News Kadaba Desk

ಸೊರಕೆ: ಶಾಲಾ ಬಸ್ – ಇನ್ನೋವಾ ಕಾರು ಮಧ್ಯೆ ಢಿಕ್ಕಿ ➤ ವಿದ್ಯಾರ್ಥಿಗಳು ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಕಡಬ, ಆ.31. ಶಾಲಾ ಬಸ್ ಹಾಗೂ ಇನ್ನೋವಾ ಕಾರು ನಡುವೆ ಢಿಕ್ಕಿಯುಂಟಾದ ಘಟನೆ ಶನಿವಾರ ಸಂಜೆ ಬೆಳಂದೂರು ಸಮೀಪದ ಸೊರಕೆ ಎಂಬಲ್ಲಿ ನಡೆದಿದೆ.   ಬೆಳಂದೂರಿನ ಈಡನ್ ಗ್ಲೋಬಲ್ ಪಬ್ಲಿಕ್ ಸ್ಕೂಲ್ ಗೆ ಸೇರಿದ ಬಸ್ ಶಾಲಾ ತರಗತಿಗಳು ಬಿಟ್ಟ ನಂತರ ವಿದ್ಯಾರ್ಥಿಗಳನ್ನು ಮನೆಗೆ ಕರೆದೊಯ್ಯುತ್ತಿದ್ದಾಗ ಸೊರಕೆ ಎಂಬಲ್ಲಿ ವಿರುದ್ಧ ದಿಕ್ಕಿನಿಂದ ಆಗಮಿಸಿದ ಇನ್ನೋವಾ ಕಾರಿನ ನಡುವೆ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಮಹಿಳೆಯೋರ್ವರು ಸಣ್ಣಪುಟ್ಟದಾಗಿ ಗಾಯಗೊಂಡಿದ್ದು, ವಿದ್ಯಾರ್ಥಿಗಳು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ […]

ಸೊರಕೆ: ಶಾಲಾ ಬಸ್ – ಇನ್ನೋವಾ ಕಾರು ಮಧ್ಯೆ ಢಿಕ್ಕಿ ➤ ವಿದ್ಯಾರ್ಥಿಗಳು ಅಪಾಯದಿಂದ ಪಾರು Read More »

ಕರಾವಳಿ

ಕಡಿಮೆಯಾಗದ ಸೊಂಟ ನೋವು ➤ ಮನನೊಂದ ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಆ.31. ಸೊಂಟ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಳಿನೆಲೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಬಿಳಿನೆಲೆ ಗ್ರಾಮದ ಅರಿಗೇಣಿ ನಿವಾಸಿ ರವೀಂದ್ರ ಯಾನೆ ರೋಹಿತಾಶ್ವ (38) ಎಂದು ಗುರುತಿಸಲಾಗಿದೆ. ಕಳೆದ ಕೆಲವು ಸಮಯಗಳಿಂದ ಸೊಂಟ ನೋವಿನಿಂದ ಬಳಲುತ್ತಿದ್ದ ಇವರು ಶುಕ್ರವಾರ ಸಾಯಂಕಾಲ ಮನನೊಂದು ತನ್ನ ಮನೆಯ ಸಮೀಪದ ಗುಡ್ಡೆಯಲ್ಲಿರುವ ಮರವೊಂದಕ್ಕೆ ನೈಲಾನ್ ಹಗ್ಗ ಹಾಕಿ ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌. ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಕಡಬ

ಕಡಿಮೆಯಾಗದ ಸೊಂಟ ನೋವು ➤ ಮನನೊಂದ ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ Read More »

ಕರಾವಳಿ

ಶಿರಾಡಿ: ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರು ನಡುವೆ ಢಿಕ್ಕಿ ➤ ಅಪಾಯದಿಂದ ಪಾರಾದ ಪ್ರಯಾಣಿಕರು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ.31. ಕೆಎಸ್ಸಾರ್ಟಿಸಿ ಬಸ್ ಹಾಗೂ ಟೊಯೋಟಾ ಎಟಿಯೋಸ್ ಕಾರು ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಸಮೀಪ ಶನಿವಾರದಂದು ಸಂಭವಿಸಿದೆ. ಹುಬ್ಬಳ್ಳಿಯಿಂದ ಶಿವಮೊಗ್ಗ ಮಾರ್ಗವಾಗಿ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸು ಹಾಗೂ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ಶಿರಾಡಿ ಸಮೀಪ ಢಿಕ್ಕಿ ಸಂಭವಿಸಿದೆ. ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣ-ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ

ಶಿರಾಡಿ: ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರು ನಡುವೆ ಢಿಕ್ಕಿ ➤ ಅಪಾಯದಿಂದ ಪಾರಾದ ಪ್ರಯಾಣಿಕರು Read More »

ಕರಾವಳಿ

ಕಡಬ: ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ➤ ಕೊಲೆ ಸಂಶಯ ವ್ಯಕ್ತಪಡಿಸಿದ ಮೃತರ ಪುತ್ರ

(ನ್ಯೂಸ್ ಕಡಬ) newskadaba.com ಕಡಬ, ಆ.28. ಇಲ್ಲಿನ ಕಳಾರ ಸಮೀಪದ ಅಡ್ಕಾಡಿ ಎಂಬಲ್ಲಿನ ತೋಟವೊಂದರಲ್ಲಿ ವ್ಯಕ್ತಿಯೋರ್ವರ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಬುಧವಾರದಂದು ಪತ್ತೆಯಾಗಿದೆ.   ಮೃತ ವ್ಯಕ್ತಿಯನ್ನು ಕಳಾರ ಸಮೀಪದ ಅಡ್ಕಾಡಿ ನಿವಾಸಿ ಉಸ್ಮಾನ್(60ವ.) ಎಂದು ಗುರುತಿಸಲಾಗಿದೆ. ಇವರು ಮಂಗಳವಾರ ರಾತ್ರಿ 9 ಗಂಟೆಯ ಬಳಿಕ ಮನೆಯಿಂದ ನಾಪತ್ತೆಯಾಗಿದ್ದರಿಂದ ಇವರ ಮನೆಯವರು ಇಂದು ಬೆಳಿಗ್ಗೆಯಿಂದ ಹುಡುಕಾಡುತ್ತಿದ್ದಾಗ ಈ ವೇಳೆ ಮನೆಯ ರಬ್ಬರ್ ತೋಟದಲ್ಲಿ ರಬ್ಬರ್ ಮರದ ಗೆಲ್ಲಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಉಸ್ಮಾನ್ ಅವರ ಮೃತದೇಹ

ಕಡಬ: ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ➤ ಕೊಲೆ ಸಂಶಯ ವ್ಯಕ್ತಪಡಿಸಿದ ಮೃತರ ಪುತ್ರ Read More »

ಕರಾವಳಿ

ಕೇವಲ 4999 ರೂ. ಪಾವತಿಸಿ, ಹೊಸ ಯಮಹಾ ದ್ವಿಚಕ್ರ ವಾಹನ ನಿಮ್ಮದಾಗಿಸಿ ➤ ಕಡಬದ ‘ಶ್ರೀ ಮೋಟಾರ್ಸ್’ ನಲ್ಲಿ ದ್ವಿಚಕ್ರ ವಾಹನಗಳಿಗೆ ವಿಶೇಷ ಆಫರ್

(ನ್ಯೂಸ್ ಕಡಬ) newskadaba.com ಕಡಬ, ಆ.24. ಬಹು ಬೇಡಿಕೆಯ ಯಮಹಾ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿಯ ಅಧಿಕೃತ ಮಾರಾಟ ಹಾಗೂ ರಿಪೇರಿ ಕೇಂದ್ರ ಕಡಬದ ಪಂಜ ರಸ್ತೆಯ ಸರಸ್ವತೀ ಶಾಲೆಯ ಬಳಿ ಕಾರ್ಯಾಚರಿಸುತ್ತಿರುವ ‘ಶ್ರೀ ಮೋಟಾರ್ಸ್’ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ವಿಶೇಷ ಆಫರ್ ಲಭ್ಯವಿದೆ. ಕೇವಲ 4999 ರೂ. ಗಳನ್ನು ಪಾವತಿಸುವ ಮೂಲಕ ತಮಗಿಷ್ಟವಾದ ಯಮಹಾ ಫ್ಯಾಸಿನೋ ದ್ವಿಚಕ್ರ ವಾಹನವನ್ನು ತಮ್ಮದಾಗಿಸಿ ಕೊಳ್ಳಬಹುದಾಗಿದೆ. 95 ಶೇಕಡದವರೆಗೆ ಅತೀ ಕಡಿಮೆ ಬೆಲೆಯಲ್ಲಿ ಮಾಸಿಕ ಕಂತು ಯೋಜನೆಯಡಿ

ಕೇವಲ 4999 ರೂ. ಪಾವತಿಸಿ, ಹೊಸ ಯಮಹಾ ದ್ವಿಚಕ್ರ ವಾಹನ ನಿಮ್ಮದಾಗಿಸಿ ➤ ಕಡಬದ ‘ಶ್ರೀ ಮೋಟಾರ್ಸ್’ ನಲ್ಲಿ ದ್ವಿಚಕ್ರ ವಾಹನಗಳಿಗೆ ವಿಶೇಷ ಆಫರ್ Read More »

ಕರಾವಳಿ

ಮಂಗಳೂರು ನೇತ್ರಾವತಿ ಸೇತುವೆಯಿಂದ ಕೆಳಕ್ಕೆ ಹಾರಿದ್ದ ಕಡಬದ ಯುವಕ ➤ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಆ.26. ನಗರದ ಹೊರವಲಯದ ಉಳ್ಳಾಲ ನೇತ್ರಾವತಿ ಸೇತುವೆಯ ಬಳಿ ಬೈಕ್ ಇರಿಸಿ ನಾಪತ್ತೆಯಾಗಿದ್ದ ಕಡಬದ ನೂಜಿಬಾಳ್ತಿಲ ನಿವಾಸಿ ಸದಾಶಿವ (26) ಎಂಬಾತನ ಮೃತದೇಹವು ಭಾನುವಾರದಂದು ಸಮುದ್ರ ದಡದಿಂದ 12 ಕಿ.ಮೀ. ದೂರದಲ್ಲಿ ಪತ್ತೆಯಾಗಿದೆ. ಕೋಸ್ಟ್‌ಗಾರ್ಡ್ ಸಿಬ್ಬಂದಿ ಭಾನುವಾರ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಪಣಂಬೂರು ಬಳಿಯ ಸಮುದ್ರ ತೀರದಲ್ಲಿ ತೇಲಾಡುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೂಡಲೇ ಪಣಂಬೂರು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಶವವನ್ನು ಪರಿಶೀಲನೆ ನಡೆಸಿದಾಗ ನಾಪತ್ತೆಯಾದ ಸದಾಶಿವನದ್ದು ಎಂದು ತಿಳಿದುಬಂದಿದೆ. ಮೃತದೇಹದ

ಮಂಗಳೂರು ನೇತ್ರಾವತಿ ಸೇತುವೆಯಿಂದ ಕೆಳಕ್ಕೆ ಹಾರಿದ್ದ ಕಡಬದ ಯುವಕ ➤ ಮೃತದೇಹ ಪತ್ತೆ Read More »

ಕರಾವಳಿ

ದ.ಕ.: ಇಂದಿನಿಂದ ಶನಿವಾರ ಸಂಜೆಯವರೆಗೆ ನಡೆಯಲಿವೆ ತರಗತಿಗಳು ➤ ಭಾರೀ ಮಳೆಗೆ ನೀಡಲಾಗಿದ್ದ ರಜೆಯನ್ನು ಸರಿದೂಗಿಸಲು ಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.24. ಇತ್ತೀಚೆಗೆ ಕರಾವಳಿಯಲ್ಲಿ ಸುರಿದ ಭಾರೀ ಮಳೆ ಹಾಗೂ ಪ್ರವಾಹ ಭೀತಿಯಿಂದಾಗಿ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗಿದ್ದ ಹೆಚ್ಚುವರಿ ರಜೆಯನ್ನು ಸರಿದೂಗಿಸುವ ಉದ್ದೇಶದಿಂದ ಇಂದಿನಿಂದ ಪ್ರತೀ ಶನಿವಾರ ಮಧ್ಯಾಹ್ನದ ಬಳಿಕವೂ ತರಗತಿಗಳನ್ನು ನಡೆಸುವಂತೆ ಶಿಕ್ಷಣ ಇಲಾಖೆಯು ಸಂಬಂಧಿಸಿದ ಶಾಲೆಗಳಿಗೆ ಸೂಚನೆ ನೀಡಿದೆ. ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ಒಟ್ಟು 13 ಶನಿವಾರ ಹಾಗೂ ಉಳಿದ ಕಡೆಗಳಲ್ಲಿ 12 ಶನಿವಾರದಂದು ಸಂಜೆಯವರೆಗೆ ತರಗತಿಗಳು ನಡೆಯಲಿದ್ದು, ಆದರೆ ರವಿವಾರ ಯಾವುದೇ ತರಗತಿಗಳು ನಡೆಯುವುದಿಲ್ಲ ಎಂದು ದಕ್ಷಿಣ ಕನ್ನಡ

ದ.ಕ.: ಇಂದಿನಿಂದ ಶನಿವಾರ ಸಂಜೆಯವರೆಗೆ ನಡೆಯಲಿವೆ ತರಗತಿಗಳು ➤ ಭಾರೀ ಮಳೆಗೆ ನೀಡಲಾಗಿದ್ದ ರಜೆಯನ್ನು ಸರಿದೂಗಿಸಲು ಕ್ರಮ Read More »

ಕರಾವಳಿ

ಕಡಬದ ರಿಧಿ ಫ್ಯಾಷನ್‌ನಲ್ಲಿ ಕೃಷ್ಣಾಷ್ಟಮಿ ಮತ್ತು ಓಣಂ ಪ್ರಯುಕ್ತ ವಿಶೇಷ ಆಫರ್ ➤ 50% ವರೆಗೆ ದರಕಡಿತ ಮಾರಾಟ

(ನ್ಯೂಸ್ ಕಡಬ) newskadaba.com ಕಡಬ, ಆ.19. ಕಡಬದ ಮುಖ್ಯ ರಸ್ತೆಯ ಎ.ಬಿ. ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ರೆಡಿಮೇಡ್ ವಸ್ತ್ರಗಳ ಮಾರಾಟ ಮಳಿಗೆ ‘ರಿಧಿ ಫ್ಯಾಷನ್ಸ್’ ನಲ್ಲಿ ಕೃಷ್ಣಾಷ್ಠಮಿ ಹಾಗೂ ಓಣಂ ಪ್ರಯುಕ್ತ ವಿಶೇಷ ದರಕಡಿತ ಮಾರಾಟ ಏರ್ಪಡಿಸಲಾಗಿದೆ. ಪುರುಷರ, ಮಹಿಳೆಯರ ಹಾಗೂ ಮಕ್ಕಳ ನೂತನ ವಿನ್ಯಾಸದ ಸಿದ್ಧ ಉಡುಪುಗಳ ಬೃಹತ್ ಸಂಗ್ರಹದೊಂದಿಗೆ 50%ದ ವರೆಗೆ ವಿಶೇಷ ದರಕಡಿತ ಮಾರಾಟ ನಡೆಯಲಿದ್ದು, ಗ್ರಾಹಕರು ಇದರ ಪ್ರಯೋಜನವನ್ನು ಪಡೆಯಬೇಕಾಗಿ ಸಂಸ್ಥೆಯ ಮಾಲಕರಾದ ಮೇಹಿ ಜಾರ್ಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಡಬದ ರಿಧಿ ಫ್ಯಾಷನ್‌ನಲ್ಲಿ ಕೃಷ್ಣಾಷ್ಟಮಿ ಮತ್ತು ಓಣಂ ಪ್ರಯುಕ್ತ ವಿಶೇಷ ಆಫರ್ ➤ 50% ವರೆಗೆ ದರಕಡಿತ ಮಾರಾಟ Read More »

ಕರಾವಳಿ

ಪ್ರಧಾನಿ ಮೋದಿ, ಯಡಿಯೂರಪ್ಪ, ಆರೆಸ್ಸೆಸ್ ವಿರುದ್ಧ ಅವಹೇಳನಕಾರಿ ಸಂದೇಶ ➤ ಕಡಬದ ಸರ್ವೇಯರ್ ವಿರುದ್ಧ ಪೊಲೀಸ್ ದೂರು

(ನ್ಯೂಸ್ ಕಡಬ) newskadaba.com ಕಡಬ, ಆ.17. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಆರೆಸ್ಸೆಸ್ ವಿರುದ್ದ ಅವಹೇಳನಕಾರಿಯಾಗಿ ಸಂದೇಶ ರವಾನಿಸಿದ ಅರೋಪದಡಿ ಕಡಬ ತಾಲೂಕು ಭೂಮಾಪನ ಇಲಾಖೆಯ ಸಿಬ್ಬಂದಿ ಮಹೇಶ್ ಎಂಬಾತನನ್ನು ಕಡಬ ಪೊಲೀಸರು ಶುಕ್ರವಾರದಂದು ವಶಕ್ಕೆ ಪಡೆದುಕೊಂಡಿದ್ದಾರೆ. ಮಹೇಶ್ ಕೀಳು ಮಟ್ಟದ ಪದಗಳನ್ನು ಬಳಕೆ ಮಾಡಿ ಅವಹೇಳನಕಾರಿ ಸಂದೇಶಗಳನ್ನು ತನ್ನ ವಾಟ್ಸ್ಅಪ್ ಸ್ಟೇಟಸ್ ಹಾಕಿಕೊಂಡಿದ್ದ ಹಿನ್ನೆಲೆಯಲ್ಲಿ ಕಡಬದ ಹಿಂದೂ ಸಂಘಟನೆಯ ಮುಖಂಡರಾದ ವೆಂಕಟ್ರಮಣ ಕೋಡಿಂಬಾಳ ಎಂಬವರು ಕಡಬ ಪೊಲೀಸ್ ಠಾಣೆಗೆ ಮಹೇಶ್ ವಿರುದ್ಧ ದೂರು

ಪ್ರಧಾನಿ ಮೋದಿ, ಯಡಿಯೂರಪ್ಪ, ಆರೆಸ್ಸೆಸ್ ವಿರುದ್ಧ ಅವಹೇಳನಕಾರಿ ಸಂದೇಶ ➤ ಕಡಬದ ಸರ್ವೇಯರ್ ವಿರುದ್ಧ ಪೊಲೀಸ್ ದೂರು Read More »

ಕರ್ನಾಟಕ

ಕಬಕ: ಬಸ್ ಹಾಗೂ ಕಾರು ನಡುವೆ ಢಿಕ್ಕಿ ➤ ಕಾರು ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಆ.12. ಖಾಸಗಿ ಬಸ್ ಹಾಗೂ ಕಾರು ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಕಬಕ ಎಂಬಲ್ಲಿ ಸೋಮವಾರದಂದು ಸಂಭವಿಸಿದೆ. ಮೃತ ವ್ಯಕ್ತಿಯನ್ನು ಮುಂಡೋಳೆ ನಿವಾಸಿ ಸಿದ್ದೀಕ್ ಅಝ್ಹರಿ ಉಸ್ತಾದ್ ರವರ ಸಹೋದರ ಅಬ್ದುಲ್ ಹಕೀಂ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಪುತ್ತೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಮಾರುತಿ ಆಲ್ಟೋ 800 ಕಾರು ನಡುವೆ ಕಬಕ ಸಮೀಪದ ಪೋಳ್ಯ ಎಂಬಲ್ಲಿ ಢಿಕ್ಕಿ

ಕಬಕ: ಬಸ್ ಹಾಗೂ ಕಾರು ನಡುವೆ ಢಿಕ್ಕಿ ➤ ಕಾರು ಚಾಲಕ ಮೃತ್ಯು Read More »

ಕರಾವಳಿ
Scroll to Top