯುವತಿಯೋರ್ವಳ ಮೃತದೇಹವು ಮನೆ ಸಮೀಪದ ಕೆರೆಯಲ್ಲಿ ಭಾನುವಾರದಂದು ಪತ್ತೆಯಾಗಿದೆ. ಬಲ್ಯ ಗ್ರಾಮದ ಪನ್ಯಾಡಿ ಲಿಂಗಪ್ಪ ಗೌಡರ ಪುತ್ರಿ ಕು| ಸುಮಿತ್ರಾ(41ವ.) ಮೃತಪಟ್ಟವರು. ಇವರು ಸುಮಾರು 20 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಇವರು ಶನಿವಾರದಂದು ಹುಲ್ಲು ತರಲೆಂದು ಹೋಗಿದ್ದು ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಇವರನ್ನು ಮನೆಯವರು ಹುಡುಕಾಡತೊಡಗಿದಾಗ ಭಾನುವಾರದಂದು ಮನೆಯ ಸಮೀಪದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಮೃತರ

ಬಲ್ಯ: ಕೆರೆಗೆ ಬಿದ್ದು ಯುವತಿ ಮೃತ್ಯು Read More »

ಕರಾವಳಿ

ಕಡಬ: ನೂತನವಾಗಿ ಆರಂಭಗೊಂಡ ಪುರುಷರ ವಸ್ತ್ರ ಮಳಿಗೆ ‘XL ಮೆನ್ಸ್ ವೇರ್’ ➤ ಶುಭಾರಂಭದ ಪ್ರಯುಕ್ತ ವಿಶೇಷ ದರಕಡಿತ ಮಾರಾಟ

(ನ್ಯೂಸ್ ಕಡಬ) newskadaba.com ಕಡಬ, ಸೆ.01. ದಿನನಿತ್ಯ ಫ್ಯಾಷನ್ ಲೋಕದಲ್ಲಿ ಹಲವು ಬದಲಾವಣೆಗಳು ಆಗುತ್ತಿದ್ದು, ಅದಕ್ಕನುಗುಣವಾಗಿ ಪುರುಷರ ವಸ್ತ್ರ ವಿನ್ಯಾಸಕ್ಕೆ ಕಡಬದಲ್ಲಿ ಹೊಸದೊಂದು ಮಳಿಗೆ ಸೇರ್ಪಡೆಗೊಂಡಿದೆ. ಇಲ್ಲಿನ ಮುಖ್ಯ ರಸ್ತೆಯ ರತ್ನಶ್ರೀ ಫೈನಾನ್ಸ್ ಹತ್ತಿರದ ವಿನೋದ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ‘XL ಮೆನ್ಸ್ ವೇರ್’ ಪುರುಷರ ವಸ್ತ್ರಗಳ ಅಪೂರ್ವ ಸಂಗ್ರಹದೊಂದಿಗೆ ಶುಭಾರಂಭಗೊಂಡಿದೆ. ಪ್ಯಾಂಟ್, ಶರ್ಟ್, ಟೀ ಶರ್ಟ್, ಫೂಟ್ ವೇರ್ ಹಾಗೂ ವಿವಿಧ ಬ್ರ್ಯಾಂಡ್ ಗಳ ಎಲ್ಲಾ ತರದ ಮನಸೂರೆಗೊಳ್ಳುವ ಪುರುಷರ ಸಿದ್ಧ ಉಡುಪುಗಳ ಬೃಹತ್

ಕಡಬ: ನೂತನವಾಗಿ ಆರಂಭಗೊಂಡ ಪುರುಷರ ವಸ್ತ್ರ ಮಳಿಗೆ ‘XL ಮೆನ್ಸ್ ವೇರ್’ ➤ ಶುಭಾರಂಭದ ಪ್ರಯುಕ್ತ ವಿಶೇಷ ದರಕಡಿತ ಮಾರಾಟ Read More »

ಕರಾವಳಿ

ಮರ್ಧಾಳ: ಕ್ಯಾನ್ಸರ್ ಗೆ ತುತ್ತಾಗಿದ್ದ ಬಾಲಕ ವಿಧಿವಶ

(ನ್ಯೂಸ್ ಕಡಬ) newskadaba.com ಕಡಬ, ಸೆ.01. ಅಸೌಖ್ಯದಿಂದ ಬಳಲುತ್ತಿದ್ದ ಕಡಬದ ಬಾಲಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಭಾನುವಾರದಂದು ಮೃತಪಟ್ಟಿದ್ದಾನೆ. ಮೃತ ಬಾಲಕನನ್ನು ಕಡಬ ತಾಲೂಕು ಬಂಟ್ರ ಗ್ರಾಮದ ಕಂಪ ನಿವಾಸಿ ಸುರೇಶ್ ಗೌಡ ಹಾಗೂ ಲಲಿತಾ ದಂಪತಿಯ ಪ್ರಥಮ ಪುತ್ರ ರಾಜೇಶ್ ಎಂದು ಗುರುತಿಸಲಾಗಿದೆ. ಕಳೆದ ಸುಮಾರು ನಾಲ್ಕು ವರ್ಷಗಳಿಂದ ರಕ್ತದ ಕ್ಯಾನ್ಸರ್ ಗೆ ತುತ್ತಾಗಿದ್ದ ರಾಜೇಶ್ ನಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ ನಾಲ್ಕು ದಿನಗಳಿಂದ ತೀರಾ ಅನಾರೋಗ್ಯಕ್ಕೊಳಗಾಗಿದ್ದ ರಾಜೇಶ್

ಮರ್ಧಾಳ: ಕ್ಯಾನ್ಸರ್ ಗೆ ತುತ್ತಾಗಿದ್ದ ಬಾಲಕ ವಿಧಿವಶ Read More »

ಕರಾವಳಿ

ಪುತ್ತೂರು: ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಅಪ್ರಾಪ್ತ ಬಾಲಕಿಯ ಮಾನಭಂಗಕ್ಕೆ ಯತ್ನ ➤ ಆರೋಪಿಯ ಬಂಧನ – ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.01. ತನ್ನ ತಂದೆಯ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ 10 ವರ್ಷದ ಅಪ್ರಾಪ್ತ ಬಾಲಕಿಯ ಮಾನಭಂಗಕ್ಕೆ ಯತ್ನಿಸಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ಭಾನುವಾರದಂದು ಪುತ್ತೂರಿನ ಕೆಮ್ಮಾಯಿ ಬಳಿ ನಡೆದಿದೆ. ಅಪ್ರಾಪ್ತ ಬಾಲಕಿಯೋರ್ವಳು ತನ್ನ ತಂದೆಯ ಆಟೋ ರಿಕ್ಷಾದಲ್ಲಿ ಪುತ್ತೂರಿಗೆ ಬರುತ್ತಿದ್ದ ವೇಳೆ ಅದೇ ಅಟೋ ರಿಕ್ಷಾಕ್ಕೆ ಹತ್ತಿದ ಚಿಕ್ಕಮುಡ್ನೂರು ನಿವಾಸಿ ಕೆ. ಸಾಜುದ್ದೀನ್ (34) ಎಂಬಾತ ಬಾಲಕಿಯ ಮಾನಭಂಗಕ್ಕೆ ಯತ್ನಿಸಿದ್ದಾನೆ. ಈ ವಿಚಾರವನ್ನು ಬಾಲಕಿಯು ತನ್ನ ತಂದೆಗೆ ತಿಳಿಸಿದ್ದು, ತಕ್ಷಣ

ಪುತ್ತೂರು: ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಅಪ್ರಾಪ್ತ ಬಾಲಕಿಯ ಮಾನಭಂಗಕ್ಕೆ ಯತ್ನ ➤ ಆರೋಪಿಯ ಬಂಧನ – ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು Read More »

ಕರಾವಳಿ

ದ.ಕ.ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘ(ರಿ.) ಚುನಾವಣೆ ➤ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಮರ್ಧಾಳ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಸೆ.01. ದಕ್ಷಿಣ ಕನ್ನಡ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘ(ರಿ.) ನ ಪ್ರಧಾನ ಕಾರ್ಯದರ್ಶಿಯಾಗಿ ಕಡಬದ ವಿದ್ಯಾರ್ಥಿ ಅಬ್ದುಲ್ ರಝಾಕ್ ಮರ್ಧಾಳ ಆಯ್ಕೆಯಾಗಿದ್ದಾರೆ. ಆಗಸ್ಟ್ 31 ರಂದು ಮಂಗಳೂರಿನ ರೊಸಾರಿಯೋ ಹಾಲ್ ನಲ್ಲಿ ನಡೆದ ಸರ್ವ ಕಾಲೇಜು ವಿದ್ಯಾರ್ಥಿ ಸಂಘ(ರಿ) ದ ಚುನಾವಣೆಯಲ್ಲಿ ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿ ಅಬ್ದುಲ್ ರಝಾಕ್ ಮರ್ಧಾಳ ತನ್ನ ಪ್ರತಿಸ್ಪರ್ಧಿ ಮಂಗಳೂರಿನ ಖಾಸಗಿ ಕಾಲೇಜಿನ ಹಸನ್ ಮುಕ್ಸಿತ್ ವಿರುದ್ದ ವಿಜಯಿಯಾಗಿದ್ದಾರೆ‌.

ದ.ಕ.ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘ(ರಿ.) ಚುನಾವಣೆ ➤ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಮರ್ಧಾಳ ಆಯ್ಕೆ Read More »

ಕರಾವಳಿ

ನಾಳೆ (ಸೆ.01) ಗುಂಡ್ಯ – ಸುಬ್ರಹ್ಮಣ್ಯ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ➤ ಕಾಪಾರು ರೈಲ್ವೇ ಮೇಲ್ಸೇತುವೆಯ ಕೆಳಗಿನ ಮೋರಿ ತುರ್ತು ದುರಸ್ತಿಯ ಹಿನ್ನೆಲೆ

(ನ್ಯೂಸ್ ಕಡಬ) newskadaba.com ಕಡಬ, ಆ.31. ಗುಂಡ್ಯ – ಸುಬ್ರಹ್ಮಣ್ಯ ರಸ್ತೆಯ ಕಾಪಾರು ಎಂಬಲ್ಲಿ ರೈಲ್ವೆ ಸೇತುವೆಯ ಕೆಳಭಾಗದಲ್ಲಿ ಮೋರಿ ದುರಸ್ತಿ ಕಾಮಗಾರಿಯನ್ನು ತುರ್ತಾಗಿ ಕೈಗೊಳ್ಳಬೇಕಾಗಿ ರುವುದರಿಂದ ಸದರಿ ರಸ್ತೆಯಲ್ಲಿ ಸೆಪ್ಟೆಂಬರ್ 01 ಭಾನುವಾರದಂದು ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಎಲ್ಲಾ ವಾಹನಗಳು ಬದಲಿ ರಸ್ತೆಯಾದ ಸುಬ್ರಹ್ಮಣ್ಯ – ಮರ್ಧಾಳ – ಇಚಿಲಂಪಾಡಿ – ಧರ್ಮಸ್ಥಳ ರಸ್ತೆಯಲ್ಲಿ ಸಂಚರಿಸುವ ಮೂಲಕ ಸಹಕರಿಸುವಂತೆ ಪುತ್ತೂರು ಲೋಕೋಪಯೋಗಿ ಇಲಾಖೆಯ ಪ್ರಕಟಣೆ ತಿಳಿಸಿದೆ.

ನಾಳೆ (ಸೆ.01) ಗುಂಡ್ಯ – ಸುಬ್ರಹ್ಮಣ್ಯ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ➤ ಕಾಪಾರು ರೈಲ್ವೇ ಮೇಲ್ಸೇತುವೆಯ ಕೆಳಗಿನ ಮೋರಿ ತುರ್ತು ದುರಸ್ತಿಯ ಹಿನ್ನೆಲೆ Read More »

ಕರ್ನಾಟಕ

ಧರ್ಮಸ್ಥಳ: ಕೆಎಸ್ಸಾರ್ಟಿಸಿ ಬಸ್ – ಬೈಕ್ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ಆ.31. ಕೆಎಸ್ಸಾರ್ಟಿಸಿ ಬಸ್ ಹಾಗೂ ಬೈಕ್‌ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಧರ್ಮಸ್ಥಳ ಸಮೀಪದ ನಿಡ್ಲೆ ಎಂಬಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಮೃತ ಸವಾರನನ್ನು ಬೆಂಗಳೂರಿನ ರಾಜಾಜಿನಗರ ನಿವಾಸಿ ರೋಹಿತ್ ಎಂದು ಗುರುತಿಸಲಾಗಿದೆ. ರೋಹಿತ್ ತನ್ನ ಹೀರೋ ಸಿಡಿ ಡಿಲಕ್ಸ್ ಬೈಕಿನಲ್ಲಿ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದ ವೇಳೆ ನಿಡ್ಲೆ ಸಮೀಪದ ಕರಿಜೆ ಎಂಬಲ್ಲಿ ಬೈಕ್ ಹಾಗೂ ಬಸ್ ನಡುವೆ ಢಿಕ್ಕಿ ಸಂಭವಿಸಿದ್ದು, ಪರಿಣಾಮ

ಧರ್ಮಸ್ಥಳ: ಕೆಎಸ್ಸಾರ್ಟಿಸಿ ಬಸ್ – ಬೈಕ್ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ

ಅಮಾಯಕರಿಗೆ ಭಯೋತ್ಪಾದಕ ಪಟ್ಟ ಕಟ್ಟಿದ ಕೆಲವು ಮಾಧ್ಯಮಗಳು ➤ ಕಡಬದಲ್ಲಿ ಪ್ರತಿಭಟನೆ ನಡೆಸಿದ ಎಸ್ಕೆಎಸ್ಸೆಸ್ಸೆಫ್

(ನ್ಯೂಸ್ ಕಡಬ) newskadaba.com ಕಡಬ, ಆ.31. ಅಮಾಯಕರನ್ನು ಭಯೋತ್ಪಾದಕರೆಂಬಂತೆ ಬಿಂಬಿಸಿ ಕೆಲ ಮಾಧ್ಯಮಗಳು ಸುದ್ದಿ ಬಿತ್ತರಿಸಿವೆ ಎಂದು ಆರೋಪಿಸಿ ದ.ಕ.ಜಿಲ್ಲಾ ಎಸ್‌ಕೆಎಸ್ಸೆಸ್ಸೆಫ್ ಸಮಿತಿಯ ನಿರ್ದೇಶನದಂತೆ ಎಸ್‌ಕೆಎಸ್ಸೆಸ್ಸೆಫ್ ಕಡಬ ವಲಯದ ವತಿಯಿಂದ ಶುಕ್ರವಾರ ಸಂಜೆ ಕಡಬ ಪಂಚಾಯತ್ ವಾಣಿಜ್ಯ ಕಟ್ಟಡದ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಸ್‌ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಸಂವಿಧಾನದ ನಾಲ್ಕನೇ ಅಂಗವಾಗಿರುವ ಮಾಧ್ಯಮ ರಂಗವು ದೇಶದ ಹಿತಕ್ಕಾಗಿ, ಜನ ಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಆದರೆ ಕೆಲವು ದಿನಗಳ

ಅಮಾಯಕರಿಗೆ ಭಯೋತ್ಪಾದಕ ಪಟ್ಟ ಕಟ್ಟಿದ ಕೆಲವು ಮಾಧ್ಯಮಗಳು ➤ ಕಡಬದಲ್ಲಿ ಪ್ರತಿಭಟನೆ ನಡೆಸಿದ ಎಸ್ಕೆಎಸ್ಸೆಸ್ಸೆಫ್ Read More »

ಕರ್ನಾಟಕ
Scroll to Top